ರಾಜ್ಯ

ಮಹಿಳೆಯರ ಮುಂದೆ ಬೆತ್ತಲಾಗಿ ಅಸಭ್ಯ ವರ್ತನೆ | ಅಪ್ಪನ ಜೊತೆ ಮಕ್ಕಳೂ ಅರೆಸ್ಟ್

ಚಾಮರಾಜನಗರ: ಕುಡಿದ ಮತ್ತಿನಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯರ ಎದುರು ಬೆತ್ತಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಆತನ ಇಬ್ಬರು ಮಕ್ಕಳನ್ನೂ ಬಂಧಿಸಲಾಗಿದೆ. ಜಿಲ್ಲೆಯ ಪುನಜನೂರು ಗ್ರಾಮದ ತಾಂಡವಮೂರ್ತಿ ಎಂಬಾತ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಕುಡಿದಮತ್ತಿನಲ್ಲಿದ್ದ ಆತನ ಪಂಚೆ ಜಾರಿಬಿದ್ದಿದೆ. ಆ ಬಳಿಕ ಆತ ಒಳಗಿದ್ದ ಒಳ ಉಡುಪನ್ನು ಜಾರಿಸಿ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ. ಸ್ಥಳದಲ್ಲಿದ್ದ ಕೆಲವರು […]

ಮಹಿಳೆಯರ ಮುಂದೆ ಬೆತ್ತಲಾಗಿ ಅಸಭ್ಯ ವರ್ತನೆ | ಅಪ್ಪನ ಜೊತೆ ಮಕ್ಕಳೂ ಅರೆಸ್ಟ್ Read More »

ಶಿಕ್ಷಣ ಸಚಿವರೇನು ಗೆಣಸು ಕೀಳೋದಕ್ಕಿರೋದಾ? |ಆಕ್ರೋಶಭರಿತ ಪೋಷಕರಿಂದ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರನ್ನು ನಾರಾಯಣ ಇ-ಟೆಕ್ನೊ ಶಾಲಾ ಮಕ್ಕಳ ಪೋಷಕರು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಶಿಕ್ಷಣ ಸಚಿವರ ಪಂಚೇಂದ್ರಿಯಗಳೇ ಸತ್ತು ಹೋಗಿದೆ. ಅವರ ತೆವಲನ್ನ ತೀರಿಸಿಕೊಳ್ಳಲು ಹೀಗೆಲ್ಲ ನಡೆದುಕೊಳ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸೊಲ್ಲ ಅಂದ್ರೆ ಸಚಿವ ಸ್ಥಾನದಲ್ಲಿ ಯಾಕಿದ್ದೀರಿ? ಸಚಿವ ಸ್ಥಾನ ನಿಭಾಯಿಸೋಕೆ ಆಗೊಲ್ಲ ಅಂದ್ರೆ ಕೆಳಗಿಳಿಯಿರಿ ಎಂದು ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಯನ್ನ ಪೋಷಕರು ಮತ್ತು ಖಾಸಗಿ ಶಾಲೆಗಳೇ

ಶಿಕ್ಷಣ ಸಚಿವರೇನು ಗೆಣಸು ಕೀಳೋದಕ್ಕಿರೋದಾ? |ಆಕ್ರೋಶಭರಿತ ಪೋಷಕರಿಂದ ಹಿಗ್ಗಾಮುಗ್ಗಾ ತರಾಟೆ Read More »

ಆಗುಂಬೆ ಘಾಟ್: ಭಾರಿ ವಾಹನ ಸಂಚಾರ ನಿಷೇದ

ಉಡುಪಿ: ತೀರ್ಥಹಳ್ಳಿ-ಉಡುಪಿ ಹೆದ್ದಾರಿಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರಿ ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ನಿಷೇದ ವಿಧಿಸಲಾಗಿದೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯು ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರಿ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ ೧೧೫ ಹಾಗೂ ರಾಜ್ಯ ಮೋಟಾರು

ಆಗುಂಬೆ ಘಾಟ್: ಭಾರಿ ವಾಹನ ಸಂಚಾರ ನಿಷೇದ Read More »

ಬೆಂಗಳೂರು: 21 ಲಕ್ಷ ಬಿಲ್ ಕಟ್ಟಿದರೂ ಸಿಗಲಿಲ್ಲ ಸೋಂಕಿತೆಯ ಮೃತದೇಹ….! | ಸರಕಾರದ ಎಚ್ಚರ ಖಾಸಗಿ ಆಸ್ಪತ್ರೆಗಳಿಗೆ ಡೋಂಟ್ ಕೇರ್

ಬೆಂಗಳೂರು: ಕೊರೋನಾ ಸೋಂಕಿಗೆ ಒಳಗಾಗಿ ಮೃತಪಟ್ಟ ಮಹಿಳೆಯ ಶವ ನೀಡಲು ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 26 ಲಕ್ಷ ರೂ. ಬಿಲ್ ಪಾವತಿಸಲು ಹೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿ ಮಹಿಳೆಯೊಬ್ಬರು ನಗರದ ಎಚ್ಎಸ್ಆರ್ ಲೇಔಟ್ ನಲ್ಲಿರುವ ಹ್ಯಾಮಿಲ್ಟನ್ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯ ಉಲ್ಬಣಗೊಂಡು ನಿನ್ನೆ ಸಂಜೆ ಆ ಮಹಿಳೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾದಾಗಿನಿಂದ ಈವರೆಗೆ ಸೋಂಕಿತರ ಮನೆಯವರು ಆಸ್ಪತ್ರೆಗೆ ಬರೋಬ್ಬರಿ 21 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ. ನಿನ್ನೆ

ಬೆಂಗಳೂರು: 21 ಲಕ್ಷ ಬಿಲ್ ಕಟ್ಟಿದರೂ ಸಿಗಲಿಲ್ಲ ಸೋಂಕಿತೆಯ ಮೃತದೇಹ….! | ಸರಕಾರದ ಎಚ್ಚರ ಖಾಸಗಿ ಆಸ್ಪತ್ರೆಗಳಿಗೆ ಡೋಂಟ್ ಕೇರ್ Read More »

ಕೆಎಸ್ಆರ್ ಟಿಸಿ ನೌಕರರಿಂದ ಪ್ರತಿಭಟನೆಗೆ ನಿರ್ಧಾರ, ಮತ್ತೆ ಸಾರಿಗೆ ಸಂಚಾರದಲ್ಲಿ ‌ವ್ಯತ್ಯಯ ಸಾಧ್ಯತೆ

ಬೆಂಗಳೂರು : ರಾಜ್ಯದ ಜನತೆಗೆ ಮತ್ತೆ ತೊಂದರೆ ನೀಡಲು ಕೆಎಸ್ಆರ್ ಟಿಸಿ ನೌಕರರು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಸಾರಿಗೆ ನೌಕರರು ಲಾಕ್ ಡೌನ್ ಗೂ ಮುನ್ನಾ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಸಾರಿಗೆ ಸಂಚಾರ ಸ್ಥಗಿತಗೊಂಡು, ಸಾರ್ವಜನಿಕರಿಗೆ ಬಸ್ ಸಂಚಾರವಿಲ್ಲದೇ ಪರದಾಡುವಂತ ಪರಿಸ್ಥಿತಿ ಎದುರಾಗಿತ್ತು. ಈಗ ಮತ್ತೆ ತಮ್ಮ ಬಾಕಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಇಳಿಯಲಿವೆ ಎನ್ನಲಾಗುತ್ತಿದೆ.ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನೌಕರರ ಬಹುಮುಖ್ಯ

ಕೆಎಸ್ಆರ್ ಟಿಸಿ ನೌಕರರಿಂದ ಪ್ರತಿಭಟನೆಗೆ ನಿರ್ಧಾರ, ಮತ್ತೆ ಸಾರಿಗೆ ಸಂಚಾರದಲ್ಲಿ ‌ವ್ಯತ್ಯಯ ಸಾಧ್ಯತೆ Read More »

ಮತ್ತೆ ರೋಹಿಣಿ ಸಿಂಧೂರಿಯವರನ್ನು ಸ್ವಿಮ್ಮಿಂಗ್ ಫೂಲ್ ಗೆ ತಳ್ಳಿದ ಐಜಿಪಿ ರೂಪಾ

ಬೆಂಗಳೂರು: ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಸರ್ಕಾರಿ ನಿವಾಸದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸ್ವಿಮ್ಮಿಂಗ್ ಪೂಲ್ ಮಾಡಿಸಿದ ಕ್ರಮ ಸಾಕಷ್ಟು ಟೀಕೆಗೆ ಒಳಗಾಯ್ತು. ಈಗ ಐಜಿಪಿ ರೂಪಾ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ತಿವಿದಿದ್ದಾರೆ. ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ.

ಮತ್ತೆ ರೋಹಿಣಿ ಸಿಂಧೂರಿಯವರನ್ನು ಸ್ವಿಮ್ಮಿಂಗ್ ಫೂಲ್ ಗೆ ತಳ್ಳಿದ ಐಜಿಪಿ ರೂಪಾ Read More »

ರಾಜ್ಯದಲ್ಲೇ ಮೊದಲು ಟ್ರ‍್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳ ಸಾಧಕಿ ಇನ್ನಿಲ್ಲ

ಚಿತ್ರದುರ್ಗ: ತಾವು ನಂಬಿದ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವರಿಯದೆ ದುಡಿಮೆ ಮಾಡುತ್ತಿದ್ದದಲ್ಲದೆ ರಾಜ್ಯದಲ್ಲೇ ಮೊದಲ ಟ್ರ‍್ಯಾಕ್ಟರ್ ಡ್ರೈವಿಂಗ್ ಲೈಸೆನ್ಸ್ ಪಡೆದ ಮಹಿಳೆಯೆಂದು ಹೆಸರು ಪಡೆದ ಸುಮಂಗಲಮ್ಮ ವೀರಭದ್ರಪ್ಪ(೬೯) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮದ ಕೃಷಿಕ ವೀರಭದ್ರಪ್ಪನವರ ಪತ್ನಿ. ಸುಮಂಗಲಮ್ಮ ವೀರಭದ್ರಪ್ಪ ಅವರ ಅಂತ್ಯಕ್ರಿಯೆ ಅವರ ಕರ್ಮ ಭೂಮಿಯಲ್ಲೆ ಇಂದು ನೆರವೇರಿದ್ದು, ಮೃತರ ನಿಧನಕ್ಕೆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಕೃಷಿಕ ಬಂಧುಗಳು ಕಂಬನಿ ಮಿಡಿದಿದ್ದಾರೆ. ಮಕ್ಕಳಿಗೆ ಶಿಕ್ಷಣ

ರಾಜ್ಯದಲ್ಲೇ ಮೊದಲು ಟ್ರ‍್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳ ಸಾಧಕಿ ಇನ್ನಿಲ್ಲ Read More »

ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು | ವೈರಿಗಳ ಆಟಾಟೋಪಕ್ಕೆ ಜನ ಕಂಗಾಲು

ಗದಗ: ತಾಲೂಕಿನ ಹರ್ತಿ ಗ್ರಾಮದ ಜನರ ಜೀವನ ದುಸ್ತರವಾಗಿದೆ. ನೊಣಗಳ ಕಾಟಕ್ಕೆ ಇಲ್ಲಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆ ಒಳಗೆ, ಹೊರಗೆ ಎಲ್ಲಿ ಕೂತರು ಸಮಾಧಾನವೇ ಇಲ್ಲದಂತಾಗಿದೆ. ಊಟ, ನಿದ್ರೆ, ವಿಶ್ರಾಂತಿಗೂ ಬಿಡಲ್ಲಾ. ವೈರಿಗಳ ಆಟೋಟಪಕ್ಕೆ ಊರಿನ ಜನ ಬೇಸತ್ತು ಹೋಗಿದ್ದಾರೆ. ಈ ಗ್ರಾಮದ ಜನ ಏನು ತಪ್ಪು ಮಾಡಿರುವರೋ ಗೊತ್ತಿಲ್ಲ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ, ದಂಡಿನ ಗುಂಡಿಗೆ ಹೆದರಲಿಲ್ಲಾ, ದಾಳಿಗೆ ಹೆದರಲಿಲ್ಲಾ, ಆದರೆ ನೊಣಗಳ ಹಿಂಡಿಗೆ ಹೆದರುವಂತಾಗಿದೆ. ಈ ಹಳ್ಳಿಗೆ ವೈರಿಗಳ ದಂಡೊಂದು ಲಗ್ಗೆ ಇಟ್ಟು

ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು | ವೈರಿಗಳ ಆಟಾಟೋಪಕ್ಕೆ ಜನ ಕಂಗಾಲು Read More »

ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ | ಇಲ್ಲಿದೆ ಸೇವಾ ಸಿಂಧು ಪೋರ್ಟಲ್

ಬೆಂಗಳೂರು: ಕೊರನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿ ಯವರು ಘೋಷಿಸಿದ್ದ ವಿಶೇಷ ಆರ್ಥಿಕ ಪ್ಯಾಕೇಜ್ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್ಲೈನ್ ಅರ್ಜಿ ಆಹ್ವಾನಿಸಿದೆ. ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿ ಯವರು 2021ರ ಜೂನ್ 3 ರಂದು ವಿಶೇಷ

ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ | ಇಲ್ಲಿದೆ ಸೇವಾ ಸಿಂಧು ಪೋರ್ಟಲ್ Read More »

ರಾಜ್ಯಾದ್ಯಂತ ಮತ್ತೆ ಕಾಲೇಜು ರಿ-ಓಪನ್ | ಸದ್ಯಕ್ಕಿಲ್ಲ ಶಾಲೆ ಆರಂಭ: ಸಿಎಂ

ಬೆಂಗಳೂರು: ಮೊದಲ ಹಂತದಲ್ಲಿ ಉನ್ನತ ಶಿಕ್ಷಣ ತರಗತಿಗಳನ್ನು ಆರಂಭಿಸಲಾಗುವುದು ಮತ್ತು ಶಾಲಾ ತರಗತಿಗಳನ್ನು ಸದ್ಯಕ್ಕೆ ಕರೆಯಲಾಗುವುದಿಲ್ಲ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಆರೋಗ್ಯ ಸಚಿವ ಸುಧಾಕರ್ ಮತ್ತು ತಜ್ಞರ ಸಮಿತಿ ಉಪಸ್ಥಿತಿಯಲ್ಲಿ ನಡೆದ ಸಭೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರು ಗಳಿಗೆ ವ್ಯಾಕ್ಸಿನೇಷನ್ ಪೂರ್ಣಗೊಂಡ ಬಳಿಕ ಕಾಲೇಜು ಆರಂಭಿಸಲಾಗುವುದು. ಪದವಿ,

ರಾಜ್ಯಾದ್ಯಂತ ಮತ್ತೆ ಕಾಲೇಜು ರಿ-ಓಪನ್ | ಸದ್ಯಕ್ಕಿಲ್ಲ ಶಾಲೆ ಆರಂಭ: ಸಿಎಂ Read More »