ರಾಜ್ಯ

ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಲು ಒತ್ತಾಯ | ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ

ಬೆಂಗಳೂರು: ಹಿಂದಿನ ಸೆಮಿಸ್ಟರ್’ನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಗೊಳಿಸುವಂತೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಬೆಸ ಸೆಮಿಸ್ಟರ್’ ಸೆಮಿಸ್ಟರ್ ಪರೀಕ್ಷೆಗಳು ಕೋವಿಡ್ ಕಾರಣದಿಂದ ಬಾಕಿಯಾಗಿತ್ತು. ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಅದೆಲ್ಲದೆ ಇದೀಗ ಮುಂದಿನ ಸೆಮಿಸ್ಟರ್’ನ ತರಗತಿಗಳನ್ನು ಆನ್’ಲೈನ್’ನಲ್ಲಿ ಈಗಾಗಲೇ ಆರಂಭಿಸಲಾಗಿದೆ. ಅದಾಗ್ಯೂ ಹಿಂದಿನ ಸೆಮಿಸ್ಟರ್’ನ ಪರೀಕ್ಷೆಯನ್ನು, ತರಗತಿಗಳು ಆರಂಭವಾದ ನಂತರ ನಡೆಸುವುದಾಗಿ ವಿಶ್ವವಿದ್ಯಾನಿಲಯಗಳು ಹೇಳುತ್ತಿವೆ. ಈ ಬಗ್ಗೆ ಹಿಂದಿನ ಸೆಮಿಸ್ಟರ್ […]

ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಲು ಒತ್ತಾಯ | ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ Read More »

ಮಾಜಿ ವಿಜ್ಞಾನಿ, ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ, HAL ಹಿರಿಯ ನಿವೃತ್ತ ಇಂಜಿನಿಯರ್ ಹಾಗೂ ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ವಿಧಿವಶರಾಗಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಬರಹಗಾರರಾಗಿದ್ದರು. ಸುಧೀಂದ್ರ ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದರಿಂದ ಅವರ ದೇಹದಾನಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಅಂಗಾಂಗ ದಾನ ಮಾಡಲಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ

ಮಾಜಿ ವಿಜ್ಞಾನಿ, ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ Read More »

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ಆ 2 ಸೆಕೆಂಡುಗಳ ನಿಗೂಢ ಶಬ್ಧ | ಅಲುಗಾಡಿದ ಕಿಟಕಿ, ಬಾಗಿಲು |ಚೆಲ್ಲಾಪಿಲ್ಲಿಯಾದ ಪಕ್ಷಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12:30ರ ಆಸುಪಾಸಿನಲ್ಲಿ ಸ್ಪೋಟದ ಸದ್ದು ಕೇಳಿಬಂದಿದೆ. ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದ ಆ 2 ಸೆಕೆಂಡುಗಳ ನಿಗೂಢ ಶಬ್ಧದಿಂದ ಕಿಟಕಿ, ಬಾಗಿಲು ಅಲುಗಾಡಿದ ಅನುಭವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾರಂಭಿಸಿದ್ದು, ಅನೇಕ ಮಂದಿ ತಮಗೂ ಅನುಭವ ಆಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಡದಿ, ಬನಶಂಕರಿ, ಆರ್ ಆರ್ ನಗರ, ನಾಗರಬಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೆಲವೆಡೆ ಸದ್ದು ಕೇಳಿಸಿದ ಅನುಭವ ಆಗಿದ್ದು, ಎರಡು ಸೆಕೆಂಡುಗಳ ಕಾಲ

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ಆ 2 ಸೆಕೆಂಡುಗಳ ನಿಗೂಢ ಶಬ್ಧ | ಅಲುಗಾಡಿದ ಕಿಟಕಿ, ಬಾಗಿಲು |ಚೆಲ್ಲಾಪಿಲ್ಲಿಯಾದ ಪಕ್ಷಿಗಳು Read More »

ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ; ವಿಜಯೇಂದ್ರ ವಿರುದ್ಧ ರೊಚ್ಚಿಗೆದ್ದ ಶ್ರೀರಾಮುಲು

ಬೆಂಗಳೂರು: ಶ್ರೀರಾಮುಲು ಆಪ್ತನ ಬಂಧನವಾಗುತ್ತಿದ್ದAತೆ ವಿಜಯೇಂದ್ರ ವಿರುದ್ಧ ರಾಮುಲು ರೊಚ್ಚಿಗೆದ್ದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ರಾಜಣ್ಣ ತಪ್ಪು ಮಾಡುತ್ತಿದ್ದಾನೆ ಎಂದರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮ ಕೈಗೊಳ್ಳುತ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿರುವುದು ಸರಿಯಲ್ಲ. ಇದರಿಂದ ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಅವರ ಈ ನಡೆಯಿಂದ ನನ್ನ ಹೆಸರು ಹಾಳಾಗಿದೆ. ನನ್ನ ಹೆಸರು ಹಾಳು ಮಾಡೊದಕ್ಕೆ

ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ; ವಿಜಯೇಂದ್ರ ವಿರುದ್ಧ ರೊಚ್ಚಿಗೆದ್ದ ಶ್ರೀರಾಮುಲು Read More »

ಶ್ರೀರಾಮುಲು ಪಿಎ ಬಂಧನ ಸಂಬಂಧ; ಟ್ವಿಟ್ಟರ್‌ನಲ್ಲಿ ಸಿಎಂ ಪುತ್ರ ಪ್ರತಿಕ್ರಿಯೆ

ಬೆಂಗಳೂರು: ಶ್ರೀರಾಮುಲು ಆಪ್ತ ರಾಜು ಆಲಿಯಾಸ್ ರಾಜಣ್ಣ ಬಂಧನ ವಿಚಾರಕ್ಕೆ ಸಂಬಂಧಸಿದಂತೆ ಸಿಎಂ ಪುತ್ರ ಬಿವೈ ವಿಜಯೇಂದ್ರ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆAದು ವಿನಂತಿಸುವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಮನವಿ ಮಾಡಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು

ಶ್ರೀರಾಮುಲು ಪಿಎ ಬಂಧನ ಸಂಬಂಧ; ಟ್ವಿಟ್ಟರ್‌ನಲ್ಲಿ ಸಿಎಂ ಪುತ್ರ ಪ್ರತಿಕ್ರಿಯೆ Read More »

ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ

ಬೆಂಗಳೂರು: ಸಿಎಂ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ರಾಜು ಆಲಿಯಾಸ್ ರಾಜಣ್ಣ ನನ್ನು ಬಂಧಿಸಿದ್ದಾರೆ. ಸ್ವತಃ ವಿಜಯೇಂದ್ರ ದೂರು ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶ್ರೀರಾಮುಲು ಮನೆಯಲ್ಲೇ ಆರೋಪಿ ರಾಜಣ್ಣನನ್ನ ವಶಕ್ಕೆ ಪಡೆದಿದ್ದಾರೆ. ಕೆಲಸ ಕೊಡಿಸ್ತೀನಿ, ವರ್ಗಾವಣೆ ಮಾಡಿಸ್ತೀನಿ ಅಂತ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ. ರಾಜಣ್ಣ ೮ ವರ್ಷದಿಂದ ರಾಮುಲು ಬಳಿ ಕೆಲಸ ಮಾಡ್ತಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಸಿಸಿಬಿ ಪೊಲೀಸರು ೨೦ಕ್ಕೂ ಹೆಚ್ಚು

ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ Read More »

ಉತ್ತಮ ಶಿಕ್ಷಣ: ಕರ್ನಾಟಕದ ಎರಡು ಶಾಲೆಗಳು ರಾಷ್ಟ್ರ‌ಮಟ್ಟಕ್ಕೆ ಆಯ್ಕೆ.

ಚಿಕ್ಕಮಗಳೂರು: ಎನ್‌ಸಿಎಸ್‌ಎಲ್‌ ಹಾಗೂ ಎಸ್‌ಎಲ್‌ಸಿ ಸಿಸ್ಲೆಪ್‌ ಧಾರವಾಡ ಸಹ ಯೋಗದೊಂದಿಗೆ ಉತ್ತಮ ಅಭ್ಯಾಸ ಅಳವಡಿಸಿಕೊಂಡಿರುವ ಶಾಲೆಗಳ ವಿಡಿಯೋ ದಾಖಲೀಕರಣದಲ್ಲಿ ಜಿಲ್ಲೆಯ ಚಿಕ್ಕಮಗಳೂರು ತಾಲೂಕು ಯಲಗುಡಿಗೆ ಸರ್ಕಾರಿ ಶಾಲೆ ಮತ್ತು ತರೀಕೆರೆ ತಾಲೂಕು ಸೊಕ್ಕೆ ಪ್ರೌಢಶಾಲೆ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಡಯಟ್‌ ಪ್ರಾಂಶುಪಾಲೆ ಎಚ್‌.ಕೆ. ಪುಷ್ಪಲತಾ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ 2 ಶಾಲೆಗಳು ಆಯ್ಕೆಯಾಗಿರುವುದು ವಿಶೇಷ ಎಂದ ಅವರು,

ಉತ್ತಮ ಶಿಕ್ಷಣ: ಕರ್ನಾಟಕದ ಎರಡು ಶಾಲೆಗಳು ರಾಷ್ಟ್ರ‌ಮಟ್ಟಕ್ಕೆ ಆಯ್ಕೆ. Read More »

ದೇವಿಗೆ ಕಣ್ಣು ಬಿಡಿಸಿ ಭಕ್ತರ ಕಣ್ಣಿಗೆ ಮಣ್ಣೆರಚಿದ ಪೂಜಾರಿಯ ಚಳಿ ಬಿಡಿಸಿದ ತಹಶೀಲ್ದಾರ್

ಬೆಳಗಾವಿ: ಕಳೆದ ಕೆಲವು ದಿನಗಳ ಹಿಂದೆ ದೇವಸ್ಥಾನವೊಂದರಲ್ಲಿ ದೇವಿ ಕಣ್ಣು ಬಿಟ್ಟಿದ್ದಾಳೆ. ಇನ್ನು ಕೆಲವೇ ಸಮಯದಲ್ಲಿ ಕೋರೋನಾ ಮಹಾಮಾರಿ ಓಡಿಸಲಿದ್ದಾಳೆ. ಹೀಗೆ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ರಾಜ್ಯದ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ದೇವಿಯ ವಿಗ್ರಹದಲ್ಲಿ ಕಣ್ಣನ್ನು ಸ್ವತಹ ಪೂಜಾರಿಯೇ ಬಿಡಿಸಿದ್ದಾರೆ ಎಂಬ ರಹಸ್ಯ ಬಯಲಾಗಿದೆ. ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ದೇವಾಲಯದಲ್ಲಿ ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಸುದ್ದಿ ತಿಳಿದು ಜನ ತಂಡೋಪತಂಡವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಈ ವಿಷಯ ಕಾಗವಾಡ ತಹಸಿಲ್ದಾರ್ ಪ್ರಮೀಳಾ

ದೇವಿಗೆ ಕಣ್ಣು ಬಿಡಿಸಿ ಭಕ್ತರ ಕಣ್ಣಿಗೆ ಮಣ್ಣೆರಚಿದ ಪೂಜಾರಿಯ ಚಳಿ ಬಿಡಿಸಿದ ತಹಶೀಲ್ದಾರ್ Read More »

ದೇಶದಲ್ಲೇ ಪ್ರಥಮ ಪ್ರಯೋಗ, ಇನ್ಮುಂದೆ ಬ್ಯಾಗ್ ನಲ್ಲಿ ಸಿಗಲಿದೆ ಮರಳು- ಸಚಿವ ನಿರಾಣಿ

ಬೆಂಗಳೂರು, ಜೂ. 30: ದೇಶದಲ್ಲೇ ಪ್ರಪ್ರಥಮ ಬಾರಿಗೆ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಅನುಕೂಲವಾಗಲು ಇನ್ನು ಮುಂದೆ ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡುವ ವಿನೂತನ ಯೋಜನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರಂಭಿಸಲಿದೆ. ಬ್ಯಾಗ್ ಗಳಲ್ಲಿ ಮಾರಾಟ ಮಾಡುವ ಉದ್ದೇಶವೇನೆಂದರೆ ಸರಕಾರದ ವತಿಯಿಂದಲೇ ಕೈಗೆಟುಕವ ದರದಲ್ಲಿ ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದವರಿಗೂ ಮರಳು ಸಿಗಲಿದ್ದು ಇದರ ಪ್ರಸ್ತಾವನೆಯು ಸಹಾ ಸಿದ್ದವಾಗಿದೆ. ಇದರಿಂದಾಗಿ ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭ ಮಾರ್ಗದಲ್ಲಿ ಮರಳು ಲಭ್ಯವಾಗಲಿದೆ. ಬುಧವಾರ ವಿಕಾಸಸೌಧದಲ್ಲಿ

ದೇಶದಲ್ಲೇ ಪ್ರಥಮ ಪ್ರಯೋಗ, ಇನ್ಮುಂದೆ ಬ್ಯಾಗ್ ನಲ್ಲಿ ಸಿಗಲಿದೆ ಮರಳು- ಸಚಿವ ನಿರಾಣಿ Read More »

ಯೂತ್ ಕಾಂಗ್ರೇಸ್ ನಲ್ಲಿ ನೆಲೆ‌ ಸಿಗದ ನಲಪಾಡ್, ರಕ್ಷಾ ರಾಮಯ್ಯಗೆ ಶ್ರೀರಕ್ಷೆ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ವಿವಾದಕ್ಕೆ ಕೊನೆಗೂ ಕಾಂಗ್ರೆಸ್ ತೆರೆ ಎಳೆದಿದ್ದು, ಅಧಿಕಾರ ಹಸ್ತಾಂತರ ಎಂಬುದು ಸುಳ್ಳು ಸುದ್ದಿ. ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಕೆಳಗಿಳಿಸಿ ಮೊಹಮ್ಮದ್ ನಲಪಾಡ್ ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಅಲ್ಲದೇ ಡಿಸೆಂಬರ್ ಅಂತ್ಯದವರೆಗೆ ರಕ್ಷಾ ರಾಮಯ್ಯ ಅಧಿಕಾರದಲ್ಲಿರಲು ಗಡುವು ನೀಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬಣ

ಯೂತ್ ಕಾಂಗ್ರೇಸ್ ನಲ್ಲಿ ನೆಲೆ‌ ಸಿಗದ ನಲಪಾಡ್, ರಕ್ಷಾ ರಾಮಯ್ಯಗೆ ಶ್ರೀರಕ್ಷೆ Read More »