ಭೀಕರ ರಸ್ತೆ ಅಪಘಾತ-ಸ್ಕೂಟರ್ ಸವಾರ ಸಾವು
ಮಂಗಳೂರು: ಭೀಕರ ರಸ್ತೆ ಅಪಘಾತವೊಂದರಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಂತೂರು ಸಮೀಪದ ಬಿಕರ್ನಕಟ್ಟೆ ಸಮೀಪ ಇಂದು ರಾತ್ರಿ ಸಂಭವಿಸಿದೆ. ಉಳಾಯಿಬೆಟ್ಟು ನಿವಾಸಿ ದಯಾನಂದ ಮೃತ ದುರ್ದೈವಿಯಾಗಿದ್ದಾರೆ. ಬಿಕರ್ನಕಟ್ಟೆ ಸಮೀಪ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದಿದ್ದಾರೆ. ಇದರಿಂದಾಗಿ ಸ್ಕೂಟರ್ ಸವಾರನ ದೇಹ ಛಿದ್ರವಾಗಿದೆ. ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಭೀಕರ ರಸ್ತೆ ಅಪಘಾತ-ಸ್ಕೂಟರ್ ಸವಾರ ಸಾವು Read More »