ಕರಾವಳಿ

ವಿಟ್ಲ: ಬಸ್ ನಿಲ್ದಾಣದಲ್ಲಿ ಆತಂಕ ಮೂಡಿಸಿದ ರಕ್ತದ ಕಲೆಗಳು….!!

ಸಮಗ್ರ ನ್ಯೂಸ್ : ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಬಾಗದ ತುಣುಕುಗಳು ಪತ್ತೆಯಾದ ಘಟನೆ ವಿಟ್ಲ ಸಮೀಪದ ಬದನಾಜೆ ಎಂಬಲ್ಲಿ ನಡೆದಿದೆ. ಬದನಾಜೆ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಹತ್ಯೆ ಮಾಡಲಾಗಿತ್ತೇ ಅಥವಾ ಅಪಘಾತದಿಂದ ಗಾಯಗೊಂಡವರು ಯಾರದರೂ ಬಸ್ ನಿಲ್ದಾಣದಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು

ವಿಟ್ಲ: ಬಸ್ ನಿಲ್ದಾಣದಲ್ಲಿ ಆತಂಕ ಮೂಡಿಸಿದ ರಕ್ತದ ಕಲೆಗಳು….!! Read More »

ಬಂಟ್ವಾಳ: ಸ್ಟೀಲ್ ಪಾತ್ರೆಗಳ ಕಳವುಗೈದ ಆರೋಪಿ ಬಂಧನ

ಸಮಗ್ರ ನ್ಯೂಸ್ : ಮಣಿನಾಲ್ಕೂರು ಗ್ರಾಮದ ಅಂಗರಗಂಡಿ ಹಂಡೀರು ಎಂಬಲ್ಲಿ ಮನೆಯೊಂದರಿಂದ ಸ್ಟೀಲ್ ಪಾತ್ರೆಗಳು ಮತ್ತು ಮನೆಬಳಕೆಯ ಸಾಮಾಗ್ರಿಗಳನ್ನು ಕಳವುಗೈದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ಅಂಗರಗಂಡಿ ನಿವಾಸಿ ಪ್ರವೀಣ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪ್ರವೀಣ್‌ನ ಸಹೋದರ ಸತೀಶ್‌ ತಲೆಮರೆಸಿಕೊಂಡಿದ್ದಾನೆ. ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯಲ್ಲಿ ಉಕ್ಕಿನ ಪಾತ್ರೆಗಳನ್ನು ತೊಳೆದು ಹೊರಗಿಟ್ಟಿದ್ದ ವೇಳೆ ಜೂನ್ 25ರಂದು ಆರೋಪಿಗಳು ಕಳವುಗೈದಿದ್ದರು. ಬಾಯ್ಲರ್‌ಗಳು, ಮೂರು ಸ್ಟೀಲ್ ಪಾತ್ರೆಗಳು ಹಾಗೂ ಎರಡು ಫೈಬರ್‍

ಬಂಟ್ವಾಳ: ಸ್ಟೀಲ್ ಪಾತ್ರೆಗಳ ಕಳವುಗೈದ ಆರೋಪಿ ಬಂಧನ Read More »

ಪ್ರಕೃತಿಯ ಮೇಲಿನ ದೌರ್ಜನ್ಯ, ಒತ್ತಡಗಳೇ ಭೂಕಂಪಕ್ಕೆ ಕಾರಣ| ಭವಿಷ್ಯದಲ್ಲಿ ಕೊಡಗು, ದ.ಕದಲ್ಲಿ 5.0ವರೆಗೂ ಭೂಕಂಪನ ಸಾಧ್ಯತೆ

ಸಮಗ್ರ ನ್ಯೂಸ್: ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ ಹಾಗೂ ನಿರಂತರ ಒತ್ತಡದಿಂದ ಭೂಮಿ ಕಂಪಿಸುತ್ತಿದ್ದು, ಭವಿಷ್ಯದಲ್ಲಿ 5.0 ತೀವ್ರತೆಯ ಭೂಕಂಪನವನ್ನು ಕಾಣುವ ಸಾಧ್ಯತೆ ಇದೆ ಎಂದು ಭೂಗರ್ಭ ಶಾಸ್ತ್ರ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸಂಧಿಸುವ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿ ವಾರದ ಅವಧಿಯಲ್ಲಿ ಮೂರು ಬಾರಿ ಸಂಭವಿಸಿದ ಕಡಿಮೆ ತೀವ್ರತೆಯ ಭೂಕಂಪನಗಳು ಕರಾವಳಿಯಲ್ಲಿ ಭೀತಿಗೆ ಕಾರಣವಾಗಿದೆ. ಭೂಕಂಪ ತಜ್ಞರ ಪ್ರಕಾರ ನಿರಂತರವಾಗಿ ಸೆಸ್ಮಿಕ್‌ (ಭೂಕಂಪನ) ಚಟುವಟಿಕೆ ಗಳು ಹೆಚ್ಚುತ್ತಿರುವುದು ಇದಕ್ಕೆ ಕಾರಣ.

ಪ್ರಕೃತಿಯ ಮೇಲಿನ ದೌರ್ಜನ್ಯ, ಒತ್ತಡಗಳೇ ಭೂಕಂಪಕ್ಕೆ ಕಾರಣ| ಭವಿಷ್ಯದಲ್ಲಿ ಕೊಡಗು, ದ.ಕದಲ್ಲಿ 5.0ವರೆಗೂ ಭೂಕಂಪನ ಸಾಧ್ಯತೆ Read More »

ದುರ್ಗದ ಕೋಟೆ ಏರಿದ ಮಂಗಳೂರು ಕಮಿಷನರ್| ಶಶಿಕುಮಾರ್ ಸಾಹಸಕ್ಕೆ ಅಭಿಮಾನಿಗಳು ಫಿದಾ

ಸಮಗ್ರ ನ್ಯೂಸ್: ಹಾಡು, ಡ್ಯಾನ್ಸ್‌ ಮಾಡೋ ಮೂಲಕ ಖಾಕಿ ತೊಟ್ಟರೂ ಸ್ವಲ್ಪ ಡಿಫರೆಂಟ್‌ ಆಗಿರುವ ಮಂಗಳೂರಿನ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ಏರುವ ಮೂಲಕ ಸಾಹಸಕ್ಕೂ ಸೈ ಎಂದು ತೋರಿಸಿದ್ದಾರೆ. ಚಿತ್ರದುರ್ಗ ಕೋಟೆ ಎಂದರೆ ಥಟ್ಟನೆ ಎಲ್ಲರಿಗೂ ಮಂಕಿ ಮ್ಯಾನ್‌ ಎಂದೇ ಕರೆಸಿಕೊಳ್ಳುವ ಜ್ಯೋತಿರಾಜ್‌( ಕೋತಿರಾಜ್‌) ನೆನಪಾಗುತ್ತಾರೆ. ಕೋಟೆಯ ಗೋಡೆ, ಬಂಡೆಗಳನ್ನೆಲ್ಲ ಸರಸರನೇ ಏರುವ ಇವರ ಸಾಹಸ ಮೆಚ್ಚದವರಿಲ್ಲ. ಈಗ ಜ್ಯೋತಿರಾಜ್‌ ಅವರಂತೆಯೇ ಚಿತ್ರದುರ್ಗ ಮೂಲದ ಐಪಿಎಸ್‌ ಅಧಿಕಾರಿ, ಸದ್ಯ ಮಂಗಳೂರಿನಲ್ಲಿ

ದುರ್ಗದ ಕೋಟೆ ಏರಿದ ಮಂಗಳೂರು ಕಮಿಷನರ್| ಶಶಿಕುಮಾರ್ ಸಾಹಸಕ್ಕೆ ಅಭಿಮಾನಿಗಳು ಫಿದಾ Read More »

ಸುಳ್ಯ: ಮರ್ಕಂಜದಲಲ್ಲಿ ಗಣಿಗಾರಿಕೆ ತಕ್ಷಣ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿಯ ಮುಂಭಾಗ ಧರಣಿ

ಸುಳ್ಯ: ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿಗಣಿಗಾರಿಕೆ ನಡೆಯುತ್ತಿದೆ ಇದನ್ನು ತಕ್ಷಣ ನಿಲ್ಲಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಸುಳ್ಯ ತಹಶೀಲ್ದಾರ್ ಅವರಿಗೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ದಿನಾಂಕ 28/4/2022 ರಂದು ಮನವಿ ಪತ್ರ ಕೊಟ್ಟು ಮನವಿ ಮಾಡಲಾಯಿತು. ಮನವಿ ಮಾಡಿ ಇಷ್ಟು ದಿನ ಕಳೆದರು ಯಾವುದೇ ಒಂದು ಕ್ರಮ ಕೈಗೊಂಡಿಲ್ಲ ಇವತ್ತು ಸುಳ್ಯ ತಾಲೂಕಿನ ಎಲ್ಲಾ ಕಡೆ ಭೂಕಂಪದ ಅನುಭವ ಎರಡು ಬಾರಿ ಆಗಿದೆ ಇದೆಲ್ಲ ಆಗಲು ಕಾರಣ ಈ ಗಣಿಗಾರಿಕೆ ಈ ಗಣಿಗಾರಿಕೆಗೆ

ಸುಳ್ಯ: ಮರ್ಕಂಜದಲಲ್ಲಿ ಗಣಿಗಾರಿಕೆ ತಕ್ಷಣ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿಯ ಮುಂಭಾಗ ಧರಣಿ Read More »

ಸುಳ್ಯ: ಗಣಿಗಾರಿಕೆ ಸ್ಫೋಟಕಗಳಿಂದ ಭೂಮಿ ಕಂಪನ| ಮರ್ಕಂಜ ಗ್ರಾಮಸ್ಥರ ದೂರಿಗೆ ಸುಳ್ಯ ತಹಶಿಲ್ದಾರರಿಂದ ಸ್ಪಂದನೆ

ಸಮಗ್ರ ನ್ಯೂಸ್: ಮರ್ಕಂಜ ಗ್ರಾಮದ ವ್ಯಾಪ್ತಿಯಲ್ಲಿ ಇದೀಗ ಕೆಲವು ದಿನಗಳಿಂದ ಭೂಮಿ ಕಂಪನಗೊಳ್ಳುತ್ತಿದ್ದು, ಜೂ.28ರಂದು ಮುಂಜಾನೆ ಸುಮಾರು 7-45 ಸಮಯದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪನಗೊಂಡಿದೆ. ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸುಮಾರು ಸಮಯದಿಂದ ಕರಿಗಲ್ಲು ಗಣಿಗಾರಿಕೆ ಕೂಡಾ ನಡೆದುಕೊಂಡು ಬರುತ್ತಿದೆ. ಈ ಗ್ರಾಮದಲ್ಲಿ ಬಂಡೆಕಲ್ಲುಗಳನ್ನು ಒಡೆಯುವ ಸಲುವಾಗಿ ಅಪಾಯಕಾರಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಈ ಸ್ಫೋಟಕವನ್ನು ಉಪಯೋಗಿಸಿ ಬಂಡೆಕಲ್ಲುಗಳನ್ನು ಒಡೆಯುವಾಗ ಕಟ್ಟಡದೊಂದಿಗೆ ಭೂಮಿಯು ಕಂಪನಗೊಳ್ಳುತ್ತಿದ್ದು, ಸುತ್ತಮುತ್ತಲಿನ ನಾಗರಿಕರು ಭಯಭೀತರಾಗಿರುತ್ತಾರೆ. ಇದರಿಂದಾಗಿ ಮನೆಯಲ್ಲಿ ವಾಸವಿರಲು ಜನತೆ ಭಯಪಡುತ್ತಿದ್ದು, ಇಂದು

ಸುಳ್ಯ: ಗಣಿಗಾರಿಕೆ ಸ್ಫೋಟಕಗಳಿಂದ ಭೂಮಿ ಕಂಪನ| ಮರ್ಕಂಜ ಗ್ರಾಮಸ್ಥರ ದೂರಿಗೆ ಸುಳ್ಯ ತಹಶಿಲ್ದಾರರಿಂದ ಸ್ಪಂದನೆ Read More »

ಶೌಚಾಲಯ ಕಟ್ಟಡ ನಿರ್ಮಾಣ ಸ್ಥಳ ಬದಲಾವಣೆ ಆರೋಪ| ಅಂಬೇಡ್ಕರ್ ರಕ್ಷಣಾ ವೇದಿಕೆ ಪ್ರತಿಭಟನೆ

ಸಮಗ್ರ ನ್ಯೂಸ್: ಸುಳ್ಯ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸುಳ್ಯ ಕೊಡಿಯಾಲ ಬೈಲು ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲು ಹಿಂದೂ ರುದ್ರಭೂಮಿ ಒಳಗಡೆ ಮಾಡಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸುಳ್ಯ ತಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ಸರಕಾರದಿಂದ ದಲಿತ ಸಮುದಾಯದ ಕಾಲೋನಿಗೆ ಬಂದಿರುವಂತಹ ಅನುದಾನ ಬೇರೆಡೆ ವರ್ಗಾಯಿಸಿ ನಮ್ಮ ಸಮುದಾಯದವರಿಗೆ

ಶೌಚಾಲಯ ಕಟ್ಟಡ ನಿರ್ಮಾಣ ಸ್ಥಳ ಬದಲಾವಣೆ ಆರೋಪ| ಅಂಬೇಡ್ಕರ್ ರಕ್ಷಣಾ ವೇದಿಕೆ ಪ್ರತಿಭಟನೆ Read More »

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅವಸ್ಥೆ ಕಂಡು ಹೋಂ ಮಿನಿಸ್ಟರ್ ಗರಂ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು ಈ ವೇಳೆ ಪೊಲೀಸ್ ಠಾಣೆಗೆ ಟರ್ಪಾಲ್ ಹೊದಿಕೆ ಕಂಡು ಗೃಹ ಸಚಿವರು ಗರಂ ಆದರು. ಹೊಸ ಠಾಣೆ ಕಟ್ಟಡ ಕಾಮಗಾರಿ ವಿಳಂಬಕ್ಕೆ ಆರಗ ಜ್ಞಾನೇಂದ್ರ ಕೋಪಗೊಂಡು ನೂತನ ‌ಕಟ್ಟಡ ನಿರ್ಮಾಣ ಇಂಜಿನಿಯರ್ ಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು. ಜ್ಞಾನೇಂದ್ರ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು. 2017ರಲ್ಲೇ ಸರ್ಕಾರ ಹೊಸ ಠಾಣೆ ಕಟ್ಟಡ

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅವಸ್ಥೆ ಕಂಡು ಹೋಂ ಮಿನಿಸ್ಟರ್ ಗರಂ Read More »

“ನಳಿನ್ ಕುಮಾರ್ ಓರ್ವ ಬೆಸ್ಟ್ ಕಾಮಿಡಿಯನ್, ಡಾಲರ್, ಮರಳಿನ ರೇಟ್ ಕಡಿಮೆ ಮಾಡಿ ಸಕ್ಸಸ್ ಆಗಿದ್ದಾರೆ” – ರಮಾನಾಥ ರೈ

ಸಮಗ್ರ ನ್ಯೂಸ್: ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ನಾಯಕರ ಮಕ್ಕಳನ್ನು ಕೇಳಿಲ್ಲ ಎಂದಿದ್ದ ನಳಿನ್ ಕುಮಾರ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ರಮಾನಾಥ ರೈ, ನಳಿನ್ ಒಬ್ಬ ಹಾಸ್ಯಗಾರ, ಅವರ ಹೇಳಿಕೆಯನ್ನು ಗಂಭೀರ ಪರಿಗಣಿಸಲ್ಲ.‌ ಡಾಲರ್ ರೇಟ್, ಹೊಯ್ಗೆ ದರದ ಬಗ್ಗೆ ಹೇಳಿ ಜನರ ನಡುವೆ ನಗೆಪಾಟಲಿಗೆ ಈಡಾಗಿದ್ದಾರೆ. ಕಾಂಗ್ರೆಸ್ ಮಕ್ಕಳ ವಿಚಾರ ಅಲ್ಲ, ನಾವು ದೇಶದ ಮಕ್ಕಳ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ದೇಶಕ್ಕಾಗಿ ಹೋರಾಡಿದ

“ನಳಿನ್ ಕುಮಾರ್ ಓರ್ವ ಬೆಸ್ಟ್ ಕಾಮಿಡಿಯನ್, ಡಾಲರ್, ಮರಳಿನ ರೇಟ್ ಕಡಿಮೆ ಮಾಡಿ ಸಕ್ಸಸ್ ಆಗಿದ್ದಾರೆ” – ರಮಾನಾಥ ರೈ Read More »

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ

ಬಂಟ್ವಾಳ: ತಾಲೂಕಿನ ಸಜೀಪನಡುವಿನ ಲಕ್ಷ್ಮಣಕಟ್ಟೆ ಎಂಬಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯ ಅಶ್ವತ್ಥ ಮರ ಉರುಳಿಬಿದ್ದಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಲುಕ್ಮಾನ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರನ್ನು ಮರದ ಬಳಿ ನಿಲ್ಲಿಸಿ ಕಾರಿನೊಳಗಿದ್ದ ತನ್ನ ಸಂಬಂಧಿ ಮಹಿಳೆಯರಿಬ್ಬರನ್ನು ಇಳಿಸಿ ತಾನೂ ಇಳಿಯಲು ಹೊರಟಾಗ ಈ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ Read More »