ಸಿನಿಮಾ

ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಅಫ್ ಹೇಳಿದ ಸೂಪರ್ ಸ್ಟಾರ್ ರಜನಿಕಾಂತ್….!!

ಬೆಂಗಳೂರು: ಕಾಂತಾರ ಸಿನೆಮಾ ಮೋಡಿ ಮತ್ತೆ ಮುಂದುವರೆದಿದ್ದು, ಪ್ರಖ್ಯಾತ ನಟ ನಟಿಯರು ಸಿನೆಮಾ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಕಾಂತಾರ ಸಿನೆಮಾವನ್ನು ನೋಡಿ ಟ್ವೀಟರ್ ನಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಗೊತ್ತಿರುವುದಕ್ಕಿಂತ ಗೊತ್ತಿರದ ವಿಷಯಗಳೇ ಜಾಸ್ತಿ ಆದರೆ ಕಾಂತಾರ ಸಿನೆಮಾದಲ್ಲಿ ಹೇಳಿರುವ ವಿಷಯಗಳನ್ನು ಮತ್ತೆ ಯಾರೂ ಈ ರೀತಿಯಾಗಿ ಯಾರೂ ಹೇಳುವುದಿಲ್ಲ ಎಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಡಿ ಮೂಡಿಬಂದ ಕಾಂತಾರ ಚಿತ್ರ ನೋಡಿ ನನ್ನ ಮೈನವಿರೇಳಿತು ಎಂದ ಅವರು ಬರಹಗಾರನಾಗಿ ನಿರ್ದೇಶಕನಾಗಿ […]

ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಅಫ್ ಹೇಳಿದ ಸೂಪರ್ ಸ್ಟಾರ್ ರಜನಿಕಾಂತ್….!! Read More »

ಕಾಂತಾರದ ವಿರುದ್ದ ಕಾನೂನು ಸಮರಕ್ಕೆ ಸಿದ್ಧತೆ| ‘ವರಾಹರೂಪಂ’ ಮೇಲೆ ಕೃತಿಚೌರ್ಯದ ಕರಿನೆರಳು

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹೀಗಿರುವಾಗಲೇ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ. 5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ

ಕಾಂತಾರದ ವಿರುದ್ದ ಕಾನೂನು ಸಮರಕ್ಕೆ ಸಿದ್ಧತೆ| ‘ವರಾಹರೂಪಂ’ ಮೇಲೆ ಕೃತಿಚೌರ್ಯದ ಕರಿನೆರಳು Read More »

ದೈವಾರಾಧನೆ ಕುರಿತು ಚೇತನ್ ಹೇಳಿಕೆ ವಿವಾದ| ಪಂಜುರ್ಲಿಗೆ ಮೊತೆ ಹೋಗಲು ನಿರ್ಧರಿಸಿದ ದೈವನರ್ತಕರು|

ಸಮಗ್ರ ನ್ಯೂಸ್: ದೈವಾರಾಧನೆ ಕುರಿತಂತೆ ನಟ ಚೇತನ್ ಕುಮಾರ್ ಆಡಿರುವ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿ ಎನ್ನುವುದು ನಿಜವಲ್ಲ ಎಂದಿರುವ ಚೇತನ್, ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇದೆ ಎಂದು ಹೇಳಿದ್ದರು. ಚೇತನ್ ಮಾತಿಗೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಹಿಂದೂ ಪರ ಸಂಘಟನೆಗಳಿಂದ ಚೇತನ್ ವಿರುದ್ಧ ದೂರು ದಾಖಲಾಗಿದೆ. ಇದೀಗ ಚೇತನ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ದೈವ ನರ್ತಕರು ಚೇತನ್ ವಿರುದ್ಧ ಪಂಜುರ್ಲಿ (Panjurli) ದೈವಕ್ಕೇ

ದೈವಾರಾಧನೆ ಕುರಿತು ಚೇತನ್ ಹೇಳಿಕೆ ವಿವಾದ| ಪಂಜುರ್ಲಿಗೆ ಮೊತೆ ಹೋಗಲು ನಿರ್ಧರಿಸಿದ ದೈವನರ್ತಕರು| Read More »

“ನಾನೇ ನಾಗವಲ್ಲಿ, ಮೊನ್ನೆ ನೋಡಿದ್ದು ಕಾಂತಾರ ಪಾರ್ಟ್ 2 ಅಲ್ಲ 3”

ಸಮಗ್ರ ನ್ಯೂಸ್: “ನಾನೇ ಒರಿಜಿನಲ್ ನಾಗವಲ್ಲಿ, ಮೊನ್ನೆ ಸುರತ್ಕಲ್ ಟೋಲ್ ಗೇಟ್ ಬಳಿ ನೀವು ನೋಡಿದ್ದು ಕಾಂತಾರ ಚಿತ್ರದ ಎರಡನೇ ಭಾಗವಲ್ಲ ಮೂರನೇ ಭಾಗ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಹೇಳಿದರು. ಸುರತ್ಕಲ್ ಟೋಲ್ ವಿರೋಧಿ ಪ್ರತಿಭಟನೆ ಸಂದರ್ಭದ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳ ಟೈಟಲ್ ಕೊಟ್ಟು ಟ್ರೋಲ್ ಮಾಡಲಾಗುತ್ತಿದ್ದು ಈ ಕುರಿತು ಮಾತಾಡಿದ ಪ್ರತಿಭಾ ಅವರು, “ಟ್ರೋಲ್ ಒಳ್ಳೆಯದು, ಅದರಿಂದ ನಮ್ಮಂತ ಹೋರಾಟಗಾರರಿಗೆ ಸ್ಫೂರ್ತಿ ಸಿಗುತ್ತದೆ. ಆದರೆ ತಮ್ಮ

“ನಾನೇ ನಾಗವಲ್ಲಿ, ಮೊನ್ನೆ ನೋಡಿದ್ದು ಕಾಂತಾರ ಪಾರ್ಟ್ 2 ಅಲ್ಲ 3” Read More »

ಹಿಂದೂ, ಕ್ರೈಸ್ತ, ಮುಸ್ಲಿಂ ಆಮದು ಮಾಡಿಕೊಂಡ ಧರ್ಮಗಳು – ಅಹಿಂಸಾ ಚೇತನ್

ಸಮಗ್ರ ನ್ಯೂಸ್ ‘ಹಿಂದೂ, ಕ್ರಿಶ್ಚಿಯನ್, ಇಸ್ಲಾಮ್ ಆಮದು ಮಾಡಿಕೊಂಡ ಧರ್ಮಗಳು’ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ”ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ. ನಮ್ಮ ಆದಿವಾಸಿ, ಅಲೆಮಾರಿ ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ. ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಮ್ ಧರ್ಮ ಇಂತಹ ‘ಆಮದು ಮಾಡಿಕೊಂಡ’ ಧರ್ಮಗಳು ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ. ಎಲ್ಲಾ ಅಸಮಾನತೆಗಳನ್ನು ನಾವು

ಹಿಂದೂ, ಕ್ರೈಸ್ತ, ಮುಸ್ಲಿಂ ಆಮದು ಮಾಡಿಕೊಂಡ ಧರ್ಮಗಳು – ಅಹಿಂಸಾ ಚೇತನ್ Read More »

ವಿವಾದಾತ್ಮಕ ಹೇಳಿಕೆ ಹಿನ್ನಲೆ| ನಟ ಚೇತನ್ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಸ್ಯಾಂಡಲ್ ವುಡ್ ನಟ ಚೇತನ್ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಟ ಚೇತನ್ ವಿರುದ್ಧ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟ ಚೇತನ್ ಹೇಳಿಕೆಯಿಂದಾಗಿ ಹಿಂದೂ ಧರ್ಮದ ನಂಬಿಕೆಗೆ ಧಕ್ಕೆಯುಂಟಾಗಿದೆ. ಹಾಗಾಗಿ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಹಿನ್ನಲೆ| ನಟ ಚೇತನ್ ವಿರುದ್ದ ದೂರು ದಾಖಲು Read More »

ಬಿಗ್ ಬಾಸ್ ಮನೆಯಲ್ಲಿ ಮೈಮರೆತು ರೋಮ್ಯಾನ್ಸ್ ನಲ್ಲಿ ಮುಳುಗಿದ ಸಾನ್ಯಾ-ರೂಪೇಶ್| ಈ ಮನೆ ಅದಕ್ಕಲ್ಲ ಎಂದ ಸುದೀಪ್

ಸಮಗ್ರ ನ್ಯೂಸ್: ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆಗಿದ್ದಾರೆ. ಇಬ್ಬರೂ ದೊಡ್ಮನೆಯಲ್ಲಿ ಸುತ್ತಾಡಿಕೊಂಡು ಹಾಯಾಗಿದ್ದಾರೆ. ರಾತ್ರಿ ಲೈಟ್ ಆಫ್​ ಆದ ನಂತರವೂ ಇವರು ಹಗ್ ಮಾಡಿಕೊಂಡು ಮಾತನಾಡಿಕೊಂಡಿರುತ್ತಾರೆ. ಈಗ ಈ ಜೋಡಿಯ ರೊಮ್ಯಾನ್ಸ್ ಮಿತಿ ಮೀರಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಗಟ್ಟಿಯಾಗೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸುದೀಪ್ ಆಡಿದ ಮಾತಿಗೆ ಗಳಗಳನೆ ಅತ್ತಿದ್ದಾರೆ ರೂಪೇಶ್. ಇತ್ತೀಚೆಗೆ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಮನೆಯಲ್ಲಿ ಮೈಮರೆತು ರೋಮ್ಯಾನ್ಸ್ ನಲ್ಲಿ ಮುಳುಗಿದ ಸಾನ್ಯಾ-ರೂಪೇಶ್| ಈ ಮನೆ ಅದಕ್ಕಲ್ಲ ಎಂದ ಸುದೀಪ್ Read More »

ಪ್ರೋ ಕಬಡ್ಡಿ‌ ಕೋರ್ಟ್ ನಲ್ಲಿ ‘ಕಾಂತಾರ’ ಟೀಂ| ರಾಷ್ಟ್ರಗೀತೆಗೆ ಧ್ವನಿಯಾದ ರಿಷಬ್ ಶೆಟ್ಟಿ

ಸಮಗ್ರ ನ್ಯೂಸ್: ಕನ್ನಡದಲ್ಲಿ ಬಿಡುಗಡೆಗೊಂಡ ಬಳಿಕ, ದೇಶದ ಇತರ ಭಾಷೆಗಳಿಗೆ ಡಬ್‌ ಆಗಿ ಅಬ್ಬರಿಸುತ್ತಿರುವ “ಕಾಂತಾರ” ಚಿತ್ರ ಬಹುದೊಡ್ಡ ಯಶಸ್ಸು ಸಂಪಾದಿಸಿದೆ. ಅದರ ನಡುವೆ ಭಾನುವಾರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು. ದೇಶೀಯ ಮಣ್ಣಿನ ಸೊಗಡಿನ ಇನ್ನೊಂದು ಕ್ರೀಡೆ ಕಬಡ್ಡಿಯ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ಬಂದಿದ್ದರು. ಕಂಬಳ ಕ್ರೀಡೆ ಹಾಗೂ ಕರಾವಳಿ ಸಂಸ್ಕೃತಿಯನ್ನು ದೇಶ ಮಟ್ಟದಲ್ಲಿ ಪಸರಿಸಲು ಕಾಂತಾರ ಒಂದು ರೀತಿಯಲ್ಲಿ ಕಾರಣವಾಗಿದ್ದರೆ, ಸ್ಥಳೀಯವಾಗಿಯೇ ಉಳಿದುಕೊಂಡಿದ್ದ ಕಬಡ್ಡಿಗೆ ಬೂಸ್ಟ್‌ನೀಡಿದ್ದು

ಪ್ರೋ ಕಬಡ್ಡಿ‌ ಕೋರ್ಟ್ ನಲ್ಲಿ ‘ಕಾಂತಾರ’ ಟೀಂ| ರಾಷ್ಟ್ರಗೀತೆಗೆ ಧ್ವನಿಯಾದ ರಿಷಬ್ ಶೆಟ್ಟಿ Read More »

ಸೀರಿಯಲ್ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಜನಪ್ರಿಯ ಟಿವಿ ಸೀರಿಯಲ್ ನಟಿ ವೈಶಾಲಿ ಟಕ್ಕರ್ ಇಂದೋರ್’ನ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಹಿಂದಿಯ ʼಸಸುರಾಲ್ ಸಿಮರ್ ಕಾʼ, ʼಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಧಾರಾವಾಹಿಯಲ್ಲಿ ನಟಿಸಿ, ಬಳಿಕ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ವೈಶಾಲಿ ಕಳೆದ ವರ್ಷದಿಂದ ಇಂದೋರ್‌ ನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸೀರಿಯಲ್ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ Read More »

ತುಳು ಭಾಷೆಯಲ್ಲೂ ಬರಲಿದೆ ಕಾಂತಾರ| ಶೀಘ್ರದಲ್ಲೇ ತೆರೆ ಕಾಣಲಿದೆ ಸಿನಿಮಾ

ಸಮಗ್ರ ನ್ಯೂಸ್: ಕನ್ನಡ ಭಾಷೆಯಲ್ಲಿ ತೆರೆಕಂಡು ಇದೀಗ ದೇಶದ ಪ್ರಮುಖ ಭಾಷೆಗಳಲ್ಲಿ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಚಿತ್ರ ಸದ್ಯದಲ್ಲೇ ತುಳು ಭಾಷೆಯಲ್ಲಿ ಮೂಡಿಬರಲಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಕಾಂತಾರ, ತಮಿಳು, ತೆಲುಗು, ಮಲಯಾಳಂ ಮತ್ತಿ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಟ್ರೈಲರ್ ಸಹ ರಿಲೀಸ್ ಮಾಡಲಾಗಿದೆ. ಇದೀಗ ತುಳು ಭಾಷೆಯಲ್ಲಿ ಬರುತ್ತಿರುವುದು ತುಳು ಮಂದಿಗೆ

ತುಳು ಭಾಷೆಯಲ್ಲೂ ಬರಲಿದೆ ಕಾಂತಾರ| ಶೀಘ್ರದಲ್ಲೇ ತೆರೆ ಕಾಣಲಿದೆ ಸಿನಿಮಾ Read More »