Editor

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ

ವಾಷಿಂಗ್ಟನ್: ಹೆಸರಾಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಇಂದು ಬಾಹ್ಯಕಾಶಕ್ಕೆ ಹಾರಲಿದ್ದಾರೆ. Join us July 11th for our first fully crewed rocket powered test flight, and the beginning of a new space age. The countdown begins. #Unity22 https://t.co/5UalYT7Hjb. @RichardBranson pic.twitter.com/ZL9xbCeWQX — Virgin Galactic (@virgingalactic) July 1, 2021 ಈ ಮೂಲಕ ಸ್ಪೇಸ್ ಟೂರಿಸಮ್ […]

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ Read More »

ಇಂಡೋನೇಷ್ಯದಲ್ಲಿ ಕೋವಿಡ್ ಸ್ಫೋಟ | ಆಪತ್ತಿನಲ್ಲಿ ಆಮ್ಲಜನಕ ಆಪತ್ಭಾಂದವ

ಜಕಾರ್ತಾ: ಜನಸಂಖ್ಯೆಯಲ್ಲಿ ಪ್ರಪಂಚದ ನಾಲ್ಕನೇ ದೊಡ್ಡ ರಾಷ್ಟ್ರ ಇಂಡೋನೇಷಿಯಾದಲ್ಲಿ ಇದೀಗ ಕೋವಿಡ್ ಸ್ಫೋಟ ಸಂಭವಿಸಿದ್ದು ಆಮ್ಲಜನಕದ ಕೊರತೆ ಎದುರಾಗಿದೆ. ಕೋರಿಕೆಗೆ ತಕ್ಷಣ ಸ್ಪಂದಿಸಿರುವ ಸಿಂಗಾಪುರ ಮತ್ತು ಆಸ್ಟ್ರೇಲಿಯಾ ಇಂಡೋನೇಷಿಯಾದ ನೆರವಿಗೆ ನಿಂತಿದೆ. ಸಿಂಗಾಪುರ 1,000 ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಇಂಡೋನೇಷ್ಯಾಗೆ ಕಳುಹಿಸಿಕೊಟ್ಟಿದೆ. ಜೊತೆಗೆ ಅಷ್ಟೇ ಪ್ರಮಾಣದ ನೆರವನ್ನು ಆಸ್ಟ್ರೇಲಿಯಾ ಇಂಡೋನೇಷ್ಯಾಕ್ಕೆ ತಲುಪಿಸಿದೆ. ಈ ನಡುವೆ ಸಿಂಗಾಪುರದಿಂದ 36,000 ಟನ್‌ ಆಮ್ಲಜನಕ ಮತ್ತು ಆಮ್ಲಜನಕ ಉತ್ಪಾದಿಸುವ 10,000 ಕಾನ್ಸೆಂಟ್ರೇಟರ್‌ ಉಪಕರಣಗಳನ್ನು ಖರೀದಿಸಲು

ಇಂಡೋನೇಷ್ಯದಲ್ಲಿ ಕೋವಿಡ್ ಸ್ಫೋಟ | ಆಪತ್ತಿನಲ್ಲಿ ಆಮ್ಲಜನಕ ಆಪತ್ಭಾಂದವ Read More »

ಬೆಂಗಳೂರು: ಕುತ್ತಿಗೆ ಕೊಯ್ದು ಮಹಿಳೆಯ ಬರ್ಬರ ಕೊಲೆ

ಬೆಂಗಳೂರು: ಮನೆಯಲ್ಲಿ ಯಾರೂ ಇರದ ಸಂದರ್ಭ ಒಳ ನುಗ್ಗಿ ಮಹಿಳೆಯೊಬ್ಬರನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಜ್ಞಾನಜ್ಯೋತಿ ನಗರದಲ್ಲಿ ನಿನ್ನೆ ನಡೆದಿದೆ. ಸ್ಥಳೀಯ ಮನೆಯೊಂದರಲ್ಲಿ ವಾಸವಿದ್ದ 26 ವರ್ಷದ ಮಹಿಳೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಮಹಿಳೆಯ ಪತಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು ಶನಿವಾರ ಕೆಲಸಕ್ಕೆ ತೆರಳಿದ್ದರು. ಸಂಜೆ ಗಂಡನ ಸಹೋದರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ಕಳವು ನಡೆದಿಲ್ಲ. ಆದ್ದರಿಂದ ವೈಯಕ್ತಿಕ ದ್ವೇಷದ ಕಾರಣಕ್ಕೆ ಕೊಲೆ ಮಾಡಲಾಗಿದೆ

ಬೆಂಗಳೂರು: ಕುತ್ತಿಗೆ ಕೊಯ್ದು ಮಹಿಳೆಯ ಬರ್ಬರ ಕೊಲೆ Read More »

ದ್ವಾದಶ ರಾಶಿಗಳ ವಾರಭವಿಷ್ಯ, ಯಾರಿಗೆ ಶುಭ ಫಲ, ಯಾವ ರಾಶಿಗೆ ಏನು ಲಾಭ? ಸಂಪೂರ್ಣ ವಿವರ

ನಮ್ಮ ನಿತ್ಯ ಚಟುವಟಿಕೆಗಳು ನಮ್ಮ ರಾಶಿ, ನಕ್ಷತ್ರಗಳ ಚಲನೆಗಳಿಗೆ ಅನುಸಾರವಾಗಿ ನಡೆಯುತ್ತದೆ ಎಂದು ಶಾಸ್ತ್ರ ಸಮ್ಮತ ಅಭಿಪ್ರಾಯ. ಯಾವುದೇ ಕೆಲಸ ಮಾಡಲು ರಾಶ್ಯಾಧಿಪತಿಗಳು, ರಾಶಿ, ನಕ್ಷತ್ರಗಳು ಮೂಲ ಕಾರಣ ಮತ್ತು ಅವುಗಳ ಪ್ರೇರಣೆಯಿಂದಲೇ‌ ಕೆಲಸ‌ ಮಾಡುತ್ತೇವೆ. ನಮ್ಮೆಲ್ಲರ ದಿನನಿತ್ಯದ ಆಗುಹೋಗುಗಳಲ್ಲಿ ರಾಶಿಗಳ ಫಲ ಮಹತ್ವದ್ದು. ಜು.11 ರಿಂದ 17ರವರೆಗಿನ ಒಂದಿಡೀ ವಾರದ ದ್ವಾದಶ ರಾಶಿಗಳ ಗೋಚಾರ ಫಲ‌ ಇಲ್ಲಿದೆ. ಇವನ್ನು ನೋಡಿಕೊಂಡು ವಾರವನ್ನು ಉತ್ತಮವಾಗಿಸಿ. ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) ಸಾರ್ವಜನಿಕ ಕೆಲಸಗಳಲ್ಲಿ ಹೆಚ್ಚು

ದ್ವಾದಶ ರಾಶಿಗಳ ವಾರಭವಿಷ್ಯ, ಯಾರಿಗೆ ಶುಭ ಫಲ, ಯಾವ ರಾಶಿಗೆ ಏನು ಲಾಭ? ಸಂಪೂರ್ಣ ವಿವರ Read More »

ಪೆಟ್ರೋಲಿಯಂ ಬೆಲೆ ಜಾಸ್ತಿ ಆದ್ರೆ‌ ನಾನೇನ್ ಮಾಡ್ಲಿ? ಸೈಕಲ್‌ನಲ್ಲಿ ಓಡಾಡಿ – ಸಂಸದ ಸಿದ್ದೇಶ್ವರ್ ಉಡಾಫೆ ಮಾತು

ದಾವಣಗೆರೆ; ದಿನೇದಿನೇ ಪೆಟ್ರೋಲಿಯಂ ‌ಉತ್ಪನ್ನಗಳ ಬೆಲೆ‌ ಜಾಸ್ತಿ ಆಗ್ತಿದೆ.‌ ಇದರ ಬಗ್ಗೆ‌ ನೀವ್ಯಾಕೆ ಪ್ರಶ್ನೆ ‌ಮಾಡ್ಬಾರ್ದು, ಅಂತ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರರನ್ನು ಕೇಳಿದ್ರೆ ಅವ್ರು ಹೇಳೋ ಉತ್ತರ ಕೇಳಿದ್ರೆ ಇವ್ರೇನಾ ನಮ್ಮ ಸಂಸದರು ಅನ್ನೋ ಪ್ರಶ್ನೆ ಉಂಟಾಗುತ್ತೆ. ಹೌದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ದಾವಣಗೆರೆ ಬಿಜೆಪಿ ಸಂಸದ ಜಿ.ಎಮ್. ಸಿದ್ದೇಶ್ವರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಸೈಕಲ್ ಏರುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ

ಪೆಟ್ರೋಲಿಯಂ ಬೆಲೆ ಜಾಸ್ತಿ ಆದ್ರೆ‌ ನಾನೇನ್ ಮಾಡ್ಲಿ? ಸೈಕಲ್‌ನಲ್ಲಿ ಓಡಾಡಿ – ಸಂಸದ ಸಿದ್ದೇಶ್ವರ್ ಉಡಾಫೆ ಮಾತು Read More »

ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್‌ಗೆ ಅಭಿಮಾನಿಗಳು ಫಿದಾ

ಲಂಡನ್: ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ದಿಗ್ಗಜ ಕ್ರಿಕೆಟಿಗರು ಸಹಿತ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಟ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5 ನೇ ಓವರ್ ನಲ್ಲಿ ಎಮಿ ಜೋನ್ಸ್ ಬಾರಿಸಿದ ಬಿಗ್ ಶಾಟ್ ಒಂದನ್ನು ಲಾಂಗ್ ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್

ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್‌ಗೆ ಅಭಿಮಾನಿಗಳು ಫಿದಾ Read More »

ಕಾಡಾನೆ ದಾಳಿಗೆ ಮಹಿಳೆ ಬಲಿ

ಕೋಲಾರ: ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿ ಗ್ರಾಮದ ಕಾಮಸಮುದ್ರ ಬಳಿ ನಡೆದಿದೆ. ಆನೆಯ ಏಕಾಏಕಿ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಸಿದ್ದಮ್ಮ (50) ಸಾವಿಗೀಡಾದ ದುರ್ದೈವಿ. ಇವರು ಬೆಳಗ್ಗಿನ ಜಾವ ಮೊಮ್ಮಗನನ್ನು ನೋಡಲೆಂದು ಗುಲ್ಲಹಳ್ಳಿ ಗ್ರಾಮದಿಂದ ಗೊಡಗಮಂದೆ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ, ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಕಾಡಾನೆ ಎದುರಾಗಿದೆ. ದಿಢೀರ್ ಎಂದು ಆನೆ ದಾಳಿ ನಡೆಸಿದ ಪರಿಣಾಮ ಸಿದ್ದಮ್ಮರಿಗೆ ಅಲ್ಲಿಂದ ಓಡಿಹೋಗಲು ಅವಕಾಶವೂ ಸಿಕ್ಕಿಲ್ಲ. ಈ ಪರಿಣಾಮ ಆನೆ ದಾಳಿ ನಡೆಸಿದ್ದರಿಂದ ಸಾವನಪ್ಪಿದ್ದಾರೆ.

ಕಾಡಾನೆ ದಾಳಿಗೆ ಮಹಿಳೆ ಬಲಿ Read More »

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರವಾಸಿ ತಾಣಗಳು ಅನ್‌ಲಾಕ್ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪ್ರೇಮಿಗಳು ಪರಸ್ಪರ ಚುಂಬಿಸಿದ ಫೋಟೋ ಬಾರೀ ವೈರಲ್ ಆಗುತ್ತಿದೆ. ನಂದಿಬೆಟ್ಟ ಆನ್ ಲಾಕ್ ಆದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಜೋಡಿಯೊಂದು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿದ್ದಾರೆ. ನಂದಿಬೆಟ್ಟದಲ್ಲಿ ಜೋಡಿ ಲಿಪ್ ಲಾಕ್ ಮಾಡಿದ ಕ್ಷಣವನ್ನು ಯಾರೋ ಸೀರೆಹಿಡಿದಿದ್ದಾರೆ. ಕ್ಷಣಮಾತ್ರದಲ್ಲಿ ಬಿಸಿ ಬಿಸಿ ಫೋಟೋ ವೈರಲ್ ಆಗಿದೆ. ಮುಂಜಾನೆ ಮೋಡಗಳ ಮಂಜಿನಾಟದ ಜೊತೆ ಪ್ರವಾಸಿಗರು ನಂದಿ

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್ Read More »

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ

ಮಂಡ್ಯ: ತನ್ನ ಹೆಗಲ ಮೇಲೆ ಕೈ ಇಟ್ಟರು ಎಂಬ ಕಾರಣಕ್ಕೆ ಸ್ವಪಕ್ಷದ ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಕಾಪಾಳಮೋಕ್ಷ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಈ ನಡೆ ಭಾರೀ ವೈರಲ್ ಆಗಿದ್ದು ಇದು ಇದೀಗ ಬಿಜೆಪಿಗರಿಗೆ ಕಾಂಗ್ರೆಸ್ ನ್ನು ಟೀಕಿಸಲು ಬಂಡವಾಳ ಸಿಕ್ಕಿದಂತಾಗಿದೆ. ಡಿಕೆಶಿ, ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಿಂದಿನಿಂದ ಬಂದ ಕಾರ್ಯಕರ್ತ ಅಣ್ಣಾ ಎನ್ನುತ್ತಾ ಡಿಕೆಶಿ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ Read More »

ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!?

ಸುಬ್ರಹ್ಮಣ್ಯ: ರಾಜ್ಯ ಸರಕಾರಕ್ಕೆ ಬಹುಕೋಟಿ ಆದಾಯ ತಂದುಕೊಡುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಸೇವಾ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ. ಇನ್ನು ಈ ಕಂಟ್ರಾಕ್ಟ್’ನ್ನು ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು ಖಾಸಗಿ HDFC ಬ್ಯಾಂಕ್ ಗೆ ನೀಡಿರುವುದು ಭಕ್ತರಲ್ಲಿ ಅನುಮಾನ ಹುಟ್ಟುಹಾಕಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ದೇವಾಲಯದ ಸೇವೆಗಳಲ್ಲಿ ಪಾದರ್ಶಕತೆ ಗಟ್ಟಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಮೂಲಕ ಭಕ್ತರು ಮಾಡಿಸುವ ಸೇವೆಯ ಹಣ ತಕ್ಷಣ ನೇರವಾಗಿ ದೇವಾಲಯದ ಖಾತೆಗೆ ಜಮೆಯಾಗಲಿದೆ. ಕುಕ್ಕೆ ದೇವಾಲಯ ಸೇರಿದಂತೆ, ಘಾಟಿ

ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!? Read More »