ಸಮಗ್ರ ಸಮಾಚಾರ

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಿಂದ ಕ್ಷಿಪಣಿ ಪ್ರಯೋಗ| ಭೀಕರ ದಾಳಿಗೆ ಬೆಚ್ಚಿದ ಸೌದಿ, ಯುಎಇ, ಕತಾರ್

ಸಮಗ್ರ ನ್ಯೂಸ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಈಗ ಇಡೀ ಗಲ್ಫ್ ವಲಯದ ಮೇಲೆ ತನ್ನ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಲ್ಲಿ ಭೀಕರ ಸ್ಫೋಟಗಳು ಸಂಭವಿಸುತ್ತಿವೆ. ಭಾರತೀಯರು ಹೆಚ್ಚಾಗಿ ವಾಸಿಸುವ ಗಲ್ಫ್‌ ಪ್ರದೇಶಗಳಾದ ದುಬೈ, ಅಬುಧಾಬಿಯಲ್ಲೂ ಭೀಕರ ದಾಳಿ ನಡೆಸಿದೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್‌, ಬಹರನ್‌ ರಾಜಧಾನಿ ಮನಾಮಾ ಹಾಗೂ ಕತಾರ್‌ ರಾಜಧಾನಿ ದೋಹಾದಲ್ಲೂ ಸ್ಫೋಟದ ಸದ್ದು ಕೇಳಿಬಂದಿದ್ದು, ಇದು ತಾನೇ ನಡೆಸಿರುವ ದಾಳಿ ಎಂದು ಇರಾನ್‌ […]

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಿಂದ ಕ್ಷಿಪಣಿ ಪ್ರಯೋಗ| ಭೀಕರ ದಾಳಿಗೆ ಬೆಚ್ಚಿದ ಸೌದಿ, ಯುಎಇ, ಕತಾರ್ Read More »

ಮಂಗಳೂರಿನಿಂದ‌ ಕೊಲ್ಲಿ ರಾಷ್ಟ್ರಗಳಿಗೆ ಸಂಚರಿಸುವ ಎಲ್ಲಾ ವಿಮಾನ ರದ್ದು

ಸಮಗ್ರ ನ್ಯೂಸ್: ಅಮೆರಿಕ ಹಾಗೂ ಇಸ್ರೇಲ್‌ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಆಗಸದಲ್ಲಿ ವಿಮಾನ ಹಾರಾಟ ನಿರ್ಬಂಧಿಸಿದ ಬಳಿಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲ್ಲಿ ರಾಷ್ಟ್ರಿಗಳಿಗೆ ತೆರಳುವ ಹಾಗೂ ಆ ರಾಷ್ಟ್ರಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಅನೇಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಐಎಕ್ಸ್ 831 (ಐಎಕ್ಸ್‌ಇ- ಡಿಎಕ್ಸ್‌ಬಿ) ವಿಮಾನವು ಮಧ್ಯಾಹ್ನ 3ಕ್ಕೆ ಹಾರಾಟ ನಡೆಸಲು ರನ್‌ವೇಯತ್ತ ಹೋಗಿತ್ತು. ಇರಾನ್‌ನ ಆಗಸದಲ್ಲಿ ವಿಮಾನಗಳ ಹಾರಾಟ ನಿರ್ಬಂಧಿಸಿದ ಮಾಹಿತಿ ಸಿಕ್ಕಿದ ಬಳಿಕ ಆ

ಮಂಗಳೂರಿನಿಂದ‌ ಕೊಲ್ಲಿ ರಾಷ್ಟ್ರಗಳಿಗೆ ಸಂಚರಿಸುವ ಎಲ್ಲಾ ವಿಮಾನ ರದ್ದು Read More »

ರಣಜಿ ಟ್ರೋಫಿ ಫೈನಲ್ ನಲ್ಲಿ ಸೋಲುಕಂಡ ಕರ್ನಾಟಕ| 67 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿ ಗೆದ್ದ ಜಮ್ಮು – ಕಾಶ್ಮೀರ

ಸಮಗ್ರ ನ್ಯೂಸ್: ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಇದೇ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್​ಗೇರಿದ್ದ ಜಮ್ಮು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ನಂತರ ಪರಾಸ್ ಡೋಗ್ರಾ ನೇತೃತ್ವದ ತಂಡವು ದೇಶೀಯ ದೈತ್ಯ ಕರ್ನಾಟಕವನ್ನ ಸೋಲಿಸಿ 2025-26ರ

ರಣಜಿ ಟ್ರೋಫಿ ಫೈನಲ್ ನಲ್ಲಿ ಸೋಲುಕಂಡ ಕರ್ನಾಟಕ| 67 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿ ಗೆದ್ದ ಜಮ್ಮು – ಕಾಶ್ಮೀರ Read More »

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಇಂದಿನಿಂದ ( ಫೆಬ್ರವರಿ 28) ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭವಾಗಲಿದ್ದು, ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 6,46,801 ಹೊಸಬರು, 50,540 ಪುನರಾವರ್ತಿತ ಮತ್ತು 13,022 ಖಾಸಗಿ ಅಭ್ಯರ್ಥಿಗಳಿದ್ದಾರೆ.ವಿಜ್ಞಾನ ವಿಭಾಗದಲ್ಲಿ 2.92 ಲಕ್ಷ, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಮತ್ತು ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 1,217

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ Read More »

ಕೇರಳಂನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ| ವಿಕಲಚೇತನ ಯುವಕನ ಮೇಲೆ ಹನಿಟ್ರ್ಯಾಪ್ ಮಾಡಿದ ಯುವತಿ

ಸಮಗ್ರ ನ್ಯೂಸ್: ಕೇರಳಂ ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿಕಲಚೇತನ (ಕಿವುಡು ಮತ್ತು ಮೂಗ) ಯುವಕನೊಬ್ಬನನ್ನು ಹನಿಟ್ರಾಪ್ ಮಾಡಿ ಲಾಡ್ಜ್‌ಗೆ ಕರೆಸಿಕೊಂಡ ಯುವತಿ, ಆತನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೊಚ್ಚಿಯ ಪನಂಪಿಳ್ಳಿ ನಗರದಲ್ಲಿ ನಡೆದಿದೆ. ನಾರ್ತ್ ಪರವೂರ್ ಮೂಲದ ಸ್ವಪ್ನಾ ಎಂಬ ಯುವತಿ, ತನ್ನ ಸ್ನೇಹಿತರಾದ ಜಾನ್ ರಾಹುಲ್, ಅಮಲ್ ಮತ್ತು ಆನಂದ್ ಎಂಬವರೊಂದಿಗೆ ಸೇರಿ ಕೊಲ್ಲಂನ ನಿಲ್ಲಿಲ್ಲಾ ನಿವಾಸಿ ಅಮಲ್ ದೇವ್ ಎಂಬ ಯುವಕನನ್ನು ಹನಿಟ್ರಾಪ್ ಮಾಡಿದ್ದಾಳೆ. ಈಕೆ ಸಂತ್ರಸ್ತ ಯುವಕನೊಂದಿಗೆ ಕಳೆದ

ಕೇರಳಂನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ| ವಿಕಲಚೇತನ ಯುವಕನ ಮೇಲೆ ಹನಿಟ್ರ್ಯಾಪ್ ಮಾಡಿದ ಯುವತಿ Read More »

ಬಾಂಗ್ಲಾಕ್ಕೆ ಮರಳುವುದಾಗಿ ಘೋಷಿಸಿದ ಶೇಕ್ ಹಸೀನಾ

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಆಗಸ್ಟ್ 5. 2024 ರಂದು ಭಾರತಕ್ಕೆ ಆಗಮಿಸಿದ್ದರು. ಅಂದಿನಿಂದ ಅವರು ಭಾರತದಲ್ಲೇ ನೆಲೆಸಿದ್ದಾರೆ. ಆದರೆ, ಈಗ ತಾವು ಮತ್ತೆ ತಾಯ್ನಾಡಿಗೆ ಮರಳುವುದಾಗಿ ಸ್ವತಃ ಘೋಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳನ್ನು ಕಟುವಾಗಿ ಟೀಕಿಸಿದ ಅವರು, ತಮ್ಮ ‘ಆವಾಮಿ ಲೀಗ್’ ಪಕ್ಷಕ್ಕೆ ಆಗಿರುವ ಅನ್ಯಾಯದ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಢಾಕಾದಲ್ಲಿ ನಡೆದ ಆವಾಮಿ ಲೀಗ್ ಪಕ್ಷದ ಕೆಲವು ನಾಯಕರ ಸಭೆಯಲ್ಲಿ ಹಸೀನಾ ಅವರು

ಬಾಂಗ್ಲಾಕ್ಕೆ ಮರಳುವುದಾಗಿ ಘೋಷಿಸಿದ ಶೇಕ್ ಹಸೀನಾ Read More »

ಮಾ.1ರಿಂದ ಸಿಮ್ ಬೈಂಡಿಂಗ್ ಜಾರಿ| ಸಿಮ್ ಕಾರ್ಡ್ ಇಲ್ಲದಿದ್ರೆ ವಾಟ್ಸ್ಯಾಪ್ ಸೇರಿ ಹಲವು ಅಪ್ಲಿಕೇಶನ್ಸ್ ಕೆಲ್ಸ ಮಾಡಲ್ಲ

ಸಮಗ್ರ ನ್ಯೂಸ್: ಮಾರ್ಚ್ 1, 2026 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಇದರ ಅಡಿಯಲ್ಲಿ ಸಿಮ್-ಬೈಂಡಿಂಗ್ ನಿಯಮಗಳಲ್ಲಿ ಯಾವುದೇ ಸಡಿಲಿಕೆ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನವೆಂಬರ್ ಅಂತ್ಯದಲ್ಲಿ, ದೂರಸಂಪರ್ಕ ಇಲಾಖೆಯು ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್‌ನಂತಹ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್‌’ಗಳಿಗೆ ‘ಸಿಮ್ ಬೈಂಡಿಂಗ್’ ಜಾರಿಗೆ ತರಲು ನಿರ್ದೇಶಿಸಿತ್ತು. ಈ ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಕಳುಹಿಸುವ ವೇದಿಕೆಗಳಿಗೆ ಇದನ್ನು ಕಾರ್ಯಗತಗೊಳಿಸಲು 90 ದಿನಗಳ ಕಾಲಾವಕಾಶ ನೀಡಲಾಗಿತ್ತು, ಇದರ ಗಡುವು ಫೆಬ್ರವರಿ 28

ಮಾ.1ರಿಂದ ಸಿಮ್ ಬೈಂಡಿಂಗ್ ಜಾರಿ| ಸಿಮ್ ಕಾರ್ಡ್ ಇಲ್ಲದಿದ್ರೆ ವಾಟ್ಸ್ಯಾಪ್ ಸೇರಿ ಹಲವು ಅಪ್ಲಿಕೇಶನ್ಸ್ ಕೆಲ್ಸ ಮಾಡಲ್ಲ Read More »

ಅಪ್ರಾಪ್ತರ ಮೇಲೆ ನೈತಿಕ ಪೊಲೀಸ್ ಗಿರಿ| ತಂದೆ – ಮಗ ಅರೆಸ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಸ್ಟೀವನ್ ಮೊಂತೆರೊ ಮತ್ತು ಆತನ ಮಗ ಅವಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 23ರಂದು ಸಂಜೆ 4 ಗಂಟೆ ಸುಮಾರಿಗೆ ಬಾಬುಗೆಡ್ಡೆಯ ಗ್ರಾಮ ಸಂಘದ ಬಳಿಯ ರೈಲ್ವೆ ಹಳಿಯಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಆರೋಪಿಗಳು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಾ ಅಲ್ಲಿಗೆ ಬಂದಿದ್ದಾರೆ. “ನೀವು ಇಲ್ಲಿ

ಅಪ್ರಾಪ್ತರ ಮೇಲೆ ನೈತಿಕ ಪೊಲೀಸ್ ಗಿರಿ| ತಂದೆ – ಮಗ ಅರೆಸ್ಟ್ Read More »

ಟಿ.20 ವಿಶ್ವಕಪ್ ಕ್ರಿಕೆಟ್| ಜಿಂಬಾಬ್ವೆ ವಿರುದ್ಧ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಸೆಮಿಫೈನಲ್​ ರೇಸ್​​​ನಲ್ಲಿ ಉಳಿಯಲು ಮಾಡು ಇಲ್ಲವೇ ಮಡಿ ಎನಿಸಿದ್ದ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 72 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ. ನಿರ್ಣಾಯಕ ಟಾಸ್ ಸೋತು ಬ್ಯಾಟಿಂಗ್​​ ಇಳಿದ ಭಾರತ ತಂಡ 256 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. ನಂತರ ಬೌಲಿಂಗ್​​ನಲ್ಲೂ ಅಮೋಘ ಪ್ರದರ್ಶನ ತೋರಿ ಜಿಂಬಾಬ್ವೆ ತಂಡವನ್ನ 184 ರನ್​ಗಳಿಗೆ ನಿಯಂತ್ರಿಸುವ ಮೂಲಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್​ ರೇಸ್​​ನಲ್ಲಿ ಉಳಿದುಕೊಂಡರೆ, ಅತ್ತ ಜಿಂಬಾಬ್ವೆ ತಂಡ ಇನ್ನೂ

ಟಿ.20 ವಿಶ್ವಕಪ್ ಕ್ರಿಕೆಟ್| ಜಿಂಬಾಬ್ವೆ ವಿರುದ್ಧ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ Read More »

ಪುತ್ತೂರು: ಕರ್ತವ್ಯ ನಿರ್ಲಕ್ಷ್ಯ ಆರೋಪ| ಮಹಿಳಾ ಕಾಲೇಜು ಪ್ರಾಂಶುಪಾಲೆ ಅಮಾನತು

ಸಮಗ್ರ ನ್ಯೂಸ್: ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದ ವೇದಶ್ರೀ ನಿಡ್ಯಾ ಅವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಿದ್ದಾರೆ. ತರಗತಿಯ ಪಕ್ಕದಲ್ಲಿಯೇ ನಡೆಯುತ್ತಿರುವ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದಾಗಿ ಉಂಟಾಗುವ ದೂಳಿನಿಂದಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ತರಗತಿಯಿಂದ ಹೊರಬಂದು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ್ದರು. ಈ ವಿದ್ಯಾರ್ಥಿಗಳ ಈ ಪ್ರತಿಭಟನೆ

ಪುತ್ತೂರು: ಕರ್ತವ್ಯ ನಿರ್ಲಕ್ಷ್ಯ ಆರೋಪ| ಮಹಿಳಾ ಕಾಲೇಜು ಪ್ರಾಂಶುಪಾಲೆ ಅಮಾನತು Read More »