ರಾಷ್ಟ್ರೀಯ

ರಿಯಾ ಸಿಂಘಾಗೆ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ

ಸಮಗ್ರ ನ್ಯೂಸ್: ಜೈಪುರದಲ್ಲಿ ಭಾನುವಾರ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ಜಾಗತಿಕ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ರಿಯಾ, ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಗೆದ್ದಿದ್ದೇನೆ. ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ನಾನು ತುಂಬಾ ಶ್ರಮಪಟ್ಟಿದ್ದೇನೆ ಎಂದರು.ನಟಿ […]

ರಿಯಾ ಸಿಂಘಾಗೆ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ Read More »

ನ್ಯೂಯಾರ್ಕ್: ‘AI’ ಎಂದರೆ ಅಮೇರಿಕಾ-ಭಾರತ ಸ್ಪೂರ್ತಿ| ಹೊಸ ಅರ್ಥದೊಂದಿಗೆ ಉಭಯ ರಾಷ್ಟ್ರಗಳ ಸಂಬಂಧ ಬಣ್ಣಿಸಿದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಸ್ಥಳೀಯ ಸಮಯ) ನ್ಯೂಯಾರ್ಕ್ ನಲ್ಲಿ ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಭಾರತ ಮತ್ತು ಯುಎಸ್ ನಡುವಿನ ಸಂಬಂಧವನ್ನು ಎತ್ತಿ ತೋರಿಸಿದರು ಮತ್ತು ಅದಕ್ಕೆ ಹೊಸ ಅರ್ಥವನ್ನು ನೀಡಿದರು, ಇದನ್ನು ಅಮೆರಿಕ-ಭಾರತ ಸ್ಫೂರ್ತಿ ಎಂದು ಬಣ್ಣಿಸಿದರು. ಇಲ್ಲಿನ‌ ನಸ್ಸೌ ಕೊಲಿಸಿಯಂನಲ್ಲಿ ಮೋದಿ ಮತ್ತು ಯುಎಸ್ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಅವರು, “ಜಗತ್ತಿಗೆ, ಎಐ ಎಂದರೆ ಕೃತಕ ಬುದ್ಧಿಮತ್ತೆ, ಆದರೆ ನನಗೆ ಎಐ ಎಂದರೆ ಅಮೆರಿಕನ್-ಭಾರತೀಯ ಮನೋಭಾವ. ಇದು ವಿಶ್ವದ ಹೊಸ

ನ್ಯೂಯಾರ್ಕ್: ‘AI’ ಎಂದರೆ ಅಮೇರಿಕಾ-ಭಾರತ ಸ್ಪೂರ್ತಿ| ಹೊಸ ಅರ್ಥದೊಂದಿಗೆ ಉಭಯ ರಾಷ್ಟ್ರಗಳ ಸಂಬಂಧ ಬಣ್ಣಿಸಿದ ಮೋದಿ Read More »

ಪೇಜರ್, ವಾಕಿಟಾಕಿ ಸ್ಪೋಟದ ಬಳಿಕ ಲೆಬನಾನ್ ಮೇಲೆ ಇಸ್ರೇಲ್ ದಾಳಿ| ಹಿಬ್ಜುಲ್ ಕೋಟೆಗಳ ಮೇಲೆ ಬಾಂಬ್ ಮಳೆ

ಸಮಗ್ರ ನ್ಯೂಸ್: ಪೇಜರ್, ವಾಕಿ ಟಾಕಿ ಸ್ಫೋಟದ ನಂತರ ಹಿಜ್ಜುಲ್ಲಾ ಉಗ್ರ ಸಂಘಟನೆ ಮೇಲೆ ಇಸ್ರೇಲ್ ಇದೀಗ ನೇರ ದಾಳಿ ಶುರು ಮಾಡಿದೆ. ದಕ್ಷಿಣ ಲೆಬನಾನ್‌ನ ಹೆಜ್ಬುಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿದೆ. ಹೆಜ್ಬುಲ್ಲಾದ ಸಂವಹನ ವ್ಯವಸ್ಥೆ ಪೇಜರ್, ವಾಕಿ ಟಾಕಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಸ್ಫೋಟಗಳಲ್ಲಿ 37 ಮಂದಿ ಹತ್ಯೆಯಾಗಿದ್ದು ಅಲ್ಲದೆ ನೂರಾರು ಮಂದಿ ಗಂಭೀರ ಗಾಯಗೊಂಡಿದ್ದರು. ಹೆಜ್ಬುಲ್ಲಾದ ಸಂವಹನ ವ್ಯವಸ್ಥೆಗಳ ಮೇಲಿನ ದಾಳಿಗಳ ಮೂಲಕ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ಒತ್ತಡ

ಪೇಜರ್, ವಾಕಿಟಾಕಿ ಸ್ಪೋಟದ ಬಳಿಕ ಲೆಬನಾನ್ ಮೇಲೆ ಇಸ್ರೇಲ್ ದಾಳಿ| ಹಿಬ್ಜುಲ್ ಕೋಟೆಗಳ ಮೇಲೆ ಬಾಂಬ್ ಮಳೆ Read More »

‘ಚಂದ್ರಯಾನ-4’ಕ್ಕೆ ಸಚಿವ ಸಂಪುಟ ಅನುಮೋದನೆ

ಸಮಗ್ರ ನ್ಯೂಸ್: ಕೇಂದ್ರ ಸಚಿವ ಸಂಪುಟ ಚಂದ್ರನಲ್ಲಿಗೆ ಭಾರತೀಯ ಗಗನಯಾನಿಗಳನ್ನು ಕಳಿಸುವುದು,ಶುಕ್ರ ಗ್ರಹ ಅಧ್ಯಯನ ಹಾಗೂ ಅನಿಮೇಷನ್ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ಯೋಜನೆಗಳಿಗೆ ಸೆ.18 ರಂದು ಅನುಮೋದನೆ ನೀಡಿದೆ. ಭಾರತೀಯ ಗಗನಯಾನಿಗಳು ಚಂದಿರನ ಅಂಗಳದಲ್ಲಿ ಇಳಿದು, ಪುನಃ ಭೂಮಿಗೆ ಮರಳಲು ಅಗತ್ಯವಿರುವ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಪ್ರಾತ್ಯಕ್ಷೀಕೆ ಒಳಗೊಂಡ ‘ಚಂದ್ರಯಾನ-4’ ಬಾಹ್ಯಾಕಾಶ ಕಾರ್ಯಕ್ರಮಕ್ಕೂ ಸಂಪುಟ ಅನುಮೋದನೆ ನೀಡಿದೆ. ಬಾಹ್ಯಾಕಾಶ ಯೋಜನೆಗೆ ಅಗತ್ಯವಿರುವ ಗಗನನೌಕೆ ಅಭಿವೃದ್ಧಿ ಮತ್ತು ಅದರ ಉದಾವಣೆಯ ಹೊಣೆಯನ್ನು ಇಸ್ರೋ ನಿಭಾಯಿಸಲಾಗುವುದು. 2040ರ ವೇಳೆಗೆ ಈ

‘ಚಂದ್ರಯಾನ-4’ಕ್ಕೆ ಸಚಿವ ಸಂಪುಟ ಅನುಮೋದನೆ Read More »

ಅಪ್ರಾಪ್ತರು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂ ಖಾತೆ ತೆರೆಯುವಂತಿಲ್ಲ| ಟೀನೇಜ್ ಜನರಿಗೆ ಶಾಕ್ ನೀಡಿದ ಮೆಟಾ

ಸಮಗ್ರ ನ್ಯೂಸ್: ಸಾಮಾಜಿಕ ಮಾಧ್ಯಮವಾಗಿರುವ ಇನ್‌ಸ್ಟಾಗ್ರಾಮ್ ಯುವಜನರ ಮೇಲೆ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಹದಿಹರೆಯದ ಮಕ್ಕಳು ಹಾಗೂ ಅಪ್ರಾಪ್ತರ ಬದುಕಿನ ಶೈಲಿಯ ಅಡ್ಡ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇನ್‌ಸ್ಟಾಗ್ರಾಮ್‌ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರತ್ಯೇಕ ಖಾತೆಯನ್ನು ನಿಗದಿ ಮಾಡಿದೆ. ಅಮೆರಿಕ, ಇಂಗ್ಲೆಂಡ್‌ , ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಗಳವಾರದಿಂದ ಇದು ಜಾರಿಗೆ ಬಂದಿದೆ. ಇನ್‌ಸ್ಟಾಗ್ರಾಮ್‌ ಸೈನ್ ಅಪ್ ಮಾಡುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇನ್ನೂ ಟೀನೇಜ್ ಅಕೌಂಟ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಅದೇ ರೀತಿ

ಅಪ್ರಾಪ್ತರು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂ ಖಾತೆ ತೆರೆಯುವಂತಿಲ್ಲ| ಟೀನೇಜ್ ಜನರಿಗೆ ಶಾಕ್ ನೀಡಿದ ಮೆಟಾ Read More »

ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಬುಲ್ಡೋಜರ್ ಬಳಸಿ ಯಾವುದೇ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ. ಆದಾಗ್ಯೂ, ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ರೈಲ್ವೆ ಮಾರ್ಗಗಳು, ಜಲಮೂಲಗಳ ಅತಿಕ್ರಮಣಗಳಿಗೆ ಈ ತಡೆಯಾಜ್ಞೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ದಂಡನಾತ್ಮಕ ಕ್ರಮವಾಗಿ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಕಟ್ಟಡಗಳನ್ನು ನೆಲಸಮಗೊಳಿಸುವಲ್ಲಿ ವಿವಿಧ ರಾಜ್ಯ ಸರ್ಕಾರಗಳ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಈ ನಿರ್ದೇಶನವನ್ನು ನೀಡಿದೆ. ಅ.1ರವರೆಗೆ

ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ತಡೆ Read More »

ಸಹಜ ಸ್ಥಿತಿಯತ್ತ ಮಣಿಪುರ/ ಇಂಟರ್‌ನೆಟ್‌ ನಿಷೇಧ ತೆರವು

ಸಮಗ್ರ ನ್ಯೂಸ್‌: ಹಿಂಸಾಚಾರ ಭುಗಿಲೆದ್ದ ಹಿನ್ನಲೆಯಲ್ಲಿ ಇಂಫಾಲ್ ಕಣಿವೆ ಜಿಲ್ಲೆಗಳಲ್ಲಿ ವಿಧಿಸಿದ್ದ ಇಂಟರ್ ನೆಟ್ ನಿಷೇಧವನ್ನು ಮಣಿಪುರ ಸರ್ಕಾರ ತೆರವುಗೊಳಿಸಿದ್ದು, ಸೆ.17 ರಿಂದ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ. ಮಣಿಪುರದ ರಾಜ್ಯಪಾಲರು ತಕ್ಷಣವೇ ಜಾರಿಗೆ ಬರುವಂತೆ ರಾಜ್ಯದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಲೀಸ್ ಲೈನ್‌ಗಳು, ವಿಎಸ್‌ಟಿಗಳು, ಬ್ರಾಡ್ ಬ್ಯಾಂಡ್ ಗಳು ಮತ್ತು ವಿಪಿಎನ್ ಸೇವೆಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವ ಯಾವುದೇ ಅಸ್ತಿತ್ವದಲ್ಲಿರುವ ಆದೇಶಗಳನ್ನು ಹಿಂಪಡೆಯಲು ಆದೇಶಿಸಲು ಸಂತೋಷಪಡುತ್ತಾರೆ ಎಂದು ಗೃಹ ಇಲಾಖೆ ಹೇಳಿದೆ.

ಸಹಜ ಸ್ಥಿತಿಯತ್ತ ಮಣಿಪುರ/ ಇಂಟರ್‌ನೆಟ್‌ ನಿಷೇಧ ತೆರವು Read More »

ದೆಹಲಿಯ ಮುಂದಿನ ಸಿಎಂ ಆಗಿ ಅತಿಶಿ ಮರ್ಲೆನಾ ಆಯ್ಕೆ

ಸಮಗ್ರ ನ್ಯೂಸ್: ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಎಎಪಿ ಶಾಸಕಿ, ಸಚಿವೆ ಅತಿಶಿ ಮರ್ಲೆನಾ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಮಧ್ಯಾಹ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ಬಳಿಕ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ದೆಹಲಿಯ ಮುಂದಿನ ಸಿಎಂ ಆಗಿ ಅತಿಶಿ ಮರ್ಲೆನಾ ಆಯ್ಕೆ Read More »

ಆಸೆ ಈಡೇರಿದ್ದಕ್ಕೆ ಮಗನಷ್ಟೇ ತೂಕದ ಹಣದಿಂದ ತುಲಾಭಾರ ಮಾಡಿದ ರೈತ!!

ಸಮಗ್ರ ನ್ಯೂಸ್: ತಮ್ಮ ಆಸೆ ಈಡೇರಿದಕ್ಕೆ ಮಗನ ತೂಕಕ್ಕೆ ಸಮನಾದ ಹಣವನ್ನು ತುಲಾಭಾರದ ಮೂಲಕ ದೇವಸ್ಥಾನಕ್ಕೆ ಅರ್ಪಿಸುವುದರೊಂದಿಗೆ ರೈತರೊಬ್ಬರು ಹರಕೆ ತೀರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್‌ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ರೈತ ಚತುರ್ಭುಜ್ ಜಾಟ್ ಅವರು ತನ್ನ 30 ವರ್ಷದ ಮಗ ವೀರೇಂದ್ರ ಜಾಟ್‌ಗಾಗಿ 4 ವರ್ಷಗಳ ಹಿಂದೆ ಶ್ರೀ ಸತ್ಯವಾಧಿ ದೇವಸ್ಥಾನದಲ್ಲಿ ಹರಕೆಯೊಂದನ್ನು ಕಟ್ಟಿಕೊಂಡಿದ್ದರು. ತಾವು ಅಂದುಕೊಂಡಿದ್ದ ನೆರವೇರಿದ್ದಕ್ಕೆ ತುಂಬಾ ಖುಷಿಯಾಗಿರುವ ಚತುರ್ಭುಜ್

ಆಸೆ ಈಡೇರಿದ್ದಕ್ಕೆ ಮಗನಷ್ಟೇ ತೂಕದ ಹಣದಿಂದ ತುಲಾಭಾರ ಮಾಡಿದ ರೈತ!! Read More »

ಮುಂದಿನ ಅಧಿವೇಶನದಲ್ಲೇ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ

ಸಮಗ್ರ ನ್ಯೂಸ್: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸರ್ಕಾರ ಮಂಡಿಸಿದೆ.ಈ ಚುನಾವಣೆ ಕಾರ್ಯಸಾಧ್ಯತೆ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವರದಿ ನೀಡಿದ್ದರು. ಕಳೆದ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯ ಅಗತ್ಯವನ್ನು ಒತ್ತಿ

ಮುಂದಿನ ಅಧಿವೇಶನದಲ್ಲೇ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ Read More »