ಕ್ರೈಂ

ಲಾಕ್ಡೌನ್ ಇಫೆಕ್ಟ್| ಏಳು ತಿಂಗಳ ಗರ್ಭವತಿಯಾದ ಅಪ್ರಾಪ್ತೆ| ಇಬ್ಬರ ವಿರುದ್ದ ಫೋಕ್ಸೋ ದಾಖಲು|

ಬೆಳ್ತಂಗಡಿ: ಹತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಇಬ್ಬರು ಕಾಮುಕರು ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ.ಶಾಲಾ ತರಗತಿಗಳು ಪ್ರಾರಂಭವಾಗಿದ್ದು, ಇತ್ತೀಚೆಗೆ ಶಾಲೆಗೆ ಇಂಜೆಕ್ಷನ್ ನೀಡಲೆಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಕುರಿತು ಹುಡುಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಮನೆ ಸಮೀಪದಲ್ಲಿ ಜೆಸಿಬಿ ಕಾಮಗಾರಿ ನಡೆಸುತ್ತಿದ್ದ […]

ಲಾಕ್ಡೌನ್ ಇಫೆಕ್ಟ್| ಏಳು ತಿಂಗಳ ಗರ್ಭವತಿಯಾದ ಅಪ್ರಾಪ್ತೆ| ಇಬ್ಬರ ವಿರುದ್ದ ಫೋಕ್ಸೋ ದಾಖಲು| Read More »

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ| ಡೆತ್ ನೋಟ್ ಬರೆದಿಟ್ಟು ಜೀವ ಕಳೆದುಕೊಂಡಿದ್ಯಾಕೆ..?

ಬೆಂಗಳೂರು: ಕಿರುತೆರೆಯ ಖ್ಯಾತ ನಟಿ ಸೌಜನ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆಯಲ್ಲಿ ನಡೆದಿದೆ. ದೊಡ್ಡಬೆಲೆ ಬಳಿಯ ಅಪಾರ್ಟ್ ಮೆಂಟ್ ನ ತಮ್ಮ ನಿವಾಸದಲ್ಲೇ ಸೌಜನ್ಯ (25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೌಜನ್ಯ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಸೌಜನ್ಯ ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾಗಿದ್ದು, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಚೌಕಟ್ಟು ಹಾಗೂ ಫನ್ ಚಿತ್ರದಲ್ಲಿ ಕೂಡ ಸೌಜನ್ಯ ಅಭಿನಯಿಸಿದ್ದಾರೆ. ಬೆಂಗಳೂರಿನ ದೊಡ್ಡಬೆಲೆ ಬಳಿ

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ| ಡೆತ್ ನೋಟ್ ಬರೆದಿಟ್ಟು ಜೀವ ಕಳೆದುಕೊಂಡಿದ್ಯಾಕೆ..? Read More »

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು

ಉಪ್ಪಿನಂಗಡಿ: ಮಹಿಳೆಯೊಬ್ಬರು ತಪ್ಪಾಗಿ ನೀರಿನ ಬದಲು ಪೆಟ್ರೋಲ್‌ ಕುಡಿದು ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿದ್ದ ಈಕೆ ಪೆರ್ನೆಯ ಸಂಪದಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದಾಗ ಅಲ್ಲಿ ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಮನೆಯಲ್ಲಿ ಬಾಟಲಿಯಲ್ಲಿ ತಂದಿರಿಸಿದ ಪೆಟ್ರೋಲನ್ನು ತಿಳಿಯದೇ ಕುಡಿದಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್‌

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು Read More »

ಅನ್ಯಮತೀಯನ ಮನೆಯಲ್ಲಿ ಹಿಂದೂ ಯುವತಿ…!, ಯುವಕ ಪೊಲೀಸ್ ವಶ

ಪುತ್ತೂರು: ಅನ್ಯಮತೀಯ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಸೆ.29 ರಂದು ನಡೆದಿದೆ. ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿಯೊಬ್ಬಳು ತಂಗಿದ್ದಾಳೆ ಎನ್ನುವ ಬಗ್ಗೆ ಮಾಹಿತಿ ದೊರೆತ ಸ್ಥಳೀಯರು ಮನೆ ಬಳಿ ತೆರಳಿ ನೋಡಿದಾಗ ಅಲ್ಲಿ ಯುವತಿ ಇರುವ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದಂತೆ ಯುವಕನ ಮನೆಗೆ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.

ಅನ್ಯಮತೀಯನ ಮನೆಯಲ್ಲಿ ಹಿಂದೂ ಯುವತಿ…!, ಯುವಕ ಪೊಲೀಸ್ ವಶ Read More »

ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಖಾಯಂ| ಹಲವು ಮಹಿಳೆಯರ ಬಾಳಲ್ಲಿ ಆಟವಾಡಿದ್ದವನ ಶಿಕ್ಷೆ ಮಾರ್ಪಾಡು ಅರ್ಜಿ ತಿರಸ್ಕರಿಸಿದ ಹೈಕೋರ್ಟ್|

ಬೆಂಗಳೂರು: ವಿಕೃತಕಾಮಿ ಉಮೇಶ್ ರೆಡ್ಡಿಗೆ ಸೆಷನ್ಸ್​ ಕೋರ್ಟ್​ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಹೈಕೋರ್ಟ್​​​ಗೆ ಉಮೇಶ್ ರೆಡ್ಡಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. 10 ವರ್ಷಗಳಿಂದ ಒಂಟಿಯಾಗಿಯೇ ಸೆರೆಯಲ್ಲಿಡಲಾಗಿದೆ. ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬಿಸಲಾಗಿದ್ದು, ಇದರಿಂದ ಮಾನಸಿಕ ಯಾತನೆ ಅನುಭವಿಸಿದ್ದೇನೆ ಎಂದು ಉಮೇಶ್ ರೆಡ್ಡಿ ವಕೀಲರ ಮೂಲಕ ವಾದ ಮಂಡಿಸಿದ್ದನು. ಕ್ಷಮಾದಾನ ಅರ್ಜಿ ವಿಳಂಬ ವಾದ ತಳ್ಳಿ ಹಾಕಿದ ಕೋರ್ಟ್​ ಆದರೆ ಕೋರ್ಟ್ ಉಮೇಶ್ ರೆಡ್ಡಿಯ

ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಖಾಯಂ| ಹಲವು ಮಹಿಳೆಯರ ಬಾಳಲ್ಲಿ ಆಟವಾಡಿದ್ದವನ ಶಿಕ್ಷೆ ಮಾರ್ಪಾಡು ಅರ್ಜಿ ತಿರಸ್ಕರಿಸಿದ ಹೈಕೋರ್ಟ್| Read More »

ಪುತ್ತೂರು:ವಿದ್ಯಾರ್ಥಿನಿಯ ಮೈಮುಟ್ಟಿದ ಅಪ್ರಾಪ್ತ ಯುವಕ| ಆರೋಪಿಯ ಸೆರೆಗೈದ‌ ಪೊಲೀಸರು|

ಪುತ್ತೂರು : ಯುವಕನೊಬ್ಬ ಪುತ್ತೂರು ನಗರದ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿ ಮೈಮುಟ್ಟಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಆರೋಪಿತನನ್ನು ಬಂಧಿಸಿದ ಘಟನೆ ಸೆ.29 ರಂದು ನಡೆದಿದೆ. ಪುತ್ತೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದಾನೆಂದು ಯುವತಿ ಆರೋಪಿದ್ದಾಳೆ. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಕಣ್ಣೀರಿಡುತ್ತಾ ಕೂತಿದ್ದಾಗ ಇತರ ವಿದ್ಯಾರ್ಥಿಗಳು ಆಕೆಯಲ್ಲಿ ಈ ಬಗ್ಗೆ ವಿಚಾರಿಸಿದ್ದು ಆಕೆ ಕಿರುಕುಳ ನೀಡಿರುವ ಬಗ್ಗೆ ತಿಳಿಸಿದ್ದಾಳೆ.

ಪುತ್ತೂರು:ವಿದ್ಯಾರ್ಥಿನಿಯ ಮೈಮುಟ್ಟಿದ ಅಪ್ರಾಪ್ತ ಯುವಕ| ಆರೋಪಿಯ ಸೆರೆಗೈದ‌ ಪೊಲೀಸರು| Read More »

ಮನೆ ಅಳಿಯನೇ ಇಲ್ಲಿ ವಿಲನ್| ಹಿಂದಿನ ರಾತ್ರಿ ಅತ್ತೆ ಮನೆಗೆ ಬಂದವನು ಮಾಡಿದ್ದೇನು?

ರಾಯಚೂರು: 6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ಸೇರಿ ಮೂವರನ್ನು ಮನೆ ಅಳಿಯನೇ ಬರ್ಬರವಾಘಿ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್​ನಲ್ಲಿ ಸಂಭವಿಸಿದೆ. ವೈಷ್ಣವಿ(25) ಮತ್ತು ಇವರ ಸಹೋದರಿ ಆರತಿ(16), ತಾಯಿ ಸಂತೋಪಿ(45) ಕೊಲೆಯಾದ ದುರ್ದೈವಿಗಳು. 6 ತಿಂಗಳ ಹಿಂದೆ ಸಾಯಿ ಎಂಬ ಯುವಕನೊಂದಿಗೆ ವೈಷ್ಣವಿ ಮದುವೆ ಆಗಿತ್ತು. ಸೆ.28ರ ರಾತ್ರಿ ಅತ್ತೆ ಸಂತೋಪಿಯ ಮನೆಗೆ ಬಂದ ಅಳಿಯ ಸಾಯಿ, ತನ್ನ ಪತ್ನಿ, ಅತ್ತೆ, ನಾದಿನಿಯನ್ನು ಕೊಂದು ಪರಾರಿಯಾಗಿದ್ದಾನೆ. ಮದುವೆ ಬಳಿಕ

ಮನೆ ಅಳಿಯನೇ ಇಲ್ಲಿ ವಿಲನ್| ಹಿಂದಿನ ರಾತ್ರಿ ಅತ್ತೆ ಮನೆಗೆ ಬಂದವನು ಮಾಡಿದ್ದೇನು? Read More »

ಮೃತಪತ್ನಿಯ ನೆನಪಲ್ಲೇ ಆತ್ಮಹತ್ಯೆ ಮಾಡಿಕೊಂಡ ಸೈನಿಕ| ಅನಾಥವಾಯ್ತು ಮಗು

ಕೋಲಾರ: ಸಿಆರ್​ಪಿಎಫ್ ಯೋಧನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೆಹಲಿ ಸೇನಾ ಆಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯೋಧ ಕೋಲಾರ ಜಿಲ್ಲೆ ಕೆಜಿಎಫ್ ನಿವಾಸಿ ದಿಲೀಪ್(34) ಎಂದು ಗುರುತಿಸಲಾಗಿದೆ. ಈತ ದಿಲೀಪ್ ಜಮ್ಮು ಕಾಶ್ಮೀರದಲ್ಲಿ ಸೇನಾನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಉಳಿಸಿಕೊಳ್ಳಲು ದೆಹಲಿ ಸೇನಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೆ ಈತನ ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈಗ ದಿಲೀಪ್ ಕೂಡ ಹೆಂಡತಿಯ

ಮೃತಪತ್ನಿಯ ನೆನಪಲ್ಲೇ ಆತ್ಮಹತ್ಯೆ ಮಾಡಿಕೊಂಡ ಸೈನಿಕ| ಅನಾಥವಾಯ್ತು ಮಗು Read More »

ಕಡಬ| ಸಂತ್ರಸ್ತೆಯ ಮೇಲೆ ಅತ್ಯಾಚಾರ ಪ್ರಕರಣ| ಆರೋಪಿ ಪೊಲೀಸ್ ಸಸ್ಪೆಂಡ್

ಕಡಬ: ಅತ್ಯಾಚಾರ ಆರೋಪ ಹೊತ್ತಿರುವ ಕಡಬ ಠಾಣಾ ಪೊಲೀಸ್‌ ಸಿಬಂದಿ ಶಿವರಾಜ್‌ ಬಂಧನಕ್ಕೆ ಒಳಗಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಶಿವರಾಜ್‌ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು. ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ಗಂಭೀರತೆಯ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ಆಗಮಿಸಿರುವ ಐಜಿಪಿಯವರು ಆರೋಪಿ ಶಿವರಾಜ್‌ನನ್ನು ಹಾಗೂ ಆತನ ಜತೆ ಹೆಚ್ಚು ನಿಕಟವಾಗಿದ್ದ ಪೊಲೀಸ್‌ ಸಿಬಂದಿಯನ್ನೂ

ಕಡಬ| ಸಂತ್ರಸ್ತೆಯ ಮೇಲೆ ಅತ್ಯಾಚಾರ ಪ್ರಕರಣ| ಆರೋಪಿ ಪೊಲೀಸ್ ಸಸ್ಪೆಂಡ್ Read More »

ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರ| ಕೇಸ್ ಹಾಕಲು‌ ನಿಂತು ಪೇಚಿಗೀಡಾದ ಮಂಗಳೂರು ಪೊಲೀಸ್

ಮಂಗಳೂರು: ಮಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಸೋಮವಾರ ಕಾರುಗಳಿಗೆ ಟಿಂಟೆಡ್ ಅಳವಡಿಸಿದ ವಿರುದ್ಧ ಕಾರ್ಯಾಚರಣೆ ಮಾಡಿದ ಪೊಲೀಸರು, ಈಗ ವಾಹನಗಳ ನಂಬರ್ ಪ್ಲೇಟ್ ಸರಿಯಾಗಿಡದವರನ್ನು ಹಿಡಿದು ಕೇಸ್ ಹಾಕಿದ್ದಾರೆ. ಎರಡು ದಿನದಲ್ಲಿ ಬರೋಬ್ಬರಿ ಏಳು ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ಆದರೆ ದುರಂತ ಏನೆಂದರೆ ಸಿಕ್ಕಸಿಕ್ಕವರ ವಾಹನವನ್ನು ತಡೆದು ನಿಲ್ಲಿಸಿದ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ‌. ನಟರಾಜ್‌ರವರ ಸರ್ಕಾರಿ ಕಾರಿನಲ್ಲೇ ಐಎನ್‌ಡಿ ನಂಬರ್ ಪ್ಲೇಟ್ ಇಲ್ಲದಿರುವುದು ಪೊಲೀಸ್

ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರ| ಕೇಸ್ ಹಾಕಲು‌ ನಿಂತು ಪೇಚಿಗೀಡಾದ ಮಂಗಳೂರು ಪೊಲೀಸ್ Read More »