ರಾಜ್ಯ

ಇಸ್ರೇಲ್ ಪ್ರಧಾನಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿ

ಸಮಗ್ರ ನ್ಯೂಸ್ : ಮೆಕ್ಸಿಕೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಣದ ಪ್ರತಿಮೆಯನ್ನು ದುಷ್ಕರ್ಮಿಯೊಬ್ಬ ನಾಶ ಪಡಿಸಿದ ಘಟನೆ ಮೆಕ್ಸಿಕೋದ ವಸ್ತು ಸಂಗ್ರಹಾಲಯದಲ್ಲಿ ನಡೆದಿದೆ.ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆಯನ್ನು ಯಾರು ಮಾಡಿದ್ದಾರೆಂದು ನಮಗೆ ತಿಳಿದಿಲ್ಲ ಎಂದು ಬಿಡಿಎಸ್ ಮೆಕ್ಸಿಕೋ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ. ವೈರಲ್ ಆದ ವಿಡಿಯೋದಲ್ಲಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಇಸ್ರೇಲ್ ಪ್ರಧಾನಿಯ ಮೇಣದ ಪ್ರತಿಮೆಯನ್ನು ಸುತ್ತಿಗೆಯಿಂದ ನಾಶಪಡಿಸಿದ್ದಾನೆ. ಇದರಿಂದಾಗಿ ಮ್ಯೂಸಿಯಂ ನೆಲದ ಮೇಲೆ ಪ್ರತಿಮೆ ಬಿದ್ದಿದ್ದು, ಕೆಂಪು ಬಣ್ಣವೂ ನೆಲಕ್ಕೆ […]

ಇಸ್ರೇಲ್ ಪ್ರಧಾನಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿ Read More »

ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್‌/ ಬಜೆಟ್‌ಗೂ ಮೊದಲೇ ಮದ್ಯದ ಬೆಲೆ ಹೆಚ್ಚಳದ ಸಾಧ್ಯತೆ

ಸಮಗ್ರ ನ್ಯೂಸ್‌: ಬಜೆಟ್‌ ಗಿಂತ ಮುಂಚಿತವಾಗಿ ಮದ್ಯದ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದು ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದೆ. . ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ಸಾಮಾನ್ಯವಾಗಿ ಬಜೆಟ್‌ನಲ್ಲಿ ಸೇರಿಸಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಮಂಡನೆಗೂ ಮುನ್ನವೇ ದರ ಏರಿಕೆಯಾಗಲಿದೆ. ಜನವರಿ 20 ರಿಂದ ಕೆಲವು ವಿಧದ ಬಿಯರ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಅಬಕಾರಿ ಇಲಾಖೆ ಶೀಘ್ರದಲ್ಲೇ ದರ ಏರಿಕೆ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಕನಿಷ್ಠ 10 ರಿಂದ 45 ರೂ.

ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್‌/ ಬಜೆಟ್‌ಗೂ ಮೊದಲೇ ಮದ್ಯದ ಬೆಲೆ ಹೆಚ್ಚಳದ ಸಾಧ್ಯತೆ Read More »

ತಿರುಪತಿ ಕಾಲ್ತುಳಿತ ಪ್ರಕರಣ/ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

ಸಮಗ್ರ ನ್ಯೂಸ್‌: ತಿರುಪತಿಯಲ್ಲಿ ಟೋಕನ್ ವಿತರಣೆ ಕೇಂದ್ರದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಭಕ್ತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ತಿರುಪತಿ ನಗರದ ಬೈರಾಗಿಪಟ್ಟಡದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು. ಮಂದಿ ಪ್ರಾಣ ಕಳೆದುಕೊಂಡಿದ್ದು, 48 ಜನರು ಅಸ್ವಸ್ಥರಾಗಿದ್ದಾರೆ. ನಾರಾಯಣವನಂ ತಹಸೀಲ್ದಾರ್ ಅವರ ದೂರಿನಂತೆ ಪೂರ್ವ ಪಿಎಸ್‌ನಲ್ಲಿ ಬಿಎನ್ಎಎಸ್ ಕಲಂ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಿರುಮಲದಲ್ಲಿ ಕಾಲ್ತುಳಿತದ ಘಟನೆಯಿಂದ ಎಚ್ಚೆತ್ತಿರುವ ಟಿಟಿಡಿ ಶುಕ್ರವಾರ ವೈಕುಂಠ ಏಕಾದಶಿಗೆ ಬೃಹತ್

ತಿರುಪತಿ ಕಾಲ್ತುಳಿತ ಪ್ರಕರಣ/ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ Read More »

ಜೆಟ್‌ ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಮೃತದೇಹಗಳು ಪತ್ತೆ

ಸಮಗ್ರ ನ್ಯೂಸ್ : ಫ್ಲೋರಿಡಾದ ಫೋರ್ಟ್ ಲಾಡರೇಲ್-ಹಾಲಿವುಡ್ ವಿಮಾನ ನಿಲ್ದಾಣದಲ್ಲಿ ಜ. 06 ರಂದು ರಾತ್ರಿ ಭೂಸ್ಪರ್ಷ ಮಾಡಿದ ಜೆಟ್‌ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದಾಗಿ ಏರ್‌ಲೈನ್ ಅಸೋಸಿಯೇಟೆಡ್ ಮಾಹಿತಿ ನೀಡಿದೆ.ನ್ಯೂಯಾಕ್‌ರ್ನ ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 3 ಗಂಟೆಗಳ ಪ್ರಯಾಣದ ಬಳಿಕ ಲಾಡರೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಮೃತವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.”ಮೃತ ವ್ಯಕ್ತಿಗಳ ಗುರುತುಗಳು ಮತ್ತು ಅವರು ವಿಮಾನವನ್ನು ಹೇಗೆ ಪ್ರವೇಶಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು

ಜೆಟ್‌ ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಮೃತದೇಹಗಳು ಪತ್ತೆ Read More »

ನಕ್ಸಲರ ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ – ಸುನಿಲ್ ಕುಮಾರ್| ಅಮಿತ್ ಶಾ ನಕ್ಸಲರಿಗೆ ಪ್ಯಾಕೇಜ್ ನೀಡಿದಾಗ ಬೆಚ್ಚಿಬೀಳಲಿಲ್ಲವೇ? ಸಿಎಂ ಪ್ರಶ್ನೆ

ಸಮಗ್ರ ನ್ಯೂಸ್: ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಬುಧವಾರ(ಜ8) ಆರು ಮಂದಿ ನಕ್ಸಲರು ಶರಣಾಗುವ ಮುನ್ನ ಸುನಿಲ್ ಕುಮಾರ್ ಅವರು ಎಕ್ಸ್ ಪೋಸ್ಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ”ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ?ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ.ಅವರಿಗೆ ಕ್ಷಮೆ,ಪ್ರಕರಣ ರದ್ದು, ಸುಖ-ಸೌಕರ್ಯ

ನಕ್ಸಲರ ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ – ಸುನಿಲ್ ಕುಮಾರ್| ಅಮಿತ್ ಶಾ ನಕ್ಸಲರಿಗೆ ಪ್ಯಾಕೇಜ್ ನೀಡಿದಾಗ ಬೆಚ್ಚಿಬೀಳಲಿಲ್ಲವೇ? ಸಿಎಂ ಪ್ರಶ್ನೆ Read More »

ಡೊನಾಲ್ಡ್ ಟ್ರಂಪ್‌ಗೆ ಶಾಕ್ ಕೊಟ್ಟ ಕೆನಡಾ ರಾಜಕಾರಣಿಗಳು!

ಸಮಗ್ರ ನ್ಯೂಸ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ಕೆನಡಾ ನಡುವೆ ದೊಡ್ಡ ಗಲಾಟೆ ಶುರುವಾಗಿದೆ. ಈ ಹಿಂದೆ ಕೂಡ ಡೊನಾಲ್ಡ್ ಟ್ರಂಪ್ & ಕೆನಡಾ ರಾಜಕಾರಣಿಗಳ ನಡುವೆ ಕಿರಿಕ್ ನಡೆದಿತ್ತು. ಆದರೆ ಈ ಬಾರಿ ದೊಡ್ಡ ಗಲಾಟೆ ಶುರುವಾಗಿದೆ. ಅದ್ರಲ್ಲೂ ಒಬ್ಬರ ನೆಲವನ್ನು ಮತ್ತೊಬ್ಬರು ಆಕ್ರಮಣ ಮಾಡುವ ಮಟ್ಟಿಗೆ ಮಾತುಕತೆ ನಡೆದು ಹೋಗಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಕ್ರಿಯೆಗೆ ಇದೀಗ ಕೆನಡಾ ರಾಜಕಾರಣಿ ಪ್ರತಿಕ್ರಿಯೆ ನೀಡಿದ್ದಾರೆ.ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬರುವ ಮೊದಲೇ

ಡೊನಾಲ್ಡ್ ಟ್ರಂಪ್‌ಗೆ ಶಾಕ್ ಕೊಟ್ಟ ಕೆನಡಾ ರಾಜಕಾರಣಿಗಳು! Read More »

ಬಸ್ ಟಿಕೆಟ್ ದರ ಹೆಚ್ಚಳದ ನಡುವೆ ಬಸ್ ಪಾಸ್ ದರವೂ ಏರಿಕೆ| ಜ.9ರಿಂದಲೇ ಪರಿಷ್ಕೃತ ದರ ಜಾರಿ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಟಿಕೆಟ್​ ದರ ಏರಿಸುವ ಮೂಲಕ ಪ್ರಯಾಣಿಕರಿಗೆ ಶಾಕ್​ ರಾಜ್ಯ ಸರ್ಕಾರವು ಇದೀಗ ಮತ್ತೊಂದು ಸುತ್ತಿನ ಆಘಾತವನ್ನು ನೀಡಿದೆ. ಟಿಕೆಟ್​ ದರದ ಬೆನ್ನಲ್ಲೇ ದೈನಿಕ ಹಾಗೂ ಮಾಸಿಕ ಪಾಸ್​ಗಳ ದರವನ್ನು ಏರಿಸಿ ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಶಾಕ್​ ನೀಡಿದೆ. ಅದರಂತೆ ಜನವರಿ 09ರಿಂದ ದೈನಿಕ ಹಾಗೂ ಮಾಸಿಕ ಪಾಸ್​ಗಳ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಈ ಸಂಬಂಧ ಹೊಸ ದರಪಟ್ಟಿಯನ್ನು ಪ್ರಕಟಣೆ ಮೂಲಕ ಹೊರಡಿಸಲಾಗಿದೆ. ಇದಲ್ಲದೆ ಸಾಂದರ್ಭಿಕ ಒಪ್ಪಂದದ ಮೇಲೆ

ಬಸ್ ಟಿಕೆಟ್ ದರ ಹೆಚ್ಚಳದ ನಡುವೆ ಬಸ್ ಪಾಸ್ ದರವೂ ಏರಿಕೆ| ಜ.9ರಿಂದಲೇ ಪರಿಷ್ಕೃತ ದರ ಜಾರಿ Read More »

6 ಜನ ನಕ್ಸಲರ ರೋಚಕ ಸ್ಟೋರಿ! ಶರಣಾಗತರಾದ ಈ ನಕ್ಸಲರ ಹಿಂದಿನ ಹಿನ್ನೆಲೆ ಏನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್‌: ಕಾಡಿನೊಳಗೆ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದರು. ಆರು ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುತ್ಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿಗೆ ನಿರ್ಧರಿಸಿದ್ದಾರೆ. ಅಂತೆಯೇ ಜ.8 ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸಮ್ಮುಖದಲ್ಲಿ ಶರಣಾಗಿದ್ದಾರೆ. ಲತಾ ಮುಂಡಗಾರುಶೃಂಗೇರಿ ತಾಲೂಕಿನ ಲತಾ ಮಂಡಗಾರು

6 ಜನ ನಕ್ಸಲರ ರೋಚಕ ಸ್ಟೋರಿ! ಶರಣಾಗತರಾದ ಈ ನಕ್ಸಲರ ಹಿಂದಿನ ಹಿನ್ನೆಲೆ ಏನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್ Read More »

ಡಾ. ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ

ನಟಿ ಉಮಾಶ್ರೀಯವರಿಂದ ಪ್ರಶಸ್ತಿ ಪ್ರದಾನ ಪ್ರಥಮ ಬಾರಿಗೆ ಕೊಡ ಮಾಡಿದ ಪ್ರಶಸ್ತಿಯನ್ನು ಸ್ವೀಕರಿಸಿದ ದ.ಕ ಜಿಲ್ಲೆಯ ಪ್ರಥಮ ಮಹಿಳಾ ಸಾಧಕಿ ಪ್ರಶಸ್ತಿಯು ರಾಷ್ಟ್ರ ಪ್ರಶಸ್ತಿ ಮಾದರಿಯಲ್ಲಿ ನಗದು ಪುರಸ್ಕಾರದೊಂದಿಗೆ ಪದಕ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮೊದಲಾದವುಗಳನ್ನು ಒಳಗೊಂಡಿದೆ.

ಡಾ. ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ Read More »

ಸಿಎಂ ಸಿದ್ದರಾಮಯ್ಯ ಮುಂದೆ ಶರಣಾದ 6 ಮಂದಿ‌ ನಕ್ಸಲರು

ಸಮಗ್ರ ನ್ಯೂಸ್: ಪಶ್ಚಿಮ ಘಟ್ಟದಲ್ಲಿ ಕಳೆದ ಹಲವು ವರ್ಷಗಳಿಂದ ಮಾವೋವಾದಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ 6 ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಗತರಾಗಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು ಹಾಗೂ ಶಾಂತಿಗಾಗಿ ನಾಗರೀಕರ ವೇದಿಕೆ ಸದಸ್ಯರ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಶರಣಾಗತರಾದರು ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ರಾಯಚೂರಿನ ಮಾರಪ್ಪಅರೋಲಿ, ತಮಿಳುನಾಡಿನ ಕೆ.ವಸಂತ್,

ಸಿಎಂ ಸಿದ್ದರಾಮಯ್ಯ ಮುಂದೆ ಶರಣಾದ 6 ಮಂದಿ‌ ನಕ್ಸಲರು Read More »