Editor

ಕಟಪಾಡಿ: ಬಸ್ ಡಿಕ್ಕಿ – ಬೈಕ್ ಸವಾರ ಸಾವು

ಉಡುಪಿ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್‌ನಲ್ಲಿ ನಡೆದಿದೆ. ಮೃತರನ್ನು ಕಟಪಾಡಿಯ ಅಚ್ಚಾದ ನಿವಾಸಿ ಯಶೋಧರ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ಲ್ಲಿ ತನ್ನ ಬೈಕ್ ನಲ್ಲಿ ತೇರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಯಶೋಧರ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ಈ ಸಂಬಂಧ […]

ಕಟಪಾಡಿ: ಬಸ್ ಡಿಕ್ಕಿ – ಬೈಕ್ ಸವಾರ ಸಾವು Read More »

ಲಂಚ ಸ್ವೀಕಾರ: ಮಂಗಳೂರು ವಿವಿ ಪ್ರೊಫೆಸರ್ ಗೆ ಜೈಲು

ಮಂಗಳೂರು: ವಿದ್ಯಾರ್ಥಿನಿಯಿಂದ ಲಂಚ ಸ್ವೀಕಾರರಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ರವಿಶಂಕರ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2012ರ ಡಿಸೆಂಬರ್ 4ರಂದು ಡಾ.ಅನಿತಾ ರವಿಶಂಕರ್ ಅವರು ಪಿಎಚ್‌ಡಿ ವಿದ್ಯಾರ್ಥಿನಿ ಪ್ರೇಮಾ ಡಿ’ಸೋಜಾ ಅವರಿಂದ ಪ್ರಬಂಧ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿಗೆಂದು 16,800 ರೂ.ಗಳನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದರು. ಇದರ ಮುಂಗಡ ಹಣ ವಾಗಿ 5000 ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ

ಲಂಚ ಸ್ವೀಕಾರ: ಮಂಗಳೂರು ವಿವಿ ಪ್ರೊಫೆಸರ್ ಗೆ ಜೈಲು Read More »

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ವಾಸನೆ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಗಾಂಜಾ, ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲವನ್ನು ಸಂಪೂರ್ಣವಾಗಿ ಹೆಡೆಮುರಿಕಟ್ಟಲು ಕಳೆದೊಂದು ವರ್ಷಗಳಿಂದ ಪಣತೊಟ್ಟಿರುವ ಪೊಲೀಸರು ನಟ-ನಟಿಯರು ಸೇರಿದಂತೆ ಅನೇಕ ಡ್ರಗ್ ಪೆಡ್ಲರ್ ಗಳನ್ನು ಈಗಾಗಲೇ ಜೈಲಿಗಟ್ಟಿದ್ದಾರೆ. ಇನ್ನು ನಗರದಾದ್ಯಂತವಿರುವ ಪೊಲೀಸರು ಡ್ರಗ್ಸ್ ಜಾಲದ ಬೆನ್ನುಬಿದ್ದಿದ್ದರೆ, ಇತ್ತ ಪರಪ್ಪನ ಅಗ್ರಹಾರದಲ್ಲಿರುವ ಪೊಲೀಸರೇ ಕೈದಿಗಳಿಗೆ ಡ್ರಗ್ಸ್ ಪೂರೈಕೆ

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ Read More »

ಕೆ-ಸೆಟ್ ಪರೀಕ್ಷೆಗೆ ಮರುದಿನಾಂಕ ನಿಗದಿ – ಮೈಸೂರು ವಿವಿ ಪ್ರಕಟಣೆ

ಮೈಸೂರು: ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್)ಯ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ. ಜುಲೈ 25ರಂದು ಪರೀಕ್ಷೆಯು ನಡೆಯಲಿದೆ ಎಂದು ಪರೀಕ್ಷೆಯನ್ನು ಆಯೋಜಿಸುವ ಮೈಸೂರು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲು ಏಪ್ರಿಲ್ 11ರಂದು ಕೆ- ಸೆಟ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ದೇಶದಲ್ಲಿ ಕರೊನಾ ಸೋಂಕು ಹೆಚ್ಚಾದ ಕಾರಣ ಎರಡನೇ ಹಂತದ ಲಾಕ್​ಡೌನ್​ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿ ವಿಶ್ವವಿದ್ಯಾಲಯವು ಆದೇಶಹೊರಡಿಸಿತ್ತು. ಈಗ ಮತ್ತೆ ದಿನಾಂಕವನ್ನು ನಿಗದಿ ಮಾಡಿ ಮೈಸೂರು ವಿವಿ

ಕೆ-ಸೆಟ್ ಪರೀಕ್ಷೆಗೆ ಮರುದಿನಾಂಕ ನಿಗದಿ – ಮೈಸೂರು ವಿವಿ ಪ್ರಕಟಣೆ Read More »

ಕೊರೊನದಿಂದ ಮೃತಪಟ್ಟ ರೈತರ ಸಾಲಮನ್ನಾಕ್ಕೆ ನಿರ್ಧಾರ – ಸಚಿವ ಸೋಮಶೇಖರ್

ಬೆಂಗಳೂರು ; ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿರುವ ರೈತರ 1 ಲಕ್ಷವರೆಗಿನ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದ್ದು, ಈ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ 1 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ರಾಜ್ಯದಲ್ಲಿ ಎಷ್ಟು ರೈತರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಸಾಲಮನ್ನಾ ಮಾಡಲಾಗುವುದು ಈ ಬಗ್ಗೆ

ಕೊರೊನದಿಂದ ಮೃತಪಟ್ಟ ರೈತರ ಸಾಲಮನ್ನಾಕ್ಕೆ ನಿರ್ಧಾರ – ಸಚಿವ ಸೋಮಶೇಖರ್ Read More »

ಶಾರ್ಟ್ ಸರ್ಕ್ಯೂಟ್ ಗೆ ಚಾಲಕ ಸಮೇತ ಹೊತ್ತಿ‌ ಉರಿದ ಕಾರು

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಅಲ್ಟೋ ಕಾರೊಂದು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಗ್ರಾಮದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಆರೆನೂರು ಗ್ರಾಮದ ನಿವಾಸಿ ರಘು ಎಂದು ತಿಳಿದು ಬಂದಿದ್ದು ಕಾರಿನಲ್ಲಿ ಒಬ್ಬರೆ ಇದ್ದು ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹಬ್ಬಿದ ಕೂಡಲೆ ಸ್ಥಳೀಯರು ಬೆಂಕಿ ನಂದಿಸಲು

ಶಾರ್ಟ್ ಸರ್ಕ್ಯೂಟ್ ಗೆ ಚಾಲಕ ಸಮೇತ ಹೊತ್ತಿ‌ ಉರಿದ ಕಾರು Read More »

ಡಿ.ವಿ ಕರ್ನಾಟಕದ ಮುಂದಿನ ಸಿಎಂ!? ಮೌನ ಮುರಿದ ಡಿವಿಎಸ್ ಏನು ಹೇಳಿದ್ರು ಗೊತ್ತಾ?

ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ ಸದಾನಂದಗೌಡ ಬೆಂಗಳೂರಿಗೆ ವಾಪಸ್​​ ಆಗಿದ್ದು, ಗೌಡರ ಆಗಮನ ಹಿನ್ನೆಲೆಯಲ್ಲಿ ಅವರನ್ನು ನೋಡಿ ಮಾತನಾಡಿಸಲು ಬಿಜೆಪಿ ಕಾರ್ಯಕರ್ತರ ದಂಡು ಡಾಲರ್ಸ್ ಕಾಲೋನಿಯ ಸದಾನಂದಗೌಡರ ನಿವಾಸಕ್ಕೆ ಆಗಮಿಸಿತ್ತು. ನೂರಾರು ಸಂಖ್ಯೆಯ ಕಾರ್ಯಕರ್ತರು ಗೌಡರಿಗೆ ಜೈಕಾರ ಹಾಕಿ, ಮಾಜಿ ಸಚಿವರನ್ನು ಸ್ವಾಗತಿಸಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಸದಾನಂದಗೌಡರು ಮಾತನಾಡಿದರು. ‘ ನನ್ನ ಮತ್ತು ಪಕ್ಷದ ಕಾರ್ಯಕರ್ತರ ಸಂಬಂಧ ಎಲ್ಲೆ ಇದ್ರು ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ಇದು. ನಾನು ಪಕ್ಷದ

ಡಿ.ವಿ ಕರ್ನಾಟಕದ ಮುಂದಿನ ಸಿಎಂ!? ಮೌನ ಮುರಿದ ಡಿವಿಎಸ್ ಏನು ಹೇಳಿದ್ರು ಗೊತ್ತಾ? Read More »

ಕೆ.ಆರ್.ಎಸ್ ಅಕ್ರಮ ಗಣಿಗಾರಿಕೆ ದಂಧೆ, ಶೀಘ್ರ ದಾಖಲೆ ಬಿಡುಗಡೆ – ಅಶ್ವಥ ನಾರಾಯಣ

ಬೆಂಗಳೂರು: ಮಂಡ್ಯ ಜಿಲ್ಲೆ ಕೆ.ಆರ್‌.ಎಸ್‌ ಸುತ್ತಮುತ್ತ ಸುಮಾರು 40ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇವುಗಳ ಸಂಪೂರ್ಣ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟು ಮಾತ್ರವಲ್ಲದೆ, ರೈತರ ಜನ ಜೀವನಕ್ಕೂ ತೊಂದರೆ ಆಗಿದೆ. ಈ ಅಕ್ರಮ ದಂಧೆಯ ಸಂಪೂರ್ಣ ದಾಖಲೆಗಳನ್ನು ಮುಂದಿನ ವಾರ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಒಂದು ಗಣಿಗೆ ಪರವಾನಗಿ ಪಡೆದು 8-10 ಅಕ್ರಮ

ಕೆ.ಆರ್.ಎಸ್ ಅಕ್ರಮ ಗಣಿಗಾರಿಕೆ ದಂಧೆ, ಶೀಘ್ರ ದಾಖಲೆ ಬಿಡುಗಡೆ – ಅಶ್ವಥ ನಾರಾಯಣ Read More »

ರೋಗ ಬಾಧೆ, ಕಡಿಮೆ ಬೆಲೆಗೆ ಬೇಸತ್ತ ರೈತನಿಂದ 2ಎಕ್ರೆ ದಾಳಿಂಬೆಗೆ ಕೊಡಲಿ ಪೆಟ್ಟು

ಬೆಳಗಾವಿ: ‘ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದು ಹಾಗೂ ರೋಗ ಬಾಧೆಯಿಂದ ಕಂಗೆಟ್ಟು ರೈತನೋರ್ವ‌ಎರಡು‌ ಎಕರೆ ದಾಳಿಂಬೆ ಬೆಳೆಯನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅಜೂರ ಗ್ರಾಮದಲ್ಲಿ ನಡೆದಿದೆ. ರೈತ ನವನಾಥ ಮಾನೆ ಎಂಬವರು ತಮ್ಮ ಎರಡು ಎಕರೆ ಹೊಲದಲ್ಲಿ ದಾಳಿಂಬೆ ಬೆಳೆದಿದ್ದರು. ಹವಾಮಾನ ವೈಪರೀತ್ಯ, ರೋಗ ಬಾಧೆ ಮತ್ತು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ಕಂಗಾಲಾಗಿ ಶುಕ್ರವಾರ ದಾಳಿಂಬೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಬೆಳೆಗೆ ವರ್ಷಕ್ಕೆ 2-3 ಲಕ್ಷ ಖರ್ಚಾಗುತ್ತದೆ. ಆದರೆ

ರೋಗ ಬಾಧೆ, ಕಡಿಮೆ ಬೆಲೆಗೆ ಬೇಸತ್ತ ರೈತನಿಂದ 2ಎಕ್ರೆ ದಾಳಿಂಬೆಗೆ ಕೊಡಲಿ ಪೆಟ್ಟು Read More »

ಕಿಚ್ಚ ನಟನೆಯ ‘ ವಿಕ್ರಾಂತ್ ರೋಣ’ ಪೋಸ್ಟರ್ ನಕಲಿ ಮಾಡಿದ ಬಾಲಿವುಡ್!

ಕಿಚ್ಚ ಸುದೀಪ್​ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್ ಅನ್ನು ಬಾಲಿವುಡ್ ಮಂದಿ ಕಾಪಿ ಮಾಡಿದ್ದಾರೆ. ಸ್ಯಾಂಡಲ್​ವುಡ್​ಗೆ ಸೀಮಿತವಾಗದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದ್ದು, ಈ​ ಸಿನಿಮಾದ ಪೋಸ್ಟರ್​ ಕಾಪಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆಕ್ಷನ್ ‌ಕಟ್ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ

ಕಿಚ್ಚ ನಟನೆಯ ‘ ವಿಕ್ರಾಂತ್ ರೋಣ’ ಪೋಸ್ಟರ್ ನಕಲಿ ಮಾಡಿದ ಬಾಲಿವುಡ್! Read More »