ಕರಾವಳಿ

ಕುಂದಾಪುರ: ಗಾಳಿ-ಮಳೆ |ಮನೆ ಮೇಲೆ ಮರ ಬಿದ್ದು ದಂಪತಿಗೆ ಗಾಯ

ಉಡುಪಿ: ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆಯೊಳಗಿದ್ದ ದಂಪತಿಗೆ ಗಂಭೀರ ಗಾಯವಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಬಸ್ರೂರು ಮಕ್ಕಿಮನೆ ಗಣಪಯ್ಯ ಗಾಣಿಗರಿಗೆ ಸೇರಿದ ಮನೆ ಇದಾಗಿದ್ದು, ಗಣಪಯ್ಯ ಗಾಣಿಗ ಮತ್ತು ಪತ್ನಿ ವಾರಿಜ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಮತ್ತು ಬೃಹತ್ ಗಾತ್ರದ ಧೂಪದ ಮರ ಬಿದ್ದು ಮನೆ ಹಾನಿಯಾಗಿದೆ. ಮನೆಯಲ್ಲಿ ಇದ್ದ ಮಕ್ಕಳಿಗೆ […]

ಕುಂದಾಪುರ: ಗಾಳಿ-ಮಳೆ |ಮನೆ ಮೇಲೆ ಮರ ಬಿದ್ದು ದಂಪತಿಗೆ ಗಾಯ Read More »

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ | ಅಂದಾಜು ಮುಕ್ಕಾಲು ಕೆಜಿ ಚಿನ್ನ ವಶ

ಮಂಗಳೂರು: ಇಂದು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 703 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದರು. ಕೇರಳ ಮೂಲದ ಮೊಹ್ಮದ್ ಅನ್ಸಾರ್ ಹಾಗೂ ಮೊಹಮ್ಮದ್ ಮೂಸಾ ಮಿಯಾಸ್ ಬಂಧಿತರು. ಅವರಿಬ್ಬರು ಜೊತೆಗಿದ್ದ ಸೂಟ್‌ಕೇಸ್‌ನ ತಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟು ಸಾಗಿಸುತ್ತಿದ್ದರು. ದುಬೈನಿಂದ ತರಲಾಗುತ್ತಿದ್ದ ಒಟ್ಟು ₹ 34,46,464 ಮೌಲ್ಯದ 703 ಗ್ರಾಂ‌ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ | ಅಂದಾಜು ಮುಕ್ಕಾಲು ಕೆಜಿ ಚಿನ್ನ ವಶ Read More »

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ

ಸುಳ್ಯ: ವಸತಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರ ಕಂತಿನ ಹಣ ಅಧಿಕಾರಿಗಳ ಎಡವಟ್ಟಿನಿಂದ ಬೇರೊಬ್ಬರ ಖಾತೆಗೆ ಜಮೆಯಾಗಿದೆ. ಇದರಿಂದ ಬಡ ಮಹಿಳೆ ಮನೆ ಪೂರ್ಣಗೊಳ್ಳದೆ ಪರದಾಡುವಂತಾಗಿದೆ. ಈ ಬಗ್ಗೆ ವಿಚಾರಿಸಿದರೆ ಪಂಚಾಯತ್ ಮತ್ತು ಇಲಾಖೆ ಅಧಿಕಾರಿಗಳು ಇದು ನಮ್ಮ ತಪ್ಪಲ್ಲ ಎಂದು ಪರಸ್ಪರ ದೂರಿಕೊಂಡು ಸುಮ್ಮನಾಗುತ್ತಿದ್ದಾರೆ. ಇತ್ತ ಫಲಾನುಭವಿ ಮಹಿಳೆಗೆ ದಿಕ್ಕುತೋಚದಂತಾಗಿದೆ. 2015-16 ನೇ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪನೆಯ ಪರಿಶಿಷ್ಟ ಜಾತಿಯ ಶ್ರೀಮತಿ ರಾಜೀವಿ

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ Read More »

ಧರ್ಮನಿಂದನೆ ಪ್ರಕರಣ ಪ್ರವೀಣ್ ರಿಂದ ಪೊಲೀಸ್ ‌ಸಮ್ಮುಖದಲ್ಲಿ ಕ್ಷಮೆಯಾಚನೆ, ರಾಜಿಯಲ್ಲಿ ಪ್ರಕರಣ ಇತ್ಯರ್ಥ

ಸುಳ್ಯ: ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದ ಅನ್ಯಧರ್ಮದ ಯುವಕನಿಗೆ ನಿಂದನೆ ಮಾಡಿದ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದ್ದು, ಅನ್ಯಧರ್ಮೀಯನ ನಿಂದನೆಗೈದ ಆರೋಪ ಎದುರಿಸುತ್ತಿದ್ದ ಪ್ರವೀಣ್ ಕುಮಾರ್ ಜಯನಗರ ಕ್ಷಮೆಯಾಚಿಸಿದ್ದಾರೆ. ಜಯನಗರದ ಆದಿ ಮೊಗೇರ್ಕಳ ದೈವ ಸ್ಥಾನದ ಎದುರಿನ ಜಾಗದಲ್ಲಿ ಊರಿನ ಯುವಕರು ಕಳೆದ ಹಲವು ಸಮಯಗಳಿಂದ ಕ್ರಿಕೆಟ್ ಆಡುತ್ತಿದ್ದರು. ಇತ್ತೀಚೆಗೆ ಅದೇ ಸ್ಥಳದಲ್ಲಿ ದೈವಸ್ಥಾನದ ಪದಾಧಿಕಾರಿಗಳು ಮತ್ತು ಇತರರು ವನಮಹೋತ್ಸವ ಸಲುವಾಗಿ ಗಿಡಗಳನ್ನು ನೆಡಲು ಗುಂಡಿ ತೋಡಿದ್ದರು. ಆಡಲು ಬರುತ್ತಿದ್ದ ಯುವಕರು ಇದನ್ನು ಪ್ರಶ್ನಿಸಿದ್ದರು. ಈ

ಧರ್ಮನಿಂದನೆ ಪ್ರಕರಣ ಪ್ರವೀಣ್ ರಿಂದ ಪೊಲೀಸ್ ‌ಸಮ್ಮುಖದಲ್ಲಿ ಕ್ಷಮೆಯಾಚನೆ, ರಾಜಿಯಲ್ಲಿ ಪ್ರಕರಣ ಇತ್ಯರ್ಥ Read More »

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…?

ಸುಳ್ಯ: ಈ ಊರಿನ ಹೆಸರು ಮರಸಂಕ. ತಾಲೂಕಿನ ಜಾಲ್ಸೂರು ಗ್ರಾಮಕ್ಕೆ ಒಳಪಡುವ ಈ ಊರಿಗೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ ಸಂಪರ್ಕವೇ ಇಲ್ಲ. ಇದಕ್ಕೆ ಕಾರಣ ಊರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಹಳ್ಳ. ಊರಿನಿಂದ ಜಾಲ್ಸೂರು ಸಂಪರ್ಕಿಸುವ ದಾರಿಯಲ್ಲಿ ಹಳ್ಳವೊಂದಿದೆ. ಬೇಸಿಗೆಯಲ್ಲಿ ಕಷ್ಟವಿಲ್ಲದೆ ಇದನ್ನು ದಾಟಿ ಊರ ಜನ ಸಾಗುತ್ತಾರೆ. ಆದರೆ ಮಳೆಗಾಲದಲ್ಲೂ ಉಕ್ಕಿ ಬರುವ ನೀರಿನಲ್ಲೇ ಜೀವಭಯದಲ್ಲಿ ನದಿ ದಾಟುವ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಇತ್ತೀಚೆಗೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಊರಿನ

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…? Read More »

ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು

ಸುಳ್ಯ: ಹೆಸರು ತಿರುಮಲೇಶ್ವರ ಭಟ್. ಇವರ ಮನೆಯ ಗೇಟಿನ ಒಳಹೊಕ್ಕರೆ ಸಾಕು ಮೈಮನ ಅರಳುತ್ತದೆ. ಮನಸ್ಸು ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಮನೆಯ ಅಂಗಳದಲ್ಲಿರುವ ಬಣ್ಣ ಬಣ್ಣದ ಹೂಗಿಡ-ಬಳ್ಳಿಗಳ, ಕ್ಯಾಕ್ಟಸ್ ಗಿಡಗಳ ಸುಂದರ ದೃಶ್ಯ. ಹೌದು ತಿರುಮಲೇಶ್ವರ ಅವರ ಮನೆ ಇರುವುದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕುರಿಯಾಜೆಯಲ್ಲಿ. ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಮನೆಯಂಗಳವನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಕಾರಣ ಇವರು ಆಗಾಗ ಕೃಷಿ ಅಧ್ಯಯನಕ್ಕಾಗಿ ಅಂತರರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ಅಲ್ಲಲ್ಲಿ

ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು Read More »

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ

ಮಂಗಳೂರು: ಮುಂಬೈಯಿಂದ ಬಂದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂದು ಗುರುತಿಸಲಾಗಿದೆ. ಇವರು ಮುಂಬೈಯಿಂದ ಆಗಮಿಸಿದ್ದು ಜು. 13 ರ ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ಹುಡುಕಾಡಿದಾಗ ಇವರ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ Read More »

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಬಾಲಕನ ಅಪಹರಣದ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ದಾಂಡೇಲಿಯ ಪರಶುರಾಮ‌ ಭೀಮಪ್ಪನನ್ನು ಭಾನುವಾರ ಕುಮಟಾದಲ್ಲಿ ಬಂಧಿಸಿದ್ದರು. ಸೋಮವಾರ ಉಡುಪಿಗೆ ಕರೆತರಲಾದ ಪರಶುರಾಮನನ್ನು ಮೂರ್ಚೆ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ವೈದ್ಯರ ಸಲಹೆಯಂತೆ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಂಗ ಬಂಧನಕ್ಕೆ ಒಳಗಾದ ಈತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಈತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅದರಂತೆ ಆತನನ್ನು ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ Read More »

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…?

ಸುಳ್ಯ: ‘ದೇವಸ್ಥಾನದ ಮೈದಾನದಲ್ಲಿ ಹಿಂದೂಗಳು ಅಲ್ಲದೆ ಬೇರೆ ಧರ್ಮದವರಿಗೆ ಇಲ್ಲಿ ಅವಕಾಶವಿಲ್ಲ, ಇಲ್ಲಿಂದ ಹೊರಗೆ ನಿಂತು ಮಾತನಾಡು, ಇಲ್ಲಿ ನೀನು ಆಡಬಾರದು, ನಿನಗೆ ಚರ್ಚ್ ಆವರಣ ಇಲ್ಲವೇ?’ ಗದರಿದ ದೇವಸ್ಥಾನ ಆಡಳಿತ ಕಮಿಟಿಯ ಪ್ರತಿನಿಧಿಯೋರ್ವ ಹೇಳಿ ಆಟವಾಡುತ್ತಿದ್ದ ಅನ್ಯಕೋಮಿನ ಯುವಕನೋರ್ವನನ್ನು ಮೈದಾನದಿಂದ ಹೊರಗಟ್ಟಿದ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದ್ದು ಜಾಲತಾಣಗಳಲ್ಲಿ ವಿಡೀಯೋ ವೈರಲ್ ಆಗಿದೆ. ಹೊರಗಟ್ಟಿದವನನ್ನು ಜಯನಗರ ಕೊರಂಬಡ್ಕದ ಆದಿಮೊಗೇರ್ಕಳ ದೈವಸ್ಥಾನದ ಪದಾಧಿಕಾರಿ ಪ್ರವೀಣ್ ಕುಮಾರ್ ಜಯನಗರ ಎಂದು ತಿಳಿದುಬಂದಿದೆ. ದೈವಸಾನಿಧ್ಯದಲ್ಲಿ ಸುಮಾರು ಎರಡು ವರ್ಷದಿಂದ ಸ್ಥಳೀಯ

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…? Read More »

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ

ಬೆಂಗಳೂರು: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿದ್ದು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ರೇಡ್’ಝೋನ್ ನಲ್ಲಿರಿಸಿ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ದೇಶದಲ್ಲಿ ಕೋವಿಡ್ ಎರಡನೆಯ ಅಲೆ ಕೊಂಚ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮೂರನೆ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವ ಸಲುವಾಗಿ ದೇಶದ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಕೆಲವು ಜೋನ್ ಗಳಾಗಿ ವಿಂಗಡಿಸಿದೆ. ಇದರಲ್ಲಿ ಎರಡನೆಯ ಅಲೆಯಲ್ಲಿ ತೀವ್ರವಾಗಿ ತತ್ತರಿಸಿರುವ ಜಿಲ್ಲೆಗಳನ್ನು ರೆಡ್’ಜೋನ್’ನಲ್ಲಿ ಗುರುತಿಸಲಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ Read More »