ದೇಶ-ವಿದೇಶ

ಜೂ.10ರಂದು ವರ್ಷದ ಮೊದಲ ಸೂರ್ಯಗ್ರಹಣ, ಭಾರತದಲ್ಲಿ ಕಾಣಿಸುತ್ತಾ? ಹೇಗಿರುತ್ತೆ ಗ್ರಹಣ?

ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಚಂದ್ರಗ್ರಹಣಕ್ಕೆ ಭೂಮಿಯ ಕೆಲ ಪ್ರದೇಶಗಳು ಸಾಕ್ಷಿಯಾಗಿದ್ದು, ಇದೀಗ ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಬಾರಿ ಉಂಗುರ ತೊಡಿಸಿದ ರೀತಿಯಲ್ಲಿ ಸೂರ್ಯ ಗ್ರಹಣ ಕಾಣಿಸಲಿದ್ದು, ಅದನ್ನು ರಿಂಗ್ ಆಫ್ ಫೈರ್(ಬೆಂಕಿಯ ಉಂಗುರ) ಎಂದು ಕರೆಯಲಾಗಿದೆ. ರಿಂಗ್ ಆಫ್ ಫೈರ್ ಎಂದರೇನು?:ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಬಹು ದೂರದಲ್ಲಿದ್ದಾಗ ಸೂರ್ಯನಿಗೆ ಅಡ್ಡ ಬರುವ ಪರಿಣಾಮ ಅದು ಉಂಗುರ ತೊಡಿಸಿದ ರೀತಿಯಲ್ಲಿ ಕಾಣಿಸಲಿದೆ ಎಂದು […]

ಜೂ.10ರಂದು ವರ್ಷದ ಮೊದಲ ಸೂರ್ಯಗ್ರಹಣ, ಭಾರತದಲ್ಲಿ ಕಾಣಿಸುತ್ತಾ? ಹೇಗಿರುತ್ತೆ ಗ್ರಹಣ? Read More »

ಮಹಾತ್ಮ ಗಾಂಧಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಏಳು ವರ್ಷ ಜೈಲು ಶಿಕ್ಷೆ

ದಕ್ಷಿಣ ಆಫ್ರಿಕಾ: ವಂಚನೆ ಆರೋಪ ಎದುರಿಸುತ್ತಿದ್ದ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು ಒಬ್ಬರಿಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಗಾಂಧೀಜಿ ಮೊಮ್ಮೊಗಳಾದ ಇಳಾ ಗಾಂಧಿ ಹಾಗೂ ಮೆವಾ ರಾಮ್​ಗೋವಿಂದ್ ಅವರ ಮಗಳಾದ ಆಶೀಶ್ ಲತಾ ವಿರುದ್ಧ ಉದ್ಯಮಿಯೊಬ್ಬರಿಗೆ ಹಣ ವಂಚನೆ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ 2015ರಲ್ಲಿ ದಾಖಲಾಗಿತ್ತು. ಉದ್ಯಮಿ ಎಸ್​ ಆರ್ ಮಹಾರಾಜ್​ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದಿದ್ದ ಆಶೀಶ್ ಲತಾ ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಮಹಾತ್ಮ ಗಾಂಧಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಏಳು ವರ್ಷ ಜೈಲು ಶಿಕ್ಷೆ Read More »

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ

ಕಾಸರಗೋಡು: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ನಲ್ಲಿ ಚುನಾವಣೆ ನಡೆದು ಮೇ ತಿಂಗಳಲ್ಲಿ ಫಲಿತಾಂಶ ಹೊರಬಂದಿತ್ತು. ವಿಧಾನಸಭಾ ಚುನಾವಣೆ ವೇಳೆ ಹಣ ಹಾಗೂ ಆಮಿಷ ನೀಡಿ ನಾಮಪತ್ರ ಹಿಂತೆಗೆಯಲು ಅನ್ಯ ಪಕ್ಷದ ಅಭ್ಯರ್ಥಿ ಓರ್ವರಿಗೆ ಒತ್ತಡ ಹೇರಿದ ಆರೋಪದ ಮೇಲೆ ಸುರೇಂದ್ರನ್ ಅವರ ಮೇಲೆ ಕೇಸು ದಾಖಲಿಸಿ ಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರರವರ ಹೇಳಿಕೆ ಹಿನ್ನಲೆಯಲ್ಲಿ, ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ರಮೇಶನ್ ನೀಡಿದ ದೂರಿನನ್ವಯ ಇದೀಗ

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ Read More »

ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು

ಕೇರಳ : ಆಂಬುಲೆನ್ಸ್ ಒಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಕಣ್ಣೂರಿನಲ್ಲಿ ಸೋಮವಾರ ನಡೆದಿದೆ. ಮೃತರನ್ನು ಪಯ್ಯನ್ನೂರು ನಿವಾಸಿಗಳಾದ ಬೀಜೋ (45), ಆತನ ಸಹೋದರಿ ರಜಿನಾ (37), ಮತ್ತು ಆಂಬುಲೆನ್ಸ್ ಚಾಲಕ ನಿತಿನ್ ರಾಜ್ (40) ಎಂದು ಗುರುತಿಸಲಾಗಿದೆ. ಜೊತೆಯಲ್ಲಿ ಇದ್ದ ಬೆಣ್ಣಿ ಎಂಬವರು ಗಂಭೀರ ಗಾಯಗೊಂಡಿದ್ದು ಕಣ್ಣೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದ್ದು, ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದುದರಿಂದ ನಿಯಂತ್ರಣ

ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು Read More »

ಪುಣೆ: ಕಾರ್ಖಾನೆಯಲ್ಲಿ ಅಗ್ನಿ ಅವಘಡ | 17 ಜನ ಮೃತ್ಯು

ಪುಣೆ: ಇಲ್ಲಿಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆ ಸಿಲುಕಿ 17 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಲ್ಶಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಎಸ್‌ಯುಎಸ್‌ ಅಕ್ವಾ ಟೆಕ್ನಾಲಜೀಸ್’ ರಾಸಾಯನಿಕ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದ್ದು, 15 ಮಹಿಳೆಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದಾರೆ ಹಾಗೂ ಸಣ್ಣಪುಟ್ಟ ಗಾಯಗೊಂಡ 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಣೆ ಜಿಲ್ಲಾಡಳಿತ ತಿಳಿಸಿದೆ.ಬೆಂಕಿ ನಂದಿಸಿ ಅವಶೇಷಗಳ ತೆರವು ಕಾರ್ಯಾಚರಣೆ ಮತ್ತು ಮೃತ ವ್ಯಕ್ತಿಗಳ ಗುರುತು ಪತ್ತೆ

ಪುಣೆ: ಕಾರ್ಖಾನೆಯಲ್ಲಿ ಅಗ್ನಿ ಅವಘಡ | 17 ಜನ ಮೃತ್ಯು Read More »

ಲಸಿಕಾ ನೀತಿಯಲ್ಲಿ ಮತ್ತೆ ಯೂ ಟರ್ನ್ ಹೊಡೆದ ಕೇಂದ್ರ, ರಾಜ್ಯಗಳಿಗಿಲ್ಲ ಹೊಣೆಗಾರಿಕೆ

ನವದೆಹಲಿ: ಲಸಿಕೆ ಹಂಚಿಕೆಯಲ್ಲಿ ರಾಜ್ಯಗಳಿಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ‌ ಮತ್ತೆ ಲಸಿಕಾ ನೀತಿಯಲ್ಲಿ ಯೂ ಟರ್ನ್ ಹೊಡೆದಿದೆ.ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇದೇ 21ರಿಂದ ಕೇಂದ್ರ ಸರ್ಕಾರವೇ ಹದಿನೆಂಟು ವರ್ಷ ಮೀರಿದ ಎಲ್ಲರಿಗೂ ಉಚಿತ ಲಸಿಕೆ‌ ನೀಡುವುದಾಗಿ ಪ್ರಕಟಿಸಿದ್ದು, ರಾಜ್ಯಗಳಿಗೆ ಲಸಿಕೆ ಹಂಚುವ ಜವಾಬ್ದಾರಿಯನ್ನು ಕೇಂದ್ರವೇ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.ಕೊರೊನ ಎರಡನೇ ಅಲೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಶಕ್ತಿಮೀರಿ ಪ್ರಯತ್ನ ‌ನಡೆಸಿದೆ. ಅದಾಗ್ಯೂ ಹಲವು ಮಂದಿ ತಮ್ಮವರನ್ನು

ಲಸಿಕಾ ನೀತಿಯಲ್ಲಿ ಮತ್ತೆ ಯೂ ಟರ್ನ್ ಹೊಡೆದ ಕೇಂದ್ರ, ರಾಜ್ಯಗಳಿಗಿಲ್ಲ ಹೊಣೆಗಾರಿಕೆ Read More »

ಜೂನ್ 21ರಿಂದ ದೇಶವಾಸಿಗಳಿಗೆ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ ದೀಪಾವಳಿವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದರು. ಮೋದಿ ಭಾಷಣದ ಸಾರಾಂಶವೇನು?:ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದ್ದು, ಅನೇಕು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ

ಜೂನ್ 21ರಿಂದ ದೇಶವಾಸಿಗಳಿಗೆ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ Read More »

ಎರಡು ಮಕ್ಕಳ ತಾಯಿ, ಮಗನ ವಯಸ್ಸಿನ ಬಾಲಕನ ಜೊತೆ ಪರಾರಿ: ಕಾರಣ ನಿಗೂಢ

ಛತ್ತೀಸ್‌ಗಢ: ಇಲ್ಲಿನ ಕೋರಬಾದದಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ಮಗನ ಸಮನವಾದ 14 ವರ್ಷದ ಬಾಲಕನೊಂದಿಗೆ ಓಡಿ ಹೋದ ಘಡನೆ ನಡೆದಿದೆ. ಈ ಮಹಿಳೆಗೆ ಎರಡು ಮಕ್ಕಳಿದ್ದು ಈ ರೀತಿ ಪರಾರಿಯಾಗಿರುವುದು ಆತಂಕ ಉಂಟುಮಾಡಿದೆ. ಈಕೆಯ ಗಂಡ ಸರಕಾರಿ ನೌಕರನಾಗಿದ್ದ. ಈಕೆಗೆ ಅದೇ ಊರಿನ ಬಾಲಕನೊಂದಿಗೆ ಪ್ರೇಮಾಂಕುರಗೊಂಡಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರ ನಡುವೆ ಕುಚುಕು ಪ್ರೇಮ ಕೂಡ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇವರಿಬ್ಬರ ನಡುವಿನ ಈ ವಿಚಿತ್ರ ಪ್ರೇಮ ದೈಹಿಕ ಸಂಪರ್ಕದವರೆಗೂ ತಲುಪಿತ್ತು. ಇದಕ್ಕೆ

ಎರಡು ಮಕ್ಕಳ ತಾಯಿ, ಮಗನ ವಯಸ್ಸಿನ ಬಾಲಕನ ಜೊತೆ ಪರಾರಿ: ಕಾರಣ ನಿಗೂಢ Read More »

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಫೈಲಿಂಗ್ ವೆಬ್ಸೈಟ್ incometax.gov.in – ಇಂದಿನಿOದ (ಜೂನ್ ೭, ೨೦೨೧) ಆರಂಭವಾಗಲಿದೆ. ಎಲ್ಲ ಬಗೆಯಲ್ಲೂ ಹೊಸದಾದ ಮೊಬೈಲ್ ಆ್ಯಪ್, ಪ್ರೀ ಫಿಲ್ಡ್ (ಅದಾಗಲೇ ಭರ್ತಿ ಮಾಡಿದ) ಆದಾಯ ತೆರಿಗೆ ಮಾಹಿತಿ, ಐಟಿಆರ್ ಫಾರ್ಮ್ ಮತ್ತು ಸರಳ ಆದಾಯ ತೆರಿಗೆ ವ್ಯವಸ್ಥೆ ಇವೆಲ್ಲವೂ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಇ- ಫೈಲಿಂಗ್ ಪೋರ್ಟಲ್ ೨.೦ ಮೂಲಕ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು Read More »

ಪಾಕಿಸ್ತಾನದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ:30ಕ್ಕೂ ಹೆಚ್ಚು ಸಾವು

ಗೊಡ್ಕಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೊಡ್ಕಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ರೈಲುಗಳೆರಡರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಸಿಂಧ್ ಪ್ರಾಂತ್ಯದ ರೆಟಿ ಮತ್ತು ದಹರ್ಕಿ ರೈಲು ನಿಲ್ಧಾಣದ ಮಧ್ಯೆ, ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಮಧ್ಯೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ. ಲಾಹೋರ್ ನಿಂದ ಹೊರಟಿದ್ದ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಅದು ತೆರಳಬೇಕಿದ್ದ ಹಳಿ ತಪ್ಪಿ ತೆರಳಿದ್ದು

ಪಾಕಿಸ್ತಾನದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ:30ಕ್ಕೂ ಹೆಚ್ಚು ಸಾವು Read More »