ಕರಾವಳಿ

ಬೆಳ್ಳಾರೆ:ರವೀಂದ್ರ ಬಂಗೇರ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಹಸ್ತಾಂತರ

ರವೀಂದ್ರ ಬಂಗೇರ ಅವರು ಕಳೆದ 4 ವರ್ಷಗಳಿಂದ ಪಾಶ್ವವಾಯು ಸಮಸ್ಯೆಯಿಂದ ದೇಹದ ಒಂದು ಭಾಗ ಬಲಹೀನತೆಯಿಂದ, ದುಡಿಯಲು ಆಶಕ್ತರಾಗಿದ್ದಾರೆ. ಅಲ್ಲದೆ ಅವರ ಜೀವನ ನಿರ್ವಹಣೆಗೆ ಕಷ್ಟಕರವಾಗಿದ್ದು, ಅವರಿಗೆ ಅವರಿಗೆ ಮಂಜೂರಾದ ಮೊತ್ತವನ್ನು ಹಸ್ತಾಂತರ ಮಾಡಿದರು. ಈ ಸಂಧರ್ಭ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಸೇವಾಪ್ರತಿನಿಧಿ ಯಶೋಧರವರು ಉಪಸ್ಥಿತರಿದ್ದರು.

ಬೆಳ್ಳಾರೆ:ರವೀಂದ್ರ ಬಂಗೇರ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಹಸ್ತಾಂತರ Read More »

ಉಡುಪಿ: ಕಾಂಗ್ರೆಸ್ ಸರ್ಕಾರ ಹಸಿದ ಹೊಟ್ಟೆಗೆ ಅನ್ನ ನೀಡುವ ಕೆಲಸ ಮಾಡುತ್ತಿದೆ; ಕೆ. ಜಯಪ್ರಕಾಶ ಹೆಗ್ಡೆ

ಸಮಗ್ರ ನ್ಯೂಸ್‌ : ಹಿಂದೆ ಕೇವಲ 20 ತಿಂಗಳ ಕಾಲ ಸಂಸದನಾಗಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವುದರೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ಮತ್ತೊಂದು ಅವಕಾಶ ಕೊಡಿ. ಮನೆ ಮನೆಗೆ ಭೇಟಿ ನೀಡಿ ಮತ ಕೇಳುವ ವೇಳೆ ಅಭಿವೃದ್ಧಿ ಮತ್ತು ಸಿದ್ದರಾಮಯ್ಯ ನೇತೃತ್ವದ ಉತ್ತಮ ಕಾರ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಪಕ್ಷ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ನಡೆದ

ಉಡುಪಿ: ಕಾಂಗ್ರೆಸ್ ಸರ್ಕಾರ ಹಸಿದ ಹೊಟ್ಟೆಗೆ ಅನ್ನ ನೀಡುವ ಕೆಲಸ ಮಾಡುತ್ತಿದೆ; ಕೆ. ಜಯಪ್ರಕಾಶ ಹೆಗ್ಡೆ Read More »

ಬೆಳ್ತಂಗಡಿ : ಗೋದಾಮಿಗೆ ನುಗ್ಗಿ 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು

ಸಮಗ್ರ ನ್ಯೂಸ್:‌ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವುಗೈದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ನಿವಾಸಿ ಅಬ್ದುಲ್ ಹಕೀಂ ಎಂಬವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಎ.2ರಂದು ಸಂಜೆಯ ವೇಳೆ ಸುಲಿಯದ ಅಡಿಕೆಯನ್ನು 75 ಗೋಣಿ ಚೀಲಗಳಲ್ಲಿ ತುಂಬಿಸಿ ಮನೆ ಸಮೀಪವೇ ಇರುವ ಗೋದಾಮಿನಲ್ಲಿ ಇಟ್ಟು ಬೀಗ ಹಾಕಿದ್ದರು. ಎ 3ರಂದು ಬೆಳಗ್ಗೆ ನೋಡಿದಾಗ ಗೋದಾಮಿನ ಬಾಗಿಲು ತುಂಡಾಗಿ ಬಿದ್ದಿರುವುದು

ಬೆಳ್ತಂಗಡಿ : ಗೋದಾಮಿಗೆ ನುಗ್ಗಿ 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು Read More »

ಸುಳ್ಯ: ಕೆಲಸ ಕೇಳಿಕೊಂಡು ಬಂದಾವನಿಂದಲೇ ಮೊಬೈಲ್‌, ಬೈಕ್‌ ಕಳವು

ಸಮಗ್ರ ನ್ಯೂಸ್ : ಕೆಲಸ ಕೇಳಿಕೊಂಡು ಬಂದವನಿಂದ ಮೊಬೈಲ್‌, ಬೈಕ್‌ ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯದ ರಿಯಾಜ್‌ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ರಿಯಾಜ್‌ ಅವರು ಅರಂತೋಡಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಲ್ಲಿಗೆ ಅವರ ಪರಿಚಯದ ಹರ್ಷಿಕೇಶ್‌ ಕೆಲಸ ಕೇಳಿಕೊಂಡು ಹೋಗಿದ್ದು, ಆತನನ್ನು ರಿಯಾಜ್‌ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದಾನೆ. ಮಧ್ಯಾಹ್ನ ರಿಯಾಜ್‌ ವಿಶ್ರಾಂತಿ ಪಡೆದು ಎದ್ದು ನೋಡಿದಾಗ ಹರ್ಷಿಕೇಶ್‌ ರೂಂನಲ್ಲಿ ಕಾಣಿಸಲಿಲ್ಲ. ಜೊತೆಗೆ ರಿಯಾಜ್‌

ಸುಳ್ಯ: ಕೆಲಸ ಕೇಳಿಕೊಂಡು ಬಂದಾವನಿಂದಲೇ ಮೊಬೈಲ್‌, ಬೈಕ್‌ ಕಳವು Read More »

ವಿಟ್ಲ: ಬಸ್-ಪಿಕಪ್‌ ಢಿಕ್ಕಿ; ಹಲವರಿಗೆ ಗಾಯ

ಸಮಗ್ರ ನ್ಯೂಸ್‌ : ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ವಿಟ್ಲ-ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ನಡೆದಿದೆ. ವಿಟ್ಲ ಕಡೆಗೆ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಆಕಸ್ಮಿಕವಾಗಿ ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿಯಾಗಿದೆ. ಪಿಕಪ್ ನಲ್ಲಿ ಕಾಂಕ್ರೀಟ್ ಹಾಕಲು ಹಲವು ಮಂದಿ ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ವಿಟ್ಲ: ಬಸ್-ಪಿಕಪ್‌ ಢಿಕ್ಕಿ; ಹಲವರಿಗೆ ಗಾಯ Read More »

ಉಪ್ಪಿನಂಗಡಿ: ಬಸ್, ಕಂಟೈನರ್ ನಡುವೆ ಢಿಕ್ಕಿ; ಹಲವು ಮಂದಿಗೆ ಗಾಯ

ಸಮಗ್ರ ನ್ಯೂಸ್‌ : ಖಾಸಗಿ ಬಸ್ ಮತ್ತು ಕಂಟೈನರ್ ನಡುವೆ ಢಿಕ್ಕಿಯಾಗಿ ಹಲವು ಮಂದಿ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾ. ಹೆ. 75ರ ಉಪ್ಪಿನಂಗಡಿ ಉದನೆ ಬಳಿಯ ನೇಲ್ಯಡ್ಕದಲ್ಲಿ ನಡೆದಿದೆ. ಪಿರಿಯಾಪಟ್ಟಣದಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ವರನ ಕಡೆಯವರ ಮದುವೆಯ ಖಾಸಗಿ ಬಸ್ ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಎದುರುಗಡೆಯಿಂದ ಬರುತ್ತಿದ್ದ ಕಂಟೈನರ್ ಗೆ ಢಿಕ್ಕಿ ಹೊಡೆದಿದೆ. ಅವಘಡದಲ್ಲಿ ಬಸ್ ನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಉಪ್ಪಿನಂಗಡಿ: ಬಸ್, ಕಂಟೈನರ್ ನಡುವೆ ಢಿಕ್ಕಿ; ಹಲವು ಮಂದಿಗೆ ಗಾಯ Read More »

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ

ಸಮಗ್ರ ನ್ಯೂಸ್‌ : ನಾಳೆ ನಾಮಪತ್ರ ಸಲ್ಲಿಸಲಿರುವ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಚುನಾವಣಾ ಠೇವಣಿಗಾಗಿ ಕಾರ್ಮಿಕ ಮಹಿಳೆಯರು ದೇಣಿಗೆ ನೀಡಿದ್ದಾರೆ. ತಾವು ದುಡಿದ ಸ್ವಂತ ಹಣವನ್ನು ದೇಣಿಗೆ ರೂಪಾದಲ್ಲಿ ಬ್ರಿಜೇಶ್ ಚೌಟಾ ಅವರಿಗೆ ಮಹಿಳೆಯರು ಸಹಾಯಹಸ್ತದ ರೂಪದಲ್ಲಿ ನೀಡಿದ್ದಾರೆ. ಮೀನಿನ ವ್ಯಾಪಾರ, ಹೂವಿನ ವ್ಯಾಪಾರ ಹಾಗು ಇತರೆ ಸಣ್ಣ ಪುಟ್ಟ ವ್ಯವಹಾರ ಮಾಡುವ ಮಹಿಳೆಯರು ಆರತಿ ಬೆಳಗಿ ಹಣೆಗೆ ತಿಲಕ ಹಚ್ಚಿ ದೃಷ್ಟಿ ತೆಗೆದು ಆಶೀರ್ವಾದಿಸಿ ಬಳಿಕ ಚುನಾವಣಾ ಠೇವಣಿಗೆ

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ Read More »

ಉಡುಪಿ: ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರ ಪತನ; ಯತ್ನಾಳ್ ಭವಿಷ್ಯ

ಸಮಗ್ರ ನ್ಯೂಸ್‌ : ಚಾಮರಾಜನಗರ ಹಾಗೂ ಮೈಸೂರು ಎರಡು ಲೋಕಸಭಾ ಕ್ಷೇತ್ರ ಸೋತರೆ, ಸಿದ್ದರಾಮಯ್ಯನವರನ್ನು ಇಳಿಸುತ್ತಾರೆ ಎಂಬ ಭಯವಿದೆ. ಹೀಗಾಗಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅನುಕಂಪದ ಆಧಾರದಲ್ಲಿ ಮತ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರದ ಪತನ ಖಚಿತ ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜದ ಜಾತಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ.

ಉಡುಪಿ: ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರ ಪತನ; ಯತ್ನಾಳ್ ಭವಿಷ್ಯ Read More »

ವಿಟ್ಲ : ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ : ಪ್ರಕರಣ ದಾಖಲು

ಸಮಗ್ರ ನ್ಯೂಸ್‌ : ವ್ಯಕ್ತಿಯೊಬ್ಬನಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನೆಟ್ಲ ಮುಡ್ನೂರು ಗ್ರಾಮದ ಜನತಾಗೃಹ ಎಂಬಲ್ಲಿ ನಡೆದಿದೆ. ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ನಿವಾಸಿ ನವೀನ ಶೆಟ್ಟಿ (61) ಎಂಬವರು, ಏ.೦೧ ರಂದು ರಾತ್ರಿ, ನವೀನ ಶೆಟ್ಟಿಯವರು, ಕೊರಗಪ್ಪ ಮತ್ತು ಸುಂದರ ಎಂಬವರೊಂದಿಗೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಜನತಾಗೃಹ ಸಾರ್ವಜನಿಕ ರಸ್ತೆಯಲ್ಲಿ ಮಾತನಾಡುತ್ತಿರುವಾಗ ಆರೋಪಿ ವಸಂತ ಎಂಬಾತನು ಬಂದು ನವೀನ ಶೆಟ್ಟಿಯವರಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ

ವಿಟ್ಲ : ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ : ಪ್ರಕರಣ ದಾಖಲು Read More »

ಉಡುಪಿ: ದಲಿತ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ ಎಂದು ದಿನಕರ ಬಾಬು ಕರೆ

ಸಮಗ್ರ ನ್ಯೂಸ್‌ : ಕಾಂಗ್ರೆಸ್ ಸರಕಾರವು ದಲಿತರ ಸಮಾಧಿ ಮೇಲೆ ಕುಳಿತು ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಮತಬ್ಯಾಂಕಿಗಾಗಿ ಮಾತ್ರ ದಲಿತರನ್ನು ಓಲೈಸುತ್ತದೆ. ಕಾಂಗ್ರೆಸ್ಸಿಗರು ದಲಿತರಿಗೆ ವಿವರಿಸಲಾಗದಷ್ಟು ಅನ್ಯಾಯವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ದಲಿತ ಸಮಾಜ ಸನ್ನದ್ಧರಾಗಬೇಕು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ಕರೆ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಲಿತರನ್ನು ತುಳಿದು, ಅವರ ಬೆನ್ನಿಗೆ ಚೂರಿ ಹಾಕಿ ಅವರನ್ನು

ಉಡುಪಿ: ದಲಿತ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ ಎಂದು ದಿನಕರ ಬಾಬು ಕರೆ Read More »