ಕ್ರೈಂ

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು?

ಚಿಕ್ಕಮಗಳೂರು.: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವೈದ್ಯರನ್ನು ನೋಡಿಯೂ ನೋಡದಂತೆ ತೆರಳಿದ್ದ ಬಿಜೆಪಿ ಶಾಸಕರೋರ್ವರ ನಡೆಯಿಂದಾಗಿ ವೈದ್ಯ ಕೊನೆಯುಸಿರೆಳೆದ ಘಟನೆ ಇಲ್ಲಿನ ಲಕ್ಕವಳ್ಳಿ ಎಂಬಲ್ಲಿ ನಡೆದಿದೆ.ಮಧ್ಯಾಹ್ನ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಎಂಬವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮದ್ಯೆ ಅವರ ವಾಹನ ಅಪಘಾತಕ್ಕೆ ಈಡಾಗಿದೆ. ಅಪಘಾತದ ರಭಸಕ್ಕೆ ವೈದ್ಯ ರಮೇಶ್ ರಸ್ತೆಗುರುಳಿದ್ದು, ಅದೇ ವೇಳೆಗೆ ಸ್ಥಳೀಯ ಶಾಸಕ ಡಿ.ಎಸ್. ಸುರೇಶ್ ಕಾರಲ್ಲಿ ಆಗಮಿಸಿದ್ದು, ವೈದ್ಯರ ಸ್ಥಿತಿ ನೋಡಿಯೂ ನೋಡದಂತೆ ತೆರಳಿದ್ದರು. […]

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು? Read More »

ಕೈಯಲ್ಲಿ ಕಾಸಿಲ್ದೇ ಇದ್ರೂ ಈ ಚೆಕ್ ಪೋಸ್ಟ್ ನಲ್ಲಿ ಮಾಮೂಲಿ ಕೊಡ್ಲೇ ಬೇಕು | ಸಂಪಾಜೆ ಅರಣ್ಯಾಧಿಕಾರಿಯ ಹಗಲು ದರೋಡೆ ಇಲ್ಲಿದೆ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ

ಮಂಗಳೂರು. ಮೇ.27: ಕೊರೊನಾ ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕಾಸಿಲ್ದೇ ಜನ ಪರದಾಡ್ತಿದಾರೆ. ಅದರಲ್ಲೂ ದೂರದೂರಿಗೆ ಸರಕು ಸರಂಜಾಮು ಸಾಗಿಸುವ ಲಾರಿ ಚಾಲಕರಂತೂ ಒಂದೊಂದು ಪೈಸೆಗೂ ಕಷ್ಟ ಪಡ್ತಾ ಇದ್ದು, ಹೊಟೇಲುಗಳು, ಡಾಬಾಗಳು‌ ಮುಚ್ಚಿರುವಾಗ ಹೆಚ್ಚು ಹಣ ಕೊಟ್ಟು, ಹೊಟೇಲುಗಳಿಂದ‌ ಪಾರ್ಸೆಲ್ ತಗೊಂಡು ಉಣ್ಣಬೇಕು. ಆದ್ರೆ ನಮ್ಮ ಕೆಲವು ಅಧಿಕಾರಿವರ್ಗದವ್ರಿಗೆ ಜನಸಾಮಾನ್ಯರ ಕಷ್ಟಕೋಟಲೆ ಗೊತ್ತಾಗ್ತಾನೆ ಇಲ್ಲ. ಇದಕ್ಕೊಂದು ತಾಜಾ ಉದಾಹರಣೆ ದ.ಕ ಮತ್ತು ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಪಾಜೆ‌ ಚೆಕ್ ಫೋಸ್ಟ್

ಕೈಯಲ್ಲಿ ಕಾಸಿಲ್ದೇ ಇದ್ರೂ ಈ ಚೆಕ್ ಪೋಸ್ಟ್ ನಲ್ಲಿ ಮಾಮೂಲಿ ಕೊಡ್ಲೇ ಬೇಕು | ಸಂಪಾಜೆ ಅರಣ್ಯಾಧಿಕಾರಿಯ ಹಗಲು ದರೋಡೆ ಇಲ್ಲಿದೆ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ Read More »

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ

ಸುಳ್ಯ: ಅತ್ತೆ ಮತ್ತು ಸೊಸೆಯ ಜಗಳ ಮಾವಿನ ಹಣ್ಣಿನಿಂದ ಶುರುವಾಗಿ ಕೊನೆಗೆ ಸೊಸೆ ಅತ್ತೆಯ ಮುಖಕ್ಕೆ ಮೆಣಸಿನ ಹುಡಿ ನೀರಿನಲ್ಲಿ ಬೆರೆಸಿ ಮುಖಕ್ಕೆ ಎರಚಿದ ಘಟನೆ ಸುಳ್ಯ, ಪೈಚಾರಿನಲ್ಲಿ ನಡೆದಿದೆ.ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಕೃತ್ಯ ಎಸಗಿದ ಆರೋಪಿ. ಇವರು ಇಸ್ಮಾಯಿಲ್ ರವರ ತಾಯಿ ಮೇಲೆ ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಎರಚಿದ್ದಾರೆ. ಇಸ್ಮಾಯಿಲ್ ಮತ್ತು ಅಬ್ದುಲ್ ರವರು ಸಹೋದರರಾಗಿದ್ದು ಪೈಚಾರಿನಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ ಇವರ ತಾಯಿ ಅಬ್ದುಲ್ ರವರ ಮನೆಯಲ್ಲಿ ವಾಸಿಸುತ್ತಿದ್ದರು.ಈ ಸಹೋದರರ

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ Read More »

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು?

ಮಂಗಳೂರು.:ಮೇ 25: ಮಾಸ್ಕ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆಗೈದ ಘಟನೆ ನಗರ ಹೊರವಲಯದ ಮಲ್ಲೂರಿನಲ್ಲಿ ನಡೆದಿದೆ. ಉಳಾಯಿಬೆಟ್ಟು ಗ್ರಾಮ ಪಂಚಾಯತಿ ಪಿಡಿಓ ರಾಜೇಂದ್ರ ಶೆಟ್ಟಿ ಹಲ್ಲೆಗೆ ಒಳಗಾದವರು. ಮಲ್ಲೂರು ಬಳಿಯ ಬದ್ರಿಯಾನಗರದ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕುವಂತೆ ಅಧಿಕಾರಿ ಸೂಚಿಸಿದ್ದರು. ಆದರೆ ಅಧಿಕಾರಿಯ ಮಾತು ಕೇಳದೇ ಅದೇ ಯುವಕರು ಬಳಿಕ ಮಲ್ಲೂರು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಸೇರಿದ್ದರು. ಪಂಚಾಯತ್ ಕಚೇರಿ ಆವರಣದಲ್ಲಿ ಮಾಸ್ಕ್ ಹಾಕದೆ ಗುಂಪು

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು? Read More »

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್!

ಮಡಿಕೇರಿ: ಪುಟ್ಟ ಬಾಲಕಿಯೊಬ್ಬಳು ಕೋವಿಡ್ ನಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದು ಆಸ್ಪತ್ರೆಯಲ್ಲಿ ಕಳೆದುಹೋಗಿರುವ ನನ್ನ ತಾಯಿಯ ನೆನಪುಗಳು ಇರುವ ಮೊಬೈಲ್‌ ಪೋನ್‌‌‌ ಅನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ಇದು ವೈರಲ್ ಆಗಿದ್ದು, ಎಲ್ಲರ ಮನ ಮಿಡಿದಿತ್ತು. ಇದೀಗ ಕೊರೊನಾ ಕೇಂದ್ರದಿಂದ ಮೊಬೈಲ್ ಎಗರಿಸುತ್ತಿದ್ದಂತ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮಡಿಕೇರಿಯ ಕೊರೋನಾ ಆಸ್ಪತ್ರೆಯಲ್ಲಿ ಅನೇಕರ ಮೊಬೈಲ್ ಕಳ್ಳತನವಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಾಗಿದ್ದವು. ಅದರಲ್ಲಿಯೂ

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್! Read More »

ಅಕ್ರಮ ಮದ್ಯ ಮಾರಾಟ | ಓರ್ವನ ಬಂಧನ

ಹೆಬ್ರಿ: ಹೆಬ್ರಿಯಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮೇ. 26 ರಂದು ನಡೆದಿದೆ. ಪೊಲೀಸರು ವಶಕ್ಕೆ ಪಡೆದ ಆರೋಪಿ ‌ಉಪೇಂದ್ರ ನಾಯಕ್ (48) ಎಂಬವರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೆಬ್ರಿ ಠಾಣಾ ಪೊಲೀಸರು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಕಾಳಾಯಿ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ಬಳಿ ಇದ್ದ ಸುಮಾರು 1300 ರೂ. ಮೌಲ್ಯದ ಮದ್ಯ ತುಂಬಿರುವ

ಅಕ್ರಮ ಮದ್ಯ ಮಾರಾಟ | ಓರ್ವನ ಬಂಧನ Read More »

ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ನಡೆದ ಸಂಬಂಧಿಕರ ನಡುವಿನ ಘರ್ಷಣೆಯು ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ಗ್ರಾಮದ ಮಲ್ಲೇಶ್ ಹಾಗೂ ಸ್ವಾಮಿಗೌಡ ಎಂಬವರ ನಡುವೆ ಜಮೀನು ವಿಚಾರವಾಗಿ ಹಿಂದೆಯೂ ಗಲಾಟೆ ನಡೆಯುತ್ತಿತ್ತು. ನಿನ್ನೆ ಮಧ್ಯಾಹ್ನ ಮತ್ತೆ ಜಮೀನಿನ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಹರಿತವಾದ ಆಯುಧದಿಂದ ಇರಿದ ಪರಿಣಾಮ ಮಲ್ಲೇಶ ( 60 ), ಮಲ್ಲೇಶನ ಚಿಕ್ಕಪ್ಪನ ಮಗ ಮಂಜೇಶ ( 35 ), ಮಲ್ಲೇಶನ ಅಳಿಯ ರವಿ ( 35 )

ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ Read More »

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್

ಮೂಡಿಗೆರೆ: ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಧೂಳೆಬ್ಬಿಸಿರುವ ಮೂಡಿಗೆರೆಯಲ್ಲಿ ಪಿಎಸ್ ಐ, ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಿಎಸ್ಎ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ದೂರು ನೀಡಿದ್ದ ಯುವಕನ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಕಿರುಗುಂದ ವಿವಾಹಿತ ಮಹಿಳೆಯೋರ್ವರ ದೂರಿನ ಆಧಾರದ ಮೇಲೆ ಬಂಧಿತನಾಗಿದ್ದ ಅದೇ ಗ್ರಾಮದ ದಲಿತ ಯುವಕ ಪುನೀತ್, ಗೋಣಿಬೀಡು ಪಿಎಸ್ಐ ವಿಚಾರಣೆ ವೇಳೆ ನನಗೆ  ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ.

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್ Read More »

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್

ತೆಲಂಗಾಣ: ಅಸಾದ್ಯ ರೀತಿಯಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ತಪ್ಪಿಸುವ ಸಾಹಸ ಮಾಡಲು ಹೋಗಿ ಹಿಂಬದಿ ಸವಾರನ ಸಾವಿಗೆ ಬೈಕ್ ಸವಾರನೇ ಕಾರಣನಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಂಚೇರಿಯಲ್ ಜಿಲ್ಲೆಯ ತಪುರ್ ಚೆಕ್ ಪೋಸ್ಟ್ ನಲ್ಲಿ ಘಟನೆಯು ಮೇ 22 ರ ಮಧ್ಯಾಹ್ನ 12.53 ರ ವೇಳೆಗೆ ನಡೆದಿದ್ದು , ಘಟನೆಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಸೆರೆಯಾಗಿರುವ ವೀಡಿಯೋದಲ್ಲಿ ಯುವಕರಿಬ್ಬರು ಅತಿ ವೇಗವಾಗಿ ಬಂದಿದ್ದು, ಈ ಸಂದರ್ಭ ಚೆಕ್ ಪೋಸ್ಟ್

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್ Read More »

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು

ಕಡಬ: ಕಬ್ಬಿಣದ ಸಲಾಕೆ ಸಹಾಯದಿಂದ ಮರದಿಂದ ತೆಂಗಿನಕಾಯಿ ಕೇಳುತ್ತಿದ್ದಾಗ ಸಲಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಡಬೆಟ್ಟು ಎಂಬಲ್ಲಿ ನಡೆದಿದೆ. ಕುಟ್ರುಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ 35 ವರ್ಷದ ಲಿಜು ಮೃತಪಟ್ಟ ದುರ್ದೈವಿ. ಲಿಜು ತನ್ನ ಮನೆಯಲ್ಲಿ ಇಂದು ಬೆಳಿಗ್ಗೆ  ತೆಂಗಿನಕಾಯಿ ಕೀಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು Read More »