ರಾಷ್ಟ್ರೀಯ

ಷೇರು ಮಾರುಕಟ್ಟೆಯಲ್ಲಿ ಗೂಳಿ ಗುದ್ದಾಟ| ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್, ನಿಪ್ಟಿ

ಸಮಗ್ರ ನ್ಯೂಸ್: ಭಾರತೀಯ ಷೇರು ಮಾರುಕಟ್ಟೆ ಸಾರ್ವಕಾಲಿಕ ಏರಿಕೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತೊಮ್ಮೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ತಲುಪಿವೆ. ಇದರೊಂದಿಗೆ ಹೊಸ ದಾಖಲೆ ಸಹ ನಿರ್ಮಾಣವಾಗಿದೆ. ಸೆನ್ಸೆಕ್ಸ್ ಚೊಚ್ಚಲ ಬಾರಿಗೆ 63 ಸಾವಿರದ ಗಡಿ ದಾಟಿದರೆ, ನಿಫ್ಟಿ 18800ರ ಗಡಿ ದಾಟಿದೆ. ಇದರೊಂದಿಗೆ ಇಂದಿನ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರಲ್ಲೂ ಏರಿಳಿತ ಕಂಡಿದೆ. ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ 63,303.01 ಕ್ಕೆ ತಲುಪಿದೆ. ಸೆನ್ಸೆಕ್ಸ್ 417.81 (0.67%) ಪಾಯಿಂಟ್‌ ಏರಿಕೆಯೊಂದಿಗೆ 63,099.65ಕ್ಕೆ […]

ಷೇರು ಮಾರುಕಟ್ಟೆಯಲ್ಲಿ ಗೂಳಿ ಗುದ್ದಾಟ| ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್, ನಿಪ್ಟಿ Read More »

ಪಿಎಫ್ಐ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಪಾಪುಲರ್ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ನಿಷೇಧಿಸಿ ಕೇಂದ್ರ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪಿಎಫ್ಐ ನಿಷೇಧ ಆದೇಶ ಪ್ರಶ್ನಿಸಿ ‌ಪಿಎಫ್ಐ ಮುಖಂಡ ನಾಸಿರ್ ಅಲಿ‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮಾಡಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ಇಂದು ಅರ್ಜಿಯನ್ನು ವಜಾಗೊಳಿಸಿದ್ದು, ಕೇಂದ್ರದ ತೀರ್ಪನ್ನು ಎತ್ತಿ ಹಿಡಿದಿದೆ. ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕ ಹೊಂದುವ ಮೂಲಕ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎನ್ನುವ ಆರೋಪದ ಮೇಲೆ ಪಾಪ್ಯುಲರ್‌

ಪಿಎಫ್ಐ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್ Read More »

ಶಬರಿಮಲೆಗೆ ಆಟೋ, ಸರಕು ವಾಹನಗಳಲ್ಲಿ ಪ್ರಯಾಣಿಸ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ…

ಸಮಗ್ರ ನ್ಯೂಸ್: ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಟೋ ರಿಕ್ಷಾ, ಸರಕು ಸಾಗಾಟ ವಾಹನಗಳಲ್ಲಿ ಪ್ರವಾಸ ನಡೆಸಲು ರಾಜ್ಯ ಮೋಟಾರು ವಾಹನ ಇಲಾಖೆ ನಿಷೇಧ ವಿಧಿಸಿದೆ. ಅಟೋ ಹಾಗೂ ಸರಕು ಸಾಗಾಟ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ನಿಯಮಗಳ ಅನುಸಾರ ಆಟೋ ರಿಕ್ಷಾಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯ 30 ಕಿ.ಮೀ ವ್ಯಾಪ್ತಿ ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ. ಇನ್ನು ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು

ಶಬರಿಮಲೆಗೆ ಆಟೋ, ಸರಕು ವಾಹನಗಳಲ್ಲಿ ಪ್ರಯಾಣಿಸ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ… Read More »

ಟೊಯೋಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಇನ್ನಿಲ್ಲ

ಸಮಗ್ರ ನ್ಯೂಸ್: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವೈಸ್ ಚೇರ್ಮನ್ ವಿಕ್ರಮ್ ಕಿರ್ಲೋಸ್ಕರ್(64) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಕ್ರಮ್ ಕಿರ್ಲೋಸ್ಕರ್ ಭಾರತದ ವಾಹನೋದ್ಯಮದ ದಿಗ್ಗಜರಲ್ಲಿ ಒಬ್ಬರು. ವಿಕ್ರಮ್ ಕಿರ್ಲೋಸ್ಕರ್ ಅವರು ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದ ಅವರು ಇಂದು ಉಸಿರುಚೆಲ್ಲಿದರು. ಟೊಯೊಟಾ ಇಂಡಿಯಾ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಗಳಲ್ಲಿ ನಿಧನದ ಸುದ್ದಿಯನ್ನು ದೃಢಪಡಿಸಿದೆ. ನವೆಂಬರ್ 29, 2022 ರಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ಶ್ರೀ ವಿಕ್ರಮ್ ಎಸ್.ಕಿರ್ಲೋಸ್ಕರ್ ಅವರ ಅಕಾಲಿಕ ನಿಧನವನ್ನು ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ.

ಟೊಯೋಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಇನ್ನಿಲ್ಲ Read More »

ನವಜಾತ ಶಿಶುವಿಗೆ 2 ಇಂಚು ಉದ್ದದ ಬಾಲ…!!

ಮೆಕ್ಸಿಕೊ: ನವಜಾತ ಶಿಶುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಸಿದ ಘಟನೆ ಮೆಕ್ಸಿಕೋ ಸಿಟಿಯಲ್ಲಿರುವ ನ್ಯೂವೋ ಲಿಯಾನ್​ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಜನಿಸಿದ ಹೆಣ್ಣು ಮಗುವೊಂದಕ್ಕೆ 2 ಇಂಚು ಉದ್ದದ ಬಾಲ ಇರುವುದು ಗೊತ್ತಾಗಿದ್ದು ಕೂಡಲೇ ಬಾಲವನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಬಾಲವು 5.7 ಸೆಂ.ಮೀಟರ್​ ಉದ್ದವಿದ್ದು, ಮೃದುವಾಗಿತ್ತು. ಕೂದಲನ್ನೂ ಹೊಂದಿತ್ತು. ಪ್ರಾಣಿಗಳಲ್ಲಿರುವಂತೆ ಮೇಲ್ಭಾಗದಲ್ಲಿ ದಪ್ಪವಿದ್ದು, ತುದಿಯ ಕಡೆಗೆ ಕಿರಿದಾಗಿ 3ಎಂಎಂ ಮತ್ತು 5 ಎಂಎಂ ನಡುವಿನ

ನವಜಾತ ಶಿಶುವಿಗೆ 2 ಇಂಚು ಉದ್ದದ ಬಾಲ…!! Read More »

ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ| ಕೆ.ಸಿ‌ ವೇಣುಗೋಪಾಲ್ ಜಖಂ

ಸಮಗ್ರ ನ್ಯೂಸ್: ಭಾರತ್ ಜೋಡೋ ಪಾದಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಕೆ.ಸಿ. ವೇಣುಗೋಪಾಲ್ ಅವರ ಮೊಣಕಾಲು, ಕೈಗಳಿಗೆ ಗಾಯಗಳಾಗಿದ್ದು, ಭಾರತ್ ಜೋಡೋ ಯಾತ್ರೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಜನರು ಮುನ್ನುಗ್ಗಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ನಡೆದಿದ್ದು, ಕಾಲ್ತುಳಿತ ಸಂಭವಿಸಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ| ಕೆ.ಸಿ‌ ವೇಣುಗೋಪಾಲ್ ಜಖಂ Read More »

ಚಪ್ಪಲಿ ಕಚ್ಚಿಕೊಂಡು ಹೋದ ಹಾವು| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಹಾವೊಂದು ಚಪ್ಪಲಿ ಕಚ್ಚಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದು, ಹಾವಿನ ಈ ಸಾಹಸ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ಹಾವು ಆ ಚಪ್ಪಲಿಯನ್ನು ಏನು ಮಾಡುತ್ತದೆ. ಅದಕ್ಕೆ ಕಾಲುಗಳಿಲ್ಲವಲ್ಲ ಎಂದು ಶೀರ್ಷಿಕೆಯಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾಯಿಯಲ್ಲಿ ಚಪ್ಪಲಿ‌ ಕಚ್ಚಿಕೊಂಡ ಹಾವು ವೇಗವಾಗಿ ಸರಿದು ಹೋಗುತ್ತದೆ. ಈ ವೀಡಿಯೊ ಬಿಹಾರದ್ದೆಂದು ಹಲವರು ಗಮನ ಸೆಳೆದಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಅನೇಕರು ರೋಚಕ‌ ಕಾಮೆಂಟ್ ಮಾಡಿದ್ದಾರೆ.

ಚಪ್ಪಲಿ ಕಚ್ಚಿಕೊಂಡು ಹೋದ ಹಾವು| ವಿಡಿಯೋ ವೈರಲ್ Read More »

ಪೇಟಿಎಂ ಜೊತೆಗೆ 10 ದೈತ್ಯ ಕಂಪೆನಿಗಳೂ ಹಳ್ಳಕ್ಕೆ!! ಷೇರು ಮಾರುಕಟ್ಟೆಯಲ್ಲಿ ಕೋಲಾಹಲ

ಸಮಗ್ರ ನ್ಯೂಸ್: ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಹಳಷ್ಟು ಕಂಪನಿಗಳು ನಷ್ಟ ತೋರಿಸಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ 4 ಸಾವಿರಕ್ಕೂ ಹೆಚ್ಚು ಕಂಪನಿಗಳ ಪೈಕಿ ಸುಮಾರು 1,100ಕ್ಕೂ ಹೆಚ್ಚು ಕಂಪನಿಗಳು ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ನಷ್ಟ ಕಂಡಿವೆ. ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಬರೋಬ್ಬರಿ 7,562.8 ಕೋಟಿ ರೂ ನಷ್ಟ ಹೊಂದಿರುವುದು ಅದರ ವರದಿಯಿಂದ ತಿಳಿದುಬರುತ್ತದೆ. ಈ ಕ್ವಾರ್ಟರ್‌ನಲ್ಲಿ ಅತಿಹೆಚ್ಚು ನಷ್ಟ ಹೊಂದಿದ ಕಂಪನಿ ಎಂಬ ಮುಜುಗರದ ದಾಖಲೆ ವೊಡಾಫೋನ್‌ಗೆ

ಪೇಟಿಎಂ ಜೊತೆಗೆ 10 ದೈತ್ಯ ಕಂಪೆನಿಗಳೂ ಹಳ್ಳಕ್ಕೆ!! ಷೇರು ಮಾರುಕಟ್ಟೆಯಲ್ಲಿ ಕೋಲಾಹಲ Read More »

ಮತ್ತೊಂದು ಕುಕ್ಕರ್ ಬಾಂಬ್; ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ

ಸಮಗ್ರ ನ್ಯೂಸ್: ಸೇನಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.ಶೋಪಿಯಾನ್ ನ ಇಮಾಮ್ ಸಾಹೇಬ್ ನಲ್ಲಿ ಐಇಡಿ ಕುಕ್ಕರ್ ಬಾಂಬ್ ಪತ್ತೆಯಾಗಿದೆ. ಕುಕ್ಕರ್ ಬಾಂಬ್ ಸ್ಪೋಟಗೊಂಡಿದ್ದರೆ ಬಾರಿ ಅನಾಹುತವೇ ಸಂಭವಿಸುತ್ತಿತ್ತು. ಸೇನಾ ಸಿಬ್ಬಂದಿ ಸಕಾಲಿಕ ಕ್ರಮದಿಂದ ಅನಾಹುತ ತಪ್ಪಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶುಕ್ರವಾರ ಶೋಪಿಯಾನ್ ಪೊಲೀಸ್ ಮತ್ತು ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ, ಶೋಪಿಯಾನ್‌ನ ಇಮಾಸಾಹಿಬ್‌ನಲ್ಲಿ ಕುಕ್ಕರ್‌ನಲ್ಲಿ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ)

ಮತ್ತೊಂದು ಕುಕ್ಕರ್ ಬಾಂಬ್; ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ Read More »

15 ವರ್ಷಕ್ಕಿಂತ ಹಳೆಯ ವಾಹನಗಳು ಗುಜುರಿಗೆ

ನಾಗಪುರ: 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ಗುಜರಿ ಹಾಕಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾಗಪುರದಲ್ಲಿ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಭಾರತ ಸರ್ಕಾರಕ್ಕೆ ಸೇರಿದ 15ಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಸ್ಕ್ರ್ಯಾಪ್ ನೀತಿಯನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದರು. ಕೇಂದ್ರಕ್ಕೆ ಸಂಬಂಧಿಸಿದ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕಡತವೊಂದಕ್ಕೆ ಈಗಾಗಲೇ ನಾನು ಸಹಿ ಹಾಕಿದ್ದೇನೆ. ರಾಜ್ಯಗಳು ಕೂಡಾ ಇದನ್ನು

15 ವರ್ಷಕ್ಕಿಂತ ಹಳೆಯ ವಾಹನಗಳು ಗುಜುರಿಗೆ Read More »