ಕೃಷಿ-ಕಾರ್ಯ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ| ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಆಗಿದ್ದು, ಇನ್ನೂ ಮುಂದಿನ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಹಾಸನ, ಚಾಮರಾಜನಗರ, […]

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ| ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ ಸಾಧ್ಯತೆ Read More »

ಹವಾಮಾನ ವರದಿ| ವಾಯುಭಾರ ಕುಸಿತ; ಸಂಕ್ರಾಂತಿ ಬಳಿಕ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಸಂಕ್ರಾಂತಿ ಬಳಿಕ ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.‌ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಪರಿಚಲನೆ ಏರ್ಪಟ್ಟಿದ್ದು, ಕರ್ನಾಟಕದಲ್ಲಿ 2 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜನವರಿ 15-16ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ರಾಮನಗರ, ಶಿವಮೊಗ್ಗ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಐಎಂಡಿ ಸೂಚನೆ ನೀಡಿದೆ. ಇನ್ನೂ

ಹವಾಮಾನ ವರದಿ| ವಾಯುಭಾರ ಕುಸಿತ; ಸಂಕ್ರಾಂತಿ ಬಳಿಕ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ Read More »

ಮಾರುಕಟ್ಟೆ ಧಾರಣೆ| ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ| ಡಬ್ಬಲ್ ಚೋಲ್ ಗೆ ಡಿಮ್ಯಾಂಡ್

ಸಮಗ್ರ ನ್ಯೂಸ್: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್‌ ಚೋಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ. ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ 510ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505ರಿಂದ 510 ರೂ. ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 500

ಮಾರುಕಟ್ಟೆ ಧಾರಣೆ| ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ| ಡಬ್ಬಲ್ ಚೋಲ್ ಗೆ ಡಿಮ್ಯಾಂಡ್ Read More »

ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ| ಕ್ಯಾನ್ಸರ್ ಕಾರಕ ಎಂದು ಶಿಫಾರಸು ಮಾಡಿದ WHO

ಸಮಗ್ರ ನ್ಯೂಸ್: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಮತ್ತೆ ಕ್ಯಾನ್ಸರ್ ಕಾರಕ ಪಟ್ಟ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದ್ದು, ಇದು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ. ತಂಬಾಕು ಮಾದರಿಯಲ್ಲಿ ಅಡಿಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಅಡಿಕೆ ಬೆಳೆಗಾರರಲ್ಲಿ ಮೂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಡಿಕೆಯ ಕುರಿತು

ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ| ಕ್ಯಾನ್ಸರ್ ಕಾರಕ ಎಂದು ಶಿಫಾರಸು ಮಾಡಿದ WHO Read More »

ಮಾರುಕಟ್ಟೆ ಧಾರಣೆ: ಅರ್ಧ ಶತಕಕ್ಕೆ ಸಿಡಿಸಿದ ತೆಂಗಿನಕಾಯಿ| ₹ 520‌ ದಾಟಿದ ಡಬ್ಬಲ್ ಚೋಲ್ ಅಡಿಕೆ

ಸಮಗ್ರ ನ್ಯೂಸ್: ಮಾರುಕಟ್ಟೆ ಧಾರಣೆಯಲ್ಲಿ ಅಡಿಕೆ, ತೆಂಗಿನಕಾಯಿ ಧಾರಣೆ ಏರುಗತಿಯತ್ತ ಸಾಗಿದೆ. ತೆಂಗಿನ ಕಾಯಿ ದರ ಏರುಗತಿಯತ್ತ ಸಾಗಿದ್ದು ಬುಧವಾರ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಯೊಂದಕ್ಕೆ ₹50ಕ್ಕೆ ತಲುಪಿದೆ. ತೆಂಗಿನಕಾಯಿ ಬೇಡಿಕೆ ಹೆಚ್ಚಿದೆ ಜೊತೆಗೆ ಎಳನೀರಿಗೆ ಈಗ ಎಲ್ಲ ವರ್ಗದ ಗ್ರಾಹಕರು ಸೃಷ್ಟಿಯಾಗಿದ್ದಾರೆ. ಜನರಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚಿದ ಮೇಲೆ ಯುವಜನರು ಎಳನೀರು ಕೇಳಿಕೊಂಡು ಬರುತ್ತಾರೆ. ಕಾರಿನಲ್ಲಿ ಹೋಗುವವರು ವಾಹನ ನಿಲ್ಲಿಸಿ ಎಳನೀರು ಕುಡಿದು ಹೋಗುತ್ತಾರೆ. ಎಳನೀರು ಬೇಡಿಕೆ ಹೆಚ್ಚಿದ್ದರಿಂದ ತೆಂಗು ಬೆಳೆಯುವ ಪ್ರದೇಶದ ರೈತರು ಎಳನೀರು ಕೊಯ್ದು

ಮಾರುಕಟ್ಟೆ ಧಾರಣೆ: ಅರ್ಧ ಶತಕಕ್ಕೆ ಸಿಡಿಸಿದ ತೆಂಗಿನಕಾಯಿ| ₹ 520‌ ದಾಟಿದ ಡಬ್ಬಲ್ ಚೋಲ್ ಅಡಿಕೆ Read More »

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್| ಮತ್ತೆ 500ರ ಗಡಿ‌ ದಾಟಿದ ಡಬ್ಬಲ್ ಚೋಲ್ ಅಡಿಕೆ

ಸಮಗ್ರ ನ್ಯೂಸ್: ಡಬ್ಬಲ್‌ ಚೋಲ್ ಧಾರಣೆ 500 ರೂ. ಗಡಿ ದಾಟಿ ಮುನ್ನುಗ್ಗಿದೆ. ಜೊತೆಗೆ ಸಿಂಗೇಲ್ ಚೋಲ್ ಧಾರಣೆಯೂ ಏರಿಕೆ ಕಂಡಿದೆ. ಆದರೆ ಉಪ ಬೆಳೆಗಳಾದ ಕಾಳು ಮೆಣಸು, ರಬ್ಬ‌ರ್, ಕೊಕ್ಕೊ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡು ಬಂದಿಲ್ಲ. ಹಳೆ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, ಧಾರಣೆ ಇನ್ನಷ್ಟು ಏರುವ ಸಾಧ್ಯತೆಗಳ ಬಗ್ಗೆ ಮಾರುಕಟ್ಟೆ ಮೂಲಗಳು ಸುಳಿವು ನೀಡಿವೆ. ಹೀಗಾಗಿ ಹೊರ ಮಾರು ಕಟ್ಟೆ ಮತ್ತು ಸಹಕಾರ ಸಂಸ್ಥೆ ಗಳ ನಡುವೆ ಧಾರಣೆ ಏರಿಕೆಯ ಪೈಪೋಟಿ ಉಂಟಾಗುವ

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್| ಮತ್ತೆ 500ರ ಗಡಿ‌ ದಾಟಿದ ಡಬ್ಬಲ್ ಚೋಲ್ ಅಡಿಕೆ Read More »

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ| 500ರ ಗಡಿ ದಾಟುವತ್ತ ಡಬ್ಬಲ್ ಚೋಲ್ ಅಡಿಕೆ

ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ ಜಿಗಿತ ಕಂಡಿದ್ದು, 500 ರೂ.ಗಡಿಗೆ ತಲುಪಿದೆ. ಕೆಲವು ದಿನಗಳ ಹಿಂದೆ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆಯಲ್ಲಿ ಏರಿಕೆ ಕಂಡಿತ್ತು. ಈಗ ಡಬ್ಬಲ್‌ ಚೋಲ್‌ ಧಾರಣೆ ಏರಿಕೆ ಕಂಡಿರುವುದು ಬೆಳೆಗಾರರಲ್ಲಿ ಉತ್ಸಾಹ ಮೂಡಿಸಿದೆ. ಅ.19ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ ಕೆ.ಜಿ.ಗೆ 490 ರೂ. ಇದ್ದರೆ, ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ 500 ರೂ. ತನಕವೂ ಬೇಡಿಕೆ ಕಂಡು ಬಂದಿದೆ. ಹೊಸ ಅಡಿಕೆ, ಸಿಂಗಲ್‌

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ| 500ರ ಗಡಿ ದಾಟುವತ್ತ ಡಬ್ಬಲ್ ಚೋಲ್ ಅಡಿಕೆ Read More »

ಮನೆ ಬಾಗಿಲಿಗೆ ಬಂದ ಕಾಡಾನೆ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದಲ್ಲಿ ಮನೆ ಸಮೀಪವೇ ಕಾಡಾನೆ ಬಂದು ದಾಂದಲೆ ನಡೆಸಿರುವ ಘಟನೆ ಮಂಗಳವರ ರಾತ್ರಿ ನಡೆದಿದೆ. ದೇವನಗುಳಗ್ರಾಮದ ಬೆಳ್ಳಾಚಾರ್ ಮನೆಯ ಸುತ್ತಮುತ್ತ ಇದ್ದ ಬಾಳೆ ತೆಂಗು ಅಡಿಕೆ ಮರಗಳನ್ನು ನಾಶ ಮಾಡಿದೆ ಕೊಟ್ಟಿಗೆ ಹಾರ ಸುತ್ತಮುತ್ತ ಒಂದೆಡೆ ಅತಿಯಾದ ಮಳೆಗೆ ಕಾಫಿ ಮೆಣಸು ಮೊದಲಾದ ಬೆಳೆಗಳು ನೆಲಕಚ್ಚಿದರೆ ಇನ್ನೊಂದೆಡೆ ಕಾಡಾನೆ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆ ಇರುವುದರಿಂದ ಊರಿನತ್ತ ಮುಖ ಮಾಡಿದೆ ಅರಣ್ಯ ಇಲಾಖೆ ಶಾಶ್ವತ

ಮನೆ ಬಾಗಿಲಿಗೆ ಬಂದ ಕಾಡಾನೆ Read More »

ಹೊಸ ಅಡಿಕೆ ಧಾರಣೆ ಚೇತರಿಕೆ| ಬೆಳೆಗಾರ ಫುಲ್ ಖುಷ್

ಸಮಗ್ರ ನ್ಯೂಸ್: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯು ಜಿಗಿತ ಕಂಡಿದ್ದು ಬೆಳೆಗಾರರ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಸೃಷ್ಟಿಯಾಗಿದೆ. ಕ್ಯಾಂಪ್ಕೋ ಮತ್ತು ಹೊರ ಮಾರುಕಟ್ಟೆಯಲ್ಲಿ ಕೆ.ಜಿ. ಅಡಿಕೆ ಧಾರಣೆಯಲ್ಲಿ 40 ರೂ.ನಷ್ಟು ವ್ಯತ್ಯಾಸ ಕಂಡು ಬಂದಿದೆ. ಅ. 7ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 310 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಅಡಿಕೆಗೆ 350 ರೂ. ಇತ್ತು. ಸಿಂಗಲ್‌ ಚೋಲ್‌, ಡಬ್ಬಲ್‌ ಚೋಲ್‌ ಧಾರಣೆ ಎರಡೂ ಕಡೆಗಳಲ್ಲಿ

ಹೊಸ ಅಡಿಕೆ ಧಾರಣೆ ಚೇತರಿಕೆ| ಬೆಳೆಗಾರ ಫುಲ್ ಖುಷ್ Read More »

ಕೊಬ್ಬರಿ ಎಣ್ಣೆ, ತೆಂಗಿನಕಾಯಿ ಪುಡಿಗೂ ಬೆಲೆ ಹೆಚ್ಚಳ

ಸಮಗ್ರ ನ್ಯೂಸ್:ತೆಂಗಿನಕಾಯಿಗೆ ದರ ಕಡಿಮೆ ಎಂದು ತೆಂಗಿನಕಾಯಿ ಬೆಳೆಯೋ ರೈತರು ಬೇಸರ ಮಾಡಿಕೊಂಡಿದ್ದರು. ಕಳೆದ ತಿಂಗಳು ಕೆ.ಜಿಗೆ 25 ರೂ.ಗೆ ಕುಸಿತ ಕಂಡಿತ್ತು. ಆದರೆ ಇದೀಗ ತೆಂಗಿನಕಾಯಿ ದರ 50 ರೂ. ತಲುಪಿದೆ. ಇದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ತೆಂಗಿನಕಾಯಿ ದರ ಇಳಿದ ಪರಿಣಾಮ ಅನೇಕ ರೈತರು ಎಳನೀರನ್ನೇ ಮಾರಟ ಮಾಡಿದ್ದರು. ಎಳನೀರು ದರ ತೆಂಗಿನಕಾಯಿಗಿಂತ ಹೆಚ್ಚಿದೆ.ಮಾರುಕಟ್ಟೆಗೆ ತೆಂಗಿನಕಾಯಿ ಕಡಿಮೆ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ. ಹಾಗಾಗಿ ದರದಲ್ಲೂ ಏರಿಕೆ ಕಂಡಿದೆ

ಕೊಬ್ಬರಿ ಎಣ್ಣೆ, ತೆಂಗಿನಕಾಯಿ ಪುಡಿಗೂ ಬೆಲೆ ಹೆಚ್ಚಳ Read More »