ಪುತ್ತೂರು: ಎರಡು ತಿಂಗಳ ಬಾಣಂತಿ ಮೃತ್ಯು
ಪುತ್ತೂರು: ಎರಡು ತಿಂಗಳ ಬಾಣಂತಿ ಒಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ. ಪುತ್ತೂರಿನ ಕೃಷ್ಣ ನಗರ ನಿವಾಸಿ ದಿಲೀಪ್ ಎಂಬವರ ಪತ್ನಿ ಅಕ್ಷತಾ (26) ಮೃತಪಟ್ಟವರು. ಅಕ್ಷತಾ 2 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಷತಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪುತ್ತೂರು: ಎರಡು ತಿಂಗಳ ಬಾಣಂತಿ ಮೃತ್ಯು Read More »