ಕ್ರೈಂ

ಮೂರು ತಿಂಗಳ ಹಸುಳೆ ಮೇಲೆ ಎರಗಿದ ಅಪ್ರಾಪ್ತ ವಿಕೃತಕಾಮಿ

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಅಪ್ರಾಪ್ತನೊಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಸುಳೆಯ ತಾಯಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ವೇಳೆ ಈತ ಹೀಗೆ ಮಾಡಿದ್ದಾನೆ. ಎಮ್ಮೆಗಳನ್ನು ಕಟ್ಟಿ ಮರಳಿದ ತಾಯಿ ಅಳುತ್ತಿದ್ದ ತನ್ನ ಮಗುವನ್ನು ಅಪ್ರಾಪ್ತ ಸಮಾಧಾನ ಮಾಡುತ್ತಿರುವುದನ್ನು ಕಂಡಿದ್ದಾರೆ. ಈ ವೇಳೆ ಮಗುವಿನ ಖಾಸಗಿ ಅಂಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಮಗುವಿನ ತಾಯಿಗೆ ಅಲ್ಲಿ ಏನಾಗಿದೆ ಎಂಬುದು ಅರಿವಿಗೆ ಬಂದಿದೆ. […]

ಮೂರು ತಿಂಗಳ ಹಸುಳೆ ಮೇಲೆ ಎರಗಿದ ಅಪ್ರಾಪ್ತ ವಿಕೃತಕಾಮಿ Read More »

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ (63) ಹೃದಯಘಾತದಿಂದಾಗಿ ನಿಧನರಾಗಿದ್ದಾರೆ. ವಿಜಯ್ ಕುಮಾರ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ರಾತ್ರಿ 9: 30 ರ ಸುಮಾರಿಗೆ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ವಿಜಯ್​​ಕುಮಾರ್ ಅವರು ಸಿಂಹಾದ್ರಿಯ ಸಿಂಹ, ಲಯನ್ ಜಗಪತಿ ರಾವ್, ಮೌನಗೀತೆ, ಜಗದೇಕ ವೀರ, ಸ್ವಚ್ಛ ಭಾರತ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ,

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ Read More »

ಕಬಕ: ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್ ಡಿ‌ಪಿಐ ಕಾರ್ಯಕರ್ತರು| ಸಾವರ್ಕರ್- ಟಿಪ್ಪು ಹೆಸರಿನಲ್ಲಿ ತಗಾದೆ…!

ಪುತ್ತೂರು : ಸ್ವಾತಂತ್ರ್ಯ ರಥದಲ್ಲಿ ವೀರ ಸಾವರ್ಕರ್ ಫೋಟೊದ ಬದಲು ಟಿಪ್ಪು ಸುಲ್ತಾನ್ ಫೋಟೊ ಅಳವಡಿಸುವಂತೆ ಆಗ್ರಹಿಸಿ ಎಸ್ ಡಿಪಿಐ ಸಂಘಟನೆಯ ಕಾರ್ಯಕರ್ತರ ತಂಡ ರಥಕ್ಕೆ ತಡೆಒಡ್ಡಿದ ಘಟನೆ ಆ.15ರಂದು ಪುತ್ತೂರಿನ ಹೊರವಲಯ ಕಬಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬಳಿಕ ಪುತ್ತೂರು ನಗರ ಠಾಣೆ ಪೊಲೀಸರ ಸಕಾಲಿಕ ಕ್ರಮದಿಂದ ಸಂಭಾವ್ಯ ಸಂಘರ್ಷ ತಪ್ಪಿದೆ. ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದ ದಿನ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ಎಸ್ ಡಿ.ಪಿ.ಐ ಕಾರ್ಯರ್ತರು ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ತಡೆ

ಕಬಕ: ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್ ಡಿ‌ಪಿಐ ಕಾರ್ಯಕರ್ತರು| ಸಾವರ್ಕರ್- ಟಿಪ್ಪು ಹೆಸರಿನಲ್ಲಿ ತಗಾದೆ…! Read More »

ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವು

ಹಾವೇರಿ : ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. 55 ವರ್ಷದ ಕಮಲಮ್ಮ ಕಾಸಂಬಿ ಮೃತರಾಗಿದ್ದಾರೆ. ಇವರು ಮಗನೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಸಾರಿಗೆ ಬಸ್ ಬಂದಿದೆ. ಆ ವೇಳೆ ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಆಗ ಕಮಲಮ್ಮಳ ತಲೆಯ ಮೇಲೆ ಬಸ್ ಹರಿದು ಹೋಗಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್ ಕಮಲಮ್ಮಳ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ಸಂಬಂಧ

ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವು Read More »

ತಾತನ ಹೆಣವನ್ನು ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಯಾಕೆ ಗೊತ್ತ?

ಹೈದರಾಬಾದ್: ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ತಮ್ಮ 93 ವರ್ಷದ ತಾತನ ದೇಹವನ್ನು ಫ್ರಿಡ್ಜ್ ಒಳಗೆ ಅಡವಿಟ್ಟಿರುವ ಘಟನೆ ನಡೆದಿದೆ. ನಿಖಿಲ್(23) ಎಂಬಾತ ತಾತ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೆ ಈ ಕೃತ್ಯ ಎಸಗಿದವನು. ದುರ್ವಾಸನೆ ಕುರಿತಂತೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ವಾರಂಗಲ್‍ನ ಪರ್ಕಳದಲ್ಲಿರುವ ಮನೆಯನ್ನು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ರೆಫ್ರಿಜರೇಟರ್ ಒಳಗೆ ಕೊಳೆತ ದೇಹವೊಂದು ಪತ್ತೆಯಾಗಿದೆ. ನಿವೃತ್ತ ವ್ಯಕ್ತಿ ಹಾಗೂ ಆತನ ಮೊಮ್ಮಗ ನಿಖಿಲ್ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದು, ವೃದ್ಧನಿಗೆ ಬರುವ

ತಾತನ ಹೆಣವನ್ನು ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಯಾಕೆ ಗೊತ್ತ? Read More »

ಪುತ್ತೂರು|ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ| ಇಬ್ಬರ ಬಂಧನ

ಪುತ್ತೂರು: ಇಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ‌ ತೆರೆದಿದ್ದು, ಅದರಲ್ಲಿ ಗೋಮಾಂಸ ಶೇಖರಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆ.12ರಂದು ಪುತ್ತೂರು ನಗರದ ಸಾಲ್ಮರದ‌‌ ಸಮೀಪ ಈ ಘಟನೆ ‌ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾಲ್ಮರದಲ್ಲಿರುವ ಮೌಂಟೇನ್ ವ್ಯೂ ಶಾಲೆಗೆ ಸಮೀಪದಲ್ಲೇ ಇರುವ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದು, ಅದರಲ್ಲಿ ಗೋಮಾಂಸವನ್ನು ಶೇಖರಿಸಿಡಲಾಗಿದೆ ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪುತ್ತೂರಿನ ಪೋಲಿಸರು ದಾಳಿ

ಪುತ್ತೂರು|ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ| ಇಬ್ಬರ ಬಂಧನ Read More »

ಬಂಟ್ವಾಳ : ಸ್ಕೂಟರ್ ಲಾರಿ ಅಪಘಾತ – ಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ: ಸ್ಕೂಟರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪದ ಬೊಳ್ಳುಕಲ್ಲು ಸಮೀಪ ಇಂದು ಸಂಭವಿಸಿದೆ. ಕನ್ಯಾನ ಪರಕಜೆ ನಿವಾಸಿ ಮಂಜು ಬೆಳ್ಚಡ ಎಂಬವರ ಪುತ್ರ ಗಣೇಶ್ ಬಂಗೇರ (54) ಮೃತ ಸ್ಕೂಟರ್ ಸವಾರ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ವೇಳೆ ಬುಡೋಳಿ ಸಮೀಪ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ

ಬಂಟ್ವಾಳ : ಸ್ಕೂಟರ್ ಲಾರಿ ಅಪಘಾತ – ಸವಾರ ಸ್ಥಳದಲ್ಲೇ ಸಾವು Read More »

ಪುತ್ತೂರು: ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೆಸರಿನಲ್ಲಿ ನಕಲಿ ಪೇಸ್ಬುಕ್ ಖಾತೆ ತೆರೆದು ವಂಚನೆಗೆ ಯತ್ನ

ಪುತ್ತೂರು: ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಕೆ ಬಂದಿದೆ. ಹಿಂದೂ ಸಂಘಟನೆಗಳ ಮುಂದಾಳು, ಖ್ಯಾತ ವೈದ್ಯ ಡಾ.ಎಂ.ಕೆ.ಪ್ರಸಾದ್ ಮತ್ತು ಅವರ ಪತ್ನಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಭಾವಚಿತ್ರವನ್ನು ಪ್ರೊಫೈಲ್ ಹಾಕಿರುವ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ. ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಿದವರಲ್ಲಿ ಹಣದ ಬೇಡಿಕೆ ಇಟ್ಟು ತುರ್ತಾಗಿ ಗೂಗಲ್ ಪೇ ಮಾಡುವಂತೆ ಕೇಳಲಾಗಿದೆ. ಇದೆ ರೀತಿ

ಪುತ್ತೂರು: ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೆಸರಿನಲ್ಲಿ ನಕಲಿ ಪೇಸ್ಬುಕ್ ಖಾತೆ ತೆರೆದು ವಂಚನೆಗೆ ಯತ್ನ Read More »

ತಲೆ ಮೇಲೆ ಕಲ್ಲು ಹಾಕಿ ಯುವಕನ ಕೊಲೆ|

ಹಾಸನ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ಸಮೀಪದಲ್ಲಿ ನಡೆದಿದೆ. ಅರಸೀಕೆರೆ ನಿವಾಸಿ ನವಾಜ್(೨೭) ಕೊಲೆಯಾದ ದುರ್ದೈವಿ. ದುಷ್ಕರ್ಮಿಗಳು ನಿನ್ನೆ ತಡರಾತ್ರಿ ನವಾಜ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆಯ ಹಿಂದಿನ ಕಾರಣ ಈವರೆಗೂ ತಿಳಿದು ಬಂದಿಲ್ಲ ಎನ್ನಲಾಗಿದೆ.

ತಲೆ ಮೇಲೆ ಕಲ್ಲು ಹಾಕಿ ಯುವಕನ ಕೊಲೆ| Read More »

ಚಿಕ್ಕಪ್ಪನಿಂದಲೇ ಅತ್ಯಾಚಾರ| ದೂರು‌ ದಾಖಲು

ಮೂಡುಬಿದಿರೆ, ಆ.10: ಬಾಲಕಿಯ ಅತ್ಯಾಚಾರವೆಸಗಿದ ಆರೋಪದಡಿ ಆಕೆಯ ಚಿಕ್ಕಪ್ಪನನ್ನು ಪೊಕ್ಸೊ ಕಾಯ್ದೆಯಡಿ ಮೂಡುಬಿದಿರೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಕುಮಾರ್ (30) ಎಂದು ಗುರುತಿಸಲಾಗಿದೆ. ಬಾಲಕಿ ಸೋಮವಾರ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ್ದು ಆಗ ಜೊತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿದ್ದಾಳೆ. ಈ ವೇಳೆ ಆರೋಪಿ ತನ್ನ ಅಣ್ಣನ ಮಗಳನ್ನೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಚಿಕ್ಕಪ್ಪನಿಂದಲೇ ಅತ್ಯಾಚಾರ| ದೂರು‌ ದಾಖಲು Read More »