ರಾಷ್ಟ್ರೀಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ

ಸಮಗ್ರ ಸಮಾಚಾರ: ಮಧ್ಯಪ್ರದೇಶ ಚುನಾವಣೆಗೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನತೆಗೆ ಗುಡ್​ ನ್ಯೂಸ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ಶ್ರೀರಾಮನ ಉಚಿತ ದರ್ಶನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಹಂತ ಹಂತವಾಗಿ ಮಧ್ಯಪ್ರದೇಶದ ಜನರನ್ನು ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ. […]

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ Read More »

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿ ಸದ್ದುಗಳೇ ಕೇಳಿ ಬರುತ್ತವೆ. ಇದರ ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯವನ್ನು ತರುತ್ತದೆ. ಇದೇ ರೀತಿ ಎಲ್ಲೆಡೆ ಸಂಭ್ರಮಾಚರಣೆ ನಡೆದರೆ, ತಮಿಳುನಾಡಿನ ಈ 7 ಹಳ್ಳಿಗಳ ಜನರು ಮಾತ್ರ ‘ಮೌನ ದೀಪಾವಳಿ’ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಏಳು ಹಳ್ಳಿಗಳು ಕೇವಲ ದೀಪಗಳು ಹಚ್ಚುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ್ದಾರೆ. ಇಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲಾಗಿದೆ. ಕಾರಣ ಈ

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು Read More »

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ?

ಸಮಗ್ರ ನ್ಯೂಸ್: ದೇಶವೇ ದೀಪಗಳಿಂದ ಜಗಮಗಿಸುತ್ತಿದ್ದು, ಎಲ್ಲೆಡೆ ಬೆಳಕಿನ-ಸುಡುಮದ್ದುಗಳ ಸಡಗರ ಕಂಡುಬರುತ್ತಿದ್ದರೆ ಇಲ್ಲೊಂದು ಕಡೆ ಮಾತ್ರ ವರ್ಷಗಟ್ಟಲೆ ಕಾಲದಿಂದ ದೀಪಾವಳಿ ಹಬ್ಬ ಆಚರಣೆಯನ್ನೇ ಮಾಡಿಲ್ಲ. ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆ ಗ್ರಾಮವೇ ಇಂಥದ್ದೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿನ ಅಯ್ಯಂಗಾರ್ ಸಮುದಾಯ ಸುಮಾರು 230 ವರ್ಷಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿಲ್ಲ. ನರಕ ಚತುರ್ದಶಿಯ ವಾರ್ಷಿಕ ಹಬ್ಬ ಆಚರಿಸಲು 1790ರಲ್ಲಿ ಶ್ರೀರಂಗಪಟ್ಟಣದ ನರಸಿಂಹ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ 800 ಅಮಾಯಕ ನಿರಾಯುಧ ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸುಲ್ತಾನ್ ಹತ್ಯೆ ಮಾಡಿಸಿದ್ದನು.

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ? Read More »

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಅಯ್ಯನ್ ಆ್ಯಪ್/ ಕೇರಳ ಅರಣ್ಯ ಇಲಾಖೆಯಿಂದ ಅಭಿವೃದ್ಧಿ

ಸಮಗ್ರ ನ್ಯೂಸ್: ಕೇರಳ ಅರಣ್ಯ ಇಲಾಖೆಯು ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮಾರ್ಗದರ್ಶನ ನೀಡುವ ಸಲುವಾಗಿ ‘ಅಯ್ಯನ್’ ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಶಬರಿಮಲೆಗೆ ಬರುವ ಯಾತ್ರಿಕರು ಮುಂಬರುವ ಮಂಡಲ ಪೂಜೆ ಹಾಗೂ ಮಕರ ಸಂಕ್ರಾಂತಿ ಪೂಜೆ ಋತುವಿನಲ್ಲಿ ಈ ಆ್ಯಪ್ ಬಳಸಬಹುದಾಗಿದೆ. ಮಲಯಾಳಂ, ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳು ಹಾಗೂ ಹಿಂದಿಯಲ್ಲಿ ಮಾರ್ಗಸೂಚಿಗಳು ಮತ್ತು ಮಾಹಿತಿಯನ್ನು ನೀಡಲಿದೆ. ಪಂಪಾ – ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ಈ ಆ್ಯಪ್ ಮೂಲಕ

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಅಯ್ಯನ್ ಆ್ಯಪ್/ ಕೇರಳ ಅರಣ್ಯ ಇಲಾಖೆಯಿಂದ ಅಭಿವೃದ್ಧಿ Read More »

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ/ ಜನವರಿ 22ನ್ನು ಹಬ್ಬದಂತೆ ಆಚರಿಸಲು ಆರ್‍ಎಸ್‍ಎಸ್ ಕರೆ

ಸಮಗ್ರ ನ್ಯೂಸ್: 2024ರ ಜನವರಿ 22ರಂದು ಆಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದ್ದು, ಇದು ದೇಶದ ಜನರ ಪಾಲಿಗೆ ಸಂಭ್ರಮದ ಕ್ಷಣವಾಗಲಿದೆ. ಆದ್ದರಿಂದ ಈ ದಿನವನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದು ಆರ್‍ಎಸ್‍ಎಸ್ ದೇಶದ ಜನರಿಗೆ ಕರೆ ನೀಡಿದೆ. ಆಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಎಂಬುದು ನಮಗೊಂದು ಹಬ್ಬದ ಕ್ಷಣ. ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹತ್ತಿರದ ದೇವಸ್ಥಾನಗಳಿಗೆ ತೆರಳುವ ಮೂಲಕ ಸಂಭ್ರಮವನ್ನು ಆಚರಿಸಬೇಕು. ಆ ರಾತ್ರಿ ಎಲ್ಲರೂ ಮನೆಯಲ್ಲಿ ದೀಪ ಬೆಳಗಿಸಬೇಕು. ಇದು ದೇಶದ ಪ್ರತಿಯೊಬ್ಬ

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ/ ಜನವರಿ 22ನ್ನು ಹಬ್ಬದಂತೆ ಆಚರಿಸಲು ಆರ್‍ಎಸ್‍ಎಸ್ ಕರೆ Read More »

ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾತ್ರಿ ಬೃಹತ್ ದೀಪೋತ್ಸವ ನಡೆಯಲಿದ್ದು, 24 ಲಕ್ಷ ದೀಪಗಳಿಂದ ಸರಯೂ ನದಿ ತೀರ ಕಂಗೊಳಿಸಲಿದೆ. ಜಗತ್ತಿನಲ್ಲೇ ಪ್ರಥಮ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ರಾಮ ಜನ್ಮಭೂಮಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಅಯೋಧ್ಯೆಯ ಸರಯೂ ನದಿಯ ತೀರದ ಉದ್ದಕ್ಕೂ ದೀಪಗಳನ್ನು ಬೆಳಗಿಸಲಾಗುತ್ತದೆ. ರಾಮ್ ಮನೋಹರ್ ಲೋಹಿಯಾ ವಿಶ್ವವಿದ್ಯಾನಿಲಯವು ಈ ದೀಪೋತ್ಸವಕ್ಕೆ ಅದ್ಧೂರಿ ವ್ಯವಸ್ಥೆಯನ್ನು ಮಾಡಿದ್ದು, ಸರಯೂ ನದಿ ತೀರದ 51 ಘಾಟ್‍ಗಳಲ್ಲಿ 24 ಲಕ್ಷ ಮಣ್ಣಿನ

ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ Read More »

ಸಹಕಾರಿ ಸಂಘಗಳು ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI

ಸಮಗ್ರ ನ್ಯೂಸ್: ಸಹಕಾರಿ ಸಂಘಗಳು ಬ್ಯಾಂಕ್ ಹೆಸರನ್ನು ಬಳಸಬಾರದು ಎಂದು ಆರ್‌ಬಿಐ ಪತ್ರಿಕೆಯ ಜಾಹೀರಾತಿನ ಮೂಲಕ ಸ್ಪಷ್ಟಪಡಿಸಿದೆ. ಈ ಬಗ್ಗೆ ಜಾಹೀರಾತು ನೀಡಿರುವ ಆರ್‌ಬಿಐನ ಸಹಕಾರಿ ಸಂಘಗಳಲ್ಲಿನ ಹೂಡಿಕೆಗೆ ಯಾವುದೇ ರಕ್ಷಣೆ ಇಲ್ಲ ಎಂದು ಹೇಳುತ್ತದೆ. ಸಚಿವ ವಿ.ಎನ್.ವಾಸವನ್ ಮಾತನಾಡಿ, ಸಹಕಾರಿ ಸಂಘಗಳ ಹೆಸರನ್ನು ಬ್ಯಾಂಕ್ ಎಂದು ಬಳಸದಂತೆ ರಿಸರ್ವ್ ಬ್ಯಾಂಕ್ ಈ ಹಿಂದೆಯೇ ನಿರ್ದೇಶನ ನೀಡಿದೆ. ಹೊಸ ಅಧಿಸೂಚನೆಯನ್ನು ಸಹಕಾರ ಇಲಾಖೆ ಪರಿಶೀಲಿಸಲಿದೆ ಎಂದು ಸಚಿವರು ಹೇಳಿದರು. ಆರ್‌ಬಿಐ ವಿರುದ್ಧ ರಾಜ್ಯವೂ ನ್ಯಾಯಾಲಯದ ಮೊರೆ ಹೋಗಿತ್ತು.

ಸಹಕಾರಿ ಸಂಘಗಳು ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI Read More »

ಇಂದು ಟಿಪ್ಪು ಜಯಂತಿ/ ಶ್ರೀರಂಗಪಟ್ಟಣದಲ್ಲಿ ಬಿಗುಭದ್ರತೆ

ಸಮಗ್ರ ನ್ಯೂಸ್: ಸರಕಾರದಿಂದ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಣೆ ಇಲ್ಲದಿದ್ದರೂ, ಇಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ವಕ್ಫ್ ಎಸ್ಟೇಟ್‍ನಿಂದ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಭಾಗವಹಿಸುವ ನಿರೀಕ್ಷೆ ಇದೆ. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೋಮು ಸಂಘರ್ಷದ ಭೀತಿ ಎದುರಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದ್ದಾರೆ.

ಇಂದು ಟಿಪ್ಪು ಜಯಂತಿ/ ಶ್ರೀರಂಗಪಟ್ಟಣದಲ್ಲಿ ಬಿಗುಭದ್ರತೆ Read More »

ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ

ಸಮಗ್ರ ನ್ಯೂಸ್: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ತನ್ನ ಮೊದಲ ಸೌರ ಕಾರ್ಯಾಚರಣೆಗಾಗಿ ರವಾನಿಸಿದ್ದ ಆದಿತ್ಯ-L1 ಬಾಹ್ಯಾಕಾಶ ನೌಕೆಗೆ ಲಗತ್ತಿಸಲಾದ ಎಕ್ಸ್‌- ರೇ ಸ್ಪೆಕ್ಟ್ರೋಮೀಟರ್, ಹೆಚ್‌ಇಎಲ್‌1ಒಎಸ್‌ ಎಕ್ಸ್‌- ಕಿರಣದ ಮೂಲಕ ಉನ್ನತ ಶಕ್ತಿಯ ಸೌರ ಜ್ವಾಲೆಗಳ ಮೊದಲ ನೋಟವನ್ನು ಸೆರೆಹಿಡಿಯಿತು. ಇಸ್ರೋ ಮಂಗಳವಾರ (ನ.7) ಈ ಕುರಿತು ಅಪ್ಡೇಟ್ಸ್ ನೀಡಿದ್ದು, ಆದಿತ್ಯ-ಎಲ್ 1 ಬೋರ್ಡ್‌ನಲ್ಲಿರುವ ಸ್ಪೆಕ್ಟ್ರೋಮೀಟರ್ ಸುಮಾರು ಅಕ್ಟೋಬರ್ 29 ರಿಂದ ಅದರ ಮೊದಲ ವೀಕ್ಷಣಾ ಅವಧಿಯಲ್ಲಿ ಸೌರ ಜ್ವಾಲೆಗಳ ಹಠಾತ್ ಹಂತವನ್ನು ದಾಖಲಿಸಿದೆ ಎಂಬ

ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ Read More »

ದೆಹಲಿ ವಾಯುಮಾಲಿನ್ಯ/ ವಾಹನಗಳಿಗೆ ಬೆಸ-ಸಮ ನಿಯಮ, ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದೀಗ ದೆಹಲಿ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನವೆಂಬರ್ 13ರಿಂದ 20ರವರೆಗೆ ವಾಹನಗಳಿಗೆ ಬೆಸ-ಸಮ ನಿಯಮ ಜಾರಿಗೆ ಬರಲಿದ್ದು, 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಪಟಾಕಿಗಳನ್ನು ನಿಷೇಧ ಮಾಡುವುದು ಮತ್ತು ಸ್ಮಗ್ ಗನ್‍ಗಳನ್ನು ಅಳವಡಿಸುವುದು ಸೇರಿದಂತೆ ಹಲವು ಕ್ರಮಗಳ ಕುರಿತು

ದೆಹಲಿ ವಾಯುಮಾಲಿನ್ಯ/ ವಾಹನಗಳಿಗೆ ಬೆಸ-ಸಮ ನಿಯಮ, ಶಾಲೆಗಳಿಗೆ ರಜೆ Read More »