ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣ | ತಂದೆಯ ಕೊಲೆಗೆ ಲಕ್ಷ ರೂ. ಸುಪಾರಿ ಕೊಟ್ಟಿದ್ದ ಮಗ | ಒಂದಲ್ಲ, ಎರಡಲ್ಲ ಮೂರನೇ ಪ್ರಯತ್ನಕ್ಕೆ ತಂದೆ ಯಮಲೋಕಕ್ಕೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪಾಪಿ ಮಗನೇ ಸುಪಾರಿ ಲಕ್ಷ ರೂ.ಕೊಟ್ಟು ಜನ್ಮ ಕೊಟ್ಟ ತಂದೆಯನ್ನೇ ಕೊಲೆ ಮಾಡಿಸಿರುವುದಾಗಿ, ಅದಲ್ಲದೆ ಒಂದಲ್ಲಾ, ಎರಡಲ್ಲಾ ಮೂರನೇ ಬಾರಿಯಲ್ಲಿ ತಂದೆ ತಂದೆಯ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ರೈತ ಶ್ರೀನಿವಾಸಮೂರ್ತಿ (65)ರವರು ಮಗನಿಂದ ಕೊಲೆಯಾದವರು. ಅವರ ಮಗ ರೋಹಿತ್, ಹಾಗೂ ರಂಗನಾಥ್ ಮತ್ತು ರವಿಕುಮಾರ್ ಕೊಲೆ ಪ್ರಕರಣದ ಅರೋಪಿಗಳು. ಶ್ರೀನಿವಾಸಮೂರ್ತಿಯವರ ಮಗ […]









