ರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ| ಮೂವರಿಗೆ ಜಾಮೀನು ಮಂಜೂರು| ದರ್ಶನ್, ಪವಿತ್ರಾ‌ ಗೌಡ ಕಥೆ ಏನು?

ಸಮಗ್ರ ನ್ಯೂಸ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯನಾಶ ಆರೋಪವಿದ್ದ ಮೂವರಿಗೆ ಜಾಮೀನು ಮಂಜೂರು ಆಗಿದೆ. ಎ15 ಕಾರ್ತಿಕ್‌, ಎ16 ಕೇಶವಮೂರ್ತಿಗೆ , ಎ17 ನಿಖಿಲ್ ನಾಯಕ್ ಅವರಿಗೆ ಜಾಮೀನು ಮಂಜೂರು ಆಗಿದೆ 57ನೇ ಸಿಸಿಹೆಚ್‌ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್‌ ಕೇಶವಮೂರ್ತಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ತುಮಕೂರು ಜೈಲಿನಲ್ಲಿ ಕೇಶವಮೂರ್ತಿ ಇದ್ದರು. ಕೊನೆ ನಂತರದ ಸಾಕ್ಷ್ಯ ನಾಶ ಆರೋಪ ಮಾತ್ರ ಇವರ ಮೇಲಿತ್ತು. ಈ ಜಾಮೀನು ಇತರೆ ಆರೋಪಿಗಳ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು […]

ರೇಣುಕಾಸ್ವಾಮಿ ಕೊಲೆ ಪ್ರಕರಣ| ಮೂವರಿಗೆ ಜಾಮೀನು ಮಂಜೂರು| ದರ್ಶನ್, ಪವಿತ್ರಾ‌ ಗೌಡ ಕಥೆ ಏನು? Read More »

ಸಿಎಂ ವಿರುದ್ದದ ಮುಡಾ ಹಗರಣ| ಸೆ.24ರ ಮಧ್ಯಾಹ್ನ ಹೈಕೋರ್ಟ್ ತೀರ್ಪು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಂತರ ನಾಳೆ (ಸೆ.24) ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ರಾಜ್ಯಪಾಲರು ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ಧರಾಮಯ್ಯ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ್ದಂತ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸಿಎಂ ಸಿದ್ಧರಾಮಯ್ಯ ವಿರುದ್ಧದ

ಸಿಎಂ ವಿರುದ್ದದ ಮುಡಾ ಹಗರಣ| ಸೆ.24ರ ಮಧ್ಯಾಹ್ನ ಹೈಕೋರ್ಟ್ ತೀರ್ಪು Read More »

ರೇಣುಕಾಸ್ವಾಮಿ ಕೊಲೆ‌ ಪ್ರಕರಣ| A16 ಆರೋಪಿ ಕೇಶವ ಸ್ವಾಮಿಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಪಾಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಎ.16 ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಎ.16 ಆರೋಪಿಯಾಗಿರುವಂತ ಕೇಶವಮೂರ್ತಿ ಎಂಬುವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ಆರೋಪಿಯಾಗಿರುವ ಕೇಶವ ಮೂರ್ತಿಗೆ ಜಾಮೀನು ಮಂಜೂರು ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ.16 ಆರೋಪಿಯಾಗಿರುವ ಕೇಶವಮೂರ್ತಿ ವಿರುದ್ಧ ಕೊಲೆ ಪ್ರಕರಣ

ರೇಣುಕಾಸ್ವಾಮಿ ಕೊಲೆ‌ ಪ್ರಕರಣ| A16 ಆರೋಪಿ ಕೇಶವ ಸ್ವಾಮಿಗೆ ಜಾಮೀನು ಮಂಜೂರು Read More »

ಅಂಬಿಕಾ ಮಹಾವಿದ್ಯಾಲಯದಲ್ಲಿ ಜಾಗೃತಿ ಉಪನ್ಯಾಸ ಕಾರ್ಯಕ್ರಮ

ಸಮಗ್ರ ನ್ಯೂಸ್:ತಿರುಪತಿಯಂತಹ ಮಹಾನ್ ಶ್ರದ್ದಾ ಕೇಂದ್ರದ ಪವಿತ್ರ ಪ್ರಸಾದವನ್ನು ಅಪವಿತ್ರಗೊಳಿಸಿದ್ದರೂ ಯಾರಿಗೂ ಏನೂ ಅನಿಸುತ್ತಿಲ್ಲ. ಕನಿಷ್ಟ ಆಕ್ರೋಶವನ್ನೂ ಹೊರಹಾಕುತ್ತಿಲ್ಲದಿರುವುದು ದುರಂತ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ತಿರುಪತಿ ದೇವರ ಪ್ರಸಾದದ ಬಗೆಗಿನ ಅಪವಿತ್ರತೆಯ ಕುರಿತು ಮಾತನಾಡಿದರು. ಪ್ರಸಾದಕ್ಕೆ ದನದ ಕೊಬ್ಬನ್ನು ಹಾಕಿ ಭಕ್ತಾದಿಗಳಿಗೆ ಹಂಚಲಾಗಿದೆ. ಭಕ್ತರ ನಂಬಿಕೆಯ ಬುಡವನ್ನೇ ಅಲ್ಲಾಡಿಸಲಾಗುತ್ತಿದೆ. ಹಿಂದೂಗಳ ಮೇಲೆ ಈ

ಅಂಬಿಕಾ ಮಹಾವಿದ್ಯಾಲಯದಲ್ಲಿ ಜಾಗೃತಿ ಉಪನ್ಯಾಸ ಕಾರ್ಯಕ್ರಮ Read More »

ತಿರುಪತಿ ಲಡ್ಡು ವಿವಾದ/ ವಿಶೇಷ ತನಿಖಾ ತಂಡ (SIT) ರಚಿಸಲು ಚಂದ್ರಬಾಬು ನಾಯ್ಡು ಆದೇಶ

ಸಮಗ್ರ ನ್ಯೂಸ್‌: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ತುಪ್ಪ ಖರೀದಿ ಬಗ್ಗೆ, ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ದೇವಾಲಯಗಳಿಗೆ ಕಚ್ಚಾ ವಸ್ತುಗಳ ಖರೀದಿ ಪ್ರಕ್ರಿಯೆಯ ಲೆಕ್ಕಪರಿಶೋಧನೆಗೆ ಅವರು ಆದೇಶಿಸಿದರು. ʼನಾವು ಐಜಿಪಿ ಮತ್ತು ಅದಕ್ಕಿಂತ ಹೆಚ್ಚಿನ ಹುದ್ದೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುತ್ತಿದ್ದೇವೆ. ಎಸ್‌ಐಟಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ ಮತ್ತು ಅಂತಹ ವಿಷಯಗಳು ಪುನರಾವರ್ತನೆಯಾಗದಂತೆ ನಾವು ಆ

ತಿರುಪತಿ ಲಡ್ಡು ವಿವಾದ/ ವಿಶೇಷ ತನಿಖಾ ತಂಡ (SIT) ರಚಿಸಲು ಚಂದ್ರಬಾಬು ನಾಯ್ಡು ಆದೇಶ Read More »

‘ಹಿಂದೂ ಹಬ್ಬಗಳ ರಕ್ಷಣೆಗೆ ತಲವಾರು ಜೊತೆ ಜನರನ್ನು ಕಳುಹಿಸುತ್ತೇವೆ’| ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಕುಲಕರ್ಣಿ ಹೇಳಿಕೆ

ಸಮಗ್ರ ನ್ಯೂಸ್: ‘ರಾಜ್ಯ ಸರ್ಕಾರದಿಂದ ಹಿಂದೂ ಹಬ್ಬಗಳಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ನಾವೇ ಶಸ್ತ್ರ ಹಿಡಿದು ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ. ಮುಂಬರುವ ಗಣೇಶ ಚತುರ್ಥಿ ಸಂದರ್ಭದಲ್ಲಿ, ಆಯೋಜಕರು ವಿನಂತಿಸಿದರೆ ಮೆರವಣಿಗೆಯ ರಕ್ಷಣೆಗಾಗಿ 50 ಯುವಕರನ್ನು ತಲವಾರುಸಹಿತ ಕಳುಹಿಸಲು ಸಿದ್ಧ’ ಎಂದು ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಿಮಗಷ್ಟೇ ಕಲ್ಲು ಹಿಡಿಯಲು, ತಲವಾರು ಹಿಡಿಯಲು ಬರುವುದಲ್ಲ. ಹಿಂದೂ ಸಮಾಜಕ್ಕೂ ಗೊತ್ತಿದೆ ಎಂದು ಮುಸ್ಲಿಂ ಗೂಂಡಾಗಳಿಗೆ

‘ಹಿಂದೂ ಹಬ್ಬಗಳ ರಕ್ಷಣೆಗೆ ತಲವಾರು ಜೊತೆ ಜನರನ್ನು ಕಳುಹಿಸುತ್ತೇವೆ’| ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಕುಲಕರ್ಣಿ ಹೇಳಿಕೆ Read More »

ರಿಯಾ ಸಿಂಘಾಗೆ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ

ಸಮಗ್ರ ನ್ಯೂಸ್: ಜೈಪುರದಲ್ಲಿ ಭಾನುವಾರ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ಜಾಗತಿಕ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ರಿಯಾ, ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಗೆದ್ದಿದ್ದೇನೆ. ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ನಾನು ತುಂಬಾ ಶ್ರಮಪಟ್ಟಿದ್ದೇನೆ ಎಂದರು.ನಟಿ

ರಿಯಾ ಸಿಂಘಾಗೆ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ Read More »

ಹವಾಮಾನ ವರದಿ| ರಾಜ್ಯದಲ್ಲಿ ‌ಮತ್ತೆ ಚುರುಕುಗೊಂಡ ಮುಂಗಾರು| ಹಲವು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಮುಂಗಾರು ಚುರುಕು ಪಡೆದ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಳಗಾವಿ, ವಿಜಯಪುರದಲ್ಲಿ ಸೆ.23 ರಿಂದ ಮುಂದಿನ ಎರಡು ದಿನ ಹಾಗೂ ಧಾರವಾಡ, ಹಾವೇರಿ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಶಿವಮೊಗ್ಗದಲ್ಲಿ ಸೆ.23ರಂದು ಭಾರಿ ಮಳೆ ಬೀಳುವ ಸಂಭವ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಲಬುರಗಿ, ರಾಯಚೂರು, ಕೊಪ್ಪಳ

ಹವಾಮಾನ ವರದಿ| ರಾಜ್ಯದಲ್ಲಿ ‌ಮತ್ತೆ ಚುರುಕುಗೊಂಡ ಮುಂಗಾರು| ಹಲವು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ Read More »

ಉಜಿರೆ: ರಬ್ಬರ್ ಟ್ಯಾಪಿಂಗ್ ತರಬೇತಿ ಗೆ ಅರ್ಜಿ‌ ಆಹ್ವಾನ

ಸಮಗ್ರ ನ್ಯೂಸ್: ರಬ್ಬರ್ ಬೆಳೆಗಾರ ರೈತರಿಗೆ ಮಹತ್ವದ ಮಾಹಿತಿ ಎನ್ನುವಂತೆ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 21-10-2024ರಿಂದ 30-10-2021ರವರೆಗೆ 10 ದಿನಗಳ ಕಾಲ ಉಚಿತವಾಗಿ ರಬ್ಬರ್ ಟ್ಯಾಪಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದಿದೆ. 18 ವರ್ಷದಿಂದ 45 ವರ್ಷದ ಒಳಗಿನವರು ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಉಜಿರೆ: ರಬ್ಬರ್ ಟ್ಯಾಪಿಂಗ್ ತರಬೇತಿ ಗೆ ಅರ್ಜಿ‌ ಆಹ್ವಾನ Read More »

ಅಂಕೋಲ ಗುಡ್ಡ ಕುಸಿತ ಪ್ರಕರಣ|ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಪತ್ತೆ

ಸಮಗ್ರ ನ್ಯೂಸ್: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಶನಿವಾರ ಮಧ್ಯಾಹ್ನ (ಸೆ.21) ಪತ್ತೆಯಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಲಾರಿ ಚಕ್ರ ಕಂಡು ಬಂದಿದೆ. ಲಾರಿ ತಲೆ ಕೆಳಗಾದ ಸ್ಥಿತಿಯಲ್ಲಿ ನೀರಿನಲ್ಲಿ ಮುಳುಗಿದ್ದು, ಲಾರಿ ಚಕ್ರಕ್ಕೆ ಈಶ್ವರ ಮಲ್ಪೆ ಹಗ್ಗ ಕಟ್ಟಿ ಬಂದಿದ್ದಾರೆ. ಜುಲೈ 16ರಂದು ನಡೆದಿದ್ದ ಗುಡ್ಡಕುಸಿತ ದುರಂತದಲ್ಲಿ ಕೇರಳ ಮೂಲದ ಲಾರಿ ನಾಪತ್ತೆಯಾಗಿತ್ತು. ಲಾರಿಯಲ್ಲಿದ್ದ

ಅಂಕೋಲ ಗುಡ್ಡ ಕುಸಿತ ಪ್ರಕರಣ|ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಪತ್ತೆ Read More »