ಕರಾವಳಿ

ಮಂಗಳೂರು: ಬಸ್ ರಸ್ತೆಯಲ್ಲಿ ಅಡ್ಡವಾಗಿಟ್ಟು ಸಿಬ್ಬಂದಿಯ ಗುಂಪುಘರ್ಷಣೆ| ನಾಲ್ವರು ಅರೆಸ್ಟ್

ಸಮಗ್ರ ನ್ಯೂಸ್: ಸಮಯ ಪಾಲನೆಯ ವಿಷಯದಲ್ಲಿ ಎರಡು ಬಸ್‌ಗಳನ್ನು ರಸ್ತೆಯಲ್ಲಿ ಅಡ್ಡವಾಗಿಟ್ಟುಕೊಂಡು ಪರಸ್ಪರ ಜಗಳವಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಆರೋಪದಲ್ಲಿ ಉರ್ವ ಪೊಲೀಸರು ನಾಲ್ಕು ಮಂದಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಬಸ್ ಸಿಬ್ಬಂದಿಗಳಾದ ಗುಣರಾಜ್ ಶೆಟ್ಟಿ, ಸ್ಟೀವನ್ ನೆಲ್ಸನ್ ನೊರೊನ್ಹಾ, ಧನರಾಜ್ ಮತ್ತು ಶರತ್ ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಶುಕ್ರವಾರ ಎರಡು ಬಸ್‌ಗಳನ್ನು ಪರಸ್ಪರ ಅಡ್ಡವಾಗಿಟ್ಟು ಚಾಲಕ ಮತ್ತು ನಿರ್ವಾಹಕರು ಬೈದಾಡಿ ತಳ್ಳಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ

ಮಂಗಳೂರು: ಬಸ್ ರಸ್ತೆಯಲ್ಲಿ ಅಡ್ಡವಾಗಿಟ್ಟು ಸಿಬ್ಬಂದಿಯ ಗುಂಪುಘರ್ಷಣೆ| ನಾಲ್ವರು ಅರೆಸ್ಟ್ Read More »

ಮಂಗಳೂರು: ನಾಳೆ ನೇರ ನೇಮಕಾತಿ ಸಂದರ್ಶನ

ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆಯ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜಿಲ್ಲಾ ಉದ್ಯೋಗ ಕೇಂದ್ರದ ವತಿಯಿಂದ ಮುತ್ತೂಟ್ ಫೈನಾನ್ಸ್ ಪ್ರೈ.ಲಿ. ಕೋಜೆಂಟ್ ಇ-ಸರ್ವೀಸಸ್ ಪ್ರೈ.ಲಿ.ಸಂಸ್ಥೆಗಳಿಂದ ಮಾ.21ರ ಬೆಳಗ್ಗೆ 10.30 ರಿಂದ 12.30ರವರೆಗೆ ನೇರ ನೇಮಕಾತಿ ಹಮ್ಮಿಕೊಳ್ಳಲಾಗಿದೆ. ಪಿಯುಸಿ ಹಾಗೂ ಯಾವುದೇ ಪದವಿಯಲ್ಲಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡಾಟಾ ದೊಂದಿಗೆ ನೇರ ನೇಮಕಾತಿಯಲ್ಲಿ ಭಾಗವಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಮಂಗಳೂರು: ನಾಳೆ ನೇರ ನೇಮಕಾತಿ ಸಂದರ್ಶನ Read More »

ಮುಂದಿನ ಮೂರು ದಿನ ಮಳೆ ಸಾಧ್ಯತೆ| ಇದು ‘ಅಸನಿ’ ಎಫೆಕ್ಟ್

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ರೂಪಗೊಳ್ಳಲಿರುವ ‘ಅಸನಿ’ ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಳೆ, ಗಾಳಿ, ಸಿಡಿಲಿನ ಅಬ್ಬರಕ್ಕೆ ಮೂವರು ಮೃತಪಟ್ಟಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಸಹ ಏರಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಸೋಮವಾರದಿಂದ ‘ಅಸನಿ’ ಚಂಡಮಾರತು ತೀವ್ರ ಸ್ವರೂಪ ಪಡೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಇದರ ಪರಿಣಾಮದಿಂದ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಮಾತನಾಡಿ, “ಚಂಡಮಾರುತದ ಪರಿಣಾಮ ಕರ್ನಾಟಕ,

ಮುಂದಿನ ಮೂರು ದಿನ ಮಳೆ ಸಾಧ್ಯತೆ| ಇದು ‘ಅಸನಿ’ ಎಫೆಕ್ಟ್ Read More »

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಬದಲಿಸಿದ ಪ್ರಕರಣ| ಬಿ ರಿಪೋರ್ಟ್ ಸಲ್ಲಿಸಿದ ಪೊಲೀಸರು| ಮಗುವಿನ ಪೋಷಕರು ಯಾರು?

ಸಮಗ್ರ ನ್ಯೂಸ್: ಕಳೆದ ವರ್ಷ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ‘ಮಗು ಅದಲು ಬದಲು’ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಮಂಗಳೂರು ಉತ್ತರ ಠಾಣಾ(ಬಂದರು) ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪ್ರಯೋಗಾಲಯದಲ್ಲಿ ನಡೆಸಲಾದ ಡಿಎನ್‌ಎ ಪರೀಕ್ಷೆ ವರದಿ ತನಿಖಾಧಿಕಾರಿಯ ಕೈಸೇರಿದ್ದು, ಅದರಲ್ಲಿ ದೂರುದಾರ ಮುಸ್ತಫಾ ಅವರೇ ಮಗುವಿನ ತಂದೆ ಎಂಬುದನ್ನು ವರದಿ ಖಚಿತಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ನನಗೆ ಜನಿಸಿದ ಆರೋಗ್ಯವಂತ ಹೆಣ್ಣು ಮಗುವನ್ನು ಬದಲಿಸಿ, ಆಸ್ಪತ್ರೆಯ

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಬದಲಿಸಿದ ಪ್ರಕರಣ| ಬಿ ರಿಪೋರ್ಟ್ ಸಲ್ಲಿಸಿದ ಪೊಲೀಸರು| ಮಗುವಿನ ಪೋಷಕರು ಯಾರು? Read More »

ಶಿವಮೊಗ್ಗ: ಆಲಿಕಲ್ಲು ಸಹಿತ ಭಾರೀ ಮಳೆ| ಹಲವೆಡೆ ಕೃಷಿ ಹಾನಿ

ಸಮಗ್ರ ನ್ಯೂಸ್: ಜಿಲ್ಲೆಯಲ್ಲಿ ಇಂದು ಸುರಿದ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಗೆ ಮಲೆನಾಡು ತತ್ತರಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಾಗರ ತಾಲೂಕಿನ ತ್ಯಾಗರ್ತಿ, ಗೌತಮಪುರ ಹಾಗೂ ಬರೂರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಭಾಗದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ನಿರಂತರವಾಗಿ ಗುಡುಗು ಸಹಿತ ಭಾರೀ ಮಳೆ ಮಳೆಯಾಗಿದೆ. ಸುಮಾರು ಒಂದು ಗಂಟೆ ಸುರಿದ ಮಳೆಗೆ ಕುಡಿಗೇರಿ, ಸಂಪಳ್ಳಿ, ಕೋಟೆಕೊಪ್ಪ ಭಾಗದ ಜನರು ಹೈರಾಣಾಗಿದ್ದಾರೆ. ದಿಢೀರ್ ಸುರಿದ ಮಳೆ ಹಾಗೂ ಗಾಳಿಯ ರಭಸಕ್ಕೆ ಹಲವೆಡೆ ಮರಗಳು ಧರೆಗುರುಳಿದೆ. ಕೃಷಿ

ಶಿವಮೊಗ್ಗ: ಆಲಿಕಲ್ಲು ಸಹಿತ ಭಾರೀ ಮಳೆ| ಹಲವೆಡೆ ಕೃಷಿ ಹಾನಿ Read More »

ಮಾ.20: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ

ಸಮಗ್ರ ನ್ಯೂಸ್: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರಿನಲ್ಲಿ ಮಾ.20ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 1997ರಲ್ಲಿ ಗೌಡರ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟ ಸಂಘವು 435 ಜನರಿಂದ ಪ್ರಾರಂಭವಾಗಿ, ಪ್ರಸ್ತುತ 14261 ಜನ ವಿವಿಧ ವರ್ಗದ ಸದಸ್ಯರಿದ್ದು, ರೂ.3.50 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸಂಘದಲ್ಲಿ ರೂ.120.00 .ಕೋಟಿಗೂ ಮಿಕ್ಕಿ ಠೇವಣಿಯದ್ದು, ರೂ.103.00 ಕೋಟಿಗೂ ಮಿಕ್ಕಿ ವಿವಿಧ ಸಾಲಗಳನ್ನು ಸದಸ್ಯರಿಗೆ

ಮಾ.20: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ Read More »

ಸುಳ್ಯ/ಪುತ್ತೂರು: ‘ದಿ ಕಾಶ್ಮೀರ ಪೈಲ್ಸ್’ ಸಿನಿಮಾ ಉಚಿತ ಪ್ರದರ್ಶನಕ್ಕೆ ಶಾಸಕರಿಂದ ವ್ಯವಸ್ಥೆ

ಸಮಗ್ರ ನ್ಯೂಸ್: ದೇಶದಲ್ಲಿ ಭಾರೀ ಸಂಚಲನ ಮೂಡಿಸಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ಸುಳ್ಯದ ಸಂತೋಷ್ ಚಿತ್ರ ಮಂದಿರ ಹಾಗೂ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಳ್ಯದಲ್ಲಿ ಸಚಿವ ಅಂಗಾರ ಹಾಗೂ ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿಸಿನಿಮಾ ತೋರಿಸಲು ವ್ಯವಸ್ಥೆ ಮಾಡಲಾಗಿದೆ. ಸಚಿವ ಎಸ್. ಅಂಗಾರ ನೇತೃತ್ವದಲ್ಲಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಮಾ.19 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ 4

ಸುಳ್ಯ/ಪುತ್ತೂರು: ‘ದಿ ಕಾಶ್ಮೀರ ಪೈಲ್ಸ್’ ಸಿನಿಮಾ ಉಚಿತ ಪ್ರದರ್ಶನಕ್ಕೆ ಶಾಸಕರಿಂದ ವ್ಯವಸ್ಥೆ Read More »

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿಗಿಲ್ಲ ಮನ್ನಣೆ| ಹಿಜಾಬ್ ತೆಗೆಯದೇ ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಹಿಜಾಬ್ ತೆಗೆದು ತರಗತಿಗೆ ಹಾಜರಾಗಲ್ಲ ಎಂದು ತರಗತಿಯಿಂದ ವಿದ್ಯಾರ್ಥಿಗಳು ಹೊರನಡೆದ ಪ್ರಸಂಗ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ನಡೆದಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪಾಲಿಸಿ ತರಗತಿಯೊಳಗಡೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ತಿಳಿಸಿದ್ದು ಹಿಜಾಬ್ ತೆಗೆದು ತರಗತಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ತರಗತಿಯಿಂದ ಹೊರಬರುತ್ತಿದ್ದಂತೆ ಹಿಜಾಬ್ ಇವರನ್ನು ಬೆಂಬಲಿಸಿ ಹಲವಾರು ವಿದ್ಯಾರ್ಥಿಗಳು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿ ತರಗತಿ ಬಹಿಷ್ಕರಿಸಿದ್ದಾರೆ.

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿಗಿಲ್ಲ ಮನ್ನಣೆ| ಹಿಜಾಬ್ ತೆಗೆಯದೇ ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿಗಳು Read More »

ಮಾಣಿ – ಮಡಿಕೇರಿ ಹೆದ್ದಾರಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆದೇಶ

ಸಮಗ್ರ ನ್ಯೂಸ್: ಕರಾವಳಿ ನಗರಿ ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮಾಣಿ- ಪುತ್ತೂರು-ಸಂಪಾಜೆ -ಮಡಿಕೇರಿ ಈಗಿರುವ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಂಗಳವಾರ ಆದೇಶ ನೀಡಿದ್ದಾರೆ. ಸಚಿವರನ್ನು ಭೇಟಿ ಮಾಡಿದ ಸಂಸದ ಹಾಗೂ ರಾಜ್ಯ ಬಿಜೆಪಿ ಅದ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದ ತಂಡದ ಬೇಡಿಕೆ ಸ್ಪಂದಿಸಿದ ಸಚಿವರಿಗೆ ಈಗಿರುವ ಈ ಹೆದ್ದಾರಿಯಲ್ಲಿ ವಾಹನಗಳ

ಮಾಣಿ – ಮಡಿಕೇರಿ ಹೆದ್ದಾರಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆದೇಶ Read More »

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕುಬ್ಜತಳಿ ಅಡಿಕೆ| ಮತ್ತಷ್ಟು ಮಾದರಿ ತೋಟದ ನಿರ್ಮಾಣಕ್ಕೆ ಸಿಪಿಸಿಆರ್ ಐ ಹೆಜ್ಜೆ

ಸಮಗ್ರ ನ್ಯೂಸ್: ಸುಮಾರು 15 ವರ್ಷ ಹಿಂದೆ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಮೂಲಕ ಅಡಕೆ ಪ್ರಪಂಚಕ್ಕೆ ಪರಿಚಯಗೊಂಡ ಕುಬ್ಜ ತಳಿ ಇದೀಗ ಬೇಡಿಕೆ ಹೆಚ್ಚಿಸಿಕೊಂಡಿದೆ. ವಿಶೇಷ ಯೋಜನೆಯೊಂದರ ಅಡಿಯಲ್ಲಿ ಕುಬ್ಜ ತಳಿಯ ಎರಡು ಮಾದರಿ ತೋಟಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ರೂಪಿಸಲಾಗಿದ್ದು, ಇದೀಗ ಇನ್ನಷ್ಟು ಮಾದರಿ ತೋಟಗಳ ರಚನೆಯತ್ತ ಒಲವು ವ್ಯಕ್ತವಾಗಿದೆ. ವಿಟ್ಲ ಸಿಪಿಸಿಆರ್‌ಐನ ತಳಿ ಅಭಿವೃದ್ಧಿ ವಿಭಾಗದ ವಿಜ್ಞಾನಿ ನಾಗರಾಜ್‌ ಪ್ರಕಾರ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌,

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕುಬ್ಜತಳಿ ಅಡಿಕೆ| ಮತ್ತಷ್ಟು ಮಾದರಿ ತೋಟದ ನಿರ್ಮಾಣಕ್ಕೆ ಸಿಪಿಸಿಆರ್ ಐ ಹೆಜ್ಜೆ Read More »