ಕರಾವಳಿ

ಮಂಗಳೂರು: ತನ್ನ ಮಗುವನ್ನೇ ಕಿಡ್ನಾಪ್ ಮಾಡಿದನಾ ತಂದೆ…!? | ಠಾಣೆ ಮೆಟ್ಟಿಲೇರಿದ ತಾಯಿ

ಮಂಗಳೂರು:ನಗರದ ಕದ್ರಿಯಲ್ಲಿ ತಂದೆಯೇ ತನ್ನ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯಿಂದ 14 ತಿಂಗಳ ತನ್ನ ಮಗುವನ್ನು ಮಾ.23ರಂದು ನನ್ನ ಗಂಡನೇ ಕಿಡ್ನಾಪ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು, ತನ್ನ ಪತಿಯ ವಿರುದ್ಧವೇ ಮೇ 26 ರ ರಂದು ಪೊಲೀಸ್ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ, ನನ್ನ ಪತಿ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು ಅಪರಾಧ ಚಟುವಟಿಕೆಗಳಲ್ಲಿ ತೋಡಾಗಿಕೊಂಡಿದ್ದು, ಆತನ ವಿರುದ್ದ ಕೊಡಗು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]

ಮಂಗಳೂರು: ತನ್ನ ಮಗುವನ್ನೇ ಕಿಡ್ನಾಪ್ ಮಾಡಿದನಾ ತಂದೆ…!? | ಠಾಣೆ ಮೆಟ್ಟಿಲೇರಿದ ತಾಯಿ Read More »

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ | ಮೂವರು ದೋಷಿಗಳೆಂದು ಅಂತಿಮ ತೀರ್ಪು ನೀಡಿದ ನ್ಯಾಯಾಲಯ

ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಕೊನೆಯ ಹಂತ ತಲುಪಿದ್ದು, ನ್ಯಾಯಾಲಯ ಮೂವರು ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಒಬ್ಬರನ್ನು ಖುಲಾಸೆಗೊಳಿಸಿ ಇಂದು ಅಂತಿಮ ತೀರ್ಪು ಪ್ರಕಟಿಸಿದೆ. ಜಿಲ್ಲೆಯ ಇಂದ್ರಾಳಿಯ ಉದ್ಯಮಿ ಭಾಸ್ಕರ್ ಶೆಟ್ಟಿ (52 ವ.) ಅವರನ್ನು ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಅವರನ್ನು ಉಡುಪಿಯ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯ ದೋಷಿಗಳೆಂದು

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ | ಮೂವರು ದೋಷಿಗಳೆಂದು ಅಂತಿಮ ತೀರ್ಪು ನೀಡಿದ ನ್ಯಾಯಾಲಯ Read More »

ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಬಿಜೆಪಿ ಯ ಬಹುದೊಡ್ಡ ಸಾಧನೆ: ದ ಕ ಯುವ ಕಾಂಗ್ರೆಸ್

ಮಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆಯೇ ಬಿಜೆಪಿ ಸರಕಾರದ ಬಹುದೊಡ್ಡ ಸಾಧನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಹೇಳಿದೆ. ನಿನ್ನೆ ಮಂಗಳೂರಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೋಟ್ ಬ್ಯಾನ್, ಜಿಎಸ್‌ಟಿಯಂತಹ ಕಾನೂನು ಜಾರಿಗೆ ತಂದು ಜನರನ್ನು ಸಂಕಷ್ಟಕ್ಕೆ ದೂಡಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಬಿಜೆಪಿ ಯ ಬಹುದೊಡ್ಡ ಸಾಧನೆ: ದ ಕ ಯುವ ಕಾಂಗ್ರೆಸ್ Read More »

ಉಡುಪಿ: ದನ ಕದ್ದು ಟಾಯ್ಲೆಟ್ ನಲ್ಲಿ ಕೊಂದಾತನ ಬಂಧನ | ಸಿಸಿಟಿವಿ ಸಹಾಯದಿಂದ ಕೃತ್ಯ ಬಯಲು

ಉಡುಪಿ: ವ್ಯಕ್ತಿಯೋರ್ವ ನೆರೆಮನೆಯ ಹಸುವನ್ನು ಕದ್ದು ತನ್ನ ಮನೆಯ ಟಾಯ್ಲೆಟ್ ನಲ್ಲಿ ಮಾಂಸ ಮಾಡಿ ಮಾರಾಟ ಮಾಡಿದ್ದಾನೆ ಎನ್ನಲಾದ ಘಟನೆ ಜಿಲ್ಲೆಯ ನೇಜಾರಿನಲ್ಲಿ ನಡೆದಿದೆ. ಆರೋಪಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೇಜಾರು ನಿವಾಸಿ ಗಂಗಾಧರ್ ಎಂಬವರು ಪ್ರತಿದಿನದಂತೆ ಭಾನುವಾರ ಬೆಳಿಗ್ಗೆ ತನ್ನ ಮನೆಯ ಹಸುವನ್ನು ಮೇಯಲು ಬಿಟ್ಟಿದ್ದರು. ಸ್ವಲ್ಪ ಸಮಯದಲ್ಲಿ ಹತ್ತಿರದಲ್ಲೇ ಇದ್ದ ಹಸು ಕಾಣೆಯಾಗಿತ್ತು. ನಂತರ ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ನೆರೆಮನೆಯ ಇಬ್ರಾಹಿಂ ಎಂಬಾತ ಹಸುವನ್ನು ಎಳೆದೊಯ್ಯುವ ದೃಶ್ಯ ಸೆರೆಯಾಗಿರುವುದು

ಉಡುಪಿ: ದನ ಕದ್ದು ಟಾಯ್ಲೆಟ್ ನಲ್ಲಿ ಕೊಂದಾತನ ಬಂಧನ | ಸಿಸಿಟಿವಿ ಸಹಾಯದಿಂದ ಕೃತ್ಯ ಬಯಲು Read More »

ಧರ್ಮಸ್ಥಳ: 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ಆರೋಪಿ ಅರೆಸ್ಟ್

ಬೆಳ್ತಂಗಡಿ: ಯುವಕನೋರ್ವ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಪೋಷಕರು ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನೀಚ ಕೃತ್ಯವೆಸಗಿ ಪೊಲೀಸರ ಅತಿಥಿಯಾದವನು ವಿಘ್ನೇಶ್ ಭಂಡಾರಿ. ಈತ ತಾಲೂಕಿನ ಕಕ್ಕಿಂಜೆಯಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಹಿಂದೊಮ್ಮೆ ಲೈಂಗಿಕ ಕಿರುಕುಳ ಎಸಗಿದ್ದ. ಆ ಸಮಯದಲ್ಲಿ ಮಗುವಿನ ಪೋಷಕರು ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರು. ಆದರೆ ಆರೋಪಿ ನೀಚ ಕೃತ್ಯವನ್ನು ಮತ್ತೆ ಮುಂದುವರಿಸಿದ್ದು, ಮಗುವಿನ ಪೋಷಕರು ನೀಡಿದ ದೂರಿನನ್ವಯ ಆತನನ್ನು ಪೊಲೀಸರು

ಧರ್ಮಸ್ಥಳ: 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ಆರೋಪಿ ಅರೆಸ್ಟ್ Read More »

ಪುತ್ತೂರು: ನೇಣು ಬಿಗಿದು ಯುವತಿ ಆತ್ಮಹತ್ಯೆ

ಪುತ್ತೂರು: ವಿವಾಹ ನಿಶ್ಚಿತಾರ್ಥ ವಾಗಿದ್ದ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಕುಳದಪಾರೆಯಲ್ಲಿ ನಡೆದಿದೆ. ನಿದಿಯಡ್ಕ ನಿವಾಸಿ ಸುಬ್ಬಣ್ಣ ನಾಯ್ಕ ಅವರ ಪುತ್ರಿ ಪ್ರಿಯಾ (25) ಮೃತ ಯುವತಿ. ಈಶ್ವರಮಂಗಲದ ಜೆರಾಕ್ಸ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ಪ್ರಿಯ, ತನ್ನ ಮನೆಯಲ್ಲಿ ನಿನ್ನೆ ಯಾರು ಇಲ್ಲದ ಸಂಧರ್ಭ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಈ ಹಿಂದೆ ಪುತ್ತೂರು ತಾಲ್ಲೂಕಿನ ಬಡಗನ್ನೂರು ಸರ್ಕಾರಿ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅದೂರು ಪೊಲೀಸ್

ಪುತ್ತೂರು: ನೇಣು ಬಿಗಿದು ಯುವತಿ ಆತ್ಮಹತ್ಯೆ Read More »

ದ.ಕ ಜಿಲ್ಲೆಯಲ್ಲಿ ನಾಳೆ(ಜೂ.8)ಯಿಂದ ಟಫ್ ರೂಲ್ಸ್ ಜಾರಿ, ಅನಗತ್ಯ ತಿರುಗಾಟ ಮಾಡಿದರೆ ಜೋಕೆ- ಡಿಸಿ ರಾಜೇಂದ್ರ

ಮಂಗಳೂರು. ಜೂನ್ 7: ರಾಜ್ಯ ಸರ್ಕಾರ ರಾಜ್ಯವನ್ನು ಅನ್‌ಲಾಕ್ ಮಾಡುವುದಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮಂಗಳವಾರದಿಂದ ಪ್ರತ್ಯೇಕ ಟಫ್ ರೂಲ್ಸ್ ಜಾರಿಯಾಗಲಿದೆ. ಜೂ.8 ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಯಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಮಂಗಳೂರು ನಗರ ಭಾಗದಲ್ಲಿ ಹೆಚ್ಚಿನ

ದ.ಕ ಜಿಲ್ಲೆಯಲ್ಲಿ ನಾಳೆ(ಜೂ.8)ಯಿಂದ ಟಫ್ ರೂಲ್ಸ್ ಜಾರಿ, ಅನಗತ್ಯ ತಿರುಗಾಟ ಮಾಡಿದರೆ ಜೋಕೆ- ಡಿಸಿ ರಾಜೇಂದ್ರ Read More »

ಅಸಂಘಟಿತ ಕಾರ್ಮಿಕರಿಗೆ 2,000 ರೂ. ಪರಿಹಾರ ಧನ : ಡಿಸಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ ಹಿನ್ನಲೆಯಲ್ಲಿ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ₹2,000 ಪರಿಹಾರಧನವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ. ಈ ಕುರಿತು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕ ವಲಯದ 18 ರಿಂದ 65 ವರ್ಷದೊಳಗಿನ ಕ್ಷೌರಿಕ, ಅಗಸ, ಟೈಲರ್, ಅಕ್ಕಸಾಲಿಗ, ಕಮ್ಮಾರ, ಕುಂಬಾರ, ಗೃಹಕಾರ್ಮಿಕರು, ಚಿಂದಿ ಆಯುವವರು, ಹಮಾಲಿ ಇತ್ಯಾದಿ ಕಾರ್ಮಿಕರುಗಳು ಈ ಪರಿಹಾರ

ಅಸಂಘಟಿತ ಕಾರ್ಮಿಕರಿಗೆ 2,000 ರೂ. ಪರಿಹಾರ ಧನ : ಡಿಸಿ ಡಾ. ರಾಜೇಂದ್ರ ಕೆ.ವಿ Read More »

ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ

ಮಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆ ವಿರುದ್ಧ ಪ್ರತಿಭಟಿಸಿ ಧರಣಿ ಕೂತಿದ್ದ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಾಗ ಅವರ ಕುಟುಂಬಕ್ಕೆ ಹತ್ತು ಲಕ್ಷಕ್ಕೂ ಅಧಿಕ ಬಿಲ್ ಮಾಡಿದ್ದ, ಮೃತದೇಹ ನೀಡದೆ ಸತಾಯಿಸಿದ ಖಾಸಗಿ ಆಸ್ಪತ್ರೆ ವಿರುದ್ಧ ಸುಹೈಲ್ ಕಂದಕ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಧರಣಿ ಕೂತಿದ್ದರು. ಪ್ರತಿಭಟನೆಗೆ ಮಣಿದ ಆಸ್ಪತ್ರೆ ಮೃತದೇಹ ಹಸ್ತಾಂತರ ಮಾಡಿದ್ದರು. ಘಟನೆ ನಡೆದು ಹಲವು ದಿನಗಳು ಕಳೆದರೂ

ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ Read More »

ಮಂಗಳೂರಲ್ಲಿ ಮತ್ತೆ ಆ್ಯಕ್ಟಿವ್ ಆದ ಡ್ರಗ್ಸ್ ದಂಧೆ: ವಿ.ವಿ ಬಳಿ ಮೂವರು ಅರೆಸ್ಟ್

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಮಂಜೇಶ್ವರ ಉಪ್ಪಳ ಗೇಟ್ ಬಳಿ ನಿವಾಸಿಗಳಾದ ಮಹಮ್ಮದ್ ಮುನಾಫ್‌, ಮಹಮ್ಮದ್ ಮುಝಾಂಬಿಲ್ ಮತ್ತು ಅಹಮ್ಮದ್ ಮಸೂಕ್ ರವರನ್ನು ವಶಕ್ಕೆ ಪಡೆದಿದ್ದಾರೆ.ಕೊಣಾಜೆ ಪೊಲೀಸ್ ಠಾಣಾ ಪೊಲೀಸರಿಗೆ ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ದೊರೆತಾಗ ಕೊಣಾಜೆ ವಿಶ್ವವಿದ್ಯಾನಿಲಯದ ಗಣೇಶ್ ಮಹಲ್ ಎಂಬಲ್ಲಿ ಕಾರೊಂದನ್ನು ನಿಲ್ಲಿಸಿ ತಪಾಸಣೆ ಮಾಡಿ, ಅವರಿಂದ

ಮಂಗಳೂರಲ್ಲಿ ಮತ್ತೆ ಆ್ಯಕ್ಟಿವ್ ಆದ ಡ್ರಗ್ಸ್ ದಂಧೆ: ವಿ.ವಿ ಬಳಿ ಮೂವರು ಅರೆಸ್ಟ್ Read More »