ರಾಜ್ಯ

ಗಿನ್ನೆಸ್ ದಾಖಲೆ ಸೃಷ್ಟಿಸಿದ ಅಯೋಧ್ಯೆಯ ದೀಪೋತ್ಸವ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ನಡೆದ ಎಂಟನೇ ದೀಪೋತ್ಸವವು ಬುಧವಾರ ವಿಶ್ವದ ಅತಿದೊಡ್ಡ ತೈಲ ದೀಪಗಳ ಪ್ರದರ್ಶನಕ್ಕಾಗಿ ಎರಡು ಹೊಸ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದೆ. ಜನವರಿಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ದೀಪೋತ್ಸವ ಆಚರಣೆಯನ್ನ ಗುರುತಿಸುವ ಪ್ರಯತ್ನದಲ್ಲಿ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಲಕ್ಷಾಂತರ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಈ ದಾಖಲೆಗಳು ಬಂದಿವೆ. ಏಕಕಾಲದಲ್ಲಿ ಅತಿ ಹೆಚ್ಚು ಜನರು ‘ದೀಪ’ ತಿರುಗುವಿಕೆಯನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ತೈಲ ದೀಪಗಳ ಅತಿದೊಡ್ಡ ಪ್ರದರ್ಶನಕ್ಕಾಗಿ ಗಿನ್ನೆಸ್ […]

ಗಿನ್ನೆಸ್ ದಾಖಲೆ ಸೃಷ್ಟಿಸಿದ ಅಯೋಧ್ಯೆಯ ದೀಪೋತ್ಸವ Read More »

ಮಹಿಳೆಯರ ಉಚಿತ ಪ್ರಯಾಣಕ್ಕೆ ಬೀಳುತ್ತಾ ಕತ್ತರಿ| ‘ಶಕ್ತಿ’ ಯೋಜನೆ ಪರಿಷ್ಕರಣೆ ಸುಳಿವು ನೀಡಿದ ಡಿಸಿಎಂ

ಸಮಗ್ರ ನ್ಯೂಸ್: ರಾಜ್ಯದ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ʼಶಕ್ತಿʼ ಯೋಜನೆ ಪರಿಷ್ಕರಣೆ ಆಗುವ ಬಗ್ಗೆ ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸುಳಿವು ನೀಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬಳಿ ಬುಧವಾರ(ಅ.30) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ 20 ನೂತನ ವೋಲ್ವೋ ಐರಾವತ ಕ್ಲಬ್‌ ಕ್ಲಾಸ್‌ 2.0 ಬಸ್ ಉದ್ಘಾಟಿಸಿ ಅವರು ಮಾತನಾಡಿದರು. ʼಅನೇಕ ಜನರು ನನಗೆ ಇ-ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ನಮಗೆ ಉಚಿತ ಪ್ರಯಾಣ ಬೇಡವೆಂದು ಮೆಸೇಜ್

ಮಹಿಳೆಯರ ಉಚಿತ ಪ್ರಯಾಣಕ್ಕೆ ಬೀಳುತ್ತಾ ಕತ್ತರಿ| ‘ಶಕ್ತಿ’ ಯೋಜನೆ ಪರಿಷ್ಕರಣೆ ಸುಳಿವು ನೀಡಿದ ಡಿಸಿಎಂ Read More »

ರಾಜ್ಯ ಸರ್ಕಾರದಿಂದ ೫೦ ‘ಅಕ್ಕ ಕೆಫೆ’ ಶೀಘ್ರದಲ್ಲೇ ಆರಂಭ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದ ಅಕ್ಕ ಕೆಫೆ ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಂ ಜೊತೆಗೂಡಿ ಅನುಷ್ಠಾನಕ್ಕೆ ತಂದಿದೆ. ‘ಅಕ್ಕ ಕೆಫೆ’ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಯಲ್ಲೇ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುತ್ತಿವೆ. ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಸ್ವ ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು

ರಾಜ್ಯ ಸರ್ಕಾರದಿಂದ ೫೦ ‘ಅಕ್ಕ ಕೆಫೆ’ ಶೀಘ್ರದಲ್ಲೇ ಆರಂಭ Read More »

ವಾಹನ ಸವಾರರಿಗೆ ಗುಡ್ ನ್ಯೂಸ್| ದೀಪಾವಳಿಗೆ ಪೆಟ್ರೋಲ್, ಡೀಸೆಲ್‌ ದರ ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ತೈಲ ಕಂಪನಿಗಳು ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ನೀಡುವ ಕಮಿಷನ್ ಅನ್ನು ಹೆಚ್ಚಿಸಿರುವುದರಿಂದ ಇಂಧನ ಬೆಲೆ ಇಳಿಕೆಯಾಗಲಿದೆ. ಧನ ತ್ರಯೋದಶಿ ಶುಭ ಸಂದರ್ಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ಮಂಗಳವಾರ ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ಪಾವತಿಸಬೇಕಾದ ಡೀಲರ್ ಕಮಿಷನ್‌ನಲ್ಲಿ ಹೆಚ್ಚಳವನ್ನು ಘೋಷಿಸಿವೆ. ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಲಿದೆ. ದೂರದ ಸ್ಥಳಗಳಲ್ಲಿ (OMC ಗಳ ಪೆಟ್ರೋಲ್ ಮತ್ತು ಡೀಸೆಲ್ ಡಿಪೋಗಳಿಂದ ದೂರವಿರುವ) ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪನಿಗಳು ಅಂತರ-ರಾಜ್ಯ ಸರಕು ಸಾಗಣೆ ಶುಲ್ಕವನ್ನು

ವಾಹನ ಸವಾರರಿಗೆ ಗುಡ್ ನ್ಯೂಸ್| ದೀಪಾವಳಿಗೆ ಪೆಟ್ರೋಲ್, ಡೀಸೆಲ್‌ ದರ ಇಳಿಕೆ ಸಾಧ್ಯತೆ Read More »

ರೈತರ ಹೊಲಗಳ ಬಳಿಕ ಇದೀಗ ಹಿಂದೂ ‘ಮಠ’ಗಳ ಭೂಮಿ ಕೂಡ ‘ವಕ್ಫ್’ ಆಸ್ತಿ!

ಸಮಗ್ರ ನ್ಯೂಸ್: ಜಿಲ್ಲೆಯ ಸಾವಿರಾರು ಎಕರೆ ಭೂಮಿ ವಕ್ಫ್ ಭೂಮಿಗೆ ಸೇರಿದ್ದು ಎಂದು ಸರ್ಕಾರದಿಂದ ರೈತರಿಗೆ ನೋಟಿಸ್‌ ನೀಡಿದ ವಿಚಾರವಾಗಿ, ನಿನ್ನೆ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು.ಇದೀಗ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತ ಮಠದ ಆಸ್ತಿ ಕೂಡ ವಕ್ಸ್ ಗೆ ಆಸ್ತಿಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಸ್ ಬೋರ್ಡ್ ಎಂದು ನೋಂದಣಿಯಾಗಿದೆ.ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ

ರೈತರ ಹೊಲಗಳ ಬಳಿಕ ಇದೀಗ ಹಿಂದೂ ‘ಮಠ’ಗಳ ಭೂಮಿ ಕೂಡ ‘ವಕ್ಫ್’ ಆಸ್ತಿ! Read More »

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ಕಾರ್ಕಳ ಶ್ರೀ ಮಾರಿಯಮ್ಮ ದೇವಾಲಯಕ್ಕೆ ಅರ್ಚಕರಿಗೆ ಪ್ರವೇಶ‌ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ. ದೇವಳದ ಪ್ರಧಾನ ಅರ್ಚಕರಾದ ರಘುರಾಮ್ ಆಚಾರ್ ಅವರ ಮಗ ಲಕ್ಷ್ಮೀಶ ಆಚಾರ್ ರವರು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇವರು ದೇವಾಲಯಕ್ಕೆ ಬರುವ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ಪಾಂಡುರಂಗ ರಾವ್ ಎಂಬುವವರು ದೇವಳದ ಆಡಳಿತ ಮೊಕ್ತೇಸರರಿಗೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಇನ್ನೂ ಮುಂದೆ

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್ Read More »

ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ| ಸುರಿವ ಮಳೆ ನಡುವೆಯೂ ಆರದ ನಂದಾದೀಪ

ಸಮಗ್ರ ನ್ಯೂಸ್: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯದಲ್ಲಿ ಪವಾಡವೇ ನಡೆದಿದೆ. ಸುರಿಯುವ ಮಳೆಯಲ್ಲಿಯೂ ದೀಪ ಪ್ರಜ್ವಲಿಸಿದೆ. ಮಳೆ ಸುರಿಯುತ್ತಿದ್ದರೂ ದೇವಾಲಯದಲ್ಲಿ ದೀಪ ಉರಿಯುತ್ತಿದೆ. ಹಾಸನಾಂಬೆ ದೇವಾಲಯದ ಮುಂದೆ ಹಚ್ಚಿಟ್ಟಿರುವ ದೀಪ ಜೋರಾಗಿ ಮಳೆ ಬರುತ್ತಿದ್ದರೂ ಆರದೆ ಪ್ರಜ್ವಲಿಸುತ್ತಿದೆ. ಅ. 24ರಂದು ಹಾಸನಾಂಬ ದೇವಾಲಯ ಬಾಗಿಲು ತೆರೆಯಲಾಗಿದ್ದು, ಅ. 25ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 11 ದಿನಗಳ ಕಾಲ ದೇವಾಲಯದ ಬಾಗಿಲು ತೆರೆದರೂ ಮೊದಲ ದಿನ ಮತ್ತು ಅಂತಿಮ ದಿನವಾದ ನವೆಂಬರ್ 3ರಂದು

ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ| ಸುರಿವ ಮಳೆ ನಡುವೆಯೂ ಆರದ ನಂದಾದೀಪ Read More »

ಬೆಂಗಳೂರಿನಲ್ಲಿ ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ

ಸಮಗ್ರ ನ್ಯೂಸ್: ಮಲಯಾಳಂ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್ ವಿರುದ್ಧ 31 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಅ.26 ರಂದು ಎಫ್‌ಐಆ‌ರ್ ದಾಖಲಿಸಿದ್ದಾರೆ. ಕೋಯಿಕ್ಕೋಡ್ ಮೂಲದ ಕಲಾವಿದ ಎಂದು ಗುರುತಿಸಲ್ಪಟ್ಟಿರುವ ದೂರುದಾರ, 2012 ರಲ್ಲಿ ಬಾವುಟ್ಟಿಯುಡೆ ನಮಥಿಲ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜನಪ್ರಿಯ ಮಲಯಾಳಂ ನಟ ಮಮ್ಮುಟ್ಟಿ ಅವರನ್ನು ಭೇಟಿಯಾಗಲು ಕೇರಳದ ಈಸ್ಟಸ್ಟ್ ಹಿಲ್ಲೆ ಹೋದಾಗ ರಂಜಿತ್ ಅವರನ್ನು ಭೇಟಿಯಾದರು ಎಂದು ಆರೋಪಿಸಿದ್ದಾರೆ. ರಂಜಿತ್ ತನ್ನ

ಬೆಂಗಳೂರಿನಲ್ಲಿ ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ Read More »

ಕಾಸರಗೋಡು: ನೀಲೇಶ್ವರಂ ಜಾತ್ರೆಯಲ್ಲಿ ಪಟಾಕಿ ಸ್ಪೋಟ| 8 ಮಂದಿ ಗಂಭೀರ; ಹಲವರಿಗೆ ಗಾಯ

ಸಮಗ್ರ ನ್ಯೂಸ್: ಕೇರಳದ ಕಾಸರಗೋಡಿನ ನೀಲೇಶ್ವರಂ ಬಳಿ ಸೋಮವಾರ ತಡರಾತ್ರಿ ದೇವಸ್ಥಾನದ ಉತ್ಸವದ ವೇಳೆ ಪಟಾಕಿ ದುರಂತದಲ್ಲಿ ಎಂಟು ಮಂದಿ ಗಂಭೀರವಾಗಿ ಸೇರಿದಂತೆ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ

ಕಾಸರಗೋಡು: ನೀಲೇಶ್ವರಂ ಜಾತ್ರೆಯಲ್ಲಿ ಪಟಾಕಿ ಸ್ಪೋಟ| 8 ಮಂದಿ ಗಂಭೀರ; ಹಲವರಿಗೆ ಗಾಯ Read More »

ಕರ್ನಾಟಕದಲ್ಲಿ ‘ಒಳ ಮೀಸಲಾತಿ ಜಾರಿ’ಗೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು.ಈ ಸಭೆಯ ಬಳಿಕ ಸಂಪುಟದ ನಿರ್ಣಯಗಳನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಧ್ಯಮ ಗೋಷ್ಠಿಯಲ್ಲಿ ಹಂಚಿಕೊಂಡರು. ದಲಿತ ಒಳ ಮೀಸಲಾತಿ ಜಾರಿ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಒಳಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಕಮಿಟಿ ರಚನೆಗೆ ತೀರ್ಮಾನಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ‘ಒಳ ಮೀಸಲಾತಿ ಜಾರಿ’ಗೆ Read More »