ರಾಷ್ಟ್ರೀಯ

ಅಬ್ಬಾ…! ಹೆದ್ದಾರಿ ಬದಿಯಲ್ಲಿ ಇಷ್ಟೊಂದು ಕಾಂಡೋಮ್ ರಾಶಿ| ಬೆಚ್ಚಿಬಿದ್ದ ನಾಗರೀಕರು

ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿರಾಶಿ ಕಾಂಡೋಮ್​​ಗಳನ್ನು ಎಸೆದು ಹೋಗಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಇದನ್ನು ಕಂಡು ವಾಹನ ಸವಾರರು ಅಚ್ಚರಿಗೆ ಒಳಗಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್​​ಗಟ್ಟಲೆ ಕಾಂಡೋಮ್​​​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವುಗಳನ್ನು ಇಲ್ಲಿ ಎಸೆದವರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಕೆಲವು ನಿರ್ಜನ ಪ್ರದೇಶ, ನಿರ್ಮಾಣ ಹಂತದಲ್ಲಿರುವ ಕಟ್ಟಗಳು, ಜನವಸತಿ […]

ಅಬ್ಬಾ…! ಹೆದ್ದಾರಿ ಬದಿಯಲ್ಲಿ ಇಷ್ಟೊಂದು ಕಾಂಡೋಮ್ ರಾಶಿ| ಬೆಚ್ಚಿಬಿದ್ದ ನಾಗರೀಕರು Read More »

‘ನಿಫಾ’ ಆತಂಕ ಬೇಡ, ಎಚ್ಚರಿಕೆ ಇರಲಿ| ಈ ವೈರಸ್ ನಿಂದ ಕಾಪಾಡಿಕೊಳ್ಳೋದು ಹೇಗೆ ಗೊತ್ತಾ?

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸದ ನಡುವೆ ರಾಜ್ಯದಲ್ಲಿಯೂ ಹೆಮ್ಮಾರಿಯ ಆತಂಕ ಎದುರಾಗಿದ್ದು, ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ತೀವ್ರ ಜ್ವರ, ಮೈಕೈ ನೋವು, ನಡುಕ, ತೊದಲುವಿಕೆ, ತಲೆನೋವು, ವಾಂತಿ, ನಿದ್ರಾಲಸ್ಯ, ಪ್ರಜ್ಞಾಹೀನತೆ- ಇವು ನಿಫಾ ವೈರಸ್ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ ನಿಫಾ ಬಗ್ಗೆ ಜಾಗೃತಿ ಇರಲಿ: ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು ಬಾವಲಿಗಳು ಅತಿ ಹೆಚ್ಚು ಕಂಡುಬರುವ ಪ್ರದೇಶಗಳಿಂದ

‘ನಿಫಾ’ ಆತಂಕ ಬೇಡ, ಎಚ್ಚರಿಕೆ ಇರಲಿ| ಈ ವೈರಸ್ ನಿಂದ ಕಾಪಾಡಿಕೊಳ್ಳೋದು ಹೇಗೆ ಗೊತ್ತಾ? Read More »

ಅಪ್ಘಾನ್ ನಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರರು| ಪ್ರಧಾನಿಯಾಗಿ ಹಸನ್ ಅಖುಂದ್|

ಕಾಬೂಲ್ : ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆಯಾಗಿದ್ದು, ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್‌ ಅಖುಂದ್‌ ನೇಮಕಗೊಂಡಿದ್ದಾನೆ. ಇನ್ನು ಈ ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಸಿರಾಜುದ್ದೀನ್‌ ಹಕ್ಕಾನಿಗೆ ಒಳಾಡಳಿತ ಸಚಿವ ಸ್ಥಾನ ನೀಡಲಾಗಿದೆ. ಅಫ್ಘಾನಿಸ್ತಾನದಲ್ಲಿ ಉಗ್ರವಾದಿಗಳ ತಾಲಿಬಾನ್ ಸರ್ಕಾರ ರಚನೆಯಾಗಿದ್ದು, ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅಫ್ಘಾನಿಸ್ತಾನದ‌ ಚುಕ್ಕಾಣಿ ಹಿಡಿದಿದ್ದಾನೆ. ಇನ್ನು ಈ ಮಧ್ಯಂತರ ಸರ್ಕಾರದಲ್ಲಿ, ಸಿರಾಜ್ ಹಕ್ಕಾನಿಯನ್ನ ಆಂತರಿಕ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಗಿದ್ದು, ಮುಲ್ಲಾ ಯಾಕೂಬ್ʼನನ್ನ ರಕ್ಷಣಾ ಸಚಿವರನ್ನಾಗಿ ಮಾಡಲಾಗಿದೆ.

ಅಪ್ಘಾನ್ ನಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರರು| ಪ್ರಧಾನಿಯಾಗಿ ಹಸನ್ ಅಖುಂದ್| Read More »

ನಿಫಾ ಆತಂಕ| ಅಕ್ಟೋಬರ್ ವರೆಗೂ ರಾಜ್ಯಕ್ಕೆ ಪ್ರವೇಶಿಸುವ ಕೇರಳಿಗರಿಗೆ ನಿರ್ಬಂಧ| ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ

ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಾಣುವಿನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಣ್ಗಾವಲು ಮತ್ತು ಅಗತ್ಯ ಪೂರ್ವಸಿದ್ಧತೆಗಳನ್ನು ಬಲಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ನೆರೆಯ ಕೇರಳದ ಪ್ರಸ್ತುತ ಪರಿಸ್ಥಿತಿ ಪರಿಗಣಿಸಿ, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಹೋಟೆಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ/ಮಾಲೀಕರಿಗೆ ಕೇರಳದಿಂದ ಆಗಮಿಸುವ

ನಿಫಾ ಆತಂಕ| ಅಕ್ಟೋಬರ್ ವರೆಗೂ ರಾಜ್ಯಕ್ಕೆ ಪ್ರವೇಶಿಸುವ ಕೇರಳಿಗರಿಗೆ ನಿರ್ಬಂಧ| ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ Read More »

ದನದ ಕೊಟ್ಟಿಗೆಗೆ ನುಗ್ಗಿ ಲೈಂಗಿಕ ದೌರ್ಜನ್ಯ| ದನಗಳನ್ನೇ ಮಾರಾಟ ಮಾಡಿದ ರೈತರು…!?

ಕೊಲ್ಲಂ: ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಮಯ್ಯಾನಾಡ್​ನಲ್ಲಿ ಸುಮಾರು 20 ರೈತರು ವಿಚಿತ್ರವಾದ ಆರೋಪವೊಂದನ್ನು ಮಾಡಿದ್ದಾರೆ. ಆ ಊರಿನ ವ್ಯಕ್ತಿಯೊಬ್ಬ 2021ರ ಜನವರಿ ತಿಂಗಳಿನಿಂದ ತಾವು ಸಾಕಿರುವ ಹಸುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಹಸು ಸಾಕಾಣಿಕೆದಾರರು ಆರೋಪಿಸಿದ್ದಾರೆ. ಕಾಮುಕನ ಉಪಟಳ ತಾಳಲಾರದೆ ತಂಬಿ ಎಂಬ ರೈತ ತನ್ನ ಬಳಿಯಿದ್ದ 7 ಹಸುಗಳಲ್ಲಿ 4 ಹಸುಗಳನ್ನು ಮಾರಾಟ ಮಾಡಿದ್ದಾನೆ. ನನ್ನ ಕೊಟ್ಟಿಗೆಯಲ್ಲಿದ್ದ ಹಸುಗಳ ಮೇಲೆ ಜನವರಿಯಿಂದ 5 ಬಾರಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ಆತ ಆರೋಪಿಸಿದ್ದಾನೆ.

ದನದ ಕೊಟ್ಟಿಗೆಗೆ ನುಗ್ಗಿ ಲೈಂಗಿಕ ದೌರ್ಜನ್ಯ| ದನಗಳನ್ನೇ ಮಾರಾಟ ಮಾಡಿದ ರೈತರು…!? Read More »

ಸೆ.7ರಿಂದ ಕುವೈತ್ – ಭಾರತ ವಿಮಾನ ಸಂಚಾರಕ್ಕೆ ಅನುಮತಿ

ನವದೆಹಲಿ: ಕುವೈತ್ ಏರ್ವೇಸ್ ಸೆಪ್ಟೆಂಬರ್ 7 ರಿಂದ ಹಲವಾರು ಭಾರತೀಯ ಸ್ಥಳಗಳಿಗೆ ನೇರ ವಿಮಾನಯಾನದ ಬುಕಿಂಗ್ ತೆರೆಯಲಿದೆ. ಚೆನ್ನೈ ಮತ್ತು ಮುಂಬೈನಿಂದ ವಿಮಾನಗಳು ಹೊರಡಲಿದ್ದು, ಕುವೈಟ್‌ಗೆ ಏಕಮುಖ ಟಿಕೆಟ್‌ಗಾಗಿ ದರ 590 ದಿನಾರ್ ನಿಂದ ಆರಂಭವಾಗುತ್ತದೆ. ಕೊಚ್ಚಿನ್ ಮತ್ತು ದೆಹಲಿಯಿಂದ ವಿಮಾನಗಳು ಕೂಡ ಇದೇ ಶ್ರೇಣಿಯಲ್ಲಿವೆ, ಸೆಪ್ಟೆಂಬರ್ 8 ಮತ್ತು 9 ರಂದು ವಿಮಾನ ಹಾರಾಟ ನಡೆಯಲಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ನ ಕೋಟಾದ ಪ್ರಕಾರ ಭಾರತೀಯ ಸ್ಥಳಗಳಿಂದ ಒಟ್ಟು 768 ದೈನಂದಿನ ಆಗಮನಕ್ಕೆ ಭಾರತೀಯ

ಸೆ.7ರಿಂದ ಕುವೈತ್ – ಭಾರತ ವಿಮಾನ ಸಂಚಾರಕ್ಕೆ ಅನುಮತಿ Read More »

ಬೆಳಗಾವಿ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ 31 ವಾರ್ಡ್ ಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಬಿಜೆಪಿಯಿಂದ 55 ಅಭ್ಯರ್ಥಿಗಳು ಸ್ಪರ್ಧಿಸಿದ್ರೆ, ಕಾಂಗ್ರೆಸ್‌ನಿಂದ 45, ಜೆಡಿಎಸ್‌ನಿಂದ 11 ಹಾಗೂ ಎಂಇಎಸ್‌ನಿಂದ 21 ಮಂದಿ ಸ್ಪರ್ಧಿಸಿದ್ದಾರೆ . ಆಪ್‌, ಪಕ್ಷೇತರರು ಸೇರಿದಂತೆ ಒಟ್ಟು 217 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಪೈಕಿ ಬಿಜೆಪಿ ಸದ್ಯ

ಬೆಳಗಾವಿ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ Read More »

ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ – ಕುಟುಂಬಸ್ಥರ ವಿರುದ್ಧ ಎಫ್‍ಐಆರ್

ಶ್ರೀನಗರ: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿಯವರ ಮೃತದೇಹಕ್ಕೆ ಪಾಕಿಸ್ತಾನ ಧ್ವಜ ಹೊದಿಸಿ, ಕುಟುಂಬದವರ ವಿರುದ್ಧ ಬದ್ಗಾಂ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಅಲಿ ಗೀಲಾನಿ(92)ಯವರು ಬುಧವಾರ ರಾತ್ರಿ ತಮ್ಮ ನಿವಾಸದ ಮೃತಪಟ್ಟಿದ್ದರು. ನಂತರ ಅವರ ಮೃತ ದೇಹವನ್ನು ಸಮೀಪದಲ್ಲಿರು ಮಸೀದಿಯ ಸ್ಮಶಾನದಲ್ಲಿ ಹೂಳುವ ಕಾರ್ಯವನ್ನು ಮಾಡಲಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರ ಧ್ವಜವನ್ನು ಹೊದಿಸಿ ದೇಶದ ವಿರುದ್ಧ ಘೋಷಣೆ ಕೂಗಲಾಗಿತ್ತು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ

ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ – ಕುಟುಂಬಸ್ಥರ ವಿರುದ್ಧ ಎಫ್‍ಐಆರ್ Read More »

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ

ಕೋಝಿಕೋಡ್: ಕೇರಳದಲ್ಲಿ ಆತಂಕ ಮೂಡಿಸಿದ್ದ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದ ಕೋಳಿಕೋಡ್ ನಲ್ಲಿ 13 ವರ್ಷದ ಬಾಲಕ ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ಭಾನುವಾರ ತಿಳಿಸಿವೆ. ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನೆಂದು ತಿಳಿದುಬಂದಿದೆ.ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಹುಡುಗನ ಮಾದರಿಗಳು ನಿಫಾ ವೈರಸ್ ಇರುವಿಕೆಯನ್ನು ದೃಢಪಡಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ತಂಡವನ್ನು ರಾಜ್ಯಕ್ಕೆ ರವಾನಿಸಿದೆ, ಅದು ಭಾನುವಾರ ತಲುಪಲಿದೆ.

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ Read More »

ಬಸವನಾಡು ವಿಜಯಪುರದಲ್ಲಿ ಭೂಕಂಪನ| ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು

ವಿಜಯಪುರ : ಶನಿವಾರ ತಡರಾತ್ರಿ ವಿಜಯನಗರ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಭೂಮಿ ನಡುಗಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾದ ಲಘು ತೀವ್ರತೆ ಭೂಕಂಪ ಎಂಬುದನ್ನು ಜಿಲ್ಲಾಡಳಿತ ದೃಢೀಕರಿಸಿದೆ. ಭೂಕಂಪನ ಅಗಿದ್ದು‌ ರಿಕ್ಟರ್ ಮಾಪಕದಲ್ಲಿ ದಾಖಲು 3.9 ತೀವ್ರತೆಯ ಭೂಕಂಪನ ಆಗಿದೆ.ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂಧುವಾಗಿತ್ತು. ಕೆ.ಎಸ್.ಎನ್.ಡಿ.ಎಂ.ಸಿ. ಮೂಲಕ ಮಾಹಿತಿ ಸಂಗ್ರಹಿಸಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಬಹುತೇಕ ಎಲ್ಲ ಕಡೆ ಶನಿವಾರ ರಾತ್ರಿ11-47, 11-48 ರ ಮಧ್ಯಾವಧಿಯಲ್ಲಿ

ಬಸವನಾಡು ವಿಜಯಪುರದಲ್ಲಿ ಭೂಕಂಪನ| ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು Read More »