ಕರಾವಳಿ

ಸುಳ್ಯ: ಕೊಲ್ಲಮೊಗ್ರು ಆರೋಗ್ಯ ಸಿಬ್ಬಂದಿಗೆ ರಾಜ್ಯ ಮಟ್ಟದಿಂದ ಮೆಚ್ಚುಗೆ

ಸುಳ್ಯ: ತಾಲೂಕಿನ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕರ್ತವ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಮೆಚ್ಚುಗೆ ಸಲ್ಲಿಸಿದ್ದಾರೆ. ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸಲು ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ನವ್ಯಾ, ಎಎನ್‌ಎಂ ಚಂದ್ರಾವತಿ, ಆಶಾ ಕಾರ್ಯಕರ್ತೆ ಯಶೋದಾ, ಹೇಮಾವತಿಯಾವರು ಪಿಪಿಇ ಕಿಟ್ ಧರಿಸಿ ಪಾಲ ದಾಟುತ್ತಿರುವ ಚಿತ್ರವೊಂದ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ “ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ […]

ಸುಳ್ಯ: ಕೊಲ್ಲಮೊಗ್ರು ಆರೋಗ್ಯ ಸಿಬ್ಬಂದಿಗೆ ರಾಜ್ಯ ಮಟ್ಟದಿಂದ ಮೆಚ್ಚುಗೆ Read More »

ಒಂಟಿ‌ ಮಹಿಳೆಯ ಕಾರಿನ ಟಯರ್ ಬದಲಿಸಿ‌ ಮಾನವೀಯತೆ ಮೆರೆದ ಮಂಗಳೂರು ಪೊಲೀಸರು.

ಮಂಗಳೂರು: ಮಹಿಳೆ ಮತ್ತು ಮಗುವಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಬೇರೆ ಟಯರ್ ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ. ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುವ ಸಂದರ್ಭ ಪಂಪ್ವೆಲ್ ಬಳಿ ಟಯರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟಯರನ್ನು ಬದಲಿಸಿ ಮಾನವೀಯತೆ ಮೆರೆದರು.

ಒಂಟಿ‌ ಮಹಿಳೆಯ ಕಾರಿನ ಟಯರ್ ಬದಲಿಸಿ‌ ಮಾನವೀಯತೆ ಮೆರೆದ ಮಂಗಳೂರು ಪೊಲೀಸರು. Read More »

ಉತ್ಸವದ ಅಕ್ಕಿಗಾಗಿ ದೇವಳಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ: ಪುತ್ತೂರಿನಲ್ಲೊಂದು‌ ಕೋಮು ಸಾಮರಸ್ಯದ ನಡೆ

ಪುತ್ತೂರು: ದೇವಳದ ಉತ್ಸವಕ್ಕೆ ಅಕ್ಕಿಗಾಗಿ ತಮ್ಮ ಬೇಸಾಯದ ಗದ್ದೆಯನ್ನು ಅಬ್ಬಾಸ್, ಅಬೂಬಕ್ಕರ್, ಪುತ್ತು ಎಂಬವರು ಬಿಟ್ಟುಕೊಟ್ಟು ಧರ್ಮ ಸಾಮರಸ್ಯ‌ ಮೆರೆದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯ ಎಂಬಲ್ಲಿ ನಡೆದಿದೆ. ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ‘ಎಲಿಯ ಗದ್ದೆ ಕೃಷಿ ಕ್ಷೇತ್ರ’ ಎಂಬ ಹೆಸರಿನಲ್ಲಿ ನಡೆಯಲಿರುವ ಭತ್ತ ಕೃಷಿಗಾಗಿ ಇಲ್ಲಿನ ಮೂವರು ತಮ್ಮ ಸ್ವಂತ ಗದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ. ಇಲ್ಲಿನ ಮಜಲುಗದ್ದೆ ಪ್ರದೇಶದ ನಿವಾಸಿಗಳಾದ ಒಂದೇ ಕುಟುಂಬಸ್ಥರಾಗಿರುವ ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ ಮತ್ತು ಕೂಡುರಸ್ತೆ

ಉತ್ಸವದ ಅಕ್ಕಿಗಾಗಿ ದೇವಳಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ: ಪುತ್ತೂರಿನಲ್ಲೊಂದು‌ ಕೋಮು ಸಾಮರಸ್ಯದ ನಡೆ Read More »

ಹರೀಶ್ ಬಂಗೇರ ಪ್ರಕರಣ: ವಿದೇಶಾಂಗ ಸಚಿವರೊಂದಿಗೆ ಶೋಭಾ ಮಾತುಕತೆ

ಉಡುಪಿ: ಹರೀಶ್ ಬಂಗೇರ ಅವರ ಕೇಸಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕು. ಶೋಭಾ ಕರಂದ್ಲಾಜೆಯವರು ವಿದೇಶಾಂಗ ರಾಜ್ಯ ಸಚಿವರಾದ ವಿ. ಮುರಳೀಧರನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹರೀಶ್ ಬಂಗೇರ ಅವರ ಹೆಸರಲ್ಲಿ ಫೆಕ್ ಫೇಸ್ ಬುಕ್ ಐಡಿ ನಿರ್ಮಿಸಿದ ಮೂಡಬಿದಿರೆಯ ಇಬ್ಬರು ಅಣ್ಣ-ತಮ್ಮಂದಿರನ್ನು ಬಂಧಿಸುವಲ್ಲಿ ನಮ್ಮ ಉಡುಪಿಯ ಸೇನ್ ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸವನ್ನು ನಿರ್ವಹಿಸಿದ್ದು, ನಂತರ ಈ ಕೇಸಿಗೆ ಸಂಬಂಧಿಸಿ ಕರ್ನಾಟಕ ಸರಕಾರದ ಮೂಲಕ ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆಸಿ, ತನಿಖೆಯನ್ನು ವೇಗಗೊಳಿಸುವಂತೆ ಸಂಸದೆ

ಹರೀಶ್ ಬಂಗೇರ ಪ್ರಕರಣ: ವಿದೇಶಾಂಗ ಸಚಿವರೊಂದಿಗೆ ಶೋಭಾ ಮಾತುಕತೆ Read More »

ದ.ಕ ಜಿಲ್ಲೆಯಲ್ಲಿ ಮಳೆ ನಡುವೆಯೂ ಕೊರೊನಾ ಹಾವಳಿ: ಆತಂಕ ಮೂಡಿಸುತ್ತಿರುವ ಪಾಸಿಟಿವಿಟಿ ದರ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವಾರು ಕಡೆ‌ ಅವಘಡಗಳು ಸಂಭವಿಸುತ್ತಿರುವ ನಡುವೆಯೇ ಕೊರೊನಾ ಹಾವಳಿಯೂ ಮುಂದುವರೆದಿದೆ. ರಾಜ್ಯದ ಒಟ್ಟು ಕೇಸ್ ಗಳನ್ನು ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ‌ಸೋಂಕಿತರ ಪ್ರಮಾಣ ದಿನೇದಿನೇ ಏರಿಕೆ ಕಾಣಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ‌ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರ 300 ಇದ್ದ ಹೊಸ ಕೇಸ್ ಗಳು‌ ಶನಿವಾರ 269 ಕ್ಕೆ ಇಳಿಕೆಯಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ದ.ಕ ಜಿಲ್ಲೆಯಲ್ಲಿ ಮಳೆ ನಡುವೆಯೂ ಕೊರೊನಾ ಹಾವಳಿ: ಆತಂಕ ಮೂಡಿಸುತ್ತಿರುವ ಪಾಸಿಟಿವಿಟಿ ದರ Read More »

ಪ್ರವಾಹದಿಂದ ದ್ವೀಪವಾದ ಗ್ರಾಮ | ಹೆರಿಗೆ ನೋವು ಬಂದ ಗರ್ಭಿಣಿ ಬೋಟ್ ಮೂಲಕ ಆಸ್ಪತ್ರೆಗೆ | ಸ್ಥಳೀಯ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಕಾರವಾರ: ಜಲಪ್ರವಾಹದಿಂದ ದ್ವೀಪದಂತಾಗಿದ್ದ ಗ್ರಾಮದಿಂದ ಹೆರಿಗೆ ನೋವು ಬಂದ ಗರ್ಭಿಣಿಯನ್ನು ಸ್ಥಳೀಯ ಯುವಕರು ಬೋಟ್ ಮೂಲಕ ಸೂಕ್ತ ಸಮಯಕ್ಕೆ ಆಸ್ಪತ್ರೆ ಸೇರಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಮೌಳಂಗಿ ಗ್ರಾಮ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಜಾಲವೃತವಾಗಿತ್ತು. ಅದೇ ಸಮಯಕ್ಕೆ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ ಹೆರಿಗೆ ನೋವು ಬಂದಿದೆ. ಊರಿನ ಹೊರಗಿನ ನಗರದ ಆಸ್ಪತ್ರೆಗೆ ತೆರಳುವ ರಸ್ತೆಗಳೆಲ್ಲವು ಭಾರೀ ಮಳೆಗೆ ಸಂಪೂರ್ಣ ಜಾಲವೃತವಾಗಿದ್ದವು. ಮಹಿಳೆಯ ಕುಟುಂಬಕ್ಕೆ ದಿಕ್ಕು ತೋಚದೆ ಅಸಹಾಯಕ ಸ್ಥಿತಿ

ಪ್ರವಾಹದಿಂದ ದ್ವೀಪವಾದ ಗ್ರಾಮ | ಹೆರಿಗೆ ನೋವು ಬಂದ ಗರ್ಭಿಣಿ ಬೋಟ್ ಮೂಲಕ ಆಸ್ಪತ್ರೆಗೆ | ಸ್ಥಳೀಯ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ Read More »

ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ತುಡಿತ ಹೊತ್ತಿದ್ದ ಬೆಳ್ತಂಗಡಿಯ ಏಕನಾಥ್ ಶೆಟ್ಟಿ | 29 ಯೋಧರ ಸಹಿತ ವಾಯುಪಡೆ ವಿಮಾನ ಕಣ್ಮರೆಯಾಗಿ ಇಂದಿಗೆ 5 ವರ್ಷ | ಇನ್ನೂ ಪತ್ತೆಯಾಗಿಲ್ಲ ಎನ್-32 ಅವಶೇಷ….!

ಮಂಗಳೂರು: ಭಾರತೀಯ ವಾಯುಪಡೆಯ ಎನ್-32 ವಿಮಾನ 29 ಯೋಧರ ಸಹಿತ ಕಣ್ಮರೆಯಾಗಿ ಇಂದಿಗೆ 5 ವರ್ಷ ಕಳೆದಿದೆ. ಅದಾದ ಬಳಿಕ, ವಿಮಾನದ ಒಂದೇ ಒಂದು ಅಥವಾ ಯಾವೊಬ್ಬ ಯೋಧರ ಮೃತದೇಹವೂ ಸಿಗದೇ ಪ್ರಕರಣ ಇಂದಿಗೂ ನಿಗೂಢವಾಗಿ ಉಳಿದಿದೆ. ಭಾರತೀಯ ವಾಯುಸೇನೆಯ ಎನ್-32 ವಿಮಾನ, 2016 ಜುಲೈ 22ರಂದು ಚೆನೈನ ತಂಬಾರಮ್ ಏರ್‌ಬೇಸ್‌ನಿಂದ ಅಂಡಮಾನಿನ ಫೋರ್ಟ್‌ಬ್ಲೇರ್ ನೆಲೆಗೆ ತೆರಳುತ್ತಿತ್ತು. ವಾಯುಸೇನೆಯ 29 ಯೋಧರಿದ್ದ ವಿಮಾನ ಹೊರಟು ಕೆಲವೇ ಸಮಯದಲ್ಲಿ ಸಂಪರ್ಕ ಕಡಿತವಾಗಿತ್ತು. ಬಳಿಕ ನಾಪತ್ತೆ ಯಾಗಿತ್ತು. ಕಣ್ಮರೆಯಾದ ಬಳಿಕ

ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ತುಡಿತ ಹೊತ್ತಿದ್ದ ಬೆಳ್ತಂಗಡಿಯ ಏಕನಾಥ್ ಶೆಟ್ಟಿ | 29 ಯೋಧರ ಸಹಿತ ವಾಯುಪಡೆ ವಿಮಾನ ಕಣ್ಮರೆಯಾಗಿ ಇಂದಿಗೆ 5 ವರ್ಷ | ಇನ್ನೂ ಪತ್ತೆಯಾಗಿಲ್ಲ ಎನ್-32 ಅವಶೇಷ….! Read More »

ಸುಳ್ಯ : ಪಕ್ಕದ ಮನೆ ಅಜ್ಜಿಯ ಯಾಮಾರಿಸಿ ಸಾಲ ಮಾಡಿ ಮೊಬೈಲ್ ಖರೀದಿಸಿದ | ಮನೆಯವರ ಜೊತೆ ಯುವಕನೂ ನಾಪತ್ತೆ

ಸುಳ್ಯ: ಅಂಗಡಿಯಲ್ಲಿ ಪಕ್ಕದ ಮನೆ ಅಜ್ಜಿ ಹೆಸರಿನಲ್ಲಿ ಸಾಲ ಮಾಡಿ ಮೊಬೈಲ್ ಖರೀದಿಸಿ ಕಂತು ಪಾವತಿಸದೆ ಯುವಕ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ನಗರದ ನಾವೂರು ನಿವಾಸಿ ಹ್ಯಾರಿಸ್ ಎಂಬ ಯುವಕ ಅಜ್ಜಿಯನ್ನು ಯಾಮಾರಿಸಿದವ. ಈತ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಕದೀಜ ಎಂಬ ಅಜ್ಜಿಯನ್ನು ನಂಬಿಸಿ ನಗರದ ಮೊಬೈಲ್ ಅಂಗಡಿ ಕರೆದೊಯ್ದಿದ್ದಾನೆ. ಅಲ್ಲಿ ಅಜ್ಜಿಯಿಂದ ಬ್ಯಾಂಕ್ ಅಕೌಂಟ್ ಬುಕ್, ಆಧಾರ್ ಕಾರ್ಡ್, ಫೋಟೋ ಇನ್ನಿತರ ದಾಖಲೆ ಪತ್ರಗಳನ್ನು ನೀಡಿ, ಅಜ್ಜಿಯನ್ನು ತನ್ನ ತಾಯಿಯೆಂದು ಮೊಬೈಲ್ ಅಂಗಡಿಯವರಿಗೆ

ಸುಳ್ಯ : ಪಕ್ಕದ ಮನೆ ಅಜ್ಜಿಯ ಯಾಮಾರಿಸಿ ಸಾಲ ಮಾಡಿ ಮೊಬೈಲ್ ಖರೀದಿಸಿದ | ಮನೆಯವರ ಜೊತೆ ಯುವಕನೂ ನಾಪತ್ತೆ Read More »

ಕರಾವಳಿಯಲ್ಲಿಂದು ಬಕ್ರೀದ್ ಸಂಭ್ರಮ| ಕೋವಿಡ್ ಮಾರ್ಗಸೂಚಿಯೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿರುವ ಮುಸ್ಲಿಂ ಬಾಂಧವರು

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಬುಧವಾರ ಕರಾವಳಿಯಲ್ಲಿ ಆಚರಿಸಲಾಗುತ್ತದೆ. ಸರಕಾರದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಮಸೀದಿ ಗಳಲ್ಲಿ ಹಬ್ಬ ಆಚರಿಸಲು ಸಿದ್ಧತೆ ನಡಸಲಾಗಿದೆ. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್, ಈದ್‌ ಖುತಾº ನೆರವೇರಲಿದೆ. ಮಾಸ್ಕ್ ಧಾರಣೆ ಕಡ್ಡಾಯ, 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕ್ಕಿಂತ ಕೆಳಗಿನವರು ಮಸೀದಿಗೆ ತೆರಳಬಾರದು. ನಮಾಝ್ ನಿರ್ವಹಿಸುವವರ ಮಧ್ಯೆ ಕನಿಷ್ಠ

ಕರಾವಳಿಯಲ್ಲಿಂದು ಬಕ್ರೀದ್ ಸಂಭ್ರಮ| ಕೋವಿಡ್ ಮಾರ್ಗಸೂಚಿಯೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿರುವ ಮುಸ್ಲಿಂ ಬಾಂಧವರು Read More »

ಸುಳ್ಯ: ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಪಂಜಿಕಲ್ಲು ತೂಗುಸೇತುವೆ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಸ್ಥಳೀಯ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ನಾಗರಿಕರು ಶವವನ್ನು ಮೇಲಕ್ಕೆತ್ತಿದ್ದಾರೆ. ಇಂದು ತೂಗುಸೇತುವೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರಿಗೆ ನೀರಿನ ಮೇಲೆ ಪೊದೆಯಲ್ಲಿ ಶವವೊಂದು ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ಶವ ಕಂಡವರು ತಕ್ಷಣ ಸ್ಥಳೀಯ ಜನರಿಗೆ ಮಾಹಿತಿ ನೀಡಿದ್ದಾರೆ. ನಂತರ ಶವವನ್ನು ಮೇಲಕ್ಕೆತ್ತಲಾಗಿದೆ. ಅಪರಿಚಿತ ಗಂಡಸಿನ ಶವ ಇದಾಗಿದ್ದು ಸದ್ಯ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.

ಸುಳ್ಯ: ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ Read More »