ಸಮಗ್ರ ಸಮಾಚಾರ

ರಾಜ್ಯದ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಉಡುಪಿಯ ಕರಾವಳಿ ಕಾವಲು ಪೊಲೀಸ್ ಎಸ್ಪಿ ಆರ್. ಚೇತನ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣನವರ್ ಅವರನ್ನು ಸಿಐಡಿ ವಿಭಾಗದ ಬೆಂಗಳೂರು ಎಸ್ಪಿಯಾಗಿ, ಉಡುಪಿಯ ಕರಾವಳಿ ಕಾವಲು ಪೊಲೀಸ್(ಸಿಎಸ್‍ಪಿ) ಎಸ್ಪಿ ಆರ್.ಚೇತನ್ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕೋಲಾರ ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಎಸ್ಪಿ(ವೈರ್‍ಲೆಸ್) ಆಗಿ, ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲ್ ಕುಮಾರ್ ಶಹಾಪೂರ್ವದ್ […]

ರಾಜ್ಯದ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ Read More »

ಮಂಗಳೂರು: ಕಟೀಲ್ ಸಂದರ್ಶನದ ಆಡಿಯೋ ತಿರುಚಿದ ಪ್ರಕರಣ | ಸಾಮಾಜಿಕ ಕಾರ್ಯಕರ್ತ ಅರೆಸ್ಟ್

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗಿನ ಸಂದರ್ಶನ ಒಂದರ ಆಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಖಾಸಗಿ ಟಿವಿ ಚಾನೆಲೊಂದು ಸಂದರ್ಶನ ನಡೆಸಿತ್ತು. ಸಂದರ್ಶನದಲ್ಲಿ ವೀಕ್ಷಕರಿಗೆ ಸಂಸದರೊಂದಿಗೆ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಗಿತ್ತು. ಹಾಗೆ ಪ್ರೇಕ್ಷಕರೊಬ್ಬರು ಪ್ರಶ್ನೆ ಕೇಳಿದ ವಿಡಿಯೋ ತುಣುಕೊಂದನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುನಿಲ್

ಮಂಗಳೂರು: ಕಟೀಲ್ ಸಂದರ್ಶನದ ಆಡಿಯೋ ತಿರುಚಿದ ಪ್ರಕರಣ | ಸಾಮಾಜಿಕ ಕಾರ್ಯಕರ್ತ ಅರೆಸ್ಟ್ Read More »

ಸುಳ್ಯ : ಪಿಕಪ್ – ಲಾರಿ ಢಿಕ್ಕಿ : ಓರ್ವ ಮೃತ್ಯು: ನಾಲ್ವರಿಗೆ ಗಾಯ

ಸುಳ್ಯ: ಪಿಕಪ್ ಹಾಗೂ ಕಂಟೈನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಗಾಯಗೊಂಡ ಘಟನೆ ತಾಲೂಕಿನ ಅಡ್ಕಾರ್ ಸಮೀಪದ ಮಾವಿನಕಟ್ಟೆ ಯಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಪಟ್ಟವನನ್ನು ಪೆರಾಜೆಯ ದಿನಕರ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಸ್ಥಳ ಅಪಾಯಕಾರಿ ಜಾಗವಾಗಿದ್ದು, ಹಿಂದೆ ಇಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಜೀವಹಾನಿಗಳಾ ಗಿತ್ತು. ಪುತ್ತೂರಿನಿಂದ ಸಂಪಾಜೆಗೆ ತೆರಳುತ್ತಿದ್ದ ಪಿಕಪ್ ಮತ್ತು ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ನಡುವೆ ಅಪಘಾತ ಸಂಭವಿಸಿದೆ.

ಸುಳ್ಯ : ಪಿಕಪ್ – ಲಾರಿ ಢಿಕ್ಕಿ : ಓರ್ವ ಮೃತ್ಯು: ನಾಲ್ವರಿಗೆ ಗಾಯ Read More »

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ

ವಿಟ್ಲ: ಯುವಕನೋರ್ವ ಪಕ್ಕದ ಮನೆಯ ಬಾಲಕಿಯ ಎದುರು ಪ್ಯಾಂಟ್ ಜಾರಿಸಿ ಪೊಲೀಸರ ಅತಿಥಿಯಾದ ಘಟನೆ ವಿಟ್ಲದಿಂದ ವರದಿಯಾಗಿದೆ. ವಿಟ್ಲ ಸಮೀಪದ ಬೆದ್ರಕಾಡು ಎಂಬಲ್ಲಿ ಪಕ್ಕದ ಮನೆಯ ಆಡುಗಳು ತಮ್ಮ ಮನೆಯ ಕೃಷಿಯನ್ನು ಹಾಳು ಮಾಡುತ್ತಿದೆ ಎಂದು ಬಾಲಕಿ ಆಡುಗಳ lನ್ನು ಓಡಿಸಿದ್ದಾಳೆ. ಇದಕ್ಕಾಗಿ ಕೋಪಗೊಂಡ ಆಡಿನ ಮಾಲಿಕ ನಜೀರ್ ಎಂಬ ಯುವಕ ಬಾಲಕಿಯ ಎದುರು ತನ್ನ ಪ್ಯಾಂಟ್ ಜಾರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಮತ್ತು ಬಾಲಕಿಯ ಮನೆಯವರನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ Read More »

ನಿಜವಾಗಿಯೂ ಇವರು ಐಎಎಸ್ ಮಾಡಿದ್ದಾರಾ..? | ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಕಿಡಿ

ಮೈಸೂರು: ಮೈಸೂರಿನ ಜನರ ಕುಡಿಯುವ ನೀರು ಬಳಸಿಕೊಂಡು ಈಜುಕೊಳ ಕಟ್ಟಿಸಿಕೊಂಡ ರೋಹಿಣಿ ಸಿಂಧೂರಿ ನಿಜವಾಗಿಯೂ ಐಎಎಸ್ ಮಾಡಿದ್ದಾರಾ ಅನ್ನೋದೇ ಡೌಟ್ ಎಂದು ಮಾಜಿ ಸಚಿವ, ಶಾಸಕ ಸಾರಾ ಮಹೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ನೀವು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು ಮೈಸೂರಿಗೆ ಬಂದು 7 ತಿಂಗಳ ಅವಧಿಯಲ್ಲಿ ಒಂದೇ ಒಂದು ಗುಂಟೆ ಒತ್ತುವರಿ ತೆರವು ಮಾಡಿದ್ದರೆ ತೋರಿಸಿ. ಈಗಲೂ ನೀವು ಐಎಎಸ್ ಅಧಿಕಾರಿಯೇ ಆಗಿದ್ದೀರಿ, ಕರ್ನಾಟಕದಲ್ಲೇ ಇದ್ದೀರಿ. ಸರ್ಕಾರಿ ಭೂಮಿ ಉಳಿಸಿದ್ದರೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿ.

ನಿಜವಾಗಿಯೂ ಇವರು ಐಎಎಸ್ ಮಾಡಿದ್ದಾರಾ..? | ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಕಿಡಿ Read More »

ಕಾಮೋತ್ತೇಜಕ ಮಾತ್ರೆ ನೀಡಿ ಅಪ್ರಾಪ್ತೆಯ ಮೇಲೆ ನಿರಂತರ 8 ವರ್ಷ ಅತ್ಯಾಚಾರ | ಕಾಮುಕ ದಂಪತಿ ಸೇರಿದಂತೆ ನಾಲ್ವರ ಬಂಧನ

ಮುಂಬೈ: ಪಿಯುಸಿ ವಿದ್ಯಾರ್ಥಿನಿಯೋರ್ವಳಿಗೆ ಕಾಮೋತ್ತೇಜಕ ಮಾತ್ರೆ ಮತ್ತು ಇಂಜೆಕ್ಷನ್ ಗಳನ್ನು ನೀಡಿ ನಿರಂತರ 8 ವರ್ಷಗಳ ಕಾಲ ಅತ್ಯಾಚಾರ ವೆಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಸಂತ್ರಸ್ತೆಗೆ ಸುಮಾರು 16 ವರ್ಷ ಪ್ರಾಯವಾಗಿದ್ದು, ಅಂದೇರಿಯ ವ್ಯಾಪಾರಿಯೋರ್ವರ ಮಗಳಾಗಿದ್ದಾಳೆ. ತನ್ನ ನೆರೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಕುಟುಂಬದ ವ್ಯಕ್ತಿ ಸಂತ್ರಸ್ತೆಯ ಮೇಲೆ ಅ‍ತ್ಯಾಚಾರವೆಸಗಿದ್ದಾನೆ. ಸುಮಾರು 8 ವರ್ಷಗಳ ಹಿಂದೆ ಬಾಲಕಿಗೆ ಕಾಮೋತ್ತೇಜಕ ಮಾತ್ರೆಯನ್ನು ನೀಡಿದ್ದಾನೆ. ನಂತರ ಆಕೆಯನ್ನ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ನಂತರದಲ್ಲಿ ನಿರಂತರವಾಗಿ ಬಾಲಕಿಗೆ ಕಾಮೋತ್ತೇಜಕ ಮಾತ್ರೆ

ಕಾಮೋತ್ತೇಜಕ ಮಾತ್ರೆ ನೀಡಿ ಅಪ್ರಾಪ್ತೆಯ ಮೇಲೆ ನಿರಂತರ 8 ವರ್ಷ ಅತ್ಯಾಚಾರ | ಕಾಮುಕ ದಂಪತಿ ಸೇರಿದಂತೆ ನಾಲ್ವರ ಬಂಧನ Read More »

ಕಳ್ಳರನ್ನು ಪೊಲೀಸರು ಹಿಡಿದ ಮೇಲೆ ಮನೆ ಮಾಲಿಕನಿಗೆ ತಿಳಿಯಿತು 90 ಲಕ್ಷ ಕಳವಾಗಿರುವ ವಿಷಯ

ಬೆಂಗಳೂರು: ತನ್ನ ಮನೆಯಲ್ಲಿ ಹಣ ಕಳವು ಆಗಿರುವ ವಿಷಯ ಕಳ್ಳರು ಪತ್ತೆಯಾದ ಮೇಲೆ ಮನೆ ಮಾಲೀಕನಿಗೆ ತಿಳಿದ ಘಟನೆ ನಗರದಲ್ಲಿ ನಡೆದಿದೆ. ನಗರದಲ್ಲಿ ಚಿಂದಿ ಆಯುತ್ತಿದ್ದ ಬಾಂಗ್ಲಾ ಮೂಲದ ಇಬ್ಬರು ಯುವಕರು ನಗರದ ಬಾಗಲುಗುಂಟೆಯ ಎಂಎಚ್ಆರ್ ಲೇಔಟ್ ನ ಮನೆಯೊಂದರಿಂದ ಹಣ ಎಗರಿಸಿದ್ದರು. ಕಳೆದ ಮೇ 2ರಂದು ಆರೋಪಿಗಳಾದ, ಸಂಜು ಸಹಾ ಹಾಗೂ ಶುಭಂಕರ್ ಶಿಲ್ಲು ಕಳವಾದ ಮನೆಯ ಬಳಿ ತಿರುಗಾಡುತ್ತಿದ್ದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಲಾಕ್ಡೌನ್ ಇರುವ ಕಾರಣ ಮನೆಮಂದಿ ಸದ್ಯ ತಿರುಗಿ ಬರಲಿಕ್ಕಿಲ್ಲ

ಕಳ್ಳರನ್ನು ಪೊಲೀಸರು ಹಿಡಿದ ಮೇಲೆ ಮನೆ ಮಾಲಿಕನಿಗೆ ತಿಳಿಯಿತು 90 ಲಕ್ಷ ಕಳವಾಗಿರುವ ವಿಷಯ Read More »

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ

ದಕ್ಷಿಣ ಆಫ್ರಿಕಾ: ಮಹಿಳೆಯೋರ್ವರು ಒಂದೇ ಬಾರಿಗೆ ಬರೋಬ್ಬರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಘಟನೆ ದಕ್ಷಿಣ ಆಫ್ರಿಕದಲ್ಲಿ ನಡೆದಿದೆ. 10 ಮಕ್ಕಳಲ್ಲಿ 7 ಗಂಡುಮಕ್ಕಳು ಮತ್ತು 3 ಹೆಣ್ಣುಮಕ್ಕಳು. ಟೆಬೋಗೊ ತ್ಸೊಟೆಟ್ಸಿ ಎಂಬವರ ಪತ್ನಿ 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಎಲ್ಲ ಮಕ್ಕಳನ್ನು ಸಿಸೇರಿಯನ್ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಈ ತಾಯಿ ತನ್ನ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ Read More »

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ

ಮಂಗಳೂರು: ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿಯಲ್ಲಿ ನಡೆದಿದೆ. ಕದ್ರಿ ಪಿಂಟೋ ಲೇನ್ ನಿವಾಸಿ ಸುರೇಶ್ 55 ಮತ್ತು ಪತ್ನಿ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಸುರೇಶ್ ಅವರ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಹಾಗೂ ಪತ್ನಿಯ ಮೃತದೇಹ ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೆತ್ ನೋಟ್ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ Read More »

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ | ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಹಾಗೂ ನಿಗದಿತ ದರ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು 780 ರೂ.ಗೆ, ಕೋವ್ಯಾಕ್ಸಿನ್ ಲಸಿಕೆ 1410 ಮಾರಾಟ ಮಾಡಬೇಕಿದೆ. ಹಾಗೂ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಗೆ 1,145 ರೂ. ನಿಗದಿಪಡಿಸಿದೆ. ತೆರಿಗೆ ಮತ್ತು 150 ರೂ.

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ | ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ Read More »