ಬರೋಬ್ಬರಿ 9 ತಿಂಗಳ ಬಳಿಕ ಭೂಮಿಯತ್ತ ಬುಚ್ ವಿಲ್ಮೋರ್ ಮತ್ತು ಸುನೀತಾ| ಮಾ.19ರಂದು ಭೂಮಿಯಲ್ಲಿ ಲ್ಯಾಂಡ್ ಆಗಲಿದೆ ನೌಕೆ
ಸಮಗ್ರ ನ್ಯೂಸ್: ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಒಂಬತ್ತು ತಿಂಗಳ ಬಳಿಕ ಭೂಮಿಗೆ ಮರಳಲಿದ್ದು, ಇಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ. ತಾಂತ್ರಿಕ ಅಡಚಣೆಗಳಿಂದಾಗಿ ಸುಮಾರು ಒಂಬತ್ತು ತಿಂಗಳುಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿರುವ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದ್ದು, ಇಂದು ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ. ಸ್ಪೇಸ್ ಎಕ್ಸ್ ಕ್ರೂ – 10 ಮಿಷನ್ ಈಗಾಗಲೇ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಸುನಿತಾ, […]