ಕರಾವಳಿ

ಪಡಿತರದಲ್ಲಿ ಕರಾವಳಿ ಜನರಿಗೆ ಸಿಗುತ್ತೆ ಕೆಂಪು ಕುಚಲಕ್ಕಿ!

ಮಂಗಳೂರು, ಮೇ 18: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಭಾಗದ ಜನ ಊಟಕ್ಕೆ ಬಳಸುವ ಕೆಂಪು ಕುಚಲಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ ಪೂರೈಸಲು ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆಯಲ್ಲಿ ಸಚಿವರು ಈ ವಿಷಯ ತಿಳಿಸಿದ್ದು, ಕೆಂಪು ಕುಚ್ಚಲಕ್ಕಿಯನ್ನು ಸ್ಥಳೀಯ ಗಿರಣಿಗಳ ಮೂಲಕ ಸಂಸ್ಕರಿಸಿ ಪಡಿತರ ಅಂಗಡಿಗಳ ಮೂಲಕ ಗುಣಮಟ್ಟದ ಅಕ್ಕಿ ವಿತರಿಸಲು ಸರ್ಕಾರ ಅಗತ್ಯ ಯೋಜನೆ ರೂಪಿಸುತ್ತಿದೆ. ದಕ್ಷಿಣ ಕನ್ನಡ […]

ಪಡಿತರದಲ್ಲಿ ಕರಾವಳಿ ಜನರಿಗೆ ಸಿಗುತ್ತೆ ಕೆಂಪು ಕುಚಲಕ್ಕಿ! Read More »

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಬಂಟ್ವಾಳ: ಕಳೆದು ಎರಡು ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಂಟ್ವಾಳ ಬಿ.ಕಸ್ಬಾ ಗ್ರಾಮದ ಮುಗ್ಡಾಲ್ ಗುಡ್ಡೆ ನಿವಾಸಿ ವಿನಯ್ (೨೪) ಮೃತಪಟ್ಟ ಯುವಕ. ಮಾ.೧೦ ರಂದು ಪಾಣೆಮಂಗಳೂರು ಅಕ್ಕರಂಗಡಿ ಎಂಬಲ್ಲಿ ಪಿಕಪ್ ಜೀಪ್ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ವಿನಯ್ ಅವರ ತಲೆಗೆ ಗಾಯವಾಗಿದ್ದು, ಅವರು ಕೋಮಾ ಅವಸ್ಥೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು Read More »

ವಿಶ್ವಸುಂದರಿ ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ. ಯಾರೀ ಸುಂದರಿ ಗೊತ್ತಾ..?

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ 69ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉದ್ಯಾವರ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. 22ರ ಹರೆಯದ ಆ್ಯಡ್ಲಿನ್ ಕ್ಯಾಸ್ಟೆಲಿನೋ, ಉದ್ಯಾವರ ಮೂಲದ ಅಲ್ಫೋನ್ಸಸ್ ಕ್ಯಾಸ್ಟೆಲಿನೊ ಮತ್ತು ಮೀರಾ ಕ್ಯಾಸ್ಟೆಲಿನೊ ದಂಪತಿ ಪುತ್ರಿ. ವಿವಿಧ ಆನ್‌ಲೈನ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, 2020ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ನೇರವಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದ್ದರು. ಕುವೈತ್ ನಲ್ಲಿ ಹುಟ್ಟಿ ಬೆಳೆದು, ಮುಂಬೈನಲ್ಲಿ ಪ್ರೌಢ

ವಿಶ್ವಸುಂದರಿ ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ. ಯಾರೀ ಸುಂದರಿ ಗೊತ್ತಾ..? Read More »

ಪುತ್ತೂರು | ಡಿವೈಡರ್ ಗೆ ಕಾರು ಢಿಕ್ಕಿ; ಚಾಲಕ ಸಾವು

ಪುತ್ತೂರು: ಪುತ್ತೂರಿನ ಕೆಮ್ಮಾಯಿಯಲ್ಲಿ ಬೆಳ್ಳಂಬೆಳಗ್ಗೆ ಕಾರೊಂದು ರಸ್ತೆ ಡಿವೈಡರ್ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ದುರ್ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಬೆಳ್ತಂಗಡಿ ಬಾರ್ಯ ನಿವಾಸಿ ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು. ಕಾರು‌ ರಸ್ತೆ ಡಿವೈಡರ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದು ಅವರನ್ನು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರ ಸಹಾಯದೊಂದಿಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ

ಪುತ್ತೂರು | ಡಿವೈಡರ್ ಗೆ ಕಾರು ಢಿಕ್ಕಿ; ಚಾಲಕ ಸಾವು Read More »

ಉಪ್ಪಿನಂಗಡಿ: ಮನೆಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು

ಉಪ್ಪಿನಂಗಡಿ: ಮನೆಯಲ್ಲಿ ಮನೆಮಂದಿ ಇಲ್ಲದ ಸಮಯದಲ್ಲಿ ಕೈಚಳಕ ತೋರಿಸಿದ ಕಳ್ಳರು ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದು ದೋಚಿದ ಘಟನೆ ಇಲ್ಲಿಗೆ ಸಮೀಪದ ಕರಾಯ ಎಂಬಲ್ಲಿ ನಡೆದಿದೆ. ಕರಾಯ ಗ್ರಾಮದ ಮುರಿಯಾಳ ಮಹಮ್ಮದ್ ಅಶ್ರಫ್ ಎಂಬವರ ಮನೆಯಿಂದ, ಮನೆಮಂದಿ ಇಲ್ಲದಿದ್ದಾಗ ಬೀಗ ಒಡೆದು ಕಳ್ಳತನ ನಡೆದಿದೆ. ಅಶ್ರಫ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರ ತಂದೆ, ಪತ್ನಿ ಮತ್ತು ಮಕ್ಕಳು ಮನೆಯಲ್ಲಿರುತ್ತಿದ್ದರು. ಕಳೆದವಾರ ಹಬ್ಬದ ನಿಮಿತ್ತ ಮನೆಯವರೆಲ್ಲರೂ ಅಶ್ರಫ್ ಅವರ ಪತ್ನಿ ಶಾಹಿದ್ ಅವರ ತವರು ಮನೆಗೆ ತೆರಳಿದ್ದು ಸೋಮವಾರ

ಉಪ್ಪಿನಂಗಡಿ: ಮನೆಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು Read More »

ಮಂಗಳೂರು: ಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ಕೊರೋನಾಗೆ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಂಬು ಗರ್ಭಿಣಿ ಮಹಿಳಾ ಪಿಎಸ್ಐ ಕೋವಿಡ್ ಗೆ ಬಲಿಯಾದ ಘಟನೆ ನಡೆದಿದೆ. ಕಳೆದ 5 ತಿಂಗಳ ಹಿಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದ ಶ್ಯಾಮಿಲಿ (24 ವ) ಮೃತಪಟ್ಟ ಮಹಿಳೆ. ಶ್ಯಾಮಿಲಿಯವರು ಹೆರಿಗೆ ರಜೆ ನಿಮಿತ್ತ ತವರಿಗೆ ತೆರಳಿದ್ದರು. ಕಳೆದೆರಡು ವಾರಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ನಂತರ ಕೋಲಾರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ

ಮಂಗಳೂರು: ಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ಕೊರೋನಾಗೆ ಬಲಿ Read More »

ಮಂಗಳೂರು | ಜೆಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಬಸ್ಸು ಬೆಂಕಿಗಾಹುತಿ

ಮಂಗಳೂರು: ಇಂದು ಬೆಳಿಗ್ಗಿನ ಜಾವ ಲಾಕ್‌ಡೌನ್ ಹಿನ್ನಲೆಯಲ್ಲಿ ಜೆಪ್ಪು ಮಾಕೆರ್ಟ್ನಲ್ಲಿ ನಿಂತಿದ್ದ ಬಸ್ಸುವೊಂದು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ನರೇಶ್ ಪೂಜಾರಿ ಮಾಲಕತ್ವದ ರಾಜಲಕ್ಷ್ಮಿ ಟ್ರಾವೆಲ್ಸ್ ಬಸ್ಸಿನಲ್ಲಿ ಮುಂಜಾನೆ 4ರ ಹೊತ್ತಿಗೆ ಬೆಂಕಿಕಾಣಿಸಿಕೊಂಡಿದೆ. ಹಾಗೆಯೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹತ್ತಿರದಲ್ಲೇ ಇದ್ದ ಬಸ್ಸುಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಇದು ದುಷ್ಕರ್ಮಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು | ಜೆಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಬಸ್ಸು ಬೆಂಕಿಗಾಹುತಿ Read More »

‘ಇತ್ತೆ ಪಂಪ್ವೆಲ್ ಬತ್ತ್ ತೂಲೆ’ ವರ್ಲಿ‌ಕಲೆಯಿಂದ ಕಂಗೊಳಿಸುತ್ತಿದೆ ಮಂಗಳೂರಿನ ಪಂಪ್ವೆಲ್

ಮಂಗಳೂರು: ಟ್ರೋಲಿಗರಿಂದ ಸಾಕಷ್ಟು ಸುದ್ದಿಯಾಗಿದ್ದ ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಮತ್ತೆ ಸುದ್ದಿಯಾಗುತ್ತಿದೆ. ಪ್ಲೈ ಓವರ್ ನ ಗೋಡೆಗಳು ಸುಂದರ ವರ್ಣರಂಜಿತ ವರ್ಲಿ ಚಿತ್ರಗಳಿಂದ ಕಂಗೊಳಿಸುತ್ತಿದ್ದು, ತನ್ನನ್ನು ಅಣಕಿಸಿದವರನ್ನು ಕೆಣಕುತ್ತಿದೆ. ಪ್ಲೈ ಓವರ್ ನ ಎರಡು ಬದಿ ರಸ್ತೆಗಳಲ್ಲಿ ಸಂಚರಿಸುವಾಗ ವರ್ಲಿ ಚಿತ್ತಾರಗಳು ಕಣ್ಣುಗಳಿಗೆ ಮುದನೀಡುತ್ತಿವೆ. ಮಂಗಳೂರಿನ ಆದಿತತ್ವ ಕಲಾವಿದರ ಬಳಗದ ಕುಂಚದಲ್ಲಿ ಮೂಡಿದ ಈ ವರ್ಲಿ ಚಿತ್ತಾರಗಳು ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.ಕರ್ನಾಟಕ ಬ್ಯಾಂಕ್ ಸಹಕಾರದೊಂದಿಗೆ ರಸ್ತೆ ಗೋಡೆಗೆ ಬೇಸ್ ಪೈಂಟ್ ನಿಂದ ಅಂದಗೊಳಿಸಿ ವರ್ಲಿ

‘ಇತ್ತೆ ಪಂಪ್ವೆಲ್ ಬತ್ತ್ ತೂಲೆ’ ವರ್ಲಿ‌ಕಲೆಯಿಂದ ಕಂಗೊಳಿಸುತ್ತಿದೆ ಮಂಗಳೂರಿನ ಪಂಪ್ವೆಲ್ Read More »

ಮಡಪ್ಪಾಡಿಯ ಸಂಕಟದ ಕೆಸರು ತೊಳೆಯೋದು ಯಾವಾಗ? ಸಚಿವರೇ ಒಂಚೂರು ಕಿವಿಗೊಟ್ಟು‌ ಕೇಳಿ ನಮ್ಮ ಅಳಲು.

ಸುಳ್ಯ. ಮೇ.17: ಹೌದು. ಈ ಮಾತನ್ನು ದಿನಂಪ್ರತಿ ಈ‌ ಭಾಗದ ಜನ ಕೇಳುತ್ತಾ ಬರುತ್ತಿದ್ದಾರೆ. ಜೊತೆಗೆ ಹಿಡಿಶಾಪವನ್ನೂ ಹಾಕುತ್ತಿದ್ದಾರೆ. ಕೆಲವೊಮ್ಮೆ ಕೈಕಾಲು‌ ಮುರಿದುಕೊಂಡು‌ ಕಣ್ಣೀರನ್ನೂ ಒರೆಸಿಕೊಳ್ಳುತ್ತಾ‌ ಈ ಊರಲ್ಲಿ ಹುಟ್ಟಬಾರದಿತ್ತು ಅಂದುಕೊಳ್ತಾರೆ. ಅಷ್ಟಕ್ಕೂ ಈ ಮಡಪ್ಪಾಡಿಯಲ್ಲಿ ಏನಾಯಿತು? ಯಾಕೇ ಹೀಗೆ ಆಗ್ತಾ ಇದೆ‌. ಈ ಸ್ಟೋರಿನಲ್ಲಿ ಓದಿ. ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತು ಕೊಂಡ ಸುಂದರ ಹಳ್ಳಿ. ತಾಲೂಕಿನ ಪ್ರಮುಖ ಜನಪ್ರತಿನಿಧಿಗಳ ತವರೂರು. ಇಷ್ಟೆಲ್ಲಾ ಇದ್ದರೂ ಈ ಜನ

ಮಡಪ್ಪಾಡಿಯ ಸಂಕಟದ ಕೆಸರು ತೊಳೆಯೋದು ಯಾವಾಗ? ಸಚಿವರೇ ಒಂಚೂರು ಕಿವಿಗೊಟ್ಟು‌ ಕೇಳಿ ನಮ್ಮ ಅಳಲು. Read More »

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು?

ಮಂಗಳೂರು. ಮೇ.17: ಇಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರೋದು ಅಂದ್ರೇನೆ ಜನ ಭಯ ಪಡ್ತಿದಾರೆ. ಅಂತದ್ದರಲ್ಲಿ ಇಂತಹ ತಪ್ಪನ್ನು ಮಾಡಿದ್ರೆ ನಿಜಕ್ಕೂ ಆಸ್ಪತ್ರೆಗೆ ಜನ ತಿರುಗೀನೂ ನೋಡಲ್ಲ. ಅಷ್ಟಕ್ಕೂ ಈ ಆಸ್ಪತ್ರೆ ಸಿಬ್ಬಂದಿ ಮಾಡಿದ್ದಾದ್ರೂ ಏನು? ಮುಂದೆ ಓದಿ.ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಮೃತ ವ್ಯಕ್ತಿಗಳ ಶವ ಸಿಬ್ಬಂದಿ ಎಡವಟ್ಟಿನಿಂದ ಅದಲು ಬದಲಾದ ಘಟನೆ ನಡದಿದೆ.ಸುರತ್ಕಲ್ ಸಮೀಪದ ಹೊಸಬೆಟ್ಟು ನಿವಾಸಿ ಜಗದೀಶ್ ಕುಂದರ್ (66) ಹಾಗೂ ಕಾರ್ಕಳದ ಸುಧಾಕರ

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು? Read More »