ಕರಾವಳಿ

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ

ಕುಮಟಾ: ಮೀನಿನ ಬಾಕ್ಸ್’ಗಳಲ್ಲಿ ಇರಿಸಿ ಬರೋಬ್ಬರಿ ಮೂರು ಟನ್ ಗಿಂತಲೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಮಟದ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಕ್ರಮ ಗೋ ಮಾಂಸ ಸಾಗಟ ಮಾಡುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಮಹಮ್ಮದ್ ಶಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಾನಗಲ್ ನಿಂದ ಮಂಗಳೂರಿಗೆ ಗೋ ಮಾಂಸ ಸಾಗಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಆತನ ಹೇಳಿಕೆಯಿಂದ ಮಂಗಳೂರಿನಲ್ಲಿ ಗೋ ಮಾಂಸ ಮಾರಾಟದ […]

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ Read More »

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು

ಪುತ್ತೂರು: ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ದಿನವೇ ಪುತ್ತೂರಿನ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳ ಮನೆ ಕುಸಿದಿದ್ದು, ಪರೀಕ್ಷೆ ಸಿದ್ಧತೆ ನಡೆಸಲು ಸಂಕಷ್ಟ ಎದುರಾಗಿದೆ. ತಾಲೂಕಿನ ಚಿಕ್ಕಮುಂಡ್ಲೂರು ಗ್ರಾಮದ ನಿವಾಸಿ ಗೋಪಾಲ ಶೆಟ್ಟಿ ಎಂಬವರ ಮನೆ ಸೋಮವಾರ ಸಂಜೆ ಮಳೆಗೆ ಶಿಥಿಲಗೊಂಡು ಕುಸಿದಿದೆ. ಬಡವರಾದ ಗೋಪಾಲ ಶೆಟ್ಟಿ ಅವರು ಕಾಲು ನೋವಿನಿಂದ ದುಡಿಯಲು ಸಾಧ್ಯವಿಲ್ಲದೆ ಮನೆಯಲ್ಲೇ ಇದ್ದಾರೆ. ಇವರ ಪತ್ನಿ ಬೀಡಿಕಟ್ಟಿ ಕೂಲಿ ಕೆಲಸ ಮಾಡಿ ಸಿಗುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಪತಿಯ ಆರೋಗ್ಯವನ್ನು ನೋಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು Read More »

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ

ಉಪ್ಪಿನಂಗಡಿ: ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ.

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ Read More »

ಇಂದಿನಿಂದ ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಸಿ ಡಾ. ರಾಜೇಂದ್ರ

ಮಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಇಂದಿನಿಂದ ಆರ್’ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಹೇಳಿದ್ದಾರೆ. ನಿನ್ನೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಾವೇ ಕುದ್ದು ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮಂಗಳವಾರ (29-06-2021) ದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೇರಳ ಗಡಿ ಭಾಗದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿದ್ದು, ಡೆಲ್ಟಾ ವೇರಿಯಂಟ್ ಪತ್ತೆಯಾಗಿರುವ ಸಂಶಯವಿದೆ. ಈ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ್ದರಿಂದ

ಇಂದಿನಿಂದ ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಸಿ ಡಾ. ರಾಜೇಂದ್ರ Read More »

‘ಮಂಗಳೂರಿನವರ ಸೊಕ್ಕು ಮುರಿಯಬೇಕು | ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವುದನ್ನು ನಿಲ್ಲಿಸಬೇಕು |ಜಾಲತಾಣದಲ್ಲಿ ಇಂತಹದೊಂದು ಆಡಿಯೋ ವೈರಲ್

ಮಂಗಳೂರು: ಟ್ರೆಂಡಿಂಗ್‌ನಲ್ಲಿ ಇರುವ ಕ್ಲಬ್ ಹೌಸ್ ಅಪ್ಲಿಕೇಶನ್ ನಲ್ಲಿ ಮಂಗಳೂರಿಗರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಂಡಿಂಗ್‌ನಲ್ಲಿರುವುದೇ ಕ್ಲಬ್ ಹೌಸ್. ಫೇಸ್‌ಬುಕ್, ವಾಟ್ಸ್‌ಪ್, ಇನ್ ಸ್ಟಾ ಗ್ರಾಂ ಮಾದರಿಯಲ್ಲೇ ಜನರನ್ನು ಸೆಲೆದಂತಹ ಆಪ್. ಅದರೆ ಇದರಲ್ಲಿ ಯಾವದೇ ಪೋಸ್ಟ್ ಹಾಕಲು ಸಾಧ್ಯವಿಲ್ಲ. ಗೂಗಲ್ ಮೀಟ್, ಝೂಮ್ ನಲ್ಲಿ ವಿಡಿಯೋ ಮೂಲಕ ಸಂವಹನ ಮಾಡಬಹುದು. ಆದರೆ ಈ ಅಪ್ಲಿಕೇಶನ್‌ಗಳಲ್ಲಿ ಪ್ರಪಂಚದ ಎಲ್ಲ ಜನರ ಜೊತೆ ಸುಲಭವಾಗಿ

‘ಮಂಗಳೂರಿನವರ ಸೊಕ್ಕು ಮುರಿಯಬೇಕು | ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವುದನ್ನು ನಿಲ್ಲಿಸಬೇಕು |ಜಾಲತಾಣದಲ್ಲಿ ಇಂತಹದೊಂದು ಆಡಿಯೋ ವೈರಲ್ Read More »

ಬೆಳ್ತಂಗಡಿ: ಹಾರೆ, ಗುದ್ದಲಿ ಹಿಡಿದ ಗ್ರಾ. ಪಂ. ಸದಸ್ಯೆಯ ಕೆಲಸ ಶ್ಲಾಘನೀಯ

ಬೆಳ್ತಂಗಡಿ: ಇಲ್ಲಿನ ಅಂಡಿಂಜೆ ಗ್ರಾಮ ಪಂಚಾಯತ್‌ನ ಸದಸ್ಯೆಯೊಬ್ಬರು ತಾವೇ ಸ್ವತಃ ಹಾರೆ, ಗುದ್ದಲಿ ಹಿಡಿದು ಪೈಪ್ ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು ಸಾವ್ಯ ವಾರ್ಡ್ನ ಸದಸ್ಯೆಯಾಗಿರುವ ಸರೋಜಾ ಎಂಬವರು. ಅವರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರೋಜಾ ಅವರು ಗ್ರಾಮಸ್ಥರೊಂದಿಗೆ ಅತ್ಯುತ್ತಮ ಒಡನಾಟ ಬೆಳೆಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾರೆ.

ಬೆಳ್ತಂಗಡಿ: ಹಾರೆ, ಗುದ್ದಲಿ ಹಿಡಿದ ಗ್ರಾ. ಪಂ. ಸದಸ್ಯೆಯ ಕೆಲಸ ಶ್ಲಾಘನೀಯ Read More »

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ

ಕಾಸರಗೋಡು: ತುಳುನಾಡಿನ ಆಚಾರ ವಿಚಾರ ಲಿಪಿ ಸಂಸ್ಕ್ರತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕೆಲಸ ಕಾರ‍್ಯಗಳನ್ನು ನಿಸ್ವರ‍್ಥವಾಗಿ ಮಾಡಲು ಯುವಕರು ಹಾಗೂ ಹಿರಿಯರು ಒಗ್ಗೂಡಿಕೊಂಡು ಒಂದಾಗಿರುವ ಸಂಘಟನೆ ‘ಜೈ ತುಳುನಾಡ್ ಸಂಘಟನೆ’ ಇದರ ಕಾಸರಗೋಡು ಘಟಕದಿಂದ ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ಇವರ ಮುಂದಾಳುತ್ವದಲ್ಲಿ, ಕೇರಳ ರಾಜ್ಯದಲ್ಲಿ ತುಳು ಬಾಷೆ ಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಶಾಸಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ದಾಖಲೆಯ ಜೊತೆಗಿರುವ ಮನವಿಯನ್ನು

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ Read More »

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ

ಕುಂದಾಪುರ: ಮೇಯಲು ಬಿಟ್ಟ ದನಗಳನ್ನು ಕದ್ದು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಕುಂದಾಪುರ ಪೊಲೀಸರು ರಕ್ಷಣೆ ಮಾಡಿದ್ದಾರೆ. ತಾಲೂಕಿನಲ್ಲಿ ಮೇಯಲು ಬಿಟ್ಟ ದನಗಳ ಸರಣಿ ಕಳ್ಳತನವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಕಳ್ಳತನವಾಗುತ್ತಿರುವುದರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಭಾನುವಾರ ದನ ಕಳ್ಳನ ಬಗ್ಗೆ ಮಾಹಿತಿ ಪಡೆದ ಕಾರ್ಯಕರ್ತರು ಕುಂದಾಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ. ನಂತರ ಪೋಲೀಸರ ನೆರವಿನಿಂದ ಗುಳ್ವಾಡಿ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ದಾಳಿ ಮಾಡಿದ್ದಾರೆ. ಈ

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ Read More »

ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ

ಮಂಗಳೂರು: ನಗರ ಪ್ರತಿಷ್ಟಿತ ಹೊಟೇಲ್ ಮೇಲೆ ಬಂದರು ಪೊಲೀಸರು ‌ದಾಳಿ ಮಾಡಿ ಭಿನ್ನಕೋಮಿನ ನಾಲ್ಕು ಯುವ ಜೋಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಂಚಾಡಿಯ ಸಾಯಿ ಪ್ಯಾಲೇಸ್ ಹೊಟೇಲ್ ನಲ್ಲಿ ಯುವ ಜೋಡಿಗಳು ತಂಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಹಿತಿ ಕಲೆ‌ಹಾಕಿ ನಗರದ ಬಂದರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಿಂಜಾವೇ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇಂದು ಲಾಡ್ಜ್ ಮೇಲೆ ದಾಳಿ ನಡೆಸಿ ನಾಲ್ಕು ಮಂದಿ ಮುಸ್ಲಿಂ ಯುವಕರು ಹಾಗೂ

ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ Read More »

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಅಪಘಾತಗೊಂಡು ಆಸ್ಪತ್ರೆಗೆ ದಾಖಲು | ಮುನಿದಳೇ‌ ಮಂತ್ರದೇವತೆ ಕಲ್ಲುರ್ಟಿ…? | ಆರೋಪಿ ರಕ್ಷಣೆಗೆ ರಾಜಕೀಯ ಶಕ್ತಿಗಳ ಕೈವಾಡ

ಬಂಟ್ವಾಳ : ಚಿಕ್ಕಪ್ಪನೇ ನಿರಂತರ ಅತ್ಯಾಚಾರ ಎಸಗಿ ಸಂತ್ರಸ್ತಳಾಗಿದ್ದ ಯುವತಿಯ ಪೋಷಕರು ಪನೋಲಿಬೈಲು ಕಲ್ಲುರ್ಟಿ‌ ಮೊರೆ ಹೋಗಿದ್ದು, ಆಕೆ ಧರ್ಮ ರಕ್ಷಿಸಿದ್ದಾಳೆ ಎಂಬ ಮಾತೀಗ ತುಳುನಾಡಿನಲ್ಲಿ ಕೇಳಿಬಂದಿದ್ದು, ತಾಯಿಯ ಸತ್ಯ ಮತ್ತೆ‌ ಗೋಚರಿಸಿದೆ. ಮಗಳ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಚಿಕ್ಕಪ್ಪ, ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮನಿಗೆ ಕಳೆದ ಶುಕ್ರವಾರ ಬೆಳಿಗ್ಗೆ ಆಕ್ಸಿಡೆಂಟ್ ಆಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಮುಕ ಚಿಕ್ಕಪ್ಪನಿಂದಲೇ ನಿರಂತರ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿಯಿಂದ

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಅಪಘಾತಗೊಂಡು ಆಸ್ಪತ್ರೆಗೆ ದಾಖಲು | ಮುನಿದಳೇ‌ ಮಂತ್ರದೇವತೆ ಕಲ್ಲುರ್ಟಿ…? | ಆರೋಪಿ ರಕ್ಷಣೆಗೆ ರಾಜಕೀಯ ಶಕ್ತಿಗಳ ಕೈವಾಡ Read More »