ರಾಷ್ಟ್ರೀಯ

ಬದುಕಿನ ಯಾತ್ರೆ ಮುಗಿಸಿದ ಗಾಯಕ‌ ಪಂಕಜ್ ಉದಾಸ್

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ನಿಧನರಾಗಿದ್ದಾರೆ. 72 ನೇ ವಯಸ್ಸಿನಲ್ಲಿ ಪಂಕಜ್ ಉದಾಸ್ ಕೊನೆಯುಸಿರೆಳೆದಿದ್ದಾರೆ. ಉಧಾಸ್ ಕುಟುಂಬದವರು ಟ್ವೀಟ್ ಮೂಲಕ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ. “ದೀರ್ಘಕಾಲದ ಅನಾರೋಗ್ಯದಿಂದಾಗಿ ಫೆಬ್ರವರಿ 26, 2024 ರಂದು ಪದ್ಮಶ್ರೀ ಪಂಕಜ್ ಉಧಾಸ್ ಅವರ ದುಃಖದ ನಿಧನದ ಬಗ್ಗೆ ತಿಳಿಸಲು ತುಂಬಾ ಭಾರವಾದ ಹೃದಯದಿಂದ ನಾವು ದುಃಖಿತರಾಗಿದ್ದೇವೆ” ಎಂದು ಅವರ ಕುಟುಂಬ ತಮ್ಮ ಟ್ವೀಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಂಕಜ್ ಅವರ ನಿಧನದಿಂದಾಗಿ ಭಾರತೀಯ […]

ಬದುಕಿನ ಯಾತ್ರೆ ಮುಗಿಸಿದ ಗಾಯಕ‌ ಪಂಕಜ್ ಉದಾಸ್ Read More »

ಜ್ಞಾನವಾಪಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ/ ಹಿಂದುಗಳಿಗೆ ಮತ್ತೆ ಜಯ

ಸಮಗ್ರ ನ್ಯೂಸ್: ಜ್ಞಾನವಾಪಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿದ ಆದೇಶ ಪ್ರಶ್ನಿಸಿ ಮಸೀದಿಯನ್ನು ನಿರ್ವಹಿಸುವ ಸಂಸ್ಥೆಯಾದ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಹಿಂದುಗಳಿಗೆ ಮತ್ತೆ ಜಯ ಸಿಕ್ಕಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರು ನೀಡಿದ್ದ ಆದೇಶದಂತೆ ಪೂಜೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿರುವ ಹೈಕೋರ್ಟ್, ಭಕ್ತರು ಪೂಜೆ ಸಲ್ಲಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಜೊತೆಗೆ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‍ಗೆ ಅರ್ಚಕರನ್ನು ನಾಮನಿರ್ದೇಶನ

ಜ್ಞಾನವಾಪಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ/ ಹಿಂದುಗಳಿಗೆ ಮತ್ತೆ ಜಯ Read More »

ರೈಲು ನಿಲ್ದಾಣಗಳ ಪುನರಾಭಿವೃದ್ಧಿ/ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ

ಸಮಗ್ರ ನ್ಯೂಸ್: ಅಮೃತ ಭಾರತ ಯೋಜನೆಯಡಿಯಲ್ಲಿ ಕರ್ನಾಟಕದ 11 ನಿಲ್ದಾಣಗಳೂ ಒಳಗೊಂಡಂತೆ ದೇಶದ 553 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ರೈಲು ನಿಲ್ದಾಣಗಳ ಬಳಿ ಸಿಟಿ ಸೆಂಟರ್ ಹಾಗೂ ರೂಫ್‍ಟಾಪ್ ಪ್ಲಾಜಾಗಳನ್ನು ನಿರ್ಮಿಸುವ ಮೂಲಕ ನಿಲ್ದಾಣಗಳನ್ನು ಉನ್ನತವಾಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಕರ್ನಾಟಕದ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೃಷ್ಣರಾಜಪುರಂ, ವೈಟ್‍ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ, ಮಲ್ಲೇಶ್ವರಂ ಮತ್ತು ತುಮಕೂರು ರೈಲು ನಿಲ್ದಾಣಗಳು ಈ

ರೈಲು ನಿಲ್ದಾಣಗಳ ಪುನರಾಭಿವೃದ್ಧಿ/ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ Read More »

ಕೃಷ್ಣನ ದ್ವಾರಕೆಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹಾರಿದ ನಮೋ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದ ಎರಡನೇ ದಿನದಲ್ಲಿದ್ದಾರೆ. ಇಂದು ಅಲ್ಲಿಂದ ಸ್ಕೂಬಾ ಡೈವಿಂಗ್ ಮೂಲಕ ದ್ವಾರಕೆಗೆ ತೆರಳಿದ್ದಾರೆ. ಕೃಷ್ಣನ ದ್ವಾರಕೆ ಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹಾರಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶ್ರೀಕೃಷ್ಣ ದ್ವಾರಕೆಯ ರಾಜನಾಗಿದ್ದ, ಇಲ್ಲಿನ ಇತಿಹಾಸ ತಿಳಿದು ಅವರು ದ್ವಾರಕಾದಲ್ಲಿ ಸುದರ್ಶನ ಸೇತುವನ್ನು ಉದ್ಘಾಟಿಸಿದರು, ಇದು ದೇಶದ ಅತಿ ಉದ್ದದ ಕೇಬಲ್ ಬೆಂಬಲಿತ ಸೇತುವೆಯಾಗಿದೆ. 6 ವರ್ಷಗಳ ಹಿಂದೆ ಈ ಸೇತುವೆಯ ಶಂಕುಸ್ಥಾಪನೆ ಮಾಡಲು ನನಗೆ ಅವಕಾಶ ಸಿಕ್ಕಿತ್ತು ಎಂದು

ಕೃಷ್ಣನ ದ್ವಾರಕೆಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹಾರಿದ ನಮೋ Read More »

ಗುಜರಾತ್‍ನ ಅತೀ ಉದ್ದದ ಸುದರ್ಶನ್ ಕೇಬಲ್ ಸೇತುವೆ ಉದ್ಘಾಟಿಸಿದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಗುಜರಾತ್‍ನ ಅತಿ ಉದ್ದದ ಸುದರ್ಶನ್ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ 2.5 ಕಿಮೀ ಉದ್ದದ ಸೇತುವೆಯು ಭಾರತದಲ್ಲಿಯೇ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಸುದರ್ಶನ್ ಸೇತು ಸೇತುವೆಯನ್ನು ಓಖಾ-ಬೆಟ್ ದ್ವಾರಕಾ ಸಿಗ್ರೇಚರ್ ಸೇತುವೆ ಎಂದೂ ಕರೆಯಲಾಗುತ್ತದ್ದು, ಸುಮಾರು 980 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ದ್ವಾರಕಾದೀಶ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಈ ಸೇತುವೆ ಬಹಳ ಮುಖ್ಯ. ಈ ಅವಧಿಯಲ್ಲಿ ಪ್ರಧಾನಿಯವರು

ಗುಜರಾತ್‍ನ ಅತೀ ಉದ್ದದ ಸುದರ್ಶನ್ ಕೇಬಲ್ ಸೇತುವೆ ಉದ್ಘಾಟಿಸಿದ ಮೋದಿ Read More »

ಅನಪೇಕ್ಷಿತ ಕರೆಗಳ ಹಾವಳಿ/ ಕೇಂದ್ರದಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆ ಜಾರಿಗೆ

ಸಮಗ್ರ ನ್ಯೂಸ್: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು, ಅನಪೇಕ್ಷಿತ (ಸ್ಪ್ಯಾಮ್) ಕರೆಗಳ ಹಾವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಅಪರಿಚಿತರು ಕರೆ ಮಾಡಿದಾಗ ಅವರ ಹೆಸರು ಮೊಬೈಲ್ ಸ್ಕ್ರೀನ್‍ಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗಾಗಲೇ ಖಾಸಗಿಯಾಗಿ ಟ್ರೂ ಕಾಲರ್‍ನಂತಹುಗಳು ಇಂತಹ ಸೇವೆಯನ್ನು ಒದಗಿಸುತ್ತಿವೆ. ಕಾಲಿಂಗ್ ನೇಮ್ ಪ್ರೆಸೆಂಟೇಷನ್ (ಕರೆ ಮಾಡುವವರ ಹೆಸರು ಪ್ರಸ್ತುತಿ) ಎಂಬ ಸೌಲಭ್ಯ ಇದಾಗಿದೆ. ದೇಶದ ಎಲ್ಲ ಮೊಬೈಲ್ ನೆಟ್‍ವರ್ಕ್‍ಗಳಲ್ಲೂ ಇದನ್ನು ಜಾರಿಗೆ ತರಲು ಟ್ರಾಯ್ ಸಲಹೆ ಮಾಡಿದೆ.

ಅನಪೇಕ್ಷಿತ ಕರೆಗಳ ಹಾವಳಿ/ ಕೇಂದ್ರದಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆ ಜಾರಿಗೆ Read More »

ಕಾಸ್‌ಗಂಜ್‌ನಲ್ಲಿ ಭೀಕರ ಅಪಘಾತ|ಟ್ರ್ಯಾಕ್ಟರ್ ಟ್ರಾಲಿಯಲ್ಲಿದ್ದ 22 ಜನ ದುರ್ಮರಣ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಅತಿವೇಗದ ಟ್ರ್ಯಾಕ್ಟರ್ ಟ್ರಾಲಿಯು ನಿಯಂತ್ರಣ ಕಳೆದುಕೊಂಡು ಕೊಳಕ್ಕೆ ಉರುಳಿ ಬಿದ್ದು ಏಳು ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ. ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಭಕ್ತರನ್ನು ಕದರಗಂಜ್ ಘಾಟ್‌ಗೆ ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಈ ಘಟನೆಯು ಪಟಿಯಾಲಿ ಕೊಟ್ವಾಲಿ ಪ್ರದೇಶದ ದರಿಯಾವ್‌ಗಂಜ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ನಮಗೆ

ಕಾಸ್‌ಗಂಜ್‌ನಲ್ಲಿ ಭೀಕರ ಅಪಘಾತ|ಟ್ರ್ಯಾಕ್ಟರ್ ಟ್ರಾಲಿಯಲ್ಲಿದ್ದ 22 ಜನ ದುರ್ಮರಣ Read More »

ಮಳೆ ಬರಬಹುದು, ಬೇಗ ಮನೆ ಸೇರಿಕೊಳ್ಳಿ! ಇಲ್ಲಿದೆ ವೆದರ್ ಅಪ್ಡೇಟ್

ಸಮಗ್ರ ನ್ಯೂಸ್: ಇಂದು ದೇಶದ ಹಲವು ರಾಜ್ಯಗಳಲ್ಲಿ ಮಳೆ ಮತ್ತು ಆಲಿಕಲ್ಲು ಬೀಳಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮುಂದಿನ ಒಂದು ವಾರ ಹವಾಮಾನ ವೈಪರೀತ್ಯದ ಪ್ರಭಾವ ಕಾಣಿಸಿಕೊಳ್ಳಲಿದೆ. ಹವಾಮಾನ ಇಲಾಖೆ ಪ್ರಕಾರ, ಫೆಬ್ರವರಿ 26 ಮತ್ತು 27 ರಂದು ಮಧ್ಯ ಭಾರತ ಮತ್ತು ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಚಟುವಟಿಕೆಗಳು ಕಂಡುಬರುತ್ತವೆ. ಅಲ್ಲದೆ, ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ,

ಮಳೆ ಬರಬಹುದು, ಬೇಗ ಮನೆ ಸೇರಿಕೊಳ್ಳಿ! ಇಲ್ಲಿದೆ ವೆದರ್ ಅಪ್ಡೇಟ್ Read More »

ಕಾಂಗ್ರೆಸ್ ಗ್ಯಾರಂಟಿ/ 27ಕ್ಕೆ ತೆಲಂಗಾಣದಲ್ಲಿ ಎರಡು ಗ್ಯಾರಂಟಿ ಜಾರಿ

ಸಮಗ್ರ ನ್ಯೂಸ್: ತೆಲಂಗಾಣ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಗ್ಯಾರಂಟಿಗಳ ಪೈಕಿ ಎರಡನ್ನು ಫೆ.27ರ ಶುಕ್ರವಾರ ಜಾರಿಗೊಳಿಸಲಿದೆ. 500 ರು.ಗೆ ಅಡುಗೆ ಅನಿಲ ಹಾಗೂ 200 ಯುನಿಟ್ ಉಚಿತ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದ್ದು, ಇದರ ಉದ್ಘಾಟನೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬರಲಿದ್ದಾರೆ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ. ಈಗಾಗಲೇ ಕರ್ನಾಟಕದ ರೀತಿ ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡಲಾಗಿದೆ.

ಕಾಂಗ್ರೆಸ್ ಗ್ಯಾರಂಟಿ/ 27ಕ್ಕೆ ತೆಲಂಗಾಣದಲ್ಲಿ ಎರಡು ಗ್ಯಾರಂಟಿ ಜಾರಿ Read More »

ಇಸ್ರೋದ 2ನೇ ಸ್ಪೇಸ್‍ಪೋರ್ಟ್/ ಫೆ.28ರಂದು ಪ್ರಧಾನಿ ಮೋದಿಯಿಂದ ಶಿಲಾನ್ಯಾಸ

ಸಮಗ್ರ ನ್ಯೂಸ್: ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 2ನೇ ಸ್ಪೇಸ್‍ಪೋರ್ಟನ್ನು ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಣ್ಣಗಾತ್ರದ ಉಪಗ್ರಹ ಉಡಾವಣಾ ವಾಹಕಗಳನ್ನು ಉಡಾವಣೆ ಮಾಡುವುದಕ್ಕಾಗಿ ಈ ಹೊಸ ಸ್ಪೇಸ್‍ಪೋರ್ಟನ್ನು ಬಳಕೆ ಮಾಡಲಾಗುತ್ತದ್ದು, ಇದು ಮುಂದಿನ 2 ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಮತ್ತು ಸಥಾನುಕುಲಂ ತಾಲೂಕುಗಳ ಪಡುಕಪಟ್ಟು, ಪಲ್ಲಕುರಿಚಿ ಮತ್ತು ಮಾತವಾನ್ ಕುರಿಚಿ ಗ್ರಾಮಗಳಿಗೆ ಸೇರಿದ 2,233

ಇಸ್ರೋದ 2ನೇ ಸ್ಪೇಸ್‍ಪೋರ್ಟ್/ ಫೆ.28ರಂದು ಪ್ರಧಾನಿ ಮೋದಿಯಿಂದ ಶಿಲಾನ್ಯಾಸ Read More »