ರಾಜ್ಯ

ನಾಳೆಯಿಂದ ರಾಜ್ಯಕ್ಕೆ ಮುಂಗಾರಿನ ಸಿಂಚನ | ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದ್ದು, ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಾಳೆಯಿಂದ ರಾಜ್ಯದಲ್ಲಿ ಗುಡುಗು -ಮಿಂಚು ಸಹಿತ ಮಳೆಯಾಗಲಿದ್ದು, ಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಸದ್ಯ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ಮೇಲ್ಮೆ ಸುಳಿಗಾಳಿ ತೀವ್ರವಾಗಿರುವುದರಿಂದ ಕರ್ನಾಟಕದ ಕೆಲವೆಡೆ ಜೂನ್ 1ರಿಂದ ಮಳೆಯಾಗುತ್ತಿದೆ. […]

ನಾಳೆಯಿಂದ ರಾಜ್ಯಕ್ಕೆ ಮುಂಗಾರಿನ ಸಿಂಚನ | ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ Read More »

ಸೆಕ್ಸ್ ಸಿಡಿ‌ ಪ್ರಕರಣ: ಜಾರಕಿಹೋಳಿಗೆ ಮತ್ತೆ ನಿರಾಸೆ

ಬೆಂಗಳೂರು : ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ​ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದೆ . ಸದ್ಯ ನಡೆಯುತ್ತಿರುವ ಸಂಪುಟ ಪುನರ್ ​ ರಚನೆ ಪ್ರಕ್ರಿಯೆಯಲ್ಲಿ ಮತ್ತೆ ಮಂತ್ರಿಯಾಗುವ ಆಸೆ ರಮೇಶ್ ಜಾರಕಿಹೊಳಿ ಇಟ್ಟುಕೊಂಡಿದ್ದರು ಎನ್ನಲಾಗಿತ್ತು . ಆದ್ರೆ ಪ್ರಕರಣದಲ್ಲಿ ಬಿ ರಿಪೋರ್ಟ್ ಪ್ರಕ್ರಿಯೆಯನ್ನ ಎಸ್ ‌ ಐಟಿ ಮುಂದೂಡಿಕೆ ಮಾಡಿದೆ . ಪ್ರಕರಣದ ಪ್ರಗತಿ ವರದಿಯನ್ನ ಹೈಕೋರ್ಟ್ ​​ ಗೆ ನೀಡಲಾಗಿದ್ದು ಮುಂದಿನ 17 ನೇ ತಾರೀಕು ಮತ್ತೊಂದು ಸ್ಟೇಟಸ್ ರಿಪೋರ್ಟ್ ನೀಡಬೇಕಿದೆ

ಸೆಕ್ಸ್ ಸಿಡಿ‌ ಪ್ರಕರಣ: ಜಾರಕಿಹೋಳಿಗೆ ಮತ್ತೆ ನಿರಾಸೆ Read More »

ಜು.1 ರಿಂದಲೇ ಶೈಕ್ಷಣಿಕ ವರ್ಷಾರಂಭ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್​ ಮಾಡುವುದಾಗಿ ಶುಕ್ರವಾರ ಮಹತ್ವದ ನಿರ್ಧಾರ ಪ್ರಕಟಿಸಿದೆ ರಾಜ್ಯ ಶಿಕ್ಷಣ ಇಲಾಖೆ. ದ್ವಿತೀಯ ಪಿಯುಸಿ ಎಕ್ಸಾಂ ರದ್ದಾಗಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಾದರೂ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳನ್ನೂ ಪಾಸ್​ ಮಾಡಲಾಗುತ್ತೆ. ಇದರ ಜತೆಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಆರಂಭ ಆಗುತ್ತೆ ಎಂಬ ಗೊಂದಲಕ್ಕೂ ಇಂದು ತೆರೆಬಿದ್ದಿದೆ. ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ

ಜು.1 ರಿಂದಲೇ ಶೈಕ್ಷಣಿಕ ವರ್ಷಾರಂಭ Read More »

ಹೊಸ ಸ್ವರೂಪದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಜೂ.04. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ನಡೆಯಲಿದ್ದು, ವಿಜ್ಞಾನ, ಗಣಿತ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನು ಒಂದೇ ಪೇಪರ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದರು. ಒಟ್ಟು ಎರಡು ಪರೀಕ್ಷೆಗಳು ನಡೆಯಲಿದ್ದು, ಕೊರೋನಾ ಬಾಧಿತರಿಗೆ ಮತ್ತೊಂದು ಸಲ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.

ಹೊಸ ಸ್ವರೂಪದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಚಿವ ಸುರೇಶ್ ಕುಮಾರ್ Read More »

ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್: ಹುಡುಕಿದ್ದೆಲ್ಲಾ ಪರಿಪೂರ್ಣವಲ್ಲ ಎಂದು ಕ್ಷಮೆಯಾಚನೆ

ಬೆಂಗಳೂರು: ಕನ್ನಡದ ಕುರಿತು ಅವಹೇಳನಕಾರಿ ಅಂಶವನ್ನು ಪ್ರಕಟಿಸಿದ್ದಕ್ಕೆ ಗೂಗಲ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ದನಿ ಎತ್ತಿದ್ದು, ಕೊನೆಗೂ ಮಣಿದ ಗೂಗಲ್​ ಕನ್ನಡಿಗರ ಕ್ಷಮೆಯನ್ನು ಯಾಚಿಸಿದೆ. ‘ಅಗ್ಲಿಯೆಸ್ಟ್ ಲ್ಯಾಂಗ್ವೇಜ್ ಇನ್​ ಇಂಡಿಯಾ’ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರ ಬರುವಂತೆ ಇದ್ದಿದ್ದನ್ನು ಗಮನಿಸಿದ ಕನ್ನಡಿಗರು ಬೆಳಗಿನಿಂದ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕನ್ನಡದ ಮಾಧ್ಯಮಗಳು ಬೆಳಕು ಚೆಲ್ಲಿದ್ದಲ್ಲದೆ, ಸೆಲೆಬ್ರಿಟಿಗಳು ಸೇರಿ ಅಸಂಖ್ಯಾತ ಕನ್ನಡಿಗರೂ ಸೋಷಿಯಲ್ ಮೀಡಿಯಾಗಳ ಮೂಲಕ ದನಿ ಎತ್ತಿದ್ದರು. ಒಟ್ಟಾರೆಯಾಗಿ

ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್: ಹುಡುಕಿದ್ದೆಲ್ಲಾ ಪರಿಪೂರ್ಣವಲ್ಲ ಎಂದು ಕ್ಷಮೆಯಾಚನೆ Read More »

ರಾಜ್ಯದಲ್ಲಿ ‌ದ್ವಿತೀಯ‌ ಪಿಯುಸಿ ಪರೀಕ್ಷೆ ರದ್ದು: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಪರೀಕ್ಷೆ ಇಲ್ಲದೇ ಗ್ರೇಡ್ ಮೂಲಕ ಬಡ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ‌ದ್ವಿತೀಯ‌ ಪಿಯುಸಿ ಪರೀಕ್ಷೆ ರದ್ದು: ಸಚಿವ ಸುರೇಶ್ ಕುಮಾರ್ Read More »

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ?

ಎಂಥ ಅಚ್ಚರಿಯಲ್ಲವೇ! ಎಲ್ಲಾದರೂ ಉಂಟೇ? ನಮಗೆ ತಿಳಿದಿರುವ ಹಾಗೆ ಮದುವೆ ಎಂದರೆ ಮನುಷ್ಯರ ನಡುವೆ ಆಗುತ್ತದೆ. ಆದರೆ ಇಲ್ಲೊಂದು ವಿಶೇಷ ಸುದ್ದಿ ಇದೆ. ಪ್ರಪಂಚದಲ್ಲಿ ಈ ರೀತಿಯ ವಿಚಿತ್ರಗಳು ನಡೆಯುತ್ತಿರುತ್ತವೆ .ಇಂತಹ ಅನಿರೀಕ್ಷಿತ ಸನ್ನಿವೇಶಗಳು ಸಾಮಾನ್ಯ ಜನರಿಗೆ ಪ್ರೇರೇಪಿಸುತ್ತಿರುತ್ತವೆ. ಇಂತಹ ಸುದ್ದಿ ಗಳನ್ನು ಓದಿದಾಗ ಇಂತಹದ್ದೂ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಗತಿ ಓದಿದರೇ ನಿಜಕ್ಕೂ ಆಶ್ಚರ್ಯವೆನಿಸಬಹುದು. ಈ ಘಟನೆ ಜಾರ್ಖಂಡ್ ನಲ್ಲಿ ಮಂಗಳಿ ಮುಂಡ ಎಂಬ 18 ವರ್ಷದ ಯುವತಿ ನಾಯಿಯೊಂದನ್ನು ಮದುವೆಯಾದ ವಿಚಿತ್ರ

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ? Read More »

ಹಿರಿಯ ನಟಿ ಬಿ.ಜಯಾ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ

ಬೆಂಗಳೂರು. ಸ್ಯಾಂಡಲ್​ವುಡ್​ ನ ಹಿರಿಯ ನಟಿ ಬಿ. ಜಯಾ ಮೃತರಾಗಿದ್ದಾರೆ. ಗುರುವಾರ (ಜೂನ್​ 3) ಮಧ್ಯಾಹ್ನ 3:30 ಸುಮಾರಿಗೆ ಕೊನೆಯುಸಿರೆಳೆದರು. ಕೆಲ ದಿನದಿಂದ ಜಯಾ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಜಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರನ್ನು ಚಿತ್ರರಂಗ ಕಳೆದುಕೊಂಡಿದ್ದು, ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಹಿರಿಯ ನಟಿ ಬಿ.ಜಯಾ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ Read More »

ರಾಜ್ಯದಲ್ಲಿ ಜೂ.14ರವರೆಗೆ ಲಾಕ್ ಡೌನ್ ವಿಸ್ತರಣೆ: ಎರಡನೇ ಕೋವಿಡ್ ಪ್ಯಾಕೇಜ್ ಘೋಷಿಸಿದ ಸಿ.ಎಂ

ಬೆಂಗಳೂರು. ಜೂ.3: ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಅನ್ನು ಜೂ.14ರವರೆಗೆ ವಿಸ್ತರಿಸಿ ಸಿಎಂ ಯಡಿಯೂರಪ್ಪ ಆದೇಶಸಿದ್ದಾರೆ. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ. ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ ಜೂ.14ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ

ರಾಜ್ಯದಲ್ಲಿ ಜೂ.14ರವರೆಗೆ ಲಾಕ್ ಡೌನ್ ವಿಸ್ತರಣೆ: ಎರಡನೇ ಕೋವಿಡ್ ಪ್ಯಾಕೇಜ್ ಘೋಷಿಸಿದ ಸಿ.ಎಂ Read More »

ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಆತ್ಮಹತ್ಯೆ,

ಬೆಳಗಾವಿ: ಇವರಿಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ವರ್ಷದಿಂದ ಪರಸ್ಪರ ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿ ಬದುಕಲಾರದಷ್ಟು ಹತ್ತಿರವಾಗಿದ್ದರು. ಆದರೂ ಒಂದು ತಿಂಗಳ ಹಿಂದಷ್ಟೇ ಯುವತಿಯನ್ನ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿಬಿಟ್ಟರು. ಇದೀಗ ಗಂಡನ ಮನೆಯಲ್ಲಿರಬೇಕಿದ್ದ ನವವಿವಾಹಿತೆ, ಪ್ರಿಯಕರನೊಟ್ಟಿಗೆ ದುರಂತ ಅಂತ್ಯ ಕಂಡಿದ್ದಾಳೆ. ಇಂತಹ ದುರಂತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಧೋಗಿಯಲ್ಲಿ ನಡೆದಿದೆ. ಪಂಚಪ್ಪ ಕಣವಿ(25) ಮತ್ತು ಸಕ್ಕುಬಾಯಿ ಕರಿಗಾರ(23) ಮೃತ ಪ್ರೇಮಿಗಳು.ಆದರೂ ಮತ್ತೊಬ್ಬನೊಂದಿಗೆ ಕುಟುಂಬಸ್ಥರು ಸಕ್ಕುಬಾಯಿಗೆ ಒಂದು ತಿಂಗಳ ಹಿಂದೆ ಮದುವೆ ಮಾಡಿದ್ದರು.

ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಆತ್ಮಹತ್ಯೆ, Read More »