ರಾಜ್ಯ

ಹಾಸನಾಂಬೆ ದರ್ಶನದ ಎಲ್ಲಾ ಪಾಸ್‌ ರದ್ದು: ಆಡಳಿತ ಮಂಡಳಿ ಆದೇಶ

ಸಮಗ್ರ ನ್ಯೂಸ್: ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬ ತಾಯಿಯ ದರ್ಶನಕ್ಕೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗಿ ಜನಜಂಗುಳಿ ಏರ್ಪಟ್ಟ ಹಿನ್ನೆಲೆಯಲ್ಲಿ ಹಾಸನಾಂಬ ಆಡಳಿತ ಮಂಡಳಿಯಿಂದ ಎಲ್ಲಾ ಪಾಸ್ ರದ್ದುಮಾಡಿ ಆದೇಶಿಸಿದೆ. ಸದ್ಯ ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಪಾಸ್‌ ಹೊರತಾಗಿ ಬೇರೆ ಎಲ್ಲಾ ಪಾಸ್ ರದ್ದು ಮಾಡಿರುವುದಾಗಿ ತಿಳಿಸಿದೆ.ಹಾಸನಾಂಬೆ ದರ್ಶನಕ್ಕೆ ಈಗ ಮಳೆ ಅಡ್ಡಿಯಾಗಿದೆ. ಭಾರೀ ಮಳೆಯ ಕಾರಣದಿಂದ ಮಕ್ಕಳು, ಜನರು ಪರದಾಡುವಂತೆ ಆಗಿದೆ. ಅಲ್ಲದೇ ಭಕ್ತರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತೆ […]

ಹಾಸನಾಂಬೆ ದರ್ಶನದ ಎಲ್ಲಾ ಪಾಸ್‌ ರದ್ದು: ಆಡಳಿತ ಮಂಡಳಿ ಆದೇಶ Read More »

ಗುಜರಾತ್‌’ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ದೇಶಾದ್ಯಮತ ಸಂಭ್ರಮ, ಸಡಗರದಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದ ಹಾಗೆ ಈ ವರ್ಷವೂ ಕೂಡ ಗುಜರಾತ್‌ನ ಕಚ್‌ನಲ್ಲಿ ಸೈನಿಕರರಿಗೆ ಸಿಹಿ ತಿನ್ನಿಸಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ.

ಗುಜರಾತ್‌’ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ Read More »

ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು, ಮಚ್ಚು : ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

ಸಮಗ್ರ ನ್ಯೂಸ್: ಯುವಕನ ಮೇಲೆ ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದು, ಯುವಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅ.30 ರಂದು ರಾತ್ರಿ ಬೆಂಗಳೂರಿನ ಬ್ಯಾಡರಹಳ್ಳಿಯ ಮುನೇಶ್ವರ ನಗರದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಅರುಣ್ ಎನ್ನುವ ಯುವಕನ ಮೇಲೆ ಮನಸ್ಸು ಇಚ್ಛೆ ಹಲ್ಲೆಮಾಡಿದ್ದು,ಲಾಂಗು ಮಚ್ಚುಗಳಿಂದ ನಡು ರಸ್ತೆಯಲ್ಲಿ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ.ಮಾಹಿತಿ ಸಿಗುತ್ತಿದ್ದಂತೆ ಘಟನೆಕ್ಕೆ ಹೊಯ್ಸಳ ಪೊಲೀಸರು ಆಗಮಿಸಿದ್ದಾರೆ.ನಿನ್ನೆ ಸಂಜೆ ಹೆಗ್ಗನಹಳ್ಳಿ ಕಡೆಗೆ ಅರುಣ್ ಹೋಗಿದ್ದ. ಅಲ್ಲಿ ಕೆಲ ಯುವಕರ ಜೊತೆಗೆ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಬಳಿಕ ಕೆಲವರು

ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು, ಮಚ್ಚು : ಯುವಕನ ಮೇಲೆ ಮಾರಣಾಂತಿಕ ಹಲ್ಲೆ! Read More »

7 ತಿಂಗಳಲ್ಲೇ 1 ಲಕ್ಷ ಕೋಟಿ ಆದಾಯ : ಗುಜರಾತ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕರ್ನಾಟಕ

ಸಮಗ್ರ ನ್ಯೂಸ್: ರಾಜ್ಯದ ಆದಾಯ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಷದ 7 ತಿಂಗಳಲ್ಲಿಯೇ ಶೇ.53ರಷ್ಟು ಗುರಿ ಮುಟ್ಟಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ 1.95 ಲಕ್ಷ ಕೋಟಿ ರು. ಆದಾಯ ಸಂಗ್ರಹದ ಗುರಿ ಹೊಂದಿದ್ದು, ಅಕ್ಟೋಬ‌ರ್ ಅಂತ್ಯದ ವೇಳೆಗೆ 1.03 ಲಕ್ಷ ರು.ಆದಾಯ ಸಂಗ್ರಹಿಸುವ ಮೂಲಕ ನಿಗದಿತ ಗುರಿಯ ಶೇ. 53ರಷ್ಟು ಸಾಧಿಸಿದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯ ಸಂಗ್ರಹದಲ್ಲಿ ಶೇ. 11.2ರಷ್ಟು ಪ್ರಗತಿ ಸಾಧಿಸಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ

7 ತಿಂಗಳಲ್ಲೇ 1 ಲಕ್ಷ ಕೋಟಿ ಆದಾಯ : ಗುಜರಾತ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕರ್ನಾಟಕ Read More »

ಹವಾಮಾನ‌ ಸಮಾಚಾರ|ದೀಪಾವಳಿಗೆ ವರುಣದೇವ ಅಲರ್ಟ್| ಕರಾವಳಿ, ದ.ಒಳನಾಡಿನ ‌ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ದೀಪಾವಳಿ ಹಬ್ಬಕ್ಕೆ ವರುಣ ಬಂಪರ್ ಕೊಡುಗೆ ನೀಡಿದ್ದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಸೇರಿ 9 ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ನವೆಂಬರ್‌ 1 ಮತ್ತು 2 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದರೆ, ಅಕ್ಟೋಬರ್ 31 ರಂದು ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ತುಂತುರು

ಹವಾಮಾನ‌ ಸಮಾಚಾರ|ದೀಪಾವಳಿಗೆ ವರುಣದೇವ ಅಲರ್ಟ್| ಕರಾವಳಿ, ದ.ಒಳನಾಡಿನ ‌ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನ ಭಾರೀ ಮಳೆ ಮುನ್ಸೂಚನೆ Read More »

ದೀಪಾವಳಿ ಹಬ್ಬದ ಬಂಪ‌ರ್, ಹೋಂಡಾ ಆಯಕ್ಟಿವಾಗೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್!

ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ಕೊಡುಗೆ ಘೋಷಣೆಯಾಗಿದೆ. ಇದೀಗ ಹೋಂಡಾ ಆಯಕ್ಟಿವಾ 6ಜಿ ಹಾಗೂ 125 ಸ್ಕೂಟರ್ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಈ ಮೂಲಕ ಕೈಗೆಟುಕುವ ದರದಲ್ಲಿ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಲವು ಉತ್ಪನ್ನ, ಸ್ಕೂಟರ್, ಕಾರು ಸೇರಿದಂತೆ ವಾಹನಗಳ ಮೇಲೆ ಹಲವು ಕಂಪನಿಗಳು ಆಫರ್ ಘೋಷಣೆ ಮಾಡಿದೆ. ಬಜಾಜ್ ಮಾಲ್ ಮೂಲಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಾಗಲಿದೆ. ಈ ಸ್ಕೂಟ‌ರ್ ಒಟ್ಟು ಮೊತ್ತದ ಮೇಲೆ

ದೀಪಾವಳಿ ಹಬ್ಬದ ಬಂಪ‌ರ್, ಹೋಂಡಾ ಆಯಕ್ಟಿವಾಗೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್! Read More »

ರಾಜ್ಯದಲ್ಲಿ ಭುಗಿಲೆದ್ದ ‘ವಕ್ಪ್’ ವಿವಾದ : ಸಿಂದಗಿ ಬಳಿಕ ಶ್ರೀರಂಗಪಟ್ಟಣದ ದೇವಸ್ಥಾನದ ಜಾಗ ‘ವಕ್ಪ್ ಆಸ್ತಿ’!

ಸಮಗ್ರ ನ್ಯೂಸ್: ಸದ್ಯ ರಾಜ್ಯದಲ್ಲಿ ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ವಿಚಾರವಾಗಿ ಇತ್ತೀಚಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತ ಮಠ ಕೂಡ ವಕ್ಸ್ ಆಸ್ತಿಗೆ ಸಿಗದೆ ಎಂದು ಹೇಳಲಾಗುತ್ತಿತ್ತು. ಇದೀಗ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲವಿರುವ ಜಾಗ ಕೂಡ ವಕ್ಫ್ ಆಸ್ತಿಗೆ ಸೇರಿದ್ದು ಎಂದು ನಮೂದಾಗಿದೆ. ಮಹದೇವಪುರ ಗ್ರಾಮದ ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲದ ೬ ಗುಂಟೆ ಜಾಗ ಇದೀಗ ಬಂಜರು ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ನಮೂದಾಗಿದೆ. ಗ್ರಾಮಸ್ಥರ

ರಾಜ್ಯದಲ್ಲಿ ಭುಗಿಲೆದ್ದ ‘ವಕ್ಪ್’ ವಿವಾದ : ಸಿಂದಗಿ ಬಳಿಕ ಶ್ರೀರಂಗಪಟ್ಟಣದ ದೇವಸ್ಥಾನದ ಜಾಗ ‘ವಕ್ಪ್ ಆಸ್ತಿ’! Read More »

ಗಿನ್ನೆಸ್ ದಾಖಲೆ ಸೃಷ್ಟಿಸಿದ ಅಯೋಧ್ಯೆಯ ದೀಪೋತ್ಸವ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ನಡೆದ ಎಂಟನೇ ದೀಪೋತ್ಸವವು ಬುಧವಾರ ವಿಶ್ವದ ಅತಿದೊಡ್ಡ ತೈಲ ದೀಪಗಳ ಪ್ರದರ್ಶನಕ್ಕಾಗಿ ಎರಡು ಹೊಸ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದೆ. ಜನವರಿಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ದೀಪೋತ್ಸವ ಆಚರಣೆಯನ್ನ ಗುರುತಿಸುವ ಪ್ರಯತ್ನದಲ್ಲಿ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಲಕ್ಷಾಂತರ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಈ ದಾಖಲೆಗಳು ಬಂದಿವೆ. ಏಕಕಾಲದಲ್ಲಿ ಅತಿ ಹೆಚ್ಚು ಜನರು ‘ದೀಪ’ ತಿರುಗುವಿಕೆಯನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ತೈಲ ದೀಪಗಳ ಅತಿದೊಡ್ಡ ಪ್ರದರ್ಶನಕ್ಕಾಗಿ ಗಿನ್ನೆಸ್

ಗಿನ್ನೆಸ್ ದಾಖಲೆ ಸೃಷ್ಟಿಸಿದ ಅಯೋಧ್ಯೆಯ ದೀಪೋತ್ಸವ Read More »

ಮಹಿಳೆಯರ ಉಚಿತ ಪ್ರಯಾಣಕ್ಕೆ ಬೀಳುತ್ತಾ ಕತ್ತರಿ| ‘ಶಕ್ತಿ’ ಯೋಜನೆ ಪರಿಷ್ಕರಣೆ ಸುಳಿವು ನೀಡಿದ ಡಿಸಿಎಂ

ಸಮಗ್ರ ನ್ಯೂಸ್: ರಾಜ್ಯದ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ʼಶಕ್ತಿʼ ಯೋಜನೆ ಪರಿಷ್ಕರಣೆ ಆಗುವ ಬಗ್ಗೆ ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸುಳಿವು ನೀಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬಳಿ ಬುಧವಾರ(ಅ.30) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ 20 ನೂತನ ವೋಲ್ವೋ ಐರಾವತ ಕ್ಲಬ್‌ ಕ್ಲಾಸ್‌ 2.0 ಬಸ್ ಉದ್ಘಾಟಿಸಿ ಅವರು ಮಾತನಾಡಿದರು. ʼಅನೇಕ ಜನರು ನನಗೆ ಇ-ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ನಮಗೆ ಉಚಿತ ಪ್ರಯಾಣ ಬೇಡವೆಂದು ಮೆಸೇಜ್

ಮಹಿಳೆಯರ ಉಚಿತ ಪ್ರಯಾಣಕ್ಕೆ ಬೀಳುತ್ತಾ ಕತ್ತರಿ| ‘ಶಕ್ತಿ’ ಯೋಜನೆ ಪರಿಷ್ಕರಣೆ ಸುಳಿವು ನೀಡಿದ ಡಿಸಿಎಂ Read More »

ರಾಜ್ಯ ಸರ್ಕಾರದಿಂದ ೫೦ ‘ಅಕ್ಕ ಕೆಫೆ’ ಶೀಘ್ರದಲ್ಲೇ ಆರಂಭ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದ ಅಕ್ಕ ಕೆಫೆ ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಂ ಜೊತೆಗೂಡಿ ಅನುಷ್ಠಾನಕ್ಕೆ ತಂದಿದೆ. ‘ಅಕ್ಕ ಕೆಫೆ’ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಯಲ್ಲೇ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುತ್ತಿವೆ. ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಸ್ವ ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು

ರಾಜ್ಯ ಸರ್ಕಾರದಿಂದ ೫೦ ‘ಅಕ್ಕ ಕೆಫೆ’ ಶೀಘ್ರದಲ್ಲೇ ಆರಂಭ Read More »