Editor

ಬೆಂಗಳೂರು: ಶೀಲ ಶಂಕಿಸಿ ಪತಿಯಿಂದ ಪತ್ನಿಗೆ ಚೂರಿ ಇರಿತ| ಗಂಭೀರ ಸ್ಥಿತಿಯಲ್ಲಿ ‘ಅಮೃತಧಾರೆ’ ಧಾರಾವಾಹಿ ನಟಿ

ಸಮಗ್ರ ನ್ಯೂಸ್: ಬೆಳ್ಳಬೆಳಗ್ಗೆ ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಚಾಕು ಇರಿತ ಪ್ರಕರಣ ವರದಿಯಾಗಿದೆ. ಶೀಲ ಶಂಕಿಸಿ ಪತಿಯಿಂದಲೇ ನಟಿ ಚಾಕು ಇರಿತಕ್ಕೆ ಒಳಗಾಗಿದ್ದಾಳೆ. ಮಂಜುಳಾ ಅಲಿಯಾಸ್‌ ಶ್ರುತಿ ಚಾಕು ಇರಿತಕ್ಕೆ ಒಳಗಾದ ಕಿರುತೆರೆ ನಟಿ ಎಂದು ಗುರುತಿಸಲಾಗಿದೆ. ಕನ್ನಡದಲ್ಲಿ ಅಮೃತಧಾರೆ, ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಶ್ರುತಿ ನಟಿಸಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಘಟನೆ ನಡೆದಿದೆ. ಕಳೆದ ಜುಲೈ 4 ರಂದು ನಡೆದಿರುವ ಘಟನೆ ತಡವಾಗಿ […]

ಬೆಂಗಳೂರು: ಶೀಲ ಶಂಕಿಸಿ ಪತಿಯಿಂದ ಪತ್ನಿಗೆ ಚೂರಿ ಇರಿತ| ಗಂಭೀರ ಸ್ಥಿತಿಯಲ್ಲಿ ‘ಅಮೃತಧಾರೆ’ ಧಾರಾವಾಹಿ ನಟಿ Read More »

ಸರ್ಕಾರಿ‌ ಶಾಲಾ ಮಕ್ಕಳಿಗೆ ಉಚಿತ ‌ಬಸ್ | ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್’ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆಪಿಎಸ್ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳೇ ಓದುತ್ತಿದ್ದಾರೆ. ಎಲ್ಕೆಜಿಯಿಂದ ಪಿಯುಸಿ ತನಕ ವಿದ್ಯಾಭ್ಯಾಸ ದೊರೆಯುತ್ತಿದೆ. ಅಲ್ಲಿ

ಸರ್ಕಾರಿ‌ ಶಾಲಾ ಮಕ್ಕಳಿಗೆ ಉಚಿತ ‌ಬಸ್ | ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ Read More »

ಹಾಸನ: ಹೃದಯಾಘಾತ ಪ್ರಕರಣ ದಿಢೀರ್ ಏರಿಕೆಯಾಗಿಲ್ಲ| ತಜ್ಞರ ವರದಿ ಬಿಡುಗಡೆ

ಸಮಗ್ರ ನ್ಯೂಸ್: ಹಾಸನದಲ್ಲಿ ಹೃದಯಾಘಾತದ ಸಾವಿನ ಪ್ರಕರಣಗಳು ಏರಿಕೆಯಾಗಿಲ್ಲ ಎಂದು ವರದಿ ನೀಡಿರುವ ತಜ್ಞರ ಸಮಿತಿ, ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅಪಾಯ ಎದುರಿಸುತ್ತಿರುವ ಸಾರ್ವಜನಿಕ ಸಾರಿಗೆ (ಆಟೋ, ಟ್ಯಾಕ್ಸಿ) ಚಾಲಕರಿಗೆ ಹೃದಯ ತಪಾಸಣೆ ಸೇರಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದೆ. ಹಾಸನದಲ್ಲಿ ಕಳೆದ ಮೇ, ಜೂನ್​ನಲ್ಲಿ ವರದಿಯಾದ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸೂಚನೆ ಮೇರೆಗೆ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ವರದಿ ಬಿಡುಗಡೆ ಮಾಡಿತು.

ಹಾಸನ: ಹೃದಯಾಘಾತ ಪ್ರಕರಣ ದಿಢೀರ್ ಏರಿಕೆಯಾಗಿಲ್ಲ| ತಜ್ಞರ ವರದಿ ಬಿಡುಗಡೆ Read More »

ರಾಜ್ಯಕ್ಕಾಗಿ ಹೆಂಡತಿಯನ್ನೇ ಪಣವಿಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿಲ್ಲ – ಬಿ.ಕೆ ಹರಿಪ್ರಸಾದ್

ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಕಾರ್ಯಕರ್ತ ಸ್ಥಾನವೇ ಮುಖ್ಯ ಎನ್ನುವುದಾದರೇ ಪೇಮೆಂಟ್ ಸೀಟ್ ಪಡೆದು ರಾಜ್ಯಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದು ಯಾಕೆ ಬಿ ವೈ ವಿಜಯೇಂದ್ರ ಅವರೇ..? ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಾನು ಹಿಂಬಾಗಿಲಿನಿಂದ ವಿಧಾನಸಭೆಗೆ ಪ್ರವೇಶ ಮಾಡಿದ್ದು ನಿಜವೇ ಆಗಿದ್ದರೇ ನಿಮ್ಮ ತಂದೆ ಬಿ ಎಸ್ ಯಡಿಯೂರಪ್ಪನವರು ಶಿಕಾರಿಪುರದಲ್ಲಿ ಸೋತು ಸುಣ್ಣವಾಗಿ 2000ರಿಂದ 2004ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದದ್ದು ಹಿಂಬಾಗಿಲಿನಿಂದಲೊ ಅಥವಾ “ಶೋಭಾ”ಯಾತ್ರೆ ಮೂಲಕವೂ ರಾಜ್ಯದ

ರಾಜ್ಯಕ್ಕಾಗಿ ಹೆಂಡತಿಯನ್ನೇ ಪಣವಿಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿಲ್ಲ – ಬಿ.ಕೆ ಹರಿಪ್ರಸಾದ್ Read More »

ಕೊಟ್ಟಿಗೆಹಾರ: ಮಾಂಸಕ್ಕಾಗಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಕದ್ದೊಯ್ದ ಗೋಕಳ್ಳರು| ಆರು ಮಂದಿಯ ಬಂಧನ

ಸಮಗ್ರ ನ್ಯೂಸ್: ಮಾಂಸಕ್ಕಾಗಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಕದ್ದೊಯ್ದು ಕೊಂದ ಆರೋಪಿಗಳನ್ನು ಬಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಕೊಟ್ಟಿಗೆಯೊಂದರಲ್ಲಿ ಹಸು ಕಟ್ಟಲಾಗಿತ್ತು. ಅಸ್ಸಾಂ ಮೂಲದ ಕಾಫಿತೋಟದ ಕಾರ್ಮಿಕರು ಕೊಟ್ಟಿಗೆಯಿಂದ ಹಸವನ್ನು ಕದ್ದೊಯ್ದು ಕೊಂದಿದ್ದಾರೆ. ಬಳಿಕ, ಹಸು ಮಾಂಸವನ್ನು ಬೇರ್ಪಡಿಸುವಾಗ ಪೊಲೀಸರು ದಾಳಿ ಮಾಡಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ. ಅಜೀರ್ ಅಕ್ಮಲ್, ಅಕ್ಕಾಸ್ ಅಲಿ, ನಜ್ರುಲ್ ಹಕ್ ಹಾಗೂ ಇಜಾಬುಲ್ ಹಕ್, ಮೆಹರ್ ಅಲಿ, ಮಂಜುಲ್ ಹಕ್ ಸೆರೆ ಬಂಧಿತರು. ಬಾಳೂರು

ಕೊಟ್ಟಿಗೆಹಾರ: ಮಾಂಸಕ್ಕಾಗಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಕದ್ದೊಯ್ದ ಗೋಕಳ್ಳರು| ಆರು ಮಂದಿಯ ಬಂಧನ Read More »

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೆ ಸಾಕ್ಷ್ಯನಾಶದ ಆತಂಕ| FIR ಆಗಿ 6‌ದಿನ ಕಳೆದರೂ ತನಿಖೆಯಾಗದ ಹಿನ್ನಲೆ ಡಿಜಿಗೆ ಸಾರ್ವಜನಿಕ ಹಿತಾಸಕ್ತಿ ಪತ್ರ

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಸಂಭವಿಸಿದ ಹಲವಾರು ಕೊಲೆ ಹಾಗೂ ಅತ್ಯಾಚಾರ ಕೊಲೆ ಪ್ರಕರಣಗಳ ಕುರಿತಂತೆ ಜುಲೈ 3ರಂದು ವ್ಯಕ್ತಿಯೊಬ್ಬ ತಾನು ಹೂತಿದ್ದ ಶವಗಳನ್ನು ಹೊರತೆಗೆದು ತೋರಿಸಲು ಸಿದ್ಧ ಎಂದು ಹೇಳಿ ಎಫ್‌ಐಆರ್‌ ದಾಖಲಿಸಿದ್ದರು. ಧರ್ಮಸ್ಥಳದಲ್ಲಿ ನಡೆದ ಹಲವಾರು ಅತ್ಯಾಚಾರ ಹಾಗೂ ಕೊಲೆಗಳ ಶವಗಳನ್ನು ತಾನೇ ಹೂತಿಟ್ಟಿದ್ದು, ತನಗೆ ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಹೂತಿಟ್ಟ ಸ್ಥಳಗಳನ್ನು ತೋರಿಸುವುದಾಗಿ ತಿಳಿಸಿದ್ದರು. ಹೀಗೆ ಎಫ್‌ಐಆರ್‌ ದಾಖಲಾಗಿ 6 ದಿನಗಳು ಕಳೆದರೂ ಸರಿಯಾದ ರೀತಿಯ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿ

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೆ ಸಾಕ್ಷ್ಯನಾಶದ ಆತಂಕ| FIR ಆಗಿ 6‌ದಿನ ಕಳೆದರೂ ತನಿಖೆಯಾಗದ ಹಿನ್ನಲೆ ಡಿಜಿಗೆ ಸಾರ್ವಜನಿಕ ಹಿತಾಸಕ್ತಿ ಪತ್ರ Read More »

ಬೀಳುವ ಮಳೆ ನೀರು ಬಂಗಾಳ ಕೊಲ್ಲಿಗೋ? ಅರಬ್ಬಿ ಸಮುದ್ರಕ್ಕೋ? ನಿರ್ಧಾರ ಮಾಡುತ್ತೆ ಈ ಕಲ್ಲು!! ಹಾಸನದ ಬಿಸ್ಲೆ ಘಾಟ್ ನ ಮಂಕನಹಳ್ಳಿಯಲ್ಲಿದೆ ಈ ರಿಟ್ಜ್ ಪಾಯಿಂಟ್

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯ ಮಂಕನಹಳ್ಳಿಯಲ್ಲಿರುವ ಒಂದು ಕಲ್ಲು, ಕೇವಲ ಕಲ್ಲಲ್ಲ, ಬದಲಿಗೆ ಪ್ರಕೃತಿಯ ಅಪೂರ್ವ ಕಲಾಕೃತಿಯಾಗಿದೆ. ಈ ಕಲ್ಲಿನ ಮೇಲೆ ಬೀಳುವ ಮಳೆನೀರಿನ ಒಂದು ತೊಟ್ಟಿಕ್ಕುವಿಕೆ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ, ಆದರೆ ಮತ್ತೊಂದು ತೊಟ್ಟಿಕ್ಕುವಿಕೆ ಪೂರ್ವಕ್ಕೆ ತಿರುಗಿ ಬಂಗಾಳ ಕೊಲ್ಲಿಯ ಕಡೆಗೆ ಒಯ್ಯುತ್ತದೆ. ಈ ವಿಶಿಷ್ಟ ಜಲವಿಭಾಜಕ ಕರ್ನಾಟಕದ ಭೂಗೋಳದ ಒಂದು ರೋಮಾಂಚಕ ಕತೆಯನ್ನು ಹೇಳುತ್ತದೆ.ಈ ಕಲ್ಲಿನ ಕಥೆ ಬ್ರಿಟಿಷ್ ಕಾಲಕ್ಕೆ ಕೊಂಡೊಯ್ಯುತ್ತದೆ. 19ನೇ ಶತಮಾನದಲ್ಲಿ, ಬ್ರಿಟಿಷ್ ಭೂವಿಜ್ಞಾನಿಗಳು

ಬೀಳುವ ಮಳೆ ನೀರು ಬಂಗಾಳ ಕೊಲ್ಲಿಗೋ? ಅರಬ್ಬಿ ಸಮುದ್ರಕ್ಕೋ? ನಿರ್ಧಾರ ಮಾಡುತ್ತೆ ಈ ಕಲ್ಲು!! ಹಾಸನದ ಬಿಸ್ಲೆ ಘಾಟ್ ನ ಮಂಕನಹಳ್ಳಿಯಲ್ಲಿದೆ ಈ ರಿಟ್ಜ್ ಪಾಯಿಂಟ್ Read More »

ರಾಜ್ಯಾದ್ಯಂತ ಜು.16ರವರೆಗೆ ಭಾರೀ ಮಳೆ ಮುನ್ಸೂಚನೆ| ಕರಾವಳಿ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜುಲೈ 16ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣವಿದ್ದರೂ, ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ, ಕೆಲವು ಸ್ಥಳಗಳಲ್ಲಿ ತುಂತುರು

ರಾಜ್ಯಾದ್ಯಂತ ಜು.16ರವರೆಗೆ ಭಾರೀ ಮಳೆ ಮುನ್ಸೂಚನೆ| ಕರಾವಳಿ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ Read More »

ಎನ್ಐಎ ನಿಂದ ರಾಜ್ಯದಲ್ಲಿ ದಿಢೀರ್ ದಾಳಿ| ಮೂವರು ಶಂಕಿತ ಉಗ್ರರು ವಶಕ್ಕೆ

ಸಮಗ್ರ ನ್ಯೂಸ್: ರಾಷ್ಟ್ರೀಯ ತನಿಖಾ ದಳ(ಎನ್​ಐಎ) ರಾಜ್ಯದಲ್ಲಿ ದಿಢೀರ್ ಬೇಟೆಯಾಡಿದೆ. ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಕೋಲಾರದಲ್ಲಿ ಒಟ್ಟು ಐದು ಕಡೆ ದಾಳಿ ಮಾಡಿದ್ದು, ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಆಗಿದ್ದ ಚಾಂದ್ ಪಾಷಾ ಹಾಗೂ ಅನೀಸ್‌ ಫಾತಿಮಾ ಎನ್ನುವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಲಾಗಿದ್ದು, ದಾಳಿ ವೇಳೆ ಎನ್​ಐಎ

ಎನ್ಐಎ ನಿಂದ ರಾಜ್ಯದಲ್ಲಿ ದಿಢೀರ್ ದಾಳಿ| ಮೂವರು ಶಂಕಿತ ಉಗ್ರರು ವಶಕ್ಕೆ Read More »

ನಾಳೆ ಭಾರತ್ ಬಂದ್ ಗೆ ಕಾರ್ಮಿಕ ಸಂಘಟನೆಗಳ ಕರೆ| ಏನಿರುತ್ತೆ? ಏನಿರಲ್ಲ?

ಸಮಗ್ರ ನ್ಯೂಸ್: ದೇಶದಾದ್ಯಂತ ‘ಭಾರತ್ ಬಂದ್’ ಜಾರಿಯಾಗಲಿದೆ. 10 ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಈ ಮುಷ್ಕರಕ್ಕೆ ಕರೆ ನೀಡಿದೆ. 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಈ ಪ್ರತಿಭಟನೆ, ಕೇಂದ್ರ ಸರ್ಕಾರದ ‘ಕಾರ್ಮಿಕ-ರೈತ ವಿರೋಧಿ’ ನೀತಿಗಳ ವಿರುದ್ಧ ನಡೆಸಲಾಗುತ್ತಿದೆ.  ಬಂದ್‌ನಿಂದ ಬ್ಯಾಂಕಿಂಗ್, ಸಾರಿಗೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಕ ಅಡಚಣೆಯಾಗುವ ಸಾಧ್ಯತೆಯಿದೆ. ಈ ಮುಷ್ಕರದಿಂದಾಗಿ ಬ್ಯಾಂಕ್‌ಗಳು ಮುಚ್ಚಲ್ಪಡಬಹುದು, ಚೆಕ್ ಕ್ಲಿಯರೆನ್ಸ್, ಗ್ರಾಹಕ ಸೇವೆಗಳು, ಮತ್ತು ಇತರ ಹಣಕಾಸು ಚಟುವಟಿಕೆಗಳು ಸ್ಥಗಿತಗೊಳ್ಳಬಹುದು. ಅಂಚೆ ಕಚೇರಿಗಳು, ಕಲ್ಲಿದ್ದಲು ಗಣಿಗಾರಿಕೆ

ನಾಳೆ ಭಾರತ್ ಬಂದ್ ಗೆ ಕಾರ್ಮಿಕ ಸಂಘಟನೆಗಳ ಕರೆ| ಏನಿರುತ್ತೆ? ಏನಿರಲ್ಲ? Read More »