ದೇಶ-ವಿದೇಶ

ಮತ್ತೊಮ್ಮೆ ತೆರೆಯಲಿದೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ

ಸಮಗ್ರ ನ್ಯೂಸ್‌: ನಾಲ್ಕು ದಶಕಗಳ ನಂತರ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಆಭರಣ ಹಾಗೂ ಬೆಲೆಬಾಳುವ ಲೋಹಗಳಿರುವ ಈ ತಿಜೋರಿಯನ್ನು ಕೊನೆಯ ಬಾರಿಗೆ 1985ರಲ್ಲಿ ತೆರೆಯಲಾಗಿತ್ತು. ಮುಖ್ಯಮಂತ್ರಿ ಮೋಹನ್ ಮಾಝಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ರತ್ನಭಂಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ದಾಸ್ತಾನು ಮಾಡಲಿದೆ. ಕಳೆದ ಬಾರಿ ತೆರೆಯಲಾದಾಗ ಭಂಡಾರದಲ್ಲಿ 12,500 ರತ್ನಖಚಿತ ಚಿನ್ನದ ಆಭರಣ ಹಾಗೂ 22,000 ತುಂಡು ಬೆಳ್ಳಿ ಇತ್ತು. 2018ರಲ್ಲಿ ಇದರ ತನಿಖೆ […]

ಮತ್ತೊಮ್ಮೆ ತೆರೆಯಲಿದೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ Read More »

ಬಾಲಕನಿಗೆ ಕಿರುಕುಳ ನೀಡಿದ ಆರೋಪ/ ದಲೈಲಾಮ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ

ಸಮಗ್ರ ನ್ಯೂಸ್‌: ಟಿಬೆಟನ್ ಧರ್ಮಗುರು ದಲೈಲಾಮ ವಿರುದ್ಧ ಬಾಲಕನೊಬ್ಬನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಬಾಲಕನ ತುಟಿ ಚುಂಬಿಸಿ, ತಮ್ಮ ನಾಲಿಗೆ ಚೀಪುವಂತೆ ದಲೈಲಾಮ ಅವರು ಹೇಳುವ ವಿಡಿಯೋ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದಕ್ಕೆ ಕಾರಣವಾಗಿತ್ತು. ದಲೈಲಾಮ ವಿರುದ್ಧ ಪೋಟೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ‘ಕಾನ್ಸೆಡರೇಷನ್ ಆಫ್ ಎನ್‌ಜಿಒ’ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ

ಬಾಲಕನಿಗೆ ಕಿರುಕುಳ ನೀಡಿದ ಆರೋಪ/ ದಲೈಲಾಮ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ Read More »

ಉತ್ತರಪ್ರದೇಶದಲ್ಲಿ ಭೀಕರ ಅಪಘಾತ| ಮಗು ಸೇರಿ 18 ಮಂದಿ ದುರ್ಮರಣ

ಸಮಗ್ರ ನ್ಯೂಸ್::ಉತ್ತರ ಪ್ರದೇಶದ ಉನ್ನಾವ್‌ ಬಳಿ ಭೀಕರ ರಸ್ತೆ ಅಪಘಾತದ ಸಂಭವಿಸಿದ್ದು, ಮಗು, ಮೂವರು ಮಹಿಳೆಯರು ಸೇರಿದಂತೆ 18 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಹ್ತಾ ಮುಜಾವರ್ ಪ್ರದೇಶದ ಗರ್ಹಾ ಗ್ರಾಮದ ಬಳಿ ಮುಂದೆ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್ ನ ಹಿಂಭಾಗಕ್ಕೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ. ಮುಂಜಾನೆ 5:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಲೀಪರ್ ಬಸ್ ಹಿಂದಿನಿಂದ ಮುಂದೆ ಚಲಿಸುತ್ತಿದ್ದ

ಉತ್ತರಪ್ರದೇಶದಲ್ಲಿ ಭೀಕರ ಅಪಘಾತ| ಮಗು ಸೇರಿ 18 ಮಂದಿ ದುರ್ಮರಣ Read More »

ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಮೋದಿ/ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರದಾನ ಮಾಡಿದ ವ್ಲಾದಿಮಿರ್‌ ಪುತಿನ್‌

ಸಮಗ್ರ ನ್ಯೂಸ್‌: ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರಲ್ಲಿ ಘೋಷಿಸಲಾಗಿದ್ದು, ಮಂಗಳವಾರ ಮಾಸ್ಕೋ ಕ್ರೆಮಿನ್ ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಸಾಂಪ್ರದಾಯಿಕವಾಗಿ ಪ್ರದಾನ ಮಾಡಿದರು. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ಭಾರತದ ಪ್ರಧಾನಿಗೆ

ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಮೋದಿ/ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರದಾನ ಮಾಡಿದ ವ್ಲಾದಿಮಿರ್‌ ಪುತಿನ್‌ Read More »

ಎಲೆಕ್ಟ್ರಿಕ್ ವಾಹನದಲ್ಲಿ ಪುತಿನ್ – ಮೋದಿ ರೌಂಡ್ಸ್| ನಮೋಗೆ ಸಾರಥಿಯಾದ ರಷ್ಯಾ ಅಧ್ಯಕ್ಷ

ಸಮಗ್ರ ನ್ಯೂಸ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಹಳ ಆತ್ಮೀಯವಾಗಿ ನಿನ್ನೆ ಬರಮಾಡಿಕೊಂಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ಡ್ರೈವರ್ ಸೀಟಿನಲ್ಲಿ ಕುಳಿತಿದ್ದು, ಪ್ರಧಾನಿ ಮೋದಿ ಅವರ ಪಕ್ಕದಲ್ಲೇ ಕುಳಿತಿದ್ದಾರೆ. ಇಬ್ಬರು ಆ ಪ್ರಯಾಣವನ್ನು ಎಂಜಾಯ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಹೀಗೆ ಕಾರಿನಲ್ಲಿ ಪ್ರಧಾನಿಯವರನ್ನು ಕೂರಿಸಿಕೊಂಡೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ತಮ್ಮ ಬಂಗಲೆಗೆ ಒಂದು

ಎಲೆಕ್ಟ್ರಿಕ್ ವಾಹನದಲ್ಲಿ ಪುತಿನ್ – ಮೋದಿ ರೌಂಡ್ಸ್| ನಮೋಗೆ ಸಾರಥಿಯಾದ ರಷ್ಯಾ ಅಧ್ಯಕ್ಷ Read More »

ಜಮ್ಮು: ಸೇನೆಯ ಗುರಿಯಾಗಿಸಿ ಉಗ್ರರ ದಾಳಿ| ಗ್ರೆನೇಡ್ ಸ್ಪೋಟಕ್ಕೆ ನಾಲ್ವರು ಯೋಧರು ಹುತಾತ್ಮ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಕಳೆದೆರಡು ತಿಂಗಳಲ್ಲಿ ಸೇನೆ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದೀಗ ಕಥುವಾ ಬಳಿ ಭಾರತೀಯ ಸೇನಾ ವಾಹನ ಗುರಿಯಾಗಿ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನ ಪ್ರತಿ ದಾಳಿ ನಡೆಸುತ್ತಿದ್ದಂತೆ ಉಗ್ರರು ಕಾಡಿನೊಳಗೆ ಪರಾರಿಯಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇಂದು ಮಧ್ಯಾಹ್ನ 3.30ರ ವೇಳೆಗೆ

ಜಮ್ಮು: ಸೇನೆಯ ಗುರಿಯಾಗಿಸಿ ಉಗ್ರರ ದಾಳಿ| ಗ್ರೆನೇಡ್ ಸ್ಪೋಟಕ್ಕೆ ನಾಲ್ವರು ಯೋಧರು ಹುತಾತ್ಮ Read More »

ಇಂದಿನಿಂದ ಪ್ರಧಾನಿ ಮೋದಿ ರಷ್ಯಾ ಪ್ರವಾಸ

ಸಮಗ್ರ ನ್ಯೂಸ್‌: ಉಕ್ರೇನ್ ರಷ್ಯಾ ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಇಂದಿನಿಂದ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಎರಡು ದಿನಗಳ ಕಾಲ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಪ್ರಧಾನಿ ಆಸ್ಟ್ರಿಯಾಕ್ಕೆ ತೆರಳಲಿದ್ದು, 46 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷದ ನಂತರದ ಮೊದಲ ಭೇಟಿಯಲ್ಲಿ ಮೋದಿ ಅವರು ರಷ್ಯಾ ಅಧ್ಯಕ್ಷ

ಇಂದಿನಿಂದ ಪ್ರಧಾನಿ ಮೋದಿ ರಷ್ಯಾ ಪ್ರವಾಸ Read More »

ತ್ರಿಪುರಾದಲ್ಲಿ 47 ವಿದ್ಯಾರ್ಥಿಗಳು ಏಡ್ಸ್ ಗೆ ಬಲಿ| 828 ವಿದ್ಯಾರ್ಥಿಗಳಿಗೆ ಪಾಸಿಟಿವ್

ಸಮಗ್ರ ನ್ಯೂಸ್: ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಒಂದು ಶಾಕಿಂಗ್ ವರದಿಯನ್ನ ಬಿಡುಗಡೆ ಮಾಡಿದೆ. ಎಚ್‌ಐವಿ ಸೋಂಕಿನಿಂದ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನೂ 828 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (TSACS) ಹಿರಿಯ ಅಧಿಕಾರಿ ಭಟ್ಟಾಚಾರ್ಜಿ, 220 ಶಾಲೆಗಳು, 24 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಚುಚ್ಚುಮದ್ದಿನ ಔಷಧಿಗಳನ್ನ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನ ಗುರುತಿಸಲಾಗಿದೆ ಎಂದು ಹೇಳಿದರು. ಪ್ರತಿದಿನ ಐದರಿಂದ ಏಳು ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ತ್ರಿಪುರಾ ಪತ್ರಕರ್ತರ

ತ್ರಿಪುರಾದಲ್ಲಿ 47 ವಿದ್ಯಾರ್ಥಿಗಳು ಏಡ್ಸ್ ಗೆ ಬಲಿ| 828 ವಿದ್ಯಾರ್ಥಿಗಳಿಗೆ ಪಾಸಿಟಿವ್ Read More »

ಕುಸ್ತಿ‌ ಅಖಾಡಕ್ಕೆ ವಿದಾಯ ಘೋಷಿಸಿದ WWE ರೆಸ್ಲರ್ ಜಾನ್ ಸೀನ

ಸಮಗ್ರ ನ್ಯೂಸ್: 16 ಬಾರಿಯ ವಿಶ್ವ ಚಾಂಪಿಯನ್, WWE ದಂತಕತೆಯಾದ ಜಾನ್ ಸೀನ ತಮ್ಮ‌ ರಸ್ಲಿಂಗ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. WWE ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ ಜಾನ್ ಕುಸ್ತಿಯ ಅಖಾಡಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2025ರಲ್ಲಿ ಅವರು WWE ಕ್ರೀಡಾ ಪ್ರಕಾರಕ್ಕೆ ವಿದಾಯ ಹೇಳಲಿದ್ದಾರೆ. WWEಗೆ ಅಚ್ಚರಿಯ ವಿದಾಯ ಘೋಷಿಸಿರುವ ಜಾನ್ ಸೀನ, “ಇಂದು ರಾತ್ರಿ ನಾನು WWEಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ವಿಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ಜಾನ್ ಅವರ ವಿದಾಯವು ಅವರ

ಕುಸ್ತಿ‌ ಅಖಾಡಕ್ಕೆ ವಿದಾಯ ಘೋಷಿಸಿದ WWE ರೆಸ್ಲರ್ ಜಾನ್ ಸೀನ Read More »

ತಮಿಳುನಾಡು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರ ಹತ್ಯೆ| ಎಂಟು ಮಂದಿ ಶಂಕಿತರು ಅರೆಸ್ಟ್

ಸಮಗ್ರ ನ್ಯೂಸ್: ತಮಿಳುನಾಡು ಬಹುಜನ ಸಮಾಜ ವಾದಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಪೆರಂಬೂರ್‌ನಲ್ಲಿರುವ ಆರ್ಮ್‌ಸ್ಟ್ರಾಂಗ್‌ ಅವರ ನಿವಾಸದ ಬಳಿ ಆರು ಮಂದಿ ಅಪರಿಚಿತ ದಾಳಿಕೋರರು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಯ ಉದ್ದೇಶವನ್ನು ಕೂಲಂಕುಶವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಚೆನ್ನೈ ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗರ್ಗ್‌ ಹೇಳಿದ್ದಾರೆ. ಆರ್ಮ್‌ಸ್ಟ್ರಾಂಗ್‌ ಅವರನ್ನು ಕೊಲೆಗೈದ ಬಳಿಕ ಆರೋಪಿಗಳು ಪರಾರಿಯಾಗುತ್ತಿರುವ

ತಮಿಳುನಾಡು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರ ಹತ್ಯೆ| ಎಂಟು ಮಂದಿ ಶಂಕಿತರು ಅರೆಸ್ಟ್ Read More »