ಕರಾವಳಿ

ಮಂಗಳೂರು ಶೂಟೌಟ್ ಪ್ರಕರಣ| ಮಗನ ಸಾವು ದೃಢೀಕರಿಸಿದ ವೈದ್ಯರು| ಅಪ್ಪ ಜೈಲು ಪಾಲು

ಮಂಗಳೂರು: ನಗರದ ಮೋರ್ಗನ್ ಗೇಟ್ಸ್ ನ ಶೂಟೌಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಸುಧೀಂದ್ರ ಪ್ರಭು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಗರದ ಮೋರ್ಗನ್ಸ್ ಗೇಟ್ ನ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಅವರು ಅ.5ರಂದು ಕೆಲಸದಾಳುಗಳ ಮೇಲೆ ಕುಪಿತಗೊಂಡು ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರು. ಆದರೆ ಇದು ತಪ್ಪಿ ಅವರ ಮಗ ಸುಧೀಂದ್ರ ಪ್ರಭುವಿಗೆ ತಗುಲಿತ್ತು. ತಕ್ಷಣ ಆತನನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಆ ಬಳಿಕ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು. […]

ಮಂಗಳೂರು ಶೂಟೌಟ್ ಪ್ರಕರಣ| ಮಗನ ಸಾವು ದೃಢೀಕರಿಸಿದ ವೈದ್ಯರು| ಅಪ್ಪ ಜೈಲು ಪಾಲು Read More »

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯ ಅರಣ್ಯಾಧಿಕಾರಿಗಳ ದಾಂದಲೆ| ಕೃ಼ಷಿಕನಿಗೆ ಜೀವ ಬೆದರಿಕೆ| ಮಡಿಕೇರಿ ಪೊಲೀಸರಿಂದ ಕೇಸು ದಾಖಲು|

ಸುಳ್ಯ:ಅಪರೂಪದ ಪ್ರಕರಣವೊಂದರಲ್ಲಿ ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮ ಕೃಷಿ ಚಟುವಟಿಕೆ ನಡೆಸಿರುವುದೆಂದು ಆರೋಪಿಸಿ ಕಾನೂನು ಬಾಹಿರವಾಗಿ ಕಡಿದು ನಾಶಗೊಳಿಸಿದ ಅರಣ್ಯಾಧಿಕಾರಿ ಸಹಿತ ನಾಲ್ವರ ವಿರುದ್ದ ಪೊಲೀಸ್ ಕೇಸು ದಾಖಲಾದ ಘಟನೆ ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ. ಸುಳ್ಯ ಫಾರೆಸ್ಟರ್ ಚಂದ್ರ ಶೇಖರ ( ಚಂದ್ರು), ಗಾರ್ಡ್ ಚಿದಾನಂದ ಹಾಗು ಅರಣ್ಯವೀಕ್ಷಕರಾದ ಸುಂದರ ಕೆ.ಮತ್ತು ಮನೋಜ್ ವಿರುದ್ದ ಮಡಿಕೇರಿ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ: ಕಳೆದೊಂದು ವರ್ಷದ ಹಿಂದೆ ಮಡಿಕೇರಿ ತಾಲೂಕು

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯ ಅರಣ್ಯಾಧಿಕಾರಿಗಳ ದಾಂದಲೆ| ಕೃ಼ಷಿಕನಿಗೆ ಜೀವ ಬೆದರಿಕೆ| ಮಡಿಕೇರಿ ಪೊಲೀಸರಿಂದ ಕೇಸು ದಾಖಲು| Read More »

ಗ್ರಾ.ಪಂ ಸದಸ್ಯನಿಂದ ಮಹಿಳೆಗೆ ಲೈಂಗಿಕ ಕಿರುಕುಳ| ಆರೋಪಿಯ ಬಂಧನ

ಮಂಗಳೂರು: ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮುನ್ನೂರು ಗ್ರಾಪಂ ಸದಸ್ಯನ ವಿರುದ್ಧ ನಿನ್ನೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. ಘಟನೆಯು 20 ದಿನದ ಹಿಂದೆ ನಡೆದಿದ್ದು, ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸಂತ್ರಸ್ತ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಸಲೀಲೆ ದೃಶ್ಯವು ಅಧ್ಯಕ್ಷರ ಕೊಠಡಿಯಲ್ಲಿದ್ದ ಸಿಸಿಟಿವಿ ಯಲ್ಲಿ ದಾಖಲಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ

ಗ್ರಾ.ಪಂ ಸದಸ್ಯನಿಂದ ಮಹಿಳೆಗೆ ಲೈಂಗಿಕ ಕಿರುಕುಳ| ಆರೋಪಿಯ ಬಂಧನ Read More »

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಹಾಸ್ಟೇಲ್ ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಅ. 6 ಬುಧವಾರ ಘಟನೆ ವರದಿಯಾಗಿದೆ. ಮೃತರನ್ನು ಕೇರಳ ಮೂಲದ ನೀನಾ (19) ಎಂದು ಗುರುತಿಸಲಾಗಿದೆ. ಇವರು 2020-21 ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ಈ ಹಿನ್ನಲೆ ಹಾಸ್ಟೇಲ್ ನಲ್ಲಿ ವಾಸವಾಗಿದ್ದರು. ಇದೀಗ ಹಾಸ್ಟೆಲ್ ನಲ್ಲಿ ವಾಸವಾಗಿದ್ದ ನೀನಾ ಬಾತ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಹೆತ್ತವರಿಗೆ

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿಯ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ| ಕುಕ್ಕೆ, ಕದ್ರಿ, ಕಟೀಲು ಸಹಿತ ಹಲವು ಪುಣ್ಯಕ್ಷೇತ್ರಗಳಲ್ಲಿ ಸೂಚನಾ ಬ್ಯಾನರ್ ಅಳವಡಿಕೆ

ಮಂಗಳೂರು: ಕರಾವಳಿಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಹಿಂದು ಸಂಘಟನೆಗಳ ಒತ್ತಾಯದ ಬೆನ್ನಲ್ಲೇ ಕದ್ರಿ ಮಂಜುನಾಥ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ವಸ್ತ್ರ ಸಂಹಿತೆ ಪಾಲಿಸಬೇಕೆಂದು ಬೋರ್ಡ್ ಹಾಕಲಾಗಿತ್ತು. ಇದೀಗ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬ್ಯಾನರ್ ಹಾಕಲಾಗಿದೆ. ದೇವಸ್ಥಾನಗಳಲ್ಲಿ ಹಿಂದು ಸಂಪ್ರದಾಯದಂತೆ ವಸ್ತ್ರ ಸಂಹಿತೆ ಪಾಲನೆ ಮಾಡುವಂತಾಗಬೇಕು. ದೇವಸ್ಥಾನದ ಪಾವಿತ್ರ್ಯ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು ಎಂದು ಹಿಂದೂ

ಕರಾವಳಿಯ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ| ಕುಕ್ಕೆ, ಕದ್ರಿ, ಕಟೀಲು ಸಹಿತ ಹಲವು ಪುಣ್ಯಕ್ಷೇತ್ರಗಳಲ್ಲಿ ಸೂಚನಾ ಬ್ಯಾನರ್ ಅಳವಡಿಕೆ Read More »

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ| ಅನೇಕ ಕಡೆ ಕೃಷಿ ಹಾನಿ, ಜನಜೀವನ ಅಸ್ತವ್ಯಸ್ತ|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಹಾಗೂ ಜಿಲ್ಲೆಯ ಕೆಲವೆಡೆಗಳಲ್ಲಿ ಸೋಮವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಹಿತ ಹಲವು ರಸ್ತೆಯಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿದು, ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಸುಳ್ಯ ತಾಲೂಕಿನ ಮಡಪ್ಪಾಡಿ, ಮರ್ಕಂಜ ಭಾಗದಲ್ಲಿ ಒಂದು ಗಂಟೆ ಅವಧಿಯಲ್ಲಿ 184 ಮಿ.ಮೀ. ಮಳೆ ದಾಖಲಾಗಿದೆ. ಪುತ್ತೂರು ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದರೆ, ಕಡಬ ಭಾಗದಲ್ಲಿ ಗುಡುಗು ಮಳೆ ಅಬ್ಬರ ಜೋರಾಗಿತ್ತು. ಬಂಟ್ವಾಳ, ಮಂಗಳೂರು,

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ| ಅನೇಕ ಕಡೆ ಕೃಷಿ ಹಾನಿ, ಜನಜೀವನ ಅಸ್ತವ್ಯಸ್ತ| Read More »

ಸುಳ್ಯ : ಪಯಸ್ವಿನಿ ನದಿಗೆ “ಮರಳು” ಕಂಟಕ! ಅಧಿಕಾರಿಗಳ ಮೌನಕ್ಕೆ ಸ್ಥಳೀಯರ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಪೆಯಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಒಂದೊಮ್ಮೆ ಕಾಟಾಚಾರಕ್ಕೆ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ಎಂದಿನಂತೆ ದಂಧೆ ಮುಂದುವರಿಯುವುದು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಸುಬ್ರಮಣ್ಯ, ಧರ್ಮಸ್ಥಳದ ಬಳಿಕ ಸುಳ್ಯ ತಾಲೂಕಿನ ಅರಂತೋಡು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ದಿನವೊಂದಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದೆ.ಸುಳ್ಯ ತಾಲೂಕಿನ ಅರಂತೋಡು ಪೇಟೆ ದಾಟಿ ಮುಂದಕ್ಕೆ ಹೋಗುವಾಗ “ಕಾಮಧೇನು ಹೋಟೆಲ್” ಮುಂಭಾಗದ ರಸ್ತೆಯಲ್ಲಿ

ಸುಳ್ಯ : ಪಯಸ್ವಿನಿ ನದಿಗೆ “ಮರಳು” ಕಂಟಕ! ಅಧಿಕಾರಿಗಳ ಮೌನಕ್ಕೆ ಸ್ಥಳೀಯರ ಆಕ್ರೋಶ Read More »

ಸುಳ್ಯ: ಅ. 5 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಡಿಕೆಶಿ

ಸುಳ್ಯ: ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ವ್ಯಕ್ತಿಯನ್ನು ಬಂಧನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯದ ನ್ಯಾಯಾಲಯ ಪದೇ ಪದೇ ನೋಟಿಸ್ ನೀಡಿದ್ದರು ಆಗಮಿಸದಿದ್ದ ಡಿ.ಕೆ ಶಿವಕುಮಾರ್ ಇದೀಗ ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್ ಅವರಿಗೆ ನ್ಯಾಯಾಲಯವು ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗದ ಅವರಿಗೆ ಸೆಪ್ಟೆಂಬರ್ 29 ರಂದು ವಾರಂಟ್ ಜಾರಿಗೊಳಿಸಿ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಇಲಾಖೆಯ ಉನ್ನತ

ಸುಳ್ಯ: ಅ. 5 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಡಿಕೆಶಿ Read More »

ಮಂಗಳೂರು ನಗರದಲ್ಲಿ ಚಿರತೆಯ ಓಡಾಟ! ಬೆಚ್ಚಿಬಿದ್ದ ಕುಡ್ಲ ಜನತೆ

ಮಂಗಳೂರು: ಮಂಗಳೂರು ನಗರದ ಮರೋಳಿ ಎಂಬಲ್ಲಿ ಚಿರತೆಯ ಓಡಾಟ ಕಂಡುಬಂದಿದ್ದು, ಮಂಗಳೂರಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ಚಿರತೆಯ ಓಡಾಟ ಕಂಡು ಬಂದಿದೆ. ಈ ಹಿನ್ನಲೆ ಮಂಗಳೂರು ಅರಣ್ಯ ವಲಯಾಧಿಕಾಧಿಕಾರಿ ಪ್ರಶಾಂತ್ ಪೈ ನೇತೃತ್ವದಲ್ಲಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದದೆ. ಇನ್ನೂ ಇದು ಜನವಸತಿ ಇರುವ ಪ್ರದೇಶವಾಗಿರುವ ಕಾರಣ ಚಿರತೆಯ ಓಡಾಟ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಂಗಳೂರು ನಗರದಲ್ಲಿ ಚಿರತೆಯ ಓಡಾಟ! ಬೆಚ್ಚಿಬಿದ್ದ ಕುಡ್ಲ ಜನತೆ Read More »

ಅ. 7 ರಿಂದ ಅ.16ವರೆಗೆ ಮಂಗಳೂರು ದಸರಾ| ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ವ್ಯವಸ್ಥೆ

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಪ್ರತಿ ವರ್ಷ ನಡೆಯುವ ‘ಮಂಗಳೂರು ದಸರಾ’ವನ್ನು ಈ ಬಾರಿಯೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆಯೊಂದಿಗೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಕೊರೊನಾದಿಂದಾಗಿ ಈ ಬಾರಿಯೂ ಮಂಗಳೂರು ದಸರಾ ಮರೆವಣಿಗೆ ಇಲ್ಲದೆ ಶಾರದಾ ಮೂರ್ತಿಯ ವಿಸರ್ಜನೆಯನ್ನು ಕಳೆದ ವರ್ಷದಂತೆ ಈ ವರ್ಷವೂ, ಕ್ಷೇತ್ರದ ಆವರಣದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ. ಅದೇ ರೀತಿ ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷ ವಾಕ್ಯದಡಿ ದಸರಾ ಕಾರ್ಯಕ್ರಮ ನಡೆಯಲಿದೆ.

ಅ. 7 ರಿಂದ ಅ.16ವರೆಗೆ ಮಂಗಳೂರು ದಸರಾ| ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ವ್ಯವಸ್ಥೆ Read More »