ಕರಾವಳಿ

ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಹೂವಪ್ಪ ವಿಧಿವಶ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಕೇನ್ಯ ಗ್ರಾಮದ ಕಣ್ಕಲ್ ಹೂವಪ್ಪರು ಜು. 25ರಂದು ನರ ಸಂಬಂಧಿ ಕಾಯಿಲೆಯಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಅಂದಾಜು 55 ವರ್ಷ ವಯಸ್ಸಾಗಿತ್ತು. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಹೂವಪ್ಪರ ನಿಧನಕ್ಕೆ ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಡಾ ಮುರಲಿ ಮೋಹನ್ ಚೂಂತಾರು ಸಂತಾಪ ವ್ಯಕ್ತಪಡಿಸಿ ಹೂವಪ್ಪರು ಓರ್ವ ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರೆಂದು

ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಹೂವಪ್ಪ ವಿಧಿವಶ Read More »

ಮಹಾಮಳೆಗೆ ತತ್ತರಿಸಿದ ಕರುನಾಡು| 9 ಜಿಲ್ಲೆಗಳಿಗೆ ಪ್ರವಾಹ ಭೀತಿ| ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆಯ ಅಬ್ಬರ ಮುಂದುವರೆದಿದ್ದು, 9 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ಥವ್ಯಸ್ತಗೊಂಡಿದೆ. 9 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ನೈರುತ್ಯ ಮುಂಗಾರು ರಾಜ್ಯದ ಬಹುತೇಕ ಭಾಗದಲ್ಲಿ ಅಬ್ಬರಿಸುತ್ತಿದೆ. ರಾಜ್ಯದಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 26ರಂದು ಬೀದರ್, ಕಲಬುರಗಿ, ಉಡುಪಿ, ಬೆಳಗಾವಿ,

ಮಹಾಮಳೆಗೆ ತತ್ತರಿಸಿದ ಕರುನಾಡು| 9 ಜಿಲ್ಲೆಗಳಿಗೆ ಪ್ರವಾಹ ಭೀತಿ| ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷ| ಇನ್ನೂ ಪತ್ತೆಯಾಗದ ನರರಾಕ್ಷಸರು| ಅನ್ಯಾಯದ ಹತ್ಯೆಗೆ ನ್ಯಾಯ ಸಿಕ್ಕೀತೇ?

ಸಮಗ್ರ ವಿಶೇಷ: ಕರಾವಳಿಯು ಶಾಂತಿ ಸೌಹಾರ್ದತೆಯ ತವರೂರಾಗುವುದು ಯಾವಾಗ ಎಂಬ ಕುತೂಹಲ ನಿರೀಕ್ಷೆ ಎಲ್ಲರಿಗೂ ಇದೆ. ಅದರಲ್ಲಿಯೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಅಕ್ಷರಸ್ಥರು ಇರುವ ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಇಲ್ಲಿ ಯಾಕೆ ಪದೆ ಪದೇ ಮತೀಯ ಗಲಭೆ, ಘರ್ಷಣೆಗಳು, ಪ್ರತಿಕಾರದ ಕೊಲೆಗಳು ನಡೆಯುತ್ತಿವೆ ಎಂಬುವುದಕ್ಕೆ ಉತ್ತರ ಸಿಕ್ಕಿ ಲ್ಲ. ಆ ಉತ್ತರಗಳುವರಾಜಕೀಯ ಪಕ್ಷಗಳ ಬಳಿ ಇರಲು‌ ಸಾಧ್ಯವಿರಬಹುದೇನೊ. ಅಶಾಂತಿಗೆ ಅಂತ್ಯ ಹಾಡಿ ಶಾಂತಿ– ನೆಮ್ಮದಿಯ ದಿನಗಳನ್ನು ಮರಳಿ ತರುವ

ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷ| ಇನ್ನೂ ಪತ್ತೆಯಾಗದ ನರರಾಕ್ಷಸರು| ಅನ್ಯಾಯದ ಹತ್ಯೆಗೆ ನ್ಯಾಯ ಸಿಕ್ಕೀತೇ? Read More »

ಸುಳ್ಯ: ನೆಟ್ವರ್ಕ್ ಸಮಸ್ಯೆಯಿಂದ ಹೈರಾಣಾದ ಕೊಲ್ಲಮೊಗ್ರ- ಹರಿಹರದ ಜನತೆ| ಎ.ಸಿ ನಿರ್ದೇಶನಕ್ಕೂ ಕ್ಯಾರೇ ಎನ್ನದ BSNL ಅಧಿಕಾರಿಗಳು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕೊಲ್ಲಮೊಗ್ರ- ಹರಿಹರ ಪಲ್ಲತ್ತಡ್ಕ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಜನರು ಹೈರಾಣಾಗಿದ್ದು, ಈ ಬಗ್ಗೆ BSNL ಅಧಿಕಾರಿಗಳಿಗೆ ಎ.ಸಿ ಮೂಲಕ ನಿರ್ದೇಶನ ನೀಡಿದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಕೆಲ ದಿನಗಳಿಂದ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಈ ಕುಂಭದ್ರೋಣ ಕೊಲ್ಲಮೊಗ್ರ- ಹರಿಹರ ಭಾಗದಲ್ಲಿ ಮಳೆಯಿಂದ ನೆರೆ ಬಂದು, ಕೊಲ್ಲಮೊಗ್ರದ, ಬೆಂಡೋಡಿ ಎಂಬಲ್ಲಿ ಸೇತುವೆ ಕೊಚ್ಚಿಹೋಗಿ 70 ಮನೆಗಳಿಗೆ ಸೇತುವೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಅಲ್ಲಿರುವ ಜನರ ಸಂಪರ್ಕಿಸುವುದೇ

ಸುಳ್ಯ: ನೆಟ್ವರ್ಕ್ ಸಮಸ್ಯೆಯಿಂದ ಹೈರಾಣಾದ ಕೊಲ್ಲಮೊಗ್ರ- ಹರಿಹರದ ಜನತೆ| ಎ.ಸಿ ನಿರ್ದೇಶನಕ್ಕೂ ಕ್ಯಾರೇ ಎನ್ನದ BSNL ಅಧಿಕಾರಿಗಳು Read More »

ಭಾರೀ ಮಳೆ ಹಿನ್ನೆಲೆ| ನಾಳೆ (ಜು.26) ಎಲ್ಲಾ ಶಾಲೆ, ಪ.ಪೂ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪ.ಪೂ ಕಾಲೇಜುಗಳಿಗೆ ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಧಾರಾಕಾರ ಮಳೆಯಿಂದ ಸೋಮವಾರ ಮತ್ತು ಮಂಗಳವಾರ (ಜು. 24 ಮತ್ತು 25ರಂದು) ರಜೆ ಘೋಷಿಸಲಾಗಿತ್ತು. ಇದೀಗ ಕರಾವಳಿಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಮೂರನೇ ದಿನವೂ ರಜೆ ನೀಡಿದ್ದಾರೆ.

ಭಾರೀ ಮಳೆ ಹಿನ್ನೆಲೆ| ನಾಳೆ (ಜು.26) ಎಲ್ಲಾ ಶಾಲೆ, ಪ.ಪೂ ಕಾಲೇಜುಗಳಿಗೆ ರಜೆ ಘೋಷಣೆ Read More »

ಸುಳ್ಯ ತಾ.ಪಂ. ಇಓ ಭವಾನಿ ಶಂಕರ್ ವರ್ಗಾವಣೆ| ನೂತನವಾಗಿ ರಾಜಣ್ಣ ಕರ್ತವ್ಯಕ್ಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವಾನಿಶಂಕರ್ ಎನ್ ವರ್ಗಾವಣೆ. ಸುಳ್ಯಕ್ಕೆ ನೂತನವಾಗಿ ಬಂಟ್ವಾಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣರವರನ್ನು ನೇಮಕಗೊಳಿಸಲು ರಾಜ್ಯ ಸರ್ಕಾರ ಆದೇಶ.

ಸುಳ್ಯ ತಾ.ಪಂ. ಇಓ ಭವಾನಿ ಶಂಕರ್ ವರ್ಗಾವಣೆ| ನೂತನವಾಗಿ ರಾಜಣ್ಣ ಕರ್ತವ್ಯಕ್ಕೆ Read More »

ಕಬಕ: ಕಾರು-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ| ನಾಲ್ವರು ಗಂಭೀರ

ಸಮಗ್ರ ನ್ಯೂಸ್: ಮಾಣಿ- ಮೈಸೂರು ಹೆದ್ದಾರಿಯ ಮಿತ್ತೂರು ಸಮೀಪದ ಪರ್ಲೋಟ್ಟು ಎಂಬಲ್ಲಿ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಜು.25 ರಂದು ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಮುಂಬೈ ಮೂಲದ ಪ್ರಯಾಣಿಕರು, ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಹಿತ ನಾಲ್ವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಘಟನಾ ಸ್ಥಳಕ್ಕೆ

ಕಬಕ: ಕಾರು-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ| ನಾಲ್ವರು ಗಂಭೀರ Read More »

ಕರ್ತೋಜಿ ಸಮೀಪ ಭೂ-ಕುಸಿತ| ಮಡಿಕೇರಿ-ಮಂಗಳೂರು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು

ಸಮಗ್ರ ನ್ಯೂಸ್: ಮಡಿಕೇರಿ -ಮಂಗಳೂರು ಹೆದ್ದಾರಿ ಮದೆ ಸಮೀಪದ ಕರತೋಜಿ ಬಳಿ ಹೆಚ್ಚಿನ ಮಳೆಯಿಂದಾಗಿ ಭೂ ಕುಸಿತದಿಂದ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಬಂದ್ ಆಗಿದ್ದ ರಸ್ತೆಯನ್ನು ರಾತ್ರಿಯೇ ತೆರವುಗೊಳಿಸಿ ಸುಗಮ ಅನುವು ಮಾಡಿ ಕೊಡಲಾಯಿತು. ಈ ಸಂಧರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ.ಯತೀಶ್‌ ಉಲ್ಲಾಳ್, ತಹಶಿಲ್ದಾರರಾದ ಕಿರಣ್ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು, ಅರಣ್ಯ ಇಲಾಖೆಯ ಸಿಬ್ಬಂದಿಯವರು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಕರ್ತೋಜಿ ಸಮೀಪ ಭೂ-ಕುಸಿತ| ಮಡಿಕೇರಿ-ಮಂಗಳೂರು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು Read More »

ಸುಳ್ಯ: ಕೋಲ್ಚಾರಿನಲ್ಲಿ ಅಪಾಯಕಾರಿ ಮರಗಳ ತೆರವುಗೊಳಿಸಲು ತಹಶಿಲ್ದಾರ್ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯದಿಂದ ಕೋಲ್ಚಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಇರುವ ಸುಮಾರು 40 ರಷ್ಟು ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸದಂತೆ ಮುಂಜಾಗ್ರತಾ ಕಾರ್ಯವಾಗಬೇಕೆಂದು ಸುಳ್ಯ ತಹಶಿಲ್ದಾರವರಿಗೆ ಮನವಿ ಸಲ್ಲಿಸಲಾಯಿತು. ಈಗಾಗಲೇ ಸುರಿಯುತ್ತಿರುವ ವಿಪರೀತ ಮಳೆಗೆ ರಸ್ತೆಯ ಬದಿಯ ಮರ ಹಾಗೂ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಾಕಷ್ಟು ಮರಗಳು ರಸ್ತೆ ಮೇಲೆ ವಾಲಿಕೊಂಡಿದ್ದು ಬೀಳುವ ಸಾಧ್ಯತೆ ಹೆಚ್ಚಿದ್ದು ಹಾನಿ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಇಲಾಖೆಗೆ ಮರಗಳ ತೆರವಿಗೆ ಸೂಚಿಸಬೇಕಾಗಿ

ಸುಳ್ಯ: ಕೋಲ್ಚಾರಿನಲ್ಲಿ ಅಪಾಯಕಾರಿ ಮರಗಳ ತೆರವುಗೊಳಿಸಲು ತಹಶಿಲ್ದಾರ್ ಗೆ ಮನವಿ Read More »

ಭಾರೀ ಮಳೆ ಹಿನ್ನಲೆ| ನಾಳೆ(ಜು.25) ನಡೆಯಬೇಕಿದ್ದ ಮಂಗಳೂರು ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ

ಸಮಗ್ರ ನ್ಯೂಸ್: ಕೊಡಗು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ನಾಳೆ(ಜು.25) ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಕುರಿತು ವಿ.ವಿ ಪರೀಕ್ಷಾಂಗ ಪ್ರಕಟಣೆ ಹೊರಡಿಸಿದ್ದು, ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಮರುನಿಗದಿಪಡಿಸಿ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ಶೀಘ್ರದಲ್ಲಿ ತಿಳಿಸಲಾಗುವುದು. ಈ ಹಿಂದೆ ಪ್ರಕಟಿಸಿದ ಉಳಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಈ ಮೂಲಕ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆ| ನಾಳೆ(ಜು.25) ನಡೆಯಬೇಕಿದ್ದ ಮಂಗಳೂರು ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ Read More »