ಕರಾವಳಿ

ತೌಖ್ತೆ ಅಬ್ಬರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಾಜ್ಯಾದ್ಯಂತ ಬಿರುಸುಗೊಂಡ ಮಳೆ

ಮಂಗಳೂರು.ಮೇ.15: ತೌಖ್ತೆ ಚಂಡಮಾರುತ ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ತೀವ್ರ ಪರಿಣಾಮ ಬೀರುತ್ತಿದ್ದು, ಶನಿವಾರದಿಂದಲೇ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದೆ. ಮುಂಜಾನೆಯಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಕಡಲ ಕಿನಾರೆಯುದ್ದಕ್ಕೂ ಭೀಮ ಶಕ್ತಿಯ ಭಾರೀ ಗಾತ್ರದ ಅಲೆಗಳು ದಡವನ್ನು ನುಂಗಿಹಾಕಿವೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್‌ ಸರಬರಾಜು ಕಡಿತವಾಗಿದೆ. ಉಡುಪಿ, ಬ್ರಹ್ಮಾವರ, ಕಾರ್ಕಳ, ಕಾಪು ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಭಾರೀ […]

ತೌಖ್ತೆ ಅಬ್ಬರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಾಜ್ಯಾದ್ಯಂತ ಬಿರುಸುಗೊಂಡ ಮಳೆ Read More »

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು

ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿನಿಂದ ಕಲಿಯುವುದು ಬೇಕಾದಷ್ಟಿದೆ. ಮನುಷ್ಯರಾದ ನಾವು ಚಿಕ್ಕ ಕಷ್ಟ ಬಂದಾಗಲೂ ಆತ್ಮಹತ್ಯೆ ಮಾಡಲು ಬಯಸುವ ಈ ಸಂದರ್ಭದಲ್ಲಿ ಈ ಮೀನು ಬದುಕಲು ಸ್ಫ್ಪೂರ್ತಿ ನೀಡುತ್ತದೆ.ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಏಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ. ಅದನ್ನು ಬರೆಯುತ್ತಾ ಹೋದರೆ

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು Read More »

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಮುತ್ತು ಬೆಳೆಯುವ ಕೆರೆ ಎಂದು ಐತಿಹ್ಯ ಹೊಂದಿರುವ ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ! ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಅಂದ ಹಾಗೆ ಇಲ್ಲಿ ನೆಲೆಸಿರುವ ಮಹಾಲಿಂಗೇಶ್ವರನಿಗೂ ಗಜರಾಜನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಇದಕ್ಕೆ ಕಾರಣವೂ

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ Read More »

ಬೆಳ್ಳಿಮೀಸೆಯ‌ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ

ಪರಶುರಾಮ ಸೃಷ್ಟಿಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ‌ ನಾಗಾರಾಧನೆ, ಭೂತಾರಾಧನೆಗಳು ಅನಾದಿಕಾಲದಿಂದ ನಡೆದು ಬಂದಿದೆ. ಜಾತಿ ಬೇಧವಿಲ್ಲದೇ ಎಲ್ಲರ ಆರಾಧನೆ, ಆಚರಣೆಗಳು ದೈವಶಕ್ತಿಗೆ ಅರ್ಪಿತವಾಗುತ್ತವೆ. ಇಂತಹ ಹಲವು ಸುಪ್ರಸಿದ್ದ ಕ್ಷೇತ್ರಗಳ ಪೈಕಿ ಮಂಗಳೂರಿನಿಂದ 100 ಕಿ.ಮೀ ಹಾಗೂ ತಾಲೂಕು ಕೇಂದ್ರವಾದ ಕಡಬದಿಂದ 20ಕಿ.ಮೀ ದೂರದಲ್ಲಿದೆ ಏನೆಕಲ್ಲು ಬಚ್ಚನಾಯಕ, ಉಳ್ಳಾಲ್ತಿ, ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರ. ನಾಗರಾಧನೆ ಜೊತೆಗೆ ದೈವಾರಾಧನೆ ಈ ಕ್ಷೇತ್ರದ ವಿಶೇಷತೆ. ಅದರಲ್ಲೂ ಇಲ್ಲಿ ನೆಲೆಸಿರುವ ಬಚ್ಚನಾಯಕ ದೈವಕ್ಕೆ ಬೆಳ್ಳಿ ಮೀಸೆಯೇ ಪ್ರದಾನ ಹರಿಕೆ. ಗುಡಿ, ಅತಿಶಯ ಕ್ಷೇತ್ರ ಇಲ್ಲಿನ

ಬೆಳ್ಳಿಮೀಸೆಯ‌ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ Read More »

ಶಿವಾರ್ಜುನರು ವರಾಹನಿಗಾಗಿ ಕಾದಾಡಿದ ಪುಣ್ಯ ತಾಣ…. ಮಲ್ಲಿಯ ಕುಡುಗೋಲಿನ ಏಟಿಗೆ ಕಣ್ವರು ತೇಯ್ದ ಶ್ರೀಗಂಧವೇ ಮದ್ದಾಯಿತು.. ಶ್ರೀಕ್ಷೇತ್ರ ತೊಡಿಕಾನದ ಸಂಪೂರ್ಣ ಮಾಹಿತಿ

ದಕ್ಷಿಣ ಕನ್ನಡದ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ “ಅರಂತೋಡು”ಎಂಬಲ್ಲಿ ಬಲಕ್ಕೆ ತಿರುಗಿ ಆರೇಳು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಹಸಿರು ಪ್ರಕೃತಿಯ ಸುಂದರ ತಾಣವೇ ತೊಡಿಕಾನ. ಜುಳು ಜುಳು ಹರಿಯುವ ತೊರೆಯ ತಟದಲ್ಲಿ ಕಂಗೊಳಿಸುವುದೇ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಾಲಯ. ಇದು 3000 ವರ್ಷಗಳಷ್ಟು ಹಳೆಯ ದೇವಸ್ಥಾನವೆಂದು ಸಾಮಾನ್ಯವಾಗಿ ಹೇಳಿದರೂ ಮಹಾಭಾರತ ಕಾಲದಲ್ಲಿ ಇತ್ತೆಂಬುದಕ್ಕೆ ಇತಿಹಾಸಕಾರರು ದಾಖಲೆ ಕೊಡುವ ಕಾರಣ 5000 ವರ್ಷದ ಮೇಲ್ಪಟ್ಟದ್ದೆಂದು‌ ಹೇಳಲಾಗುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ “ತುದಿ” ಯ ಕಾನನ(ಕಾಡು) ಆದ ಕಾರಣ”

ಶಿವಾರ್ಜುನರು ವರಾಹನಿಗಾಗಿ ಕಾದಾಡಿದ ಪುಣ್ಯ ತಾಣ…. ಮಲ್ಲಿಯ ಕುಡುಗೋಲಿನ ಏಟಿಗೆ ಕಣ್ವರು ತೇಯ್ದ ಶ್ರೀಗಂಧವೇ ಮದ್ದಾಯಿತು.. ಶ್ರೀಕ್ಷೇತ್ರ ತೊಡಿಕಾನದ ಸಂಪೂರ್ಣ ಮಾಹಿತಿ Read More »

ಕೆಡ್ಡಸ: ಇದು ಭೂಮಿತಾಯಿಗೆ ನಮಿಸುವ ದಿವಸ

ಸಮಗ್ರ ವಿಶೇಷ: ಭಾರತ ಧಾರ್ಮಿಕ ನಂಬಿಕೆಗಳ ಆವಾಸ ಸ್ಥಾನ. ಇಲ್ಲಿನ ಜನರ ಪ್ರತೀ ದಿನಚರಿಯಲ್ಲೂ, ಆಚರಣೆಯಲ್ಲೂ ನಂಬಿಕೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಬೆಳಿಗ್ಗೆ ಹಾಸಿಗೆ ಬಿಡುವಲ್ಲಿಂದ ಹಿಡಿದು, ರಾತ್ರಿ ನಿದ್ರಾದೇವಿಗೆ ಶರಣಾಗುವಲ್ಲಿಯವರೆಗೆ ಪ್ರತೀ ಕ್ಷಣವೂ ಒಂದೊಂದು ಪದ್ದತಿ, ಸಂಪ್ರದಾಯ ಭಾರತೀಯರನ್ನು ನಂಬಿಕೆಯೊಳಗೆ ಬಂಧಿಸುತ್ತದೆ. ಜನರ ಪ್ರತೀ ಆಚರಣೆಗಳೂ ನಂಬಿಕೆಯ ನೆಲೆಗಟ್ಟಿನಲ್ಲಿಯೇ ರಚನೆಗೊಳ್ಳುತ್ತವೆ. ಭಾರತೀಯರು ಪ್ರಕೃತಿಯ ಆರಾಧಕರು ಎಂಬುದು ವೇದ ಪುರಾಣಗಳ ಕಾಲದಿಂದಲೇ ನಡೆದು ಬಂದ ಸಂಗತಿ. ಪುರಾಣ ಕಥನಗಳಲ್ಲಿ, ವೇದ ಶಾಸ್ತ್ರಗಳಲ್ಲಿ ಪ್ರಕೃತಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ

ಕೆಡ್ಡಸ: ಇದು ಭೂಮಿತಾಯಿಗೆ ನಮಿಸುವ ದಿವಸ Read More »

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ

ನೀವೇನಾದ್ರೂ ಚಾರಣ ಪ್ರೀಯರಾದ್ರೆ ಈ ತಾಣಕ್ಕೊಮ್ಮೆ ಭೇಟಿ‌ ನೀಡ್ಲೇ ಬೇಕು. ಭಾರತದಲ್ಲಿ ಅತೀ ಕಷ್ಟಕರವಾದ ಹಾಗೆಯೇ ಅತ್ಯಂತ ಮನಸ್ಸಿಗೆ ಮುದ ನೀಡುವ ಕೆಲವೇ ಕೆಲವು ಚಾರಣ ತಾಣಗಳ ಪೈಕಿ ಚಾರಣಿಗರ ಸ್ವರ್ಗ ಅಂತನೇ ಕರೆಸಿಕೊಳ್ಳುವ ಪುಷ್ಪಗಿರಿ ಕುಮಾರ ಪರ್ವತ ಶ್ರೇಣಿ ನಿಜಕ್ಕೂ ಅಧ್ಬುತ ಮತ್ತು ಅಷ್ಟೇ ರೋಮಾಂಚಕಾರಿ ಅನುಭವ ನೀಡುವ ಪ್ರಕೃತಿಯ ಸೃಷ್ಟಿ. ದಕ್ಷಿಣ ಕನ್ನಡ ಮತ್ತು‌ ಕೊಡಗು ಜಿಲ್ಲೆಗಳ ನಡುವೆ.ಸಮುದ್ರ ಮಟ್ಟದಿಂದ 1712 ಮೀಟರ್‌ ಎತ್ತರದಲ್ಲಿರುವ ಪುಷ್ಪಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದು. ಈ ಶಿಖರಕ್ಕೆ

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ Read More »