ಬಂಟ್ವಾಳ: ಕಾಲೇಜ್ ಬಸ್, ಬೈಕ್ ಅಪಘಾತ- ತಪ್ಪಿದ ಅನಾಹುತ
ಬಂಟ್ವಾಳ: ಮೆಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬಸ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ಜು.2ರಂದು ಬೆಳಗ್ಗೆ ನಡೆದಿದೆ. ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸೇರಿದ ಬಸ್‌ನಲ್ಲಿ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸೇರಿದ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ಸಿಕ್ಕಿಹಾಕಿಕೊಂಡಿದೆ. […]
ಬಂಟ್ವಾಳ: ಕಾಲೇಜ್ ಬಸ್, ಬೈಕ್ ಅಪಘಾತ- ತಪ್ಪಿದ ಅನಾಹುತ Read More »