ರಾಷ್ಟ್ರೀಯ

“ಸದನದೊಳಗಷ್ಟೇ ಗಲಾಟೆ ನಡೆಯುತ್ತೆ, ಹೊರಗಡೆ ಎಲ್ರೂ ಸ್ನೇಹಿತರೇ. ನಮ್ಮನ್ನು ನೋಡಿ ನೀವು ಗಲಾಟೆ ಮಾಡಿಕೊಳ್ಬೇಡಿ”| ಗಣೇಶೋತ್ಸವದಲ್ಲಿ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು

”ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ ಎನ್ನುವವರೂ ಇದ್ದಾರೆ. ವಿಧಾನಸಭೆಯಲ್ಲಿ ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತೆ ಹೊರಗಡೆ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಕೈಹಾಕಿಕೊಂಡು ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಕೇವಲ ಗಲಾಟೆಯನ್ನು ಮಾತ್ರ ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ” ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಿವಿಮಾತು ಹೇಳಿದರು. ಅವರು […]

“ಸದನದೊಳಗಷ್ಟೇ ಗಲಾಟೆ ನಡೆಯುತ್ತೆ, ಹೊರಗಡೆ ಎಲ್ರೂ ಸ್ನೇಹಿತರೇ. ನಮ್ಮನ್ನು ನೋಡಿ ನೀವು ಗಲಾಟೆ ಮಾಡಿಕೊಳ್ಬೇಡಿ”| ಗಣೇಶೋತ್ಸವದಲ್ಲಿ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು Read More »

33% ಮಹಿಳಾ ಮೀಸಲಾತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ?

ಸಮಗ್ರ ನ್ಯೂಸ್:‌ನಿನ್ನೆ(ಸೆ.18) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಲು ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ಅಥವಾ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸಲು ಈ ಕಾಯ್ದೆಯಲ್ಲಿ ಪ್ರಸ್ತಾಪಿಸಿದೆ. ಈ ಮಸೂದೆಯು ಎಸ್ಸಿ, ಎಸ್ಟಿ ಮತ್ತು ಆಂಗ್ಲೋ-ಇಂಡಿಯನ್ನರಿಗೆ ಶೇಕಡಾ 33 ರಷ್ಟು ಕೋಟಾದೊಳಗೆ ಉಪ ಮೀಸಲಾತಿಯನ್ನುಕೂಡ ಪ್ರಸ್ತಾಪಿಸುತ್ತದೆ. ಪ್ರತಿ ಸಾರ್ವತ್ರಿಕ ಚುನಾವಣೆಯ ನಂತರ ಮೀಸಲು ಸ್ಥಾನಗಳನ್ನು ಬದಲಾವಣೆ ಮಾಡಬೇಕು ಎಂದು ಮಸೂದೆಯಲ್ಲಿ

33% ಮಹಿಳಾ ಮೀಸಲಾತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ? Read More »

ಸಂಸತ್ತಿನ ವಿಶೇಷ ಅಧಿವೇಶನ/ ನಾಳೆಯಿಂದ ನೂತನ ಸಂಸತ್ ಭವನದಲ್ಲಿ

ಸಮಗ್ರ ನ್ಯೂಸ್: ಸೆ. 18ರಿಂದ 23ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದ ಕಲಾಪ ಹಳೆಯ ಸಂಸತ್ ಭವನದಲ್ಲಿ ಆರಂಭಗೊಂಡಿದ್ದು, ನಾಳೆಯಿಂದ ನೂತನ ಸಂಸತ್ ಭವನದಲ್ಲಿ ಮುಂದುವರೆಯಲಿದೆ. ಕಳೆದ ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ನೂತನ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರಿಗೆ ಆಸನದ ವ್ಯವಸ್ಥೆ ‌ಇದೆ. ನಾಲ್ಕು ಅಂತಸ್ತಿನ ಕಟ್ಟಡವು ತ್ರಿಕೋನ ಆಕಾರವನ್ನು ಹೊಂದಿದ್ದು, ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ‌ಕರ್ಮ

ಸಂಸತ್ತಿನ ವಿಶೇಷ ಅಧಿವೇಶನ/ ನಾಳೆಯಿಂದ ನೂತನ ಸಂಸತ್ ಭವನದಲ್ಲಿ Read More »

ಇಂದಿನಿಂದ 5 ದಿ‌ನ ಸಂಸತ್ ನ ವಿಶೇಷ ಅಧಿವೇಶನ

ಸಮಗ್ರ ನ್ಯೂಸ್: ಗೌರಿ ಗಣೇಶ ಹಬ್ಬದ ದಿನವಾದ ಇಂದು ಮೋದಿ ಸರ್ಕಾರದ 5 ದಿನದ ವಿಶೇಷ ಅಧಿವೇಶನ ಆರಂಭ ಆಗುತ್ತೆ. ಹಳೇ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆದರೆ, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ. ಆದರೆ ಇದಕ್ಕೂ ವಿಪಕ್ಷಗಳು ಅಪಸ್ವರ ಎತ್ತಿದ್ದರೂ ,ಸಂಸತ್​ ಕಲಾಪದಲ್ಲಿ ಬಿಜೆಪಿ (BJP) ಪ್ರಮುಖವಾಗಿ 5 ಬಿಲ್​​ಗಳನ್ನ ಮಂಡಿಸಲು ತಯಾರಿ ಮಾಡಿಕೊಂಡಿದೆ. ಮೋದಿ ಸರ್ಕಾರ ದಿಢೀರ್​ ಅಂತ ವಿಶೇಷ ಅಧಿವೇಶನ ಏರ್ಪಡಿಸಿದೆ. ಇಂದಿನಿಂದ ಸೆಪ್ಟೆಂಬರ್​ 22ರವರೆಗೆ ಸಂಸತ್​ ಕಲಾಪ

ಇಂದಿನಿಂದ 5 ದಿ‌ನ ಸಂಸತ್ ನ ವಿಶೇಷ ಅಧಿವೇಶನ Read More »

ಸೆ.15 ಇಂದು ಇಂಜಿನಿಯರ್ಸ್ ಡೇ | ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಗೊಂದು ಸೆಲ್ಯೂಟ್

ಸಮಗ್ರ ನ್ಯೂಸ್: ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರತಿ ವರ್ಷ ‘ಎಂಜಿನಿಯರ್ಸ್ ಡೇ’ ಆಗಿ ಆಚರಿಸಲಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಪ್ರಖ್ಯಾತ ಇಂಜಿನಿಯರ್ ಮತ್ತು ರಾಜನೀತಿಜ್ಞರಾಗಿದ್ದರು ಮತ್ತು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೃಷ್ಣರಾಜ ಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ; ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯಲು ಉಕ್ಕಿನ ಬಾಗಿಲುಗಳನ್ನು ರೂಪಿಸಿದರು.ಇಂದು ಬಹುಶಃ ಅನೇಕ ಜನರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಭಾರತದ

ಸೆ.15 ಇಂದು ಇಂಜಿನಿಯರ್ಸ್ ಡೇ | ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಗೊಂದು ಸೆಲ್ಯೂಟ್ Read More »

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್

ಸಮಗ್ರ ನ್ಯೂಸ್: ಜನಪ್ರಿಯ ಮೆಸೆಂಜರ್‌ ಆಯಪ್ ಆಗಿರುವ ವಾಟ್ಸ್ ಆಯಪ್ ಹೊಸ ‘ವಾಟ್ಸ್ ಆ್ಯಪ್ ಚಾನೆಲ್ಸ್‌’ ಎಂಬ ಫೀಚರ್‌ ಅನ್ನು ಬಿಡುಗಡೆಗೊಳಿಸುತ್ತಿದೆ. ಇದೊಂದು ಏಕಮುಖ ಪ್ರಸಾರ ಪರಿಕರವಾಗಿದ್ದು, ಅಪ್‌ಡೇಟ್ಸ್‌ ಎಂಬ ಹೊಸ ಟ್ಯಾಬ್‌ನಲ್ಲಿ ನಿಮ್ಮ ಆಸಕ್ತಿಯ ಜನರು ಮತ್ತು ಸಂಸ್ಥೆಗಳಿಂದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ವಾಟ್ಸ್ ಆಯಪ್ ಚಾನಲ್ಸ್‌ ಎಂಬ ಈ ಹೊಸ ಫೀಚರ್‌ ಭಾರತ ಸಹಿತ 150ಕ್ಕೂ ಅಧಿಕ ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಲಭ್ಯವಾಗಲಿದೆ. ಬಳಕೆದಾರರ ದೇಶದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಿಲ್ಟರ್‌ ಮಾಡಲಾದ ಚಾನೆಲ್‌ಗಳನ್ನು

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್ Read More »

ಸಿಂಗಾಪುರದ ಅಧ್ಯಕ್ಷರಾಗಿ‌ ಭಾರತೀಯ ಮೂಲದ ಷಣ್ಮುಗರತ್ನಂ ಆಯ್ಕೆ| ಸೆ.14ರಂದು ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಧರ್ಮನ್ ಷಣ್ಮುಗರತ್ನಂ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಗುರುವಾರ (ಸೆ.14) ಸಿಂಗಾಪುರದ 9 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚೆಗೆ ಷಣ್ಮುಗರತ್ನಂ ಶೇ.70.4ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅಧ್ಯಕ್ಷ ಹಲೀಮಾ ಯಾಕೋಬ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 13 ರಂದು ಕೊನೆಗೊಳ್ಳುತ್ತದೆ. ಭಾರತೀಯ ಮೂಲದ ಧರ್ಮನ್ ಷಣ್ಮುಗರತ್ನಂ ಅವರು ಸೆಪ್ಟೆಂಬರ್ 14 ರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಂಗಾಪುರದಲ್ಲಿ ಚುನಾಯಿತ ಅಧ್ಯಕ್ಷರ ಅಧಿಕಾರಾವಧಿ ಆರು ವರ್ಷಗಳಾಗಿವೆ. 66

ಸಿಂಗಾಪುರದ ಅಧ್ಯಕ್ಷರಾಗಿ‌ ಭಾರತೀಯ ಮೂಲದ ಷಣ್ಮುಗರತ್ನಂ ಆಯ್ಕೆ| ಸೆ.14ರಂದು ಅಧಿಕಾರ ಸ್ವೀಕಾರ Read More »

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಸಮಗ್ರ ನ್ಯೂಸ್: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಅಸಹಜ ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಚಿವಾಲಯ ನಿಫಾ ಸೋಂಕು ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಈ ಎರಡು ಸಾವುಗಳು ನಿಫಾ ವೈರಸ್ ನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಕೂಡಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಉನ್ನತ ಮಟ್ಟದ ಸಭೆ

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ Read More »

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ

ಸಮಗ್ರ ನ್ಯೂಸ್: ರಾಜ್ಯ ಹಾಗೂರಾಷ್ಟ್ರ ರಾಜಕಾರಣದ ಬಗ್ಗೆ ಇಂದು ಕೋಡಿಮಠದ ಶಿವಾನದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಅಸ್ಥಿರತೆ ಉಂಟಾಗಲಿದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣ, ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ ಉಂಟಾಗಲಿದೆ. ಯುಗಾದಿಯ ನಂತ್ರ ಏನಾಗುತ್ತೆ ಅಂತ ಕಾದು ನೋಡಿ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಅಚ್ಚರಿಯನ್ನು ಎದುರು ನೋಡುವಂತೆ ಹೇಳಿದ್ದಾರೆ.

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ Read More »

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ

ಸಮಗ್ರ ನ್ಯೂಸ್: ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಗಾಗಿ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆ ತಾಂತ್ರಿಕ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಮಾತೃವಂದನಾ ಯೋಜನೆ ಸಾಫ್ಟ್ ವೇರ್ ಅನ್ನು ಮಿಷನ್ ಶಕ್ತಿ 2.O ಸಾಫ್ಟ್ ವೇರ್ ಜೊತೆಗೆ ಜೋಡಿಸಲಾಗಿದ್ದು, ನೂತನ ತಂತ್ರಾಂಶದಲ್ಲಿ ಹಳೆಯ ಡೇಟಾಗಳು ಲಭ್ಯವಾಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಹಣ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ ಎಂದು ತಿಳದುಬಂದಿದೆ. ಈ ಯೋಜನೆಯಡಿ, ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ನವಜಾತ ಶಿಶುಗಳ

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ Read More »