ಸಮಗ್ರ ಸಮಾಚಾರ

ಸುಳ್ಯ: ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಸಮಗ್ರ ನ್ಯೂಸ್:‌ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿರುವ ವೇಳೆ ಕಾಲು ಸಂಕದಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಮೂರು ದಿವಸದಿಂದ ಕಾರ್ಯಾಚರಣೆ ಮಾಡುತ್ತಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ನಾಲ್ಕನೇ ದಿವಸದ ಕಾರ್ಯಾಚರಣೆ ಬಳಿಕ ಪೆರಾಜೆಯ ನೆಡ್ಚಿಲ್ ಸಮೀಪದ ಕಣಿ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ, ಎಸ್‌ಡಿಆಎರ್‌ ಎಫ್‌ ತಂಡ, ಅಗ್ನಿಶಾಮಕ ದಳ ಸುಳ್ಯ, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ, SKSSF ಅರಂತೋಡು ಕಲ್ಲುಗುಂಡಿ ವಿಖಾಯ ತಂಡ, ಕಂದಾಯ ಇಲಾಖೆ, […]

ಸುಳ್ಯ: ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ Read More »

ಸುಳ್ಯ: ಹೊಳೆಯ ಪಾಲ ದಾಟುತ್ತಿರುವ ವೇಳೆ ಆಯತಪ್ಪಿ ಬಿದ್ದು ನೀರಲ್ಲಿ‌ ಕೊಚ್ಚಿ ಹೋದ ವ್ಯಕ್ತಿ!!

ಸಮಗ್ರ ನ್ಯೂಸ್: ಹೊಳೆಯ ಪಾಲ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕದಿಂದ ವರದಿಯಾಗಿದೆ. ನೀರು ಪಾಲಾಗಿರುವ ವ್ಯಕ್ತಿಯನ್ನು ಕೇರಳ ಮೂಲದವರು ಎಂದು ಹೇಳಲಾಗಿದ್ದು ತೋಟದಲ್ಲಿ ‌ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಕಾಣೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸುಳ್ಯ: ಹೊಳೆಯ ಪಾಲ ದಾಟುತ್ತಿರುವ ವೇಳೆ ಆಯತಪ್ಪಿ ಬಿದ್ದು ನೀರಲ್ಲಿ‌ ಕೊಚ್ಚಿ ಹೋದ ವ್ಯಕ್ತಿ!! Read More »

ಸುಂಟಿಕೊಪ್ಪ: ಕಾರು-ಲಾರಿ ಡಿಕ್ಕಿ|ಮುಂಬೈ ಮೂಲದ ಮಹಿಳೆ ದುರ್ಮರಣ

ಸಮಗ್ರ ನ್ಯೂಸ್: ಕಾರು ಮತ್ತು ಲಾರಿಯ ನಡುವೆ ಅವಘಡ ಸಂಭವಿಸಿ ಮುಂಬೈ ಮೂಲದ ಮಹಿಳೆಯೊಬ್ಬರು ಧಾರುಣವಾಗಿ ಅಂತ್ಯಗೊಂಡಿರುವ ಘಟನೆ ಜೂ.3ರ ರಾತ್ರಿ ಸುಂಟಿಕೊಪ್ಪ ಗದ್ದೆಹಳ್ಳದಲ್ಲಿರುವ ವಂದನಾ ಬಾರ್ ಸಮೀಪ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಸುಂಟಿಕೊಪ್ಪದತ್ತ ಬರುತ್ತಿದ್ದ ಕಾರು ಮತ್ತು ಸುಂಟಿಕೊಪ್ಪದಿಂದ ಮಡಿಕೇರಿ ಯತ್ತ ತೆರಳುತ್ತಿದ್ದ ಲಾರಿಯ ನಡುವೆ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಮಹಿಳೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದು, ಆಕೆಯ ಪತಿ ಮತ್ತು ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಂಟಿಕೊಪ್ಪ: ಕಾರು-ಲಾರಿ ಡಿಕ್ಕಿ|ಮುಂಬೈ ಮೂಲದ ಮಹಿಳೆ ದುರ್ಮರಣ Read More »

ಮಂಗಳೂರು: ‘ಮಕ್ಕಳು ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್’ – ಕಮಿಷನರ್

ಸಮಗ್ರ ನ್ಯೂಸ್ : ಮಕ್ಕಳು ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಪದವಿನಂಗಡಿಯಲ್ಲಿ ನಡೆದಿದ್ದ ಅಪಘಾತದಲ್ಲಿ ಹದಿ ಹರೆಯದ ಮಕ್ಕಳು ಬಲಿಯಾದ ಘಟನೆ ಹಾಗೂ ನಗರದಾದ್ಯಂತ ಹಲವು ದ್ವಿಚಕ್ರ ವಾಹನ ಅಪಘಾತಗಳ ಬಗ್ಗೆ ಜುಲೈ 1 ರಂದು ನಡೆದ ನಗರ ಪೊಲೀಸ್ ಕಮೀಷನರ್ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು

ಮಂಗಳೂರು: ‘ಮಕ್ಕಳು ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್’ – ಕಮಿಷನರ್ Read More »

ತಹಶೀಲ್ದಾರ್ ಸೊರಕೆ ಅಜಿತ್ ಕುಮಾರ್ ರೈ ಮನೆ ಮೇಲೆ ಲೋಕಾಯುಕ್ತ ದಾಳಿ| ಬೃಹತ್ ಪ್ರಮಾಣದ ನೋಟಿನ ಕಂತೆ ಪತ್ತೆ

ಸಮಗ್ರ ನ್ಯೂಸ್: ಕೆ.ಆರ್.ಪುರ ತಹಶೀಲ್ದಾರ್ ರಾಗಿದ್ದ ಅಜಿತ್ ಕುಮಾರ್ ರೈ ಸೊರಕೆ ಮನೆ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಬೃಹತ್ ಪ್ರಮಾಣದ ಹಣದ ಕಂತೆಯೇ ಪತ್ತೆಯಾದ ಬಗ್ಗೆ ವರದಿಯಾಗಿದೆ. ಇವರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಲೋಕಾಯುಕ್ತ ಎಸ್

ತಹಶೀಲ್ದಾರ್ ಸೊರಕೆ ಅಜಿತ್ ಕುಮಾರ್ ರೈ ಮನೆ ಮೇಲೆ ಲೋಕಾಯುಕ್ತ ದಾಳಿ| ಬೃಹತ್ ಪ್ರಮಾಣದ ನೋಟಿನ ಕಂತೆ ಪತ್ತೆ Read More »

ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ

ಸಮಗ್ರ ನ್ಯೂಸ್: ಪುಟ್ಟ ಮಕ್ಕಳನ್ನು ಡೇ ಕೇರ್​ ಸೆಂಟರ್ ಗೆ ಸೇರಿಸಿ ಕೆಲಸಕ್ಕೆ ಹೋಗುವುದು ಮಹಾನಗರಗಳಲ್ಲಿ ಮಾಮೂಲಿಯಾಗಿದೆ. ಆದರೆ ಈ ಡೇ ಕೇರ್​ನಲ್ಲಿನ ಸಿಬ್ಬಂದಿ ಮಕ್ಕಳನ್ನು ಹೇಗೆ ಕೇರ್ ಮಾಡುತ್ತಾರೆ ಅನ್ನುವ ಅನುಮಾನ ಮೂಡುವಂತ ಘಟನೆಯೊಂದು ಸದ್ಯ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್​ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್​ ಆಗಿದೆ. ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ

ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ Read More »

ಬಸ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ರಾಜ್ಯ ಸಾರಿಗೆ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ವಾಸನ ಹಳ್ಳಿಯ ನಿವಾಸಿ ಮಧು ಕುಂಬಾರ(14) ಮೃತ ದುರ್ದೈವಿ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮೃತ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಕರ್ನಾಟಕ ಸರ್ಕಾರ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದ ದಿನವೇ ಈ ಘಟನೆ ನಡೆದಿರುವುದು ದುರ್ದೈವದ ಸಂಗತಿ.ಶಾಲೆಗೆ

ಬಸ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು Read More »

ಉಳ್ಳಾಲ: 24 ಪುಟಗಳ ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ|ನೂತನ ಮನೆ ಖರೀದಿಸಿದ ಐದೇ ದಿನದಲ್ಲಿ ಏನಾಯಿತು ಈಕೆಗೆ..?| ಇದಕ್ಕೆಲ್ಲ ಕಾರಣ ಬ್ಯಾಂಕ್ ಅಧಿಕಾರಿಗಳ..!

ಸಮಗ್ರ ನ್ಯೂಸ್: ಯುವತಿಯೋರ್ವಳು 24 ಪುಟಗಳ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ಮೂಲತ: ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25)ಆತ್ಮ ಹತ್ಯೆಗೈದ ಯುವತಿ.ನಿನ್ನೆ ರಾತ್ರಿ ಅಶ್ವಿನಿ ತನ್ನ‌ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಲೆನ್ನಲಾಗಿದ್ದು ಸ್ನೇಹಿತೆ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದು ಬೆಳಕಿಗೆ ಬಂದಿದೆ. ಅಶ್ವಿನಿ ಬರೆದ 24 ಪುಟಗಳ ಡೆತ್

ಉಳ್ಳಾಲ: 24 ಪುಟಗಳ ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ|ನೂತನ ಮನೆ ಖರೀದಿಸಿದ ಐದೇ ದಿನದಲ್ಲಿ ಏನಾಯಿತು ಈಕೆಗೆ..?| ಇದಕ್ಕೆಲ್ಲ ಕಾರಣ ಬ್ಯಾಂಕ್ ಅಧಿಕಾರಿಗಳ..! Read More »

ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕೆ.ಎ ಹಿದಾಯತುಲ್ಲ(KAS) ನೇಮಕ

ಸಮಗ್ರ ನ್ಯೂಸ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕೆ.ಎ ಹಿದಾಯತ್ತುಲ್ಲ ನೇಮಕರಾಗಿದ್ದಾರೆ. ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಹಿದಾಯುತ್ತುಲ್ಲಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಇವರು ಈ ಮೊದಲು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಮತ್ತು ಕಂದಾಯ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸದಾ ಜನರ ಪರವಾಗಿ ಇರುವ, ಪ್ರಾಮಾಣಿಕ ಕೆಎಎಸ್​ ಅಧಿಕಾರಿ ಹಿದಾಯತ್ತುಲ್ಲ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿಯಾಗಿದ್ದು,

ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕೆ.ಎ ಹಿದಾಯತುಲ್ಲ(KAS) ನೇಮಕ Read More »

ಮಂಡ್ಯ: ದಶಪಥ ಹೆದ್ದಾರಿಯಲ್ಲಿ ಮೂರು ಸುತ್ತು ಪಲ್ಟಿ ಹೊಡೆದ ಕಾರು | ಐವರು ಜಖಂ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಗಂಭೀರ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಟೈರ್ ಸ್ಫೋಟಗೊಂಡ ಪರಿಣಾಮ ಚಲಿಸುತ್ತಿದ್ದ ಕಾರೊಂದು ಮೂರು ಸುತ್ತು ಪಲ್ಟಿ ಹೊಡೆದಿರುವ ಘಟನೆ ಮಂಡ್ಯ ಜಿಲ್ಲೆಯ ಚಿಕ್ಕಮಂಡ್ಯ ಬಳಿಯ ದಶಪಥ ಎಕ್ಸ್ ಪ್ರೆಸ್‍ವೇನಲ್ಲಿ ನಡೆದಿದೆ. ಕಾರು ಬೆಂಗಳೂರು ಕಡೆಯಿಂದ ಮೈಸೂರಿನತ್ತ ತೆರಳುತ್ತಿತ್ತು. ಭೀಕರ ಅಪಘಾತದಲ್ಲಿ ಐವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮಂಡ್ಯದ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿದ್ದವರೆಲ್ಲ ಬೆಂಗಳೂರು ಮೂಲದವರು ಎನ್ನಲಾಗಿದೆ.

ಮಂಡ್ಯ: ದಶಪಥ ಹೆದ್ದಾರಿಯಲ್ಲಿ ಮೂರು ಸುತ್ತು ಪಲ್ಟಿ ಹೊಡೆದ ಕಾರು | ಐವರು ಜಖಂ; ಇಬ್ಬರು ಗಂಭೀರ Read More »