ಕರಾವಳಿ

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್

ಉಜಿರೆ: ಪಿಕ್ ಅಪ್ ವಾಹನವೊಂದು ನದಿ ದಾಟಲು ನದಿಗೆ ಇಳಿಯುತ್ತಿದ್ದಂತೆ ನೀರು ಒಮ್ಮೆಲೆ ಉಕ್ಕಿ ಬಂದ ಪರಿಣಾಮ ವಾಹನ ಮುಳುಗಡೆಯಾಗಿ, ಅದರಲ್ಲಿದ್ದ ಜನರನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಾರ್ಮಾಡಿ ಬೆಳಿಯ ಚಿಬಿದ್ರೆ ಉರ್ಪೆಲ್ ಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಳದಂಗಡಿಯ ಮನೆಯೊಂದಕ್ಕೆ ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಪರಿಕರಗಳನ್ನು ಕೊಂಡೈೂದು ತಿರುಗಿ ಬರುವಾಗ, ಇಂದು ಎಡೆಬಿಡದೆ ಮಳೆಯಾದ ಪರಿಣಾಮ ಮೃತ್ಯುಂಜಯ ನದಿಯಲ್ಲಿ ಒಮ್ಮೆಲೆ ನೆರೆನೀರು ಉಕ್ಕಿಬಂದು ಈ ಘಟನೆ ನಡೆದಿದೆ. ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು […]

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್ Read More »

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್

ಮೂಡಿಗೆರೆ: ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಧೂಳೆಬ್ಬಿಸಿರುವ ಮೂಡಿಗೆರೆಯಲ್ಲಿ ಪಿಎಸ್ ಐ, ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಿಎಸ್ಎ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ದೂರು ನೀಡಿದ್ದ ಯುವಕನ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಕಿರುಗುಂದ ವಿವಾಹಿತ ಮಹಿಳೆಯೋರ್ವರ ದೂರಿನ ಆಧಾರದ ಮೇಲೆ ಬಂಧಿತನಾಗಿದ್ದ ಅದೇ ಗ್ರಾಮದ ದಲಿತ ಯುವಕ ಪುನೀತ್, ಗೋಣಿಬೀಡು ಪಿಎಸ್ಐ ವಿಚಾರಣೆ ವೇಳೆ ನನಗೆ  ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ.

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್ Read More »

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್

ಕಾಸರಗೋಡು.ಮೇ.24: ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದ ಯುವಕರು ಜಾಲಿಗಾಗಿ ಟಿಕ್ಕಾ ಪಾರ್ಟಿ ಮಾಡಿದರು, ಆದರೆ ಅಲ್ಲಿಗೆ ಖಾಕಿ ಪಡೆ ಲಗ್ಗೆ ಇಟ್ಟಾಗ ಯುವಕರು ಟಿಕ್ಕಾ ಬಿಟ್ಟು ಓಡಿದ್ದಾರೆ. ಇಂಥ ವಿಲಕ್ಷಣ ಪ್ರಕರಣವೊಂದು ಗಡಿಭಾಗ ಕಾಸರಗೋಡಿನಲ್ಲಿ ಮೇ.23 ರಂದು ನಡೆದಿದೆ. ಒಂದೆಡೆ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಯುವಕರು ಭಾನುವಾರದಂದು ವೀಕ್ ಎಂಡ್ ಪಾರ್ಟಿ ಮಾಡಲು ಪ್ಲಾನ್ ರೂಪಿಸಿ ಜಾಗ ಸೆಟ್ ಮಾಡಿದರು. ಅದರಂತೆ ನಿಗದಿತ ಸಮಯಕ್ಕೆ ಅಲ್ಲಿ ಸೇರಿ ಟಿಕ್ಕಾ ಮಾಡಲು ಶುರುವಿಟ್ಟರು. ಇನ್ನೇನು ಟಿಕ್ಕಾ ರೆಡಿ ಆಗಿ ಪಾರ್ಟಿಗೆ

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್ Read More »

ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ

ಮುಲ್ಕಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೇಲ್ ಪರ ಬರಹಗಳಿದ್ದ ಪೋಸ್ಟರ್ ಹಂಚಿಕೊಂಡ ಯುವಕನಿಗೆ ಪ್ಯಾಲೆಸ್ತೀನ್ ಪರವಾದಿ ಯುವಕರ ತಂಡ ಬೆದರಿಕೆಯೊಡ್ಡಿದ ಘಟನೆ ಇಲ್ಲಿಗೆ ಸಮೀಪದ ಕಾರ್ನಾಡ್ ಎಂಬಲ್ಲಿ ನಡೆದಿದೆ. ಕಾರ್ನಾಡ್ ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಯುವಕ ಇಸ್ರೇಲ್ ಪರ ಘೋಷಣೆಗಳಿದ್ದ ಪೋಸ್ಟರ್ ಹಂಚಿಕೊಂಡ ಕಾರಣಕ್ಕಾಗಿ ಕೆಲ ಯುವಕರ ಗುಂಪೊಂದು ಬೇಕರಿಗೆ ನುಗ್ಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು. ನಂತರ ಹಿಂದೂ ಸಂಘಟನೆಗಳ ಮುಖಂಡರು ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಬೆದರಿಕೆಯೊಡ್ಡಿದ ಯುವಕರನ್ನು ಬಂಧಿಸಿ ಬುದ್ಧಿವಾದ ತಿಳಿಸಿ

ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ Read More »

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ

ಸುಳ್ಯ: ಕೊರೊನಾ ಮಾರ್ಗ ಸೂಚಿ ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಜೂಜಾಟ ಆಡುತಿದ್ದ ಮಾಜಿ ಜಿಲ್ಲಾ ಪಂಚಾಯತ್ ಸೇರಿದಂತೆ 10 ಮಂದಿಯನ್ನು ಸುಳ್ಯ ಪೊಲೀಸ್ ಬಂಧಿಸಿದ ಘಟನೆ ನೆಡೆದಿದೆ. ಮಾಜಿ ಜಿ.ಪಂ.ಸದಸ್ಯ, ಬಿ.ಜೆ.ಪಿ ಕಾರ್ಯಕರ್ತ ಗಂಗಾಧರ ಕೇಪಳಕಜೆ ಸಹಿತ, ಗೋಪಾಲಕೃಷ್ಣ, ಗಂಗಾಧರಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್ , ಮೋಹನ್ ದಾಸ್, ಅಶೋಕ, ದಯಾನಂದ ಬಂಧಿತ ಆರೋಪಿಗಳು. ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದರು. ಈ ವೇಳೆ ರಾತ್ರಿ ಗಸ್ತು ನಿರತ ಸುಳ್ಯ

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ Read More »

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ

ಮಂಗಳೂರು.ಮೇ23:‌ ಇಲ್ಲಿನ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದಕಾರು ಅಪಘಾತದಲ್ಲಿ ಮೃತಪಟ್ಟಿದೆ. ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ದಂಪತಿ ರಿಯಾದ್ ನಲ್ಲಿ ವಾಸವಾಗಿದ್ದಾರೆ. ಆದಿಲ್ ಅವರು ಟ್ರಾವೆಲ್ ಏಜೆನ್ಸಿ ಹೊಂದಿದ್ದಾರೆ. ಅವರ ಕುಟುಂಬ ತಮ್ಮ ಕಾರಿನಲ್ಲಿ ದಮ್ಮಾಮ್ ಗೆ ತೆರಳಿತ್ತು. ಕೆಲಸ ಮುಗಿಸಿ ರಿಯಾದ್ ಗೆ ವಾಪಾಸಾಗುತ್ತಿದ್ದಾಗ ಆದಿಲ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿಗಳ ಒಂದು ವರ್ಷದ ಗಂಡು ಮಗು ಓವೈಸಿ ಆದಿಲ್ ಗೆ ಗಂಭೀರ

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ Read More »

ಎಂಆರ್ ಪಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ನಮ್ಮವರಿಗೆ “ಗೊತ್ತಾನಗ ಪೊರ್ತಾಂಡ್”

ಮಂಗಳೂರು. ಮೇ.23: ಇಲ್ಲಿನ ಎಂಆರ್ ಪಿಎಲ್ ನಲ್ಲಿ ನಡೆದ ನೇಮಕಾತಿಯಲ್ಲಿ ಕರ್ನಾಟಕದ ‌ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ  ಅನ್ಯಾಯವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ‌ಸಂಸದ ನಳಿನ್ ಕುಮಾರ್‌ ಕಟೀಲು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸ್ಥಳೀಯ ಶಾಸಕರು‌ ಎಂಆರ್ ಪಿಎಲ್ ನ ಆಡಳಿತ ಮಂಡಳಿಯ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಹಾಸ್ಯಕ್ಕೆ ಒಳಗಾಗಿದೆ. ನೇಮಕಾತಿಯಲ್ಲಿ ಇಬ್ಬರು ಕನ್ನಡಿಗರನ್ನು‌ ಮಾತ್ರ ಆಯ್ಕೆ ಮಾಡಲಾಗಿದ್ದು, ಈ

ಎಂಆರ್ ಪಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ನಮ್ಮವರಿಗೆ “ಗೊತ್ತಾನಗ ಪೊರ್ತಾಂಡ್” Read More »

ಉಳ್ಳಾಲ: ಮೀನುಗಾರಿಕಾ ಬೋಟ್ ಅಪಘಾತ | ಮೀನುಗಾರರ ರಕ್ಷಣೆ

ಮಂಗಳೂರು: ಉಳ್ಳಾಲದ ಅಝಾನ್ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಒಂದು ಮೀನುಗಾರಿಕೆಗೆ ತೆರಳಿದ ಸಂದರ್ಭ ಅಪಘಾತಕ್ಕೀಡಾಗಿದ್ದು, ಬೋಟ್ ನಲ್ಲಿದ್ದ ಎಲ್ಲ ಹತ್ತು ಜನ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇಂದು ಮುಂಜಾನೆ 1:30 ರ ಸುಮಾರಿಗೆ ಅಶ್ರಫ್ ಮತ್ತು ಫಾರೂಕ್ ಎಂಬವರಿಗೆ ಸೇರಿದ ಈ ಬೋಟ್ ಕಡಲ ಕಿನಾರೆ ಯಿಂದ ಮೀನುಗಾರಿಕೆಗೆ ತೆರಳಿದ್ದು, ಉಳ್ಳಾಲದ ಕೋಡಿ ಎಂಬಲ್ಲಿ ದಡದಿಂದ ಸ್ವಲ್ಪ ದೂರದಲ್ಲಿ ಅಪಘಾತಕ್ಕೀಡಾಗಿದೆ. ಈ ಬಗ್ಗೆ ಮೀನುಗಾರರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಎಲ್ಲ ಮೀನುಗಾರರನ್ನು

ಉಳ್ಳಾಲ: ಮೀನುಗಾರಿಕಾ ಬೋಟ್ ಅಪಘಾತ | ಮೀನುಗಾರರ ರಕ್ಷಣೆ Read More »

ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು

ಕಾರ್ಕಳ: ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ಗುಣಮುಖರಾದ  ಮೇಲೂ ಮನೆಯ ಬಾಡಿಗೆ ಕಟ್ಟಲು ಕೈಯಲ್ಲಿ ಬಿಟ್ಟಿ ಕಾಸಿಲ್ಲದೆ ಮಹಿಳೆಯೊಬ್ಬರು ಕುಟುಂಬ ಸಮೇತ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲೇ ಉಳಿದ ಘಟನೆ ಮೇ 22 ರಂದು ನಡೆದಿದೆ. ಕೆಲ ಸಮಯದ ಹಿಂದೆ ಸರಕಾರಿ ಆಸ್ಪತ್ರೆಗೆ ದಾಖಲಾದ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ ಮತ್ತು ಜೊತೆಗಿದ್ದ ಪತಿ ವಿವೇಕ್ ಮತ್ತು ಮಗ ಅಕ್ಷಯ್ ಈ ಅಸಾಹಯಕ ಸ್ಥಿತಿಗೆ ತಲುಪಿದವರು. ನಂತರ ಈ ಬಗ್ಗೆ ವೈದ್ಯರೊಬ್ಬರು ಸ್ಥಳೀಯ ಪುರಸಭಾ ಸದಸ್ಯ ಶುಭದ ರಾವ್

ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು Read More »

ಬ್ರೇಕಿಂಗ್ ಸಮಾಚಾರ ಮಂಗಳೂರಲ್ಲಿ ಮತ್ತೊಮ್ಮೆ ಅಮಾನವೀಯ ಕೃತ್ಯ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವಿಕೃತರು ಅಂದರ್.!

ಮಂಗಳೂರು. ಮೇ.22: ನಗರದ ಪದವಿನಂಗಡಿಯ ಮೇರಿಹಿಲ್ ಹೆಲಿಪ್ಯಾಡ್ ಬಳಿ ವಿಕೃತ ವ್ಯಕ್ತಿಗಳು ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅಮಾನವೀಯ ಕೃತ್ಯ‌ ನಡೆಸಿದ್ದು, ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಸಂಜೆ ನಡೆದಿದೆ. ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಇದರ ವಿಡಿಯೊ ಸ್ಥಳೀಯ ಅಪಾರ್ಟ್ಮೆಂಟ್ ಒಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸ್ಥಳಿಯರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಪ್ರಾಣಿದಯಾ ಸಂಘದ ಸದಸ್ಯರು

ಬ್ರೇಕಿಂಗ್ ಸಮಾಚಾರ ಮಂಗಳೂರಲ್ಲಿ ಮತ್ತೊಮ್ಮೆ ಅಮಾನವೀಯ ಕೃತ್ಯ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವಿಕೃತರು ಅಂದರ್.! Read More »