ತಪ್ಪಿದ ಕರೆಯಿಂದ ಹುಟ್ಟಿದ ಪ್ರೀತಿ ಬದುಕಿನ ಹಳಿ ತಪ್ಪಿಸಿತು | ಮದುವೆಯಾದ ಕೆಲವೇ ತಿಂಗಳಲ್ಲಿ ಯುವತಿ ನಿಗೂಢ ಸಾವು | ಇದು ಕೊಲೆಯೋ…? ಆತ್ಮಹತ್ಯೆಯೋ….?
ಶಿವಮೊಗ್ಗ: ಮಿಸ್ಸ್’ಡ್ ಕಾಲ್’ನಿಂದ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನದ ಏಳೇ ತಿಂಗಳಿನಲ್ಲಿ ಯುವತಿ ಒಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ನಡೆದಿದೆ. ಹಾಸನದ ಸಕಲೇಶಪುರ ತಾಲೂಕಿನ ಗೋಳಗೊಂಡ ಗ್ರಾಮದ ಸುಂದರ ಯುವತಿ ಸೌಂದರ್ಯ(21) ಗೆ ಒಂದು ಮಿಸ್ಸ್’ಡ್ ಕಾಲ್ ಮೂಲಕ ಕಾಡಿಗ್ಗೇರಿಯ ಯುವಕ ಉಮೇಶ್ ಎಂಬಾತನ ಪರಿಚಯವಾಗಿದೆ. ನಂತರ ಫೇಸ್ಬುಕ್’ನಲ್ಲಿ ಸ್ನೇಹಿತರಾಗಿದ್ದಾರೆ. ದಿನಕಳೆದಂತೆ ವಾಟ್ಸಾಪ್’ಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಬೆಳೆದಿದೆ. ಯುವತಿ ಮನೆಯವರ ವಿರೋಧದ ನಡುವೆಯೂ ಕಳೆದ ಏಳು ತಿಂಗಳ […]










