ದೇಶ-ವಿದೇಶ

ಅಪ್ರಾಪ್ತರು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂ ಖಾತೆ ತೆರೆಯುವಂತಿಲ್ಲ| ಟೀನೇಜ್ ಜನರಿಗೆ ಶಾಕ್ ನೀಡಿದ ಮೆಟಾ

ಸಮಗ್ರ ನ್ಯೂಸ್: ಸಾಮಾಜಿಕ ಮಾಧ್ಯಮವಾಗಿರುವ ಇನ್‌ಸ್ಟಾಗ್ರಾಮ್ ಯುವಜನರ ಮೇಲೆ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಹದಿಹರೆಯದ ಮಕ್ಕಳು ಹಾಗೂ ಅಪ್ರಾಪ್ತರ ಬದುಕಿನ ಶೈಲಿಯ ಅಡ್ಡ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇನ್‌ಸ್ಟಾಗ್ರಾಮ್‌ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರತ್ಯೇಕ ಖಾತೆಯನ್ನು ನಿಗದಿ ಮಾಡಿದೆ. ಅಮೆರಿಕ, ಇಂಗ್ಲೆಂಡ್‌ , ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಗಳವಾರದಿಂದ ಇದು ಜಾರಿಗೆ ಬಂದಿದೆ. ಇನ್‌ಸ್ಟಾಗ್ರಾಮ್‌ ಸೈನ್ ಅಪ್ ಮಾಡುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇನ್ನೂ ಟೀನೇಜ್ ಅಕೌಂಟ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಅದೇ ರೀತಿ […]

ಅಪ್ರಾಪ್ತರು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂ ಖಾತೆ ತೆರೆಯುವಂತಿಲ್ಲ| ಟೀನೇಜ್ ಜನರಿಗೆ ಶಾಕ್ ನೀಡಿದ ಮೆಟಾ Read More »

ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಬುಲ್ಡೋಜರ್ ಬಳಸಿ ಯಾವುದೇ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ. ಆದಾಗ್ಯೂ, ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ರೈಲ್ವೆ ಮಾರ್ಗಗಳು, ಜಲಮೂಲಗಳ ಅತಿಕ್ರಮಣಗಳಿಗೆ ಈ ತಡೆಯಾಜ್ಞೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ದಂಡನಾತ್ಮಕ ಕ್ರಮವಾಗಿ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಕಟ್ಟಡಗಳನ್ನು ನೆಲಸಮಗೊಳಿಸುವಲ್ಲಿ ವಿವಿಧ ರಾಜ್ಯ ಸರ್ಕಾರಗಳ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಈ ನಿರ್ದೇಶನವನ್ನು ನೀಡಿದೆ. ಅ.1ರವರೆಗೆ

ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ತಡೆ Read More »

ಸಹಜ ಸ್ಥಿತಿಯತ್ತ ಮಣಿಪುರ/ ಇಂಟರ್‌ನೆಟ್‌ ನಿಷೇಧ ತೆರವು

ಸಮಗ್ರ ನ್ಯೂಸ್‌: ಹಿಂಸಾಚಾರ ಭುಗಿಲೆದ್ದ ಹಿನ್ನಲೆಯಲ್ಲಿ ಇಂಫಾಲ್ ಕಣಿವೆ ಜಿಲ್ಲೆಗಳಲ್ಲಿ ವಿಧಿಸಿದ್ದ ಇಂಟರ್ ನೆಟ್ ನಿಷೇಧವನ್ನು ಮಣಿಪುರ ಸರ್ಕಾರ ತೆರವುಗೊಳಿಸಿದ್ದು, ಸೆ.17 ರಿಂದ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ. ಮಣಿಪುರದ ರಾಜ್ಯಪಾಲರು ತಕ್ಷಣವೇ ಜಾರಿಗೆ ಬರುವಂತೆ ರಾಜ್ಯದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಲೀಸ್ ಲೈನ್‌ಗಳು, ವಿಎಸ್‌ಟಿಗಳು, ಬ್ರಾಡ್ ಬ್ಯಾಂಡ್ ಗಳು ಮತ್ತು ವಿಪಿಎನ್ ಸೇವೆಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವ ಯಾವುದೇ ಅಸ್ತಿತ್ವದಲ್ಲಿರುವ ಆದೇಶಗಳನ್ನು ಹಿಂಪಡೆಯಲು ಆದೇಶಿಸಲು ಸಂತೋಷಪಡುತ್ತಾರೆ ಎಂದು ಗೃಹ ಇಲಾಖೆ ಹೇಳಿದೆ.

ಸಹಜ ಸ್ಥಿತಿಯತ್ತ ಮಣಿಪುರ/ ಇಂಟರ್‌ನೆಟ್‌ ನಿಷೇಧ ತೆರವು Read More »

ದೆಹಲಿಯ ಮುಂದಿನ ಸಿಎಂ ಆಗಿ ಅತಿಶಿ ಮರ್ಲೆನಾ ಆಯ್ಕೆ

ಸಮಗ್ರ ನ್ಯೂಸ್: ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಎಎಪಿ ಶಾಸಕಿ, ಸಚಿವೆ ಅತಿಶಿ ಮರ್ಲೆನಾ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಮಧ್ಯಾಹ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ಬಳಿಕ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ದೆಹಲಿಯ ಮುಂದಿನ ಸಿಎಂ ಆಗಿ ಅತಿಶಿ ಮರ್ಲೆನಾ ಆಯ್ಕೆ Read More »

ಆಸೆ ಈಡೇರಿದ್ದಕ್ಕೆ ಮಗನಷ್ಟೇ ತೂಕದ ಹಣದಿಂದ ತುಲಾಭಾರ ಮಾಡಿದ ರೈತ!!

ಸಮಗ್ರ ನ್ಯೂಸ್: ತಮ್ಮ ಆಸೆ ಈಡೇರಿದಕ್ಕೆ ಮಗನ ತೂಕಕ್ಕೆ ಸಮನಾದ ಹಣವನ್ನು ತುಲಾಭಾರದ ಮೂಲಕ ದೇವಸ್ಥಾನಕ್ಕೆ ಅರ್ಪಿಸುವುದರೊಂದಿಗೆ ರೈತರೊಬ್ಬರು ಹರಕೆ ತೀರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್‌ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ರೈತ ಚತುರ್ಭುಜ್ ಜಾಟ್ ಅವರು ತನ್ನ 30 ವರ್ಷದ ಮಗ ವೀರೇಂದ್ರ ಜಾಟ್‌ಗಾಗಿ 4 ವರ್ಷಗಳ ಹಿಂದೆ ಶ್ರೀ ಸತ್ಯವಾಧಿ ದೇವಸ್ಥಾನದಲ್ಲಿ ಹರಕೆಯೊಂದನ್ನು ಕಟ್ಟಿಕೊಂಡಿದ್ದರು. ತಾವು ಅಂದುಕೊಂಡಿದ್ದ ನೆರವೇರಿದ್ದಕ್ಕೆ ತುಂಬಾ ಖುಷಿಯಾಗಿರುವ ಚತುರ್ಭುಜ್

ಆಸೆ ಈಡೇರಿದ್ದಕ್ಕೆ ಮಗನಷ್ಟೇ ತೂಕದ ಹಣದಿಂದ ತುಲಾಭಾರ ಮಾಡಿದ ರೈತ!! Read More »

ಮುಂದಿನ ಅಧಿವೇಶನದಲ್ಲೇ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ

ಸಮಗ್ರ ನ್ಯೂಸ್: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸರ್ಕಾರ ಮಂಡಿಸಿದೆ.ಈ ಚುನಾವಣೆ ಕಾರ್ಯಸಾಧ್ಯತೆ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವರದಿ ನೀಡಿದ್ದರು. ಕಳೆದ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯ ಅಗತ್ಯವನ್ನು ಒತ್ತಿ

ಮುಂದಿನ ಅಧಿವೇಶನದಲ್ಲೇ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ Read More »

ದಕ್ಷಿಣ ಏಷ್ಯನ್ ದಾಖಲೆ ಉನ್ನತಿ ಅಯ್ಯಪ್ಪರವರಿಗೆ ಮತ್ತೊಂದು ಚಿನ್ನದ ಪದಕ

ಸಮಗ್ರ ನ್ಯೂಸ್: ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ ಜೂನಿಯ‌ರ್ ಚಾಂಪಿಯನ್ ಶಿಪ್ ಸೆ.11 ರಂದು ಚೆನ್ನೈನಲ್ಲಿ ಆರಂಭಗೊಂಡಿದೆ. ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪರವರು 100 ಮೀಟ‌ರ್ ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಪಡೆದು, ಇಂದು 200 ಮೀಟರ್ ಅನ್ನು 23.91 ಕ್ರಮಾಂಕದಲ್ಲಿ ಮುಗಿಸಿ ದಾಖಲೆ ನಿರ್ಮಿಸಿದ್ದರು.ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಐವರು ಭಾಗವಹಿಸಿದ್ದು ಜಿಲ್ಲೆಯ ಇಬ್ಬರು ಭಾಗವಹಿಸಿದ್ದರು. ಉನ್ನತಿ ಅಯ್ಯಪ್ಪನವರು ಮಹಿಳೆಯರ 100 ಮೀಟ‌ರ್ ಹರ್ಡಲ್ ಹಾಗೂ 200 ಮೀಟರ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಉನ್ನತಿ

ದಕ್ಷಿಣ ಏಷ್ಯನ್ ದಾಖಲೆ ಉನ್ನತಿ ಅಯ್ಯಪ್ಪರವರಿಗೆ ಮತ್ತೊಂದು ಚಿನ್ನದ ಪದಕ Read More »

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮೋದಿ ಪ್ರಚಾರ ಸಭೆ/ 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ದೋಡಾ ಭೇಟಿ

ಸಮಗ್ರ ನ್ಯೂಸ್‌: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ದೊಡಾ ಜಿಲ್ಲೆಯಲ್ಲಿ ಬಿಗಿ ಭದ್ರತೆ ನಡುವೆ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಇಂದು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಕಳೆದ 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ದೋಡಾಗೆ ಭೇಟಿ ನೀಡುತ್ತಿದ್ದಾರೆ. ದೋಡಾದ ಸ್ಟೇಡಿಯಂನಲ್ಲಿ ನಡೆಯಲಿರುವ ಚುನಾವಣಾ ಸಭೆಯನ್ನು ಶಾಂತಿಯುತ ಮತ್ತು ಸುಗಮವಾಗಿ ನಡೆಸಲು ದೊಡಾ ಮತ್ತು ಕಿಶ್ಚಾರ್ ಜಿಲ್ಲೆಗಳಾದ್ಯಂತ ಬಿಗಿಭದ್ರತೆ ಏರ್ಪಡಿಸಲಾಗಿದೆ. ಪ್ರಧಾನಿ

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮೋದಿ ಪ್ರಚಾರ ಸಭೆ/ 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ದೋಡಾ ಭೇಟಿ Read More »

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ| 70 ವರ್ಷ ಮೀರಿದ ಪ್ರತಿಯೊಬ್ಬರಿಗೂ ಉಚಿತ ವಿಮೆ ಘೋಷಣೆ

ಸಮಗ್ರ ನ್ಯೂಸ್: 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರನ್ನು ಈಗ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ವಿಮಾ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಪ್ರಮುಖ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕ್ರಮವು ಆರು ಕೋಟಿ ಹಿರಿಯ ನಾಗರಿಕರನ್ನು ಹೊಂದಿರುವ ಸುಮಾರು 4.5 ಕೋಟಿ ಕುಟುಂಬಗಳಿಗೆ ಕುಟುಂಬ ಆಧಾರದ ಮೇಲೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ| 70 ವರ್ಷ ಮೀರಿದ ಪ್ರತಿಯೊಬ್ಬರಿಗೂ ಉಚಿತ ವಿಮೆ ಘೋಷಣೆ Read More »

5,000 ಸೈಬರ್ ಕಮಾಂಡೋಗಳ ನೇಮಕಾತಿಗೆ ಸರ್ಕಾರದ ಸಿದ್ಧತೆ/ ಅಮಿತ್‌ ಶಾ ಹೇಳಿಕೆ

ಸಮಗ್ರ ನ್ಯೂಸ್‌: ಭಾರತದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಮುಂದಿನ 5 ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳನ್ನು ನೇಮಿಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ 5000 ಕಮಾಂಡೋಗಳಿಗೆ ಸೈಬರ್‌ ದಾಳಿಯನ್ನು ತಡೆಯುವುದರ ಬಗ್ಗೆ ತರಬೇತಿ ನೀಡಲಾಗುವುದು ಎಂದರು. ‘ವಿಶ್ವದ ಶೇ.46 ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ. ಸೈಬರ್‌ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳದೇ ದೇಶದ ಪ್ರಗತಿ ಸಾಧ್ಯವಿಲ್ಲ. ಇದೊಂದು

5,000 ಸೈಬರ್ ಕಮಾಂಡೋಗಳ ನೇಮಕಾತಿಗೆ ಸರ್ಕಾರದ ಸಿದ್ಧತೆ/ ಅಮಿತ್‌ ಶಾ ಹೇಳಿಕೆ Read More »