ಹಿಮಾಚಲ ಪ್ರದೇಶ| ಭಾರೀ ಭೂಕುಸಿತಕ್ಕೆ ಹಲವರ ಬಲಿ ಶಂಕೆ| ಹತ್ತಾರು ವಾಹನಗಳು ಜಖಂ
ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ನೂರಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದ ಪರಿಣಾಮವಾಗಿ ಸಾಕಷ್ಟು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅನೇಕರು ಸಾವನ್ನಪ್ಪಿರುವ ಸಾಧ್ಯತೆಯಿದೆ. ಭಾರೀ ಭೂಕುಸಿತದ ಬಳಿಕ ವಾಹನಗಳು ಅವಶೇಷಗಳಡಿ ಸಿಲುಕಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಭೂಕುಸಿತ ಉಂಟಾಗಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಆರಂಭವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿರುವುದಾಗಿ ಮಾಹಿತಿ ಲಭಿಸಿದೆ.
ಹಿಮಾಚಲ ಪ್ರದೇಶ| ಭಾರೀ ಭೂಕುಸಿತಕ್ಕೆ ಹಲವರ ಬಲಿ ಶಂಕೆ| ಹತ್ತಾರು ವಾಹನಗಳು ಜಖಂ Read More »