ರಾಷ್ಟ್ರೀಯ

ಪಾಲಕ್ಕಾಡ್: ಭೀಕರ ಅಪಘಾತಕ್ಕೆ 9 ಮಂದಿ ಬಲಿ| ಹಲವರು ಗಂಭೀರ

ಸಮಗ್ರ ನ್ಯೂಸ್: ಪಾಲಕ್ಕಾಡ್‌ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಟೂರಿಸ್ಟ್ ಬಸ್‌ನಲ್ಲಿ ಒಟ್ಟು 42 ವಿದ್ಯಾರ್ಥಿಗಳಿದ್ದರು ಮತ್ತು ಕೆಎಸ್‌ಆ​ರ್​ಟಿಸಿ ಬಸ್​ನಲ್ಲಿ 49 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್ […]

ಪಾಲಕ್ಕಾಡ್: ಭೀಕರ ಅಪಘಾತಕ್ಕೆ 9 ಮಂದಿ ಬಲಿ| ಹಲವರು ಗಂಭೀರ Read More »

ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ| ಹಲವು ಭಕ್ತರು‌ ನಾಪತ್ತೆ

ಸಮಗ್ರ ನ್ಯೂಸ್: ದುರ್ಗಾ ವಿಸರ್ಜನೆ ವೇಳೆ ದಿಢೀರ್ ಸೃಷ್ಟಿಯಾದ ಪ್ರವಾಹದಿಂದ ಹಲವು ಭಕ್ತರು ಕೊಚ್ಚಿ ಹೋದ ಘಟನೆ ಪ.ಬಂಗಾಳದಲ್ಲಿ ನಡೆದಿದೆ. ಇಲ್ಲಿನ ಜಲ್‌ಪೈಗುರಿ ಜಿಲ್ಲೆಯ ನಿಯೋರಾ ನದಿ ದಂಡೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದ್ದು ಹಲವರು ನಾಪತ್ತೆಯಾಗಿದ್ದಾರೆ. ಕಳೆದೆರಡು ದಿನದಿಂದ ಸತತ ಮಳೆಯಾಗುತ್ತಿದ್ದ ಕಾರಣ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 7 ಮಂದಿ ಮೃತದೇಹ ಹೊರಕ್ಕೆ

ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ| ಹಲವು ಭಕ್ತರು‌ ನಾಪತ್ತೆ Read More »

ರಾಮಾಯಣದ ಶ್ರೀರಾಮನಿಗೆ ಏರ್ ಪೋರ್ಟ್ ನಲ್ಲಿ ಸಾಷ್ಟಾಂಗ ನಮಸ್ಕರಿಸಿದ ಮಹಿಳೆ

ಸಮಗ್ರ ನ್ಯೂಸ್: ಕಳೆದ 35 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ರಾಮಾಯಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? 80-90ರ ದಶಕದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು. ರಮಾನಂದ್ ಸಾಗರ್ ನಿರ್ಮಾಣದ ಈ ಅಧ್ಧೂರಿ ಧಾರಾವಾಹಿಯಲ್ಲಿ ನಟ ಅರುಣ್ ಗೋವಿಲ್ ರಾಮನಾಗಿ ಮಿಂಚಿದ್ದರು. ಈ ಧಾರಾವಾಹಿ ಜನಪ್ರಿಯತೆ ಎಷ್ಟಿದೆ ಎಂದರೆ ಕಳೆದ ಬಾರಿ ಲಾಕ್‌ ಡೌನ್ ಸಮಯದಲ್ಲಿ ಇದನ್ನು ಮರು ಪ್ರಸಾರ ಮಾಡಲಾಯ್ತು. ಪ್ರಪಂಚದಲ್ಲೇ ಮನರಂಜನೆ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ

ರಾಮಾಯಣದ ಶ್ರೀರಾಮನಿಗೆ ಏರ್ ಪೋರ್ಟ್ ನಲ್ಲಿ ಸಾಷ್ಟಾಂಗ ನಮಸ್ಕರಿಸಿದ ಮಹಿಳೆ Read More »

ಅಡಿಕೆ ಬೆಳೆಗಾರರ ಕತ್ತು ಹಿಸುಕಿತೇ ಕೇಂದ್ರ ಸರ್ಕಾರ?| ಆಮದು ನಿಷೇಧ ತೆರವು ಬೆನ್ನಲ್ಲೇ ಇಳಿದ ಅಡಿಕೆ ಧಾರಣೆ

ಸಮಗ್ರ ನ್ಯೂಸ್: ದೇಶದಿಂದ ಅಡಿಕೆ ಬೆಳೆ ಆಮದು ಮಾಡಿಕೊಳ್ಳಲು ಇದ್ದ ನಿಷೇಧ ಆದೇಶವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಈ ಮೂಲಕ ಅಡಿಕೆ ಧಾರಣೆ ಏರು ಗತಿಯಲ್ಲಿದ್ದ ಹೊತ್ತಲ್ಲೇ ಮತ್ತೊಮ್ಮೆ ದಿಢೀರ್ ಬೆಲೆ ಇಳಿಕೆಯಾಗುತ್ತಿದ್ದು, ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ನಿಯಮಗಳಿಗೆ ಸಿದ್ದುಪಡಿ ತಂದು ಪ್ರತಿ ಕೆಜಿ ಅಡಿಕೆಗೆ 251 ರೂಪಾಯಿ ಕನಿಷ್ಠ ಆಮದು ಬೆಲೆ ನಿಗದಿ ಮಾಡಿತ್ತು. ಈಗ ಕನಿಷ್ಠ ಆಮದು ಬೆಲೆ ಇಲ್ಲದೆ ಭೂತಾನ್ ನಿಂದ 17000 ಟನ್ ಹಸಿ ಅಡಿಕೆ

ಅಡಿಕೆ ಬೆಳೆಗಾರರ ಕತ್ತು ಹಿಸುಕಿತೇ ಕೇಂದ್ರ ಸರ್ಕಾರ?| ಆಮದು ನಿಷೇಧ ತೆರವು ಬೆನ್ನಲ್ಲೇ ಇಳಿದ ಅಡಿಕೆ ಧಾರಣೆ Read More »

ವಿಂಗ್ ಕಮಾಂಡರ್ ಅಭಿನಂದನ್ ನಿವೃತ್ತಿ

ಸಮಗ್ರ ನ್ಯೂಸ್: ಪಾಕ್ ಯುದ್ದ ವಿಮಾನ ಎಫ್ 16 ಹೊಡೆದುರುಳಿಸಿ ಪಾಕಿಸ್ತಾನ ಸೈನಿಕರ ವಶದಲ್ಲಿದ್ದಲ್ಲಿದ್ದರೂ ಎದೆಗಾರಿಕೆಯಿಂದ ಎದುರಿಸಿ ಬಳಿಕ ರಾಜತಾಂತ್ರಿಕ ಸಂಧಾನದ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಬಂದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. ಅಭಿನಂದನ್ ವರ್ಧಮಾನ್ ಅವರು ವಾಯು ಸೇನೆಯಲ್ಲಿ ಮಿಗ್ 21 ಯುದ್ದ ವಿಮಾನದ ವಿಂಗ್ ಕಮಾಂಡರ್ ಆಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಅವರು ಪಾಕ್‌ ಯುದ್ದ ವಿಮಾನ ಎಫ್ 16ನ್ನು ಹೊಡೆದುರುಳಿಸಿ ಪಾಕ್ ಸೈನಿಕರಿಗೆ ಸೆರೆ ಸಿಕ್ಕಿ ಪಾಕ್

ವಿಂಗ್ ಕಮಾಂಡರ್ ಅಭಿನಂದನ್ ನಿವೃತ್ತಿ Read More »

ಭಾರತದಲ್ಲಿ ಇಂದಿನಿಂದ 5G ಯುಗಾರಂಭ| ಇಂಟರ್ನೆಟ್ ನ ಹೊಸವೇಗಕ್ಕೆ ಪ್ರಧಾನಿ‌ ಚಾಲನೆ

ಸಮಗ್ರ ನ್ಯೂಸ್: ಭಾರತದಲ್ಲಿ ಇಂದು 5ಜಿ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಮೂಲಕ ಇಂದಿನಿಂದ ಭಾರತವು ಇಂಟರ್ನೆಟ್ ನ 5G ಯುಗವನ್ನು ಪ್ರವೇಶಿಸಲಿದೆ. ಇದರಿಂದ ಜನರು ಎದುರಿಸುತ್ತಿರುವ ಇಂಟರ್ನೆಟ್ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು (ಅಕ್ಟೋಬರ್ 1) ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಮೋದಿ 5G ಸೇವೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಳಕೆ ಆರಂಭವಾಗಿದೆ. ಜಿಯೋ, ಏರ್ಟೆಲ್ ಮುಂದಿನ

ಭಾರತದಲ್ಲಿ ಇಂದಿನಿಂದ 5G ಯುಗಾರಂಭ| ಇಂಟರ್ನೆಟ್ ನ ಹೊಸವೇಗಕ್ಕೆ ಪ್ರಧಾನಿ‌ ಚಾಲನೆ Read More »

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಪಿಎಫ್‌ಐ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಕಲೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಮುಸ್ಲಿಂ ಯುವಕರಿಗೆ ಪಿಎಫ್‌ಐನಿಂದ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಇದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ‌ವಿವಿಧ ಕಡೆಗಳಲ್ಲಿ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರು ಸಮೀಪದ ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು Read More »

‘ಮೋದಿಯೂ ನನ್ನನ್ನು ಮುಟ್ಟಕ್ಕಾಗಲ್ಲ’ – ಮೋದಿಗೇ‌ ಸವಾಲೆಸದ ಪಂಕಜಾ

ಸಮಗ್ರ ನ್ಯೂಸ್: ‘ನಾನು ವಂಶ ಪಾರಂಪರಿಕ ರಾಜಕೀಯದ ಪ್ರತೀಕ. ನಾನು ಜನರ ಹೃದಯದಲ್ಲಿ ಆಡಳಿತ ನಡೆಸಲು ಬಯಸಿದರೆ ಪ್ರಧಾನಿ ನರೇಂದ್ರ ಮೋದಿಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಬಿಜೆಪಿ ಕಾರ‍್ಯದರ್ಶಿ ಮತ್ತು ಮಹಾರಾಷ್ಟ್ರ ಮಾಜಿ ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ. ಈ ಮೂಲಕ ವಂಶಪಾರಂಪರ್ಯ ರಾಜಕೀಯಕ್ಕೆ ಕೊನೆ ಹಾಡಬೇಕೆಂದು ಬಯಸುತ್ತಿರುವ ಮೋದಿಗೆ ಪರೋಕ್ಷ ಸವಾಲು ಹಾಕಿದ್ದಾರೆ. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನ ನಡೆದ ಕಾರ‍್ಯಕ್ರಮದಲ್ಲಿ ಪಂಕಜಾ ಮುಂಡೆ ಈ ಮಾತನ್ನು ಹೇಳಿದ್ದಾರೆ. ಈ ವಿಡಿಯೋ

‘ಮೋದಿಯೂ ನನ್ನನ್ನು ಮುಟ್ಟಕ್ಕಾಗಲ್ಲ’ – ಮೋದಿಗೇ‌ ಸವಾಲೆಸದ ಪಂಕಜಾ Read More »

ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿ ಜ.ಅನಿಲ್ ಚೌಹಾಣ್ ನೇಮಕ

ಸಮಗ್ರ ನ್ಯೂಸ್: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ನಿವೃತ್ತ ಲೆ. ಜನರಲ್​ ಅನಿಲ್ ಚೌಹಾಣ್​ ಅವರನ್ನು ನೇಮಿಸಿದೆ. ಈಸ್ಟರ್ನ್​ ಕಮಾಂಡ್ ಚೀಫ್​ ಆಗಿದ್ದ ಅನಿಲ್ ಚೌಹಾಣ್​ 2021ರ ಮೇನಲ್ಲಿ ನಿವೃತ್ತರಾಗಿದ್ದರು. ಇದೀಗ ಅವರನ್ನು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಅಲ್ಲದೆ ಇವರು ಕೇಂದ್ರ ಸರ್ಕಾರದ ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಭಾರತೀಯ ಸೇನಾಪಡೆಗಳ ಮುಖ್ಯಸ್ಥ (ಸಿಡಿಸಿ) ಆಗಿದ್ದ ಬಿಪಿನ್ ರಾವತ್ 2021ರ

ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿ ಜ.ಅನಿಲ್ ಚೌಹಾಣ್ ನೇಮಕ Read More »

ಮೀಶೋ ಆನ್‌ಲೈನ್ ಶಾಪಿಂಗ್|ಡ್ರೋನ್ ಕ್ಯಾಮರಾ ಆರ್ಡರ್‍ ಮಾಡಿದವನಿಗೆ ಸಿಕ್ತು ಒಂದು ಕೆಜಿ ಆಲೂಗಡ್ಡೆ!!

ಸಮಗ್ರ ನ್ಯೂಸ್: ಮೀಶೋ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಡ್ರೋನ್ ಕ್ಯಾಮರಾ ಆರ್ಡರ್‍ ಮಾಡಿದ್ದಾತನಿಗೆ ಒಂದು ಕೆಜಿ ಆಲೂಗಡ್ಡೆ ಡೆಲಿವರಿಯಾದ ಪ್ರಸಂಗ ನಡೆದಿದೆ. ಬಿಹಾರದ ವ್ಯಕ್ತಿಯೊಬ್ಬರು ಮೀಶೋದಲ್ಲಿ ಡ್ರೋನ್ ಕ್ಯಾಮರಾವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಡ್ರೋನ್ ಕ್ಯಾಮರಾ ಬದಲಾಗಿ ಒಂದು ಕೆಜಿ ಆಲೂಗಡ್ಡೆ ಪಾರ್ಸೆಲ್ ಬಂದಿದೆ. ಡೆಲಿವರಿ ಬಾಯ್‌ಗೆ ಸ್ಥಳದಲ್ಲೇ ಅದನ್ನು ಅನ್‌ಬಾಕ್ಸ್‌ ಮಾಡಲು ಹೇಳಿದ್ದು, ನಿಯಮ ಪ್ರಕಾರ ಆತ ಮಾಡಿರಲಿಲ್ಲ. ಆದರೆ ಬಾಕ್ಸ್ ತೆರೆದು ನೋಡುವಾಗ ಆಲೂಗಡ್ಡೆ ಪತ್ತೆಯಾಗಿದೆ. ಮೀಶೋದಿಂದ ಆಲೂಗಡ್ಡೆ ಪಾರ್ಸೆಲ್ ಬಂದಿರುವುದನ್ನು ನಳಂದದ

ಮೀಶೋ ಆನ್‌ಲೈನ್ ಶಾಪಿಂಗ್|ಡ್ರೋನ್ ಕ್ಯಾಮರಾ ಆರ್ಡರ್‍ ಮಾಡಿದವನಿಗೆ ಸಿಕ್ತು ಒಂದು ಕೆಜಿ ಆಲೂಗಡ್ಡೆ!! Read More »