ಕರಾವಳಿ

ಸುಳ್ಯ : ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ…!! ಯುವಕನನ್ನು ನೂರು ಮೀಟರ್ ಎಳೆದೊಯ್ದಿದ ಆನೆ|ಯುವಕನಿಗೆ ಗಂಭೀರ

ಸಮಗ್ರ ನ್ಯೂಸ್: ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದಲ್ಲಿ ನಡೆದಿದೆ.‌ ಘಟನೆಯಲ್ಲಿ ಯುವಕ ಗಂಭೀರ ಗಾಯಗೊಂಡಿದ್ದು, ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡ ಯುವಕನನ್ನು ಕೋನಡ್ಕ‌ ನಿವಾಸಿ ಗುರುಪ್ರಸಾದ್ (21) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಎಂಬಲ್ಲಿ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಗುರುಪ್ರಸಾದ್ ಮೇಲೆ ಕಾಡಾನೆ ದಾಳಿ ನಡೆಸಿದೆ. ಯುವಕನ ಮೇಲೆ ದಾಳಿಗೈದ ಆನೆ ಆತನನ್ನು ನೂರು ಮೀಟರ್ ಗಳವರೆಗೆ

ಸುಳ್ಯ : ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ…!! ಯುವಕನನ್ನು ನೂರು ಮೀಟರ್ ಎಳೆದೊಯ್ದಿದ ಆನೆ|ಯುವಕನಿಗೆ ಗಂಭೀರ Read More »

ಮಂಗಳೂರು: ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಪಡ್ಡೆಗಳ ಬಂದಿಸಿದ ಪೊಲೀಸರು

ಸಮಗ್ರ ನ್ಯೂಸ್: ನಗರದ ಹಲವೆಡೆ ಬೈಕ್ ವ್ಹೀಲಿಂಗ್ ನಡೆಸಿದ್ದ 8 ಮಂದಿಯನ್ನ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪೊಲೀಸರು ಕಾರ್ಯಾಚರಣೆಗಿಳಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ನೇತೃತ್ವದ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಒಟ್ಟು ಐದು ಪ್ರಕರಣಗಳನ್ನ ದಾಖಲಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನ ಇಲ್ಯಾಸ್, ಸುಹೈಲ್,‌ ಅಬೂಬಕ್ಕರ್ ಸಿದ್ದಿಕ್, ಸಫ್ವಾನ್, ಶರೀಫ್, ತೌಸಿಫ್, ಅನೀಝ್, ಕಿಶನ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಮಂಗಳೂರು: ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಪಡ್ಡೆಗಳ ಬಂದಿಸಿದ ಪೊಲೀಸರು Read More »

ಗೂಗಲ್ ನಲ್ಲಿದ್ದ ಕಸ್ಟಮರ್ ಕೇರ್ ಗೆ ಕರೆ ಮಾಡಿ 1.9 ಲಕ್ಷ ಕಳಕೊಂಡ ಮಂಗಳೂರು ಗ್ರಾಹಕ

ಸಮಗ್ರ ನ್ಯೂಸ್: ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಮಂಗಳೂರಿನ ವ್ಯಕ್ತಿಯೊಬ್ಬ 1.92 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮೂಲಕ ವಂಚಕರ ಇನ್ನೊಂದು ಮುಖವಾಡ ಬಯಲಾಗಿದೆ. ನೀವೆನಾದರೂ ಗೂಗಲ್‌ನಲ್ಲಿ ಹೆಲ್ಪ್ ಲೈನ್ ನಂಬರ್‌ಗಳಿಗೆ ಸರ್ಚ್ ಮಾಡುತ್ತಿದ್ದರೆ ಒಮ್ಮೆ ಆಲೋಚಿಸುವುದು ಉತ್ತಮ. ಏಕೆಂದರೆ ಸೈಬರ್ ವಂಚಕರು ಗೂಗಲ್‌ನಲ್ಲೇ ಫೇಕ್ ಹೆಲ್ಪ್ ಲೈನ್ ನಂಬರ್ ಹಾಕಿ ಹಣ ದೋಚಲು ಶುರು ಮಾಡಿದ್ದಾರೆ. ಗೂಗಲ್‌ನಲ್ಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ

ಗೂಗಲ್ ನಲ್ಲಿದ್ದ ಕಸ್ಟಮರ್ ಕೇರ್ ಗೆ ಕರೆ ಮಾಡಿ 1.9 ಲಕ್ಷ ಕಳಕೊಂಡ ಮಂಗಳೂರು ಗ್ರಾಹಕ Read More »

ಸುಳ್ಯ: ಸಂಸದರ ಆದರ್ಶ ಗ್ರಾಮದಲ್ಲಿ ನುಂಗಣ್ಣರ ಕಾರುಬಾರು| ಶಾಲಾ ಜಾಗಕ್ಕೆ ಕನ್ನ; ಗ್ರಾಮಸ್ಥರಿಂದ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು

ಸಮಗ್ರ ನ್ಯೂಸ್: ಶಾಲೆಯ ಜಾಗಕ್ಕೆ ಕನ್ನ ಹಾಕಿ ಅತಿಕ್ರಮಣ ಮಾಡುವುದನ್ನು ನಿಲ್ಲಿಸಲು ಗ್ರಾಮಸ್ಥರು ಪ್ರಧಾನಮಂತ್ರಿಗಳ ಮೊರೆ ಹೋದ ಘಟನೆ ಸಂಸದ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಬಳ್ಪದಲ್ಲಿ ನಡೆದಿದೆ. ಕಳೆದ 7 ವರ್ಷಗಳಿಂದ ಶಾಲೆಯ ಜಮೀನನ್ನು ಉಳಿಸುವ ನಿಟ್ಟಿನಲ್ಲಿ ಹಲವು ರೀತಿಯ ಹೋರಾಟ ನಡೆಸಿಕೊಂಡು ಬರುತ್ತಿರುವ ಗ್ರಾಮಸ್ಥರಿಗೆ ಈವರೆಗೂ ನ್ಯಾಯ ಸಿಗದೇ ಇರುವುದು ಇದೀಗ ಬೆಳಕಿಗೆ ಬಂದಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ದತ್ತು ಗ್ರಾಮವಾದ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಹಿರಿಯ

ಸುಳ್ಯ: ಸಂಸದರ ಆದರ್ಶ ಗ್ರಾಮದಲ್ಲಿ ನುಂಗಣ್ಣರ ಕಾರುಬಾರು| ಶಾಲಾ ಜಾಗಕ್ಕೆ ಕನ್ನ; ಗ್ರಾಮಸ್ಥರಿಂದ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು Read More »

ಯುದ್ದಭೂಮಿಯ ಕಹಿ ಅನುಭವಗಳನ್ನು ಬಿಚ್ಚಿಟ್ಟ ಉಡುಪಿಯ ಆನಿಫ್ರೆಡ್ ಡಿಸೋಜಾ

ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ದಕ್ಷಿಣ ಭಾರತೀಯರಾದ ನಮಗೆ ಯುದ್ಧದ ಮೊದಲ ಅನುಭವವಾಯಿತು. ಸಾವು ಗೆದ್ದು ಬಂದ ಅನುಭವವಾಯಿತು ಎಂದು ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿನಿ ಅನೀಫ್ರೆಡ್ ಡಿಸೋಜ ಕಹಿ ಅನುಭವವನ್ನು ಹಂಚಿಕೊಂಡಿದ್ದಾಳೆ. ದೈಜಿವರ್ಲ್ಡ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅನೀಫ್ರೆಡ್, ತಂದೆ ತಾಯಿಯನ್ನು ನೋಡುವ ಆಸೆಯಿಂದ ನಾನು ಮತ್ತೆ ಬದುಕಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಖಾರ್ಕೀವ್ ಕೀವ್ ಗೆ ವಿಮಾನ ಹೆಲಿಕಾಪ್ಟರ್ ತೆರಳುವ ಪರಿಸ್ಥಿತಿ ಇರಲಿಲ್ಲ. ಈ ಕಾರಣದಿಂದ ಕಷ್ಟವಾಯಿತು. ನಮಗೆ ಭಾರತದ ಮೇಲೆ ಪ್ರೀತಿ ಇತ್ತು.

ಯುದ್ದಭೂಮಿಯ ಕಹಿ ಅನುಭವಗಳನ್ನು ಬಿಚ್ಚಿಟ್ಟ ಉಡುಪಿಯ ಆನಿಫ್ರೆಡ್ ಡಿಸೋಜಾ Read More »

ಪುತ್ತೂರು: ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಗೆ ‘ಕಾಲನ ಕರೆ’ | ಹೃದಯಾಘಾತದಿಂದ ಸಾವನ್ನಪ್ಪಿದ ಸಂಪ್ಯ ಠಾಣಾ ಪೇದೆ

ಸಮಗ್ರ ನ್ಯೂಸ್; ಕರ್ತವ್ಯಕ್ಕೆ ಹೊರಟು ನಿಂತ ಪೋಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಾರ್ಚ್ 9 ರಂದು ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿ ಗಣೇಶ್ ಹೃದಯಾಘಾತದಿಂದ ಸಾವಿಗೀಡಾದ ಪೇದೆಯಾಗಿದ್ದು, ಕೇರಳ-ಕರ್ನಾಟಕ‌ ಗಡಿಯ ಸ್ವರ್ಗ‌ ಎಂಬಲ್ಲಿ ಗಣೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಕೂಡಾ ಎಂದಿನಂತೆ ಕರ್ತವ್ಯಕ್ಕೆ ಹೊರಟು ನಿಂತಿದ್ದ ಸಂದರ್ಭ‌ ಈ ಘಟನೆ ನಡೆದಿದ್ದು, ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೋಲೀಸ್‌ ಅಧಿಕಾರಿಗಳು ಗಣೇಶ್ ಸಾವಿಗೆ

ಪುತ್ತೂರು: ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಗೆ ‘ಕಾಲನ ಕರೆ’ | ಹೃದಯಾಘಾತದಿಂದ ಸಾವನ್ನಪ್ಪಿದ ಸಂಪ್ಯ ಠಾಣಾ ಪೇದೆ Read More »

ಮಂಗಳೂರು: ಮಳೆ ಅವಾಂತರ; ಲಾರಿ ಮೇಲೆ ಬಿದ್ದ ಮರ

ಸಮಗ್ರ ನ್ಯೂಸ್: ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಸ್ಟೇಟ್ ಬ್ಯಾಂಕ್ ಬಳಿಯಿರುವ ರೋಜಾರಿಯೋ ರಸ್ತೆಯಲ್ಲಿ ಬೃಹತ್​ ಗಾತ್ರದ ಮರವೊಂದು ರಸ್ತೆಬದಿ ನಿಂತಿದ್ದ ಲಾರಿ ಮೇಲೆ ಉರುಳಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮರ ಬೀಳುತ್ತಿದ್ದಂತೆ ಚಾಲಕ ಪುರುಷೋತ್ತಮ ಲಾರಿಯಿಂದ ಕೆಳಗೆ ಜಿಗಿದಿದ್ದಾರೆ. ಶಾಲೆ-ಕಾಲೇಜು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಬಿಎಸ್​ಎನ್​ಎಲ್ ಆವರಣದಿಂದ ಕಂಪೌಂಡ್ ಸಮೇತ ಮರ ಉರುಳಿದೆ. ಪಾಂಡೇಶ್ವರ ಅಗ್ನಿಶಾಮಕ ದಳದಿಂದ ಮರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಮರ ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಮಂಗಳೂರು: ಮಳೆ ಅವಾಂತರ; ಲಾರಿ ಮೇಲೆ ಬಿದ್ದ ಮರ Read More »

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ಮಾಂಸದಂಧೆ| ಸಿಕ್ಕಿಬಿದ್ದ ಖದೀಮರಲ್ಲಿ ಮೂವರು ವೃದ್ಧರು!; ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಕಮಿಷನರ್|

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮತ್ತೊಂದು ಕರಾಳಮುಖ ಬಯಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ಥರನ್ನು ಮಂಗಳೂರು ಪೊಲೀಸರು ರಕ್ಷಿಸಿದ್ದರು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಮಂಗಳೂರು ಪೊಲೀಸರು ಮತ್ತೆ ಪ್ರತ್ಯೇಕ 4 ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ಮಾಂಸದಂಧೆ| ಸಿಕ್ಕಿಬಿದ್ದ ಖದೀಮರಲ್ಲಿ ಮೂವರು ವೃದ್ಧರು!; ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಕಮಿಷನರ್| Read More »

ಸುಳ್ಯ:ಹಿಜಾಬ್ ವಿವಾದ ಕುರಿತು ತಾಲೂಕು ಮುಸ್ಲಿಂ ಒಕ್ಕೂಟದಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ

ಸಮಗ್ರ ನ್ಯೂಸ್: ರಾಜ್ಯದಾದ್ಯಂತ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಹಿಜಾಬ್ ವಿವಾದ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಯದ ಎನ್ ಎಂ ಸಿ ಪದವಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ತರಗತಿಗೆ ಪ್ರವೇಶ ನಿರಾಕರಣೆ ಸಂಬಂಧಿಸಿ ಮುಸ್ಲಿಂ ವಿದ್ಯಾರ್ಥಿಗಳ ಮತ್ತು ಪೋಷಕರ ಸಭೆ ಸುಳ್ಯದ ಅನ್ಸಾರಿಯ ಸಭಾಭವನದಲ್ಲಿ ತಾಲ್ಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಎನ್ ಎಂ ಸಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳು, ಪೋಷಕರು, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು ಹಿಜಾಬ್

ಸುಳ್ಯ:ಹಿಜಾಬ್ ವಿವಾದ ಕುರಿತು ತಾಲೂಕು ಮುಸ್ಲಿಂ ಒಕ್ಕೂಟದಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ Read More »

ಸುಳ್ಯ : ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳ ಕಳವು|
ಹಿಂತಿರುಗಿಸದಿದ್ದಲ್ಲಿ ಕಾರ್ಣಿಕ ಸ್ಥಳ ಕ್ಕೆ ಹರಕೆ ಹೊರಲಾಗುವುದು| ಸ್ಟೇಟಸ್ ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ತಾಲೂಕಿನ ಅಮರ ಮುಡ್ನೂರು ಸಮೀಪದ ಪೈಲಾರಿನಲ್ಲಿ‌ ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳನ್ನು ಕಳವು ಆಗಿರುವ ಘಟನೆ ಮಾ. 5 ರ ಶನಿವಾರ ನಡೆದಿದೆ. “ಗಮನಿಸಿ:ದಿನಾಂಕ 5 ಮಾರ್ಚ್ 2022ನೇ ಶನಿವಾರದಂದು ರಾತ್ರಿ ಪೈಲಾರಿನ ಮಡಪ್ಪಾಡಿ ಬಳಿ ನಿಲ್ಲಿಸಿದ್ದ ಜೀಪಿನಿಂದ ನಗದು ಮತ್ತು ಜೀಪಿನ ದಾಖಲೆಗಳು ಕಳವಾಗಿವೆ. ಜೀಪಿನ ಲಾಕರನ್ನು ಒಡೆದು ಸುಮಾರು ರೂ 30,000.00 ನಗದು ಮತ್ತು ದಾಖಲೆಗಳನ್ನು ಅಪರಿಚಿತರು ಲಪಟಾಯಿಸಿದ್ದು, ಈ ಕೃತ್ಯವೆಸಗಿದವರು ಕೂಡಲೇ ನಗದು ಮತ್ತು ದಾಖಲೆಗಳನ್ನು ಹಿಂದಿರುಗಿಸತಕ್ಕದ್ದು

ಸುಳ್ಯ : ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳ ಕಳವು|
ಹಿಂತಿರುಗಿಸದಿದ್ದಲ್ಲಿ ಕಾರ್ಣಿಕ ಸ್ಥಳ ಕ್ಕೆ ಹರಕೆ ಹೊರಲಾಗುವುದು| ಸ್ಟೇಟಸ್ ಪೋಸ್ಟರ್ ವೈರಲ್
Read More »