ಅನುಭವ

ವಿಫಲವಾಗಿದ್ಯಾಕೆ ಇಲಾಖೆ ಮುನಿಸಿಕೊಳ್ಳುವನೇ ಕಾರ್ಯಕರ್ತ..!

ಅದೊಂದು ಘಟನೆ ಹಿಂದೂ ಕಾರ್ಯಕರ್ತರೆಲ್ಲ ತಡ ರಾತ್ರಿ ರಸ್ತೆಯಲ್ಲಿ ಧರಣಿ ಕೂರುವಂತೆ ಮಾಡಿತ್ತು. ಬಿಜೆಪಿ ರಾಜ್ಯಧ್ಯಕ್ಷರ ಕಾರನ್ನು ಮಾತ್ರವಲ್ಲ ಇಡೀ ರಾಜ್ಯವನ್ನೆ ಅಲುಗಾಡಿಸಿತು. ರಣ ಭೀಕರತೆಯ ವಿಷಯ ತಿಳಿಯುತ್ತಿದ್ದಂತೆ ಸಿಎಂ ಟ್ವೀಟ್ ಮಾಡಿ ಅಗಲಿದ ಕಾರ್ಯಕರ್ತನಿಗೆ ಸಂತಾಪ ಸೂಚಿಸುವಷ್ಟರ ಮಟ್ಟಕ್ಕೆ ಪ್ರಚಾರ ಪಡೆದಿತ್ತು. ದೆಹಲಿಯಲ್ಲಿದ್ದ ಶಾಸಕರು ರಾತೋ ರಾತ್ರಿ ಸ್ವ ಕ್ಷೇತ್ರದತ್ತ ಹೊರಟ ಬರುವಂತೆ ಮಾಡಿದ್ದಲ್ಲದೆ. ಘಟನೆ ನಡೆದು ಕೆಲವೆ ಗಂಟೆಗಳಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿದ ಕಾರಣ ಗಲ್ಲಿ ಗಲ್ಲಿಗಳಲ್ಲಿ ಪೋಲಿಸರು ಜಮಾಯಿಸಿದರೂ. ರಾತ್ರಿ ಕಳೆದು […]

ವಿಫಲವಾಗಿದ್ಯಾಕೆ ಇಲಾಖೆ ಮುನಿಸಿಕೊಳ್ಳುವನೇ ಕಾರ್ಯಕರ್ತ..! Read More »

ಸ್ವತಂತ್ರ ‌ಪತ್ರಿಕೋದ್ಯಮದ ಒಂದನೇ ವರ್ಷ; ನೂರಾರು ಹರ್ಷ

ಸಮಗ್ರ ನ್ಯೂಸ್: ಮಾಧ್ಯಮ ಅಥವಾ ಸಮೂಹ ಮಾಧ್ಯಮಗಳೆಂದು ಬಂದಾಗ ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಎನಿಸಿಕೊಂಡ ಇವುಗಳಿಗೆ ಸೆಡ್ಡು ಹೊಡೆದು ಮಾಹಿತಿಯನ್ನು, ಮನೋರಂಜನೆಯನ್ನು, ದೃಶ್ಯ, ಸುದ್ದಿ ಎಲ್ಲವನ್ನೂ ಕ್ಷಣಮಾತ್ರದಲ್ಲಿ ತಲುಪಿಸಬಲ್ಲ ಮತ್ತೊಂದು ನವಮಾದ್ಯಮ ಎಂದರೆ ಡಿಜಿಟಲ್ ಪತ್ರಿಕೋದ್ಯಮ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು “ನಾಲ್ಕನೇ ಅಂಗ” ಎಂದೂ ಕರೆಯುತ್ತಾರೆ. ಈ ನಾಲ್ಕನೇ ಅಂಗಕ್ಕೆ ಹೊಸದಾಗಿ ಸೇರ್ಪಡೆಯಾದ ಡಿಜಿಟಲ್

ಸ್ವತಂತ್ರ ‌ಪತ್ರಿಕೋದ್ಯಮದ ಒಂದನೇ ವರ್ಷ; ನೂರಾರು ಹರ್ಷ Read More »

ನೀವು ಹೊಡೆದಾಡಿ ಸಾಯುವ ಮತೀಯ ಸಮಸ್ಯೆಗಳು ನಿಮ್ಮ ನಾಯಕರಿಗೇಕಿಲ್ಲ?

ಸಮಗ್ರ ವಿಶೇಷ: ಹಿಂದೂ ಮುಸ್ಲಿಂ ಯುವ ಮಿತ್ರರೇ,ನಾನು ಇತ್ತೀಚೆಗೆ ಕೋಮು ಗಲಭೆಯಾದರೆ, ಯಾರದರೂ ಸತ್ತರೆ ತೀರಾ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ಕಡಿಮೆ ಮಾಡಿದ್ದೇನೆ. ಯಾಕೆಂದರೆ ಇವತ್ತು ಕೆಲವರು ಹೇಳುವುದನ್ನು ನಾನು ೩೦ ವರ್ಷಗಳ ಹಿಂದೆ ಎಕಾಂಗಿಯಾಗಿ ಬೊಬ್ಬೆ ಹೊಡೆದು ಹೇಳಿದ್ದೆ. ಆಗ ಯಾರೂ ಕೂಡಾ ಅದನ್ನ ಕೇಳಿಸಿಕೊಳ್ಳಲಿಲ್ಲ. ಈಗ ಹೆಚ್ಚು ಜನರಿಗೆ ಅರ್ಥವಾದಂತಿದೆ. ಬಡವರ ಮನೆಯ ಮಕ್ಕಳಿಗೆ ಮಾತ್ರ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಯಾಕೆ. ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಇರುವ ಯಾರಿಗೂ ಸಮಸ್ಯೆಗಳಾಗದ್ದು ಈ

ನೀವು ಹೊಡೆದಾಡಿ ಸಾಯುವ ಮತೀಯ ಸಮಸ್ಯೆಗಳು ನಿಮ್ಮ ನಾಯಕರಿಗೇಕಿಲ್ಲ? Read More »

ಪಕ್ಷ ಅಧಿಕಾರದಲ್ಲಿದ್ದರೂ ಹಿಂದೂ ಕಗ್ಗೊಲೆಗಳು ನಡೆಯುತ್ತಿವೆ

ಸಮಗ್ರ ವಿಶೇಷ: ಭಾನುವಾರ ರಾತ್ರಿವರೆಗೂ ಶಿವಮೊಗ್ಗ ತಣ್ಣಗಾಗಿದ್ದ ಮಲೆನಾಡು ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ಹಚ್ಚಹಸಿರಿನ ಮಲೆನಾಡಿನಲ್ಲಿ ಕೆಂಪು ರಕ್ತ ಚೆಲ್ಲಿದೆ. ಹಿಂದೂ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಶಿವಮೊಗ್ಗದ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಉಸಿರು ಚೆಲ್ಲಿದ್ದಾನೆ. ಇದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸೀಗೆ ಹಳ್ಳಿಯಲ್ಲಿ ನಡೆದ ಭೀಕರ ಘಟನೆ. ಭಜರಂಗ ದಳ ಕಾರ್ಯಕರ್ತ ಹರ್ಷ ಎಂಬಾತನನ್ನು ರಾತ್ರಿ 9 ಗಂಟೆಗೆ ಶಿವಮೊಗ್ಗದ ರಸ್ತೆ ಬದಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಇರಿದು ಕೊಲೆ ಮಾಡಿ ಎಸ್ಕೇಪ್

ಪಕ್ಷ ಅಧಿಕಾರದಲ್ಲಿದ್ದರೂ ಹಿಂದೂ ಕಗ್ಗೊಲೆಗಳು ನಡೆಯುತ್ತಿವೆ Read More »

ಪಶ್ಚಿಮ ಘಟ್ಟಕ್ಕೂ ಬರಲಿ ಗರ್ಭಗುಡಿಯ ನೀತಿ| ‘ವೈದ್ಯರೇ ಬೇಡ, ಮನೆಮದ್ದು ಸಾಕೆಂಬ ನೀತಿ ಏಕೆ?’

ಪಶ್ಚಿಮ ಘಟ್ಟಗಳೆಂದರೆ ಆ ಘಟ್ಟ ಪ್ರದೇಶದ ನಿವಾಸಿಗಳ ಆಸ್ತಿ ಅಷ್ಟೇ ಅಲ್ಲ. ಅದು ರಾಜ್ಯದ ಆಸ್ತಿ, ದೇಶದ ಆಸ್ತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅದು ಜಾಗತಿಕ ಆಸ್ತಿ. ಕಳೆದ 350 ಕೋಟಿ ವರ್ಷಗಳಿಂದ ನಿಸರ್ಗದ ಐದೂ ಶಕ್ತಿಗಳು ಒಂದಾಗಿ ಕಡೆದು ನಿಲ್ಲಿಸಿದ ಅಪರೂಪದ ಜೀವಶಿಲ್ಪ ಅದು. ಈಚಿನ ವರ್ಷಗಳಲ್ಲಿ ಆ ಶಿಲ್ಪವನ್ನು ವಿರೂಪಗೊಳಿಸುವ ಕ್ರಿಯೆಯಲ್ಲಿ ಇಡೀ ಜಗತ್ತಿನ ಯಂತ್ರಬಲವೇ ಟೊಂಕಕಟ್ಟಿ ನಿಂತಂತಿದೆ. ಅಲ್ಲಿ ಮರ ಕಡಿಯಲು ಜರ್ಮನ್‌ ಇಲೆಕ್ಟ್ರಿಕ್‌ ಗರಗಸಗಳು ಬಂದಿವೆ. ಜಪಾನೀ ಹಿಟಾಚಿ ಯಂತ್ರಗಳು ಗುಡ್ಡಗಳನ್ನು

ಪಶ್ಚಿಮ ಘಟ್ಟಕ್ಕೂ ಬರಲಿ ಗರ್ಭಗುಡಿಯ ನೀತಿ| ‘ವೈದ್ಯರೇ ಬೇಡ, ಮನೆಮದ್ದು ಸಾಕೆಂಬ ನೀತಿ ಏಕೆ?’ Read More »

ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಅದರಾಚೆಗೂ…

ಅಪ್ಪ ಎಂಬ ದೈವತ್ವದ ಸಾಕಾರ ಮೂರ್ತಿಯನ್ನು ಹಿಡಿಯಷ್ಟಾದರೂ ಅರ್ಥಮಾಡಿಕೊಳ್ಳಬೇಕೆಂಬ ಪ್ರಯತ್ನಗಳೆಲ್ಲ ಲೆಕ್ಕವಿಲ್ಲದಷ್ಟು ಬಾರಿ ವಿಫಲವಾಗಿದೆ. ಆಗೆಲ್ಲ ಈ ಅಪ್ಪ ಎಂಬ ವ್ಯಕ್ತಿತ್ವದ ಗಹನತೆ ನಮ್ಮ ವಿವೇಚನಕ್ಕೆ ದಕ್ಕುವಂಥದಲ್ಲ ಎಂದು ಸುಮ್ಮನಾಗಿದ್ದೆ. ಆದ್ರೆ ಅಪ್ಪನ ಮಹತ್ವ ಗೊತ್ತಾಗಿದ್ದು ನಾ ಅಪ್ಪನಾದಾಗ. ತನ್ನ ಮಗುವಿನ ಬಾಯಲ್ಲಿ ‘ಪಪ್ಪಾ’ ಎಂದು ಕರೆಸಿಕೊಂಡಾಗ…. ಅಪ್ಪ ಅಂದ್ರೆ ಯಾರು? ನಮ್ಮ ಬದುಕಿನಲ್ಲಿ ಅಪ್ಪತನದ ಪಾತ್ರವೇನು ಎಂಬುದನ್ನು ಯೋಚಿಸುವುದಕ್ಕೆ ಮತ್ತೊಮ್ಮೆ ಸಮಯಬಂದಿದೆ.ಅದೇನೋ ಗೊತ್ತಿಲ್ಲ, ಈ ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದುಬಿಟ್ಟಿದ್ದಾನೆ!

ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಅದರಾಚೆಗೂ… Read More »

ಒಲವಿನ ಸೂಜಿಯ‌ ಚುಚ್ಚಿದಳೇ‌? ಹಾಳಾದ ಹೃದಯ ತಟ್ಟಿದಳೇ?

ಬೆಂಗಳೂರು: ಸದ್ಯ ಕೊರೊನಾ ತಡೆಗೆ ಎಲ್ಲೆಡೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಅದರಂತೆ ದೇಶದ ಜನ ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ವ್ಯಾಕ್ಸಿನ್ ಗೆ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ವ್ಯಾಕ್ಸಿನ್ ಹಾಕಿಸಿಕೊಂಡವರ ಫೋಟೊವೊಂದು ವೈರಲ್ ಆಗಿದ್ದು, ತರಹೇವಾರಿ ಕವನಗಳು ಮೂಡಿ ಬರ್ತಾ ಇವೆ. ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಹುಡುಗ ಇಂಜೆಕ್ಷನ್ ಚುಚ್ಚುತ್ತಿರುವ ನರ್ಸನ್ನೇ ನೋಡುತ್ತಿದ್ದಾನೆ. ಯಾವ ಸೋಷಿಯಲ್ ಮೀಡಿಯಾದಲ್ಲೇ ನೋಡಿದ್ರು ಈ ಫೋಟೊ ಹರಿದಾಡ್ತಾ ಇದೆ. ಆ ಫೋಟೊ ಮೇಲೆ ಕವನಗಳ ಸುರಿಮಳೆಯೇ ಸುರಿಯುತ್ತಿದೆ. ಅದರಲ್ಲೂ ಎಷ್ಡರ ಮಟ್ಟಿಗೆ ವೈರಲ್

ಒಲವಿನ ಸೂಜಿಯ‌ ಚುಚ್ಚಿದಳೇ‌? ಹಾಳಾದ ಹೃದಯ ತಟ್ಟಿದಳೇ? Read More »

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು

ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿನಿಂದ ಕಲಿಯುವುದು ಬೇಕಾದಷ್ಟಿದೆ. ಮನುಷ್ಯರಾದ ನಾವು ಚಿಕ್ಕ ಕಷ್ಟ ಬಂದಾಗಲೂ ಆತ್ಮಹತ್ಯೆ ಮಾಡಲು ಬಯಸುವ ಈ ಸಂದರ್ಭದಲ್ಲಿ ಈ ಮೀನು ಬದುಕಲು ಸ್ಫ್ಪೂರ್ತಿ ನೀಡುತ್ತದೆ.ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಏಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ. ಅದನ್ನು ಬರೆಯುತ್ತಾ ಹೋದರೆ

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು Read More »

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ

ನೀವೇನಾದ್ರೂ ಚಾರಣ ಪ್ರೀಯರಾದ್ರೆ ಈ ತಾಣಕ್ಕೊಮ್ಮೆ ಭೇಟಿ‌ ನೀಡ್ಲೇ ಬೇಕು. ಭಾರತದಲ್ಲಿ ಅತೀ ಕಷ್ಟಕರವಾದ ಹಾಗೆಯೇ ಅತ್ಯಂತ ಮನಸ್ಸಿಗೆ ಮುದ ನೀಡುವ ಕೆಲವೇ ಕೆಲವು ಚಾರಣ ತಾಣಗಳ ಪೈಕಿ ಚಾರಣಿಗರ ಸ್ವರ್ಗ ಅಂತನೇ ಕರೆಸಿಕೊಳ್ಳುವ ಪುಷ್ಪಗಿರಿ ಕುಮಾರ ಪರ್ವತ ಶ್ರೇಣಿ ನಿಜಕ್ಕೂ ಅಧ್ಬುತ ಮತ್ತು ಅಷ್ಟೇ ರೋಮಾಂಚಕಾರಿ ಅನುಭವ ನೀಡುವ ಪ್ರಕೃತಿಯ ಸೃಷ್ಟಿ. ದಕ್ಷಿಣ ಕನ್ನಡ ಮತ್ತು‌ ಕೊಡಗು ಜಿಲ್ಲೆಗಳ ನಡುವೆ.ಸಮುದ್ರ ಮಟ್ಟದಿಂದ 1712 ಮೀಟರ್‌ ಎತ್ತರದಲ್ಲಿರುವ ಪುಷ್ಪಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದು. ಈ ಶಿಖರಕ್ಕೆ

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ Read More »

ಚಿಕ್ಕ ಪಯಣವಾದರೂ ಅನುಭವವಂತೂ ಹಿರಿದಾಗಿತ್ತು

ಒಂದು‌ ಟೀಂ‌ ರೆಡಿ ಮಾಡಿ ಅದನ್ನು ಒಗ್ಗೂಡಿಸಿ‌ ಹೋಗುವುದು‌ ಸುಲಭದ ಮಾತಲ್ಲ. ‌ಅದಕ್ಕಾಗಿ‌ ಹಲವು ದಿನದ ಪ್ರಯತ್ನ ಎಡೆಬಿಡದೇ ಸಾಗಿತ್ತು. ಕೆಲಸದ ಬ್ಯುಸಿ‌ ಶೆಡ್ಯೂಲ್ ನಲ್ಲೂ ಅವರಿಗೊಮ್ಮೆ, ಇವರಿಗೊಮ್ಮೆ ಕಾಲ್ ಮಾಡಿ, ಮೆಸೇಜ್ ಮಾಡಿ ಕೆಲವೊಮ್ಮೆ ಬೈದು 27 ಜನರನ್ನು ಒಟ್ಟು‌ ಸೇರಿಸಿ ಕಾಫಿ ನಾಡು‌ ಚಿಕ್ಕಮಗಳೂರಿಗೆ ಕರೆತರುವಲ್ಲಿ ನಮ್ ಹವ್ಯ ಮೇಡಂ ಹಾಗೂ ಅವರಿಗೆ ಸಹವರ್ತಿಯಾಗಿ ನಿಂತ ಸೌಮ್ಯ ಮೇಡಂಗೆ ಥ್ಯಾಂಕ್ಸ್ ಹೇಳಲೇಬೇಕು. ಗಂಡ್ ಹೈಕಳನ್ನು ಮೀರಿಸಿ‌ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಅಂತ ತೋರಿಸಿಕೊಟ್ರು.ಹಿಂದಿನ ವರ್ಷದ

ಚಿಕ್ಕ ಪಯಣವಾದರೂ ಅನುಭವವಂತೂ ಹಿರಿದಾಗಿತ್ತು Read More »