Editor

ಮತ್ತೆ ಆರು ಜಿಲ್ಲೆಗಳು ಅನ್ ಲಾಕ್ ಮಾಡಿದ ರಾಜ್ಯ ಸರ್ಕಾರ | 7 ಜಿಲ್ಲೆಗಳಿಗೆ ಮಾತ್ರ ಬೀಗ

ಬೆಂಗಳೂರು: ಕೊರೋನಾ ಸೋಂಕು ಕಡಿಮೆಯಾದ ಹಿನ್ನಲೆ 6 ಜಿಲ್ಲೆಗಳಲ್ಲಿ ಅನ್​ಲಾಕ್​ ಮಾಡಿ ಸಿಎಂ ಬಿಎಸ್​ ಯಡಿಯೂರಪ್ಪ ಆದೇಶಿಸಿದ್ದಾರೆ. ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರದಲ್ಲಿ ಅನ್​ಲಾಕ್​ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಸಾರಿಗೆ ಸಂಚಾರ ಇರಲಿದ್ದು, ಹೊಟೇಲ್​, ಅಂಗಡಿ ಮುಗ್ಗಟ್ಟುಗಳು ಕೂಡ ಸಂಜೆವರೆಗೆ ಕಾರ್ಯನಿರ್ವಹಿಸಲಿದೆ. ರಾತ್ರಿ 7 ಗಂಟೆ ಬಳಿಕ ಎಂದಿನಂತೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದ್ದು, ವಿಕೇಂಡ್​ […]

ಮತ್ತೆ ಆರು ಜಿಲ್ಲೆಗಳು ಅನ್ ಲಾಕ್ ಮಾಡಿದ ರಾಜ್ಯ ಸರ್ಕಾರ | 7 ಜಿಲ್ಲೆಗಳಿಗೆ ಮಾತ್ರ ಬೀಗ Read More »

ಮಗನ ಕೇಶ ಅರ್ಪಿಸಿ ಕೊಲ್ಲೂರು ದೇವಿಯ ಹರಕೆ ತೀರಿಸಿದ ರಿಷಬ್ ಶೆಟ್ಟಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಮಗನ ತಲೆ ಕೂದಲು ತೆಗೆಸಿ ಹರಕೆಯನ್ನು ತೀರಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾದ ರಿಷಬ್ ಶೆಟ್ಟಿಯವರು, ಪತ್ನಿ ಪ್ರಗತಿ ಹಾಗೂ ಮಗ ರನ್ವಿತ್ ಸಮೇತ ಕೊಲ್ಲೂರಿಗೆ ಭೇಟಿ ನೀಡಿ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಅನ್‌ಲಾಕ್ ಆರಂಭವಾದ ಮೊದಲ ದಿನವೇ ದೇವಾಲಯಕ್ಕೆ ಭೇಟಿ ನೀಡಿದ ರಿಷಭ್ ಶೆಟ್ಟಿ ಅವರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ರಿಷಬ್ ಶೆಟ್ಟಿ ಫಿಲ್ಮ್ಸ್

ಮಗನ ಕೇಶ ಅರ್ಪಿಸಿ ಕೊಲ್ಲೂರು ದೇವಿಯ ಹರಕೆ ತೀರಿಸಿದ ರಿಷಬ್ ಶೆಟ್ಟಿ Read More »

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು ಯಾವುದೇ ಗುಂಪಿನ ನಾಯಕನಲ್ಲ

ನವದೆಹಲಿ: ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ. ಗುಂಪುಗಾರಿಕೆಗೆ ಅವಕಾಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನದು ಯಾವ ಗುಂಪು ಇಲ್ಲ, ಬೇರೆಯವರ ಗುಂಪೂ ಇಲ್ಲ. ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಯಾರೂ ಹೇಳಬಾರದು. ಸದ್ಯ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬೇಕು. ಕೊರೊನಾ ಸಮಯದಲ್ಲಿ ಜನರನ್ನು

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು ಯಾವುದೇ ಗುಂಪಿನ ನಾಯಕನಲ್ಲ Read More »

ಪಾಕಿಸ್ತಾನದ ಮಾರ್ಗದರ್ಶನದಲ್ಲಿ ಭಾರತೀಯರ ಮತಾಂತರ | ಸಾವಿರ ಸಾವಿರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಇಸ್ಲಾಂಗೆ….!?

ಉತ್ತರ ಪ್ರದೇಶ: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಕ್ಕಳು ಮತ್ತು ಅಸಹಾಯಕರನ್ನು ಆಮಿಷ ಒಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಜೂನ್ 2ರಂದು ದೆಹಲಿಯ ದಾಸನ ದ ದೇವಾಲಯಕ್ಕೆ ಇಬ್ಬರು ಅಕ್ರಮವಾಗಿ ನುಸುಳಿದ್ದರು. ಆ ಸಂಬಂಧ ಅವರಿಬ್ಬರನ್ನು ಬಂದಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಲವಾರು ಆಘಾತಕಾರಿ ಅಂಶಗಳು ಹೊರಬಂದಿವೆ. ಬಂಧಿತರನ್ನು ಜಂಹಗೀರ್ ಹಾಗೂ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಇದರಲ್ಲಿ ಉಮರ್ ಗೌತಮ್

ಪಾಕಿಸ್ತಾನದ ಮಾರ್ಗದರ್ಶನದಲ್ಲಿ ಭಾರತೀಯರ ಮತಾಂತರ | ಸಾವಿರ ಸಾವಿರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಇಸ್ಲಾಂಗೆ….!? Read More »

ಜನನಾಂಗವಿಲ್ಲದೆ ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವು

ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ನಲ್ಲಿ ವಿಚಿತ್ರ ಮಗುವೊಂದು ಜನ್ಮ ತಾಳಿದ್ದು, ವೈದ್ಯರನ್ನೇ ಅಚ್ಚರಿಗೊಳಿಸಿದೆ. ಅಲ್ಲದೆ ಹುಟ್ಟಿದ ಮಗು ಕೆಲವೇ ನಿಮಿಷದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಗುವಿಗೆ ಹುಟ್ಟುವಾಗ ಜನನಾಂಗ ಮತ್ತು ಒಂದು ಕಾಲು ಇರಲಿಲ್ಲ. ಹುಬ್ಬಳ್ಳಿಯ ಹುಸೇನ್ ಸಾಬ್-ರೇಷ್ಮಾ ಬಾನು ದಂಪತಿಗೆ ಈ ವಿಚಿತ್ರ ಮಗು ಹುಟ್ಟಿದೆ. ಮಗು ಹುಟ್ಟಿದ 20 ನಿಮಿಷಕ್ಕೆ ಮೃತಪಟ್ಟಿದೆ. 7 ತಿಂಗಳಲ್ಲಿ ರೇಷ್ಮಾ ಬಾನುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯ ಮೊದಲು ರೇಶ್ಮಾ

ಜನನಾಂಗವಿಲ್ಲದೆ ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವು Read More »

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಮೋಕ್ಷಕ್ಕೆ ದ.ಕ. ಜಿಲ್ಲಾಡಳಿತದ ವತಿಯಿಂದ ತಿಲಹೋಮ ಮತ್ತು ಪಿಂಡ ಪ್ರದಾನ ಕಾರ್ಯಕ್ರಮ ಸೋಮೇಶ್ವರದ ಸೋಮನಾಥೇಶ್ವರ ದೇವಾಲಯದಲ್ಲಿ ನಡೆಯಿತು. ಸ್ಥಳೀಯ ಅರ್ಚಕರಾದ ಶಂಕರ್ ಅಡಿಗ ಅವರ ಮಾರ್ಗದರ್ಶನದಲ್ಲಿ ಮೃತರ ಪರವಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಸೋಮೇಶ್ವರ ಸಮುದ್ರಕಿನಾರೆಯಲ್ಲಿ ಪಿಂಡಪ್ರದಾನ ಮಾಡಿದರು. ದ ಕ ಜಿಲ್ಲಾಸ್ಪತ್ರೆಯಲ್ಲಿ 12 ಜನ ಅನಾಥರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರೆಲ್ಲರ ಅಂತ್ಯಸಂಸ್ಕಾರ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ Read More »

ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಮೂವರು ಸಾವು

ತಮಿಳುನಾಡು: ದೇಶದಲ್ಲೇ ಅತೀ ಹೆಚ್ಚು ಪಟಾಕಿ ಉತ್ಪಾದಿಸುವ ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಶಿವಕಾಶಿಯ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಕಾರ್ಖಾನೆಗೆ ಬೆಂಕಿ ಹತ್ತಿಕೊಂಡಿದ್ದು, ಕಾರ್ಖಾನೆ ಸುಟ್ಟು ಕರಕಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಮೂವರು ಸಾವು Read More »

ಗೋ ಸಾಗಾಟದ ಟೆಂಪೋ ಹರಿಸಿ ಗೋ ರಕ್ಷಕನ ಹತ್ಯೆ

ಗುಜರಾತ್: ಗೋ ರಕ್ಷಕನ ಮೇಲೆ ಗೋಸಾಗಾಟದ ಟೆಂಪೋ ಹರಿಸಿ ಹತ್ಯೆ ಮಾಡಿದ ಘಟನೆ ರಾಜ್ಯದ ಅಹಮದಬಾದ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ಹಾರ್ದಿಕ್ ಕನ್ಸರ್ (29) ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ಧರಾಂಪುರ- ವಲ್ಸಾದ್ ಹೆದ್ದಾರಿಯಲ್ಲಿ ಟೆಂಪೋ ಒಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಾರ್ದಿಕ್ ಗೆ ಸಿಕ್ಕಿದೆ. ತಕ್ಷಣ ಕಾರ್ಯಪ್ರವ್ರತರದ ಹಾರ್ದಿಕ್ ಮತ್ತು ಆತನ ಇಬ್ಬರು ಸ್ನೇಹಿತರು ಬಾಮ್’ಕ್ರೀಕ್ ಸೇತುವೆವ ಮೇಲೆ ತಮ್ಮ ಲಾರಿಯೊಂದನ್ನು ಅಡ್ಡ ನಿಲ್ಲಿಸಿದ್ದರು. ಗೋಸಾಗಾಟದ ಲಾರಿ ಬರುತ್ತಿದ್ದಂತೆ ಹಾರ್ದಿಕ್ ಅದರ

ಗೋ ಸಾಗಾಟದ ಟೆಂಪೋ ಹರಿಸಿ ಗೋ ರಕ್ಷಕನ ಹತ್ಯೆ Read More »

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ

ಬರಾಮುಲ್ಲ: ಲಷ್ಕರ್ -ಇ- ತಾಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಇಂದು ಮುಂಜಾನೆ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸುಪೋರ್ ನಲ್ಲಿ ಉಗ್ರರು ಇರುವ ಮಾಹಿತಿ ಪಡೆದ ಸೇನೆ ಯೋಜಿತ ದಾಳಿ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಆರಂಭವಾದ ಸೇನಾಕಾರ್ಯಾಚರಣೆ ಇಂದು ಮುಂಜಾನೆ ಉಗ್ರ ಸಂಘಟನೆಯ ಕಮಾಂಡರ್ ಮುದಾಸಿರ್ ಪಂಡಿತ್ ಹತ್ಯೆಯಾಗುವ ಮೂಲಕ ಕೊನೆಗೊಂಡಿದೆ ಎಂದು ತಿಳಿದುಬಂದಿದೆ. ಈ ಉಗ್ರರು ವಾರದ ಹಿಂದೆ ಇಬ್ಬರು ನಾಗರಿಕರು ಮತ್ತು

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ Read More »

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ

ಮಂಗಳೂರು: ನವಮಂಗಳೂರು ಬಂದರಿನಲ್ಲಿ ನಿನ್ನೆ ರಾತ್ರಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಇಳಿದಿದ್ದು ಚಾಲಕರಿಬ್ಬರು ಲಾರಿ ಸಹಿತ ಕಣ್ಮರೆಯಾಗಿದ್ದಾರೆ. ಎನ್ಎಂಪಿಟಿ ಯ 14ನೇ ಬರ್ತ್ ನಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಕಣ್ಮರೆಯಾದ ವರನ್ನು ಚಾಲಕ ರಾಜೇಶಾಬ್ (25) ಮತ್ತು ಬದಲಿ ಚಾಲಕ ಮಾಲಕಪ್ಪ (35) ಎಂದು ಗುರುತಿಸಲಾಗಿದೆ. ಇಬ್ಬರೂ ಚಾಲಕರು ಸಾವವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಾರಿಗೆ ಹಡಗಿನಿಂದ ಸರಕು ತುಂಬಿಸಲು ತರುತ್ತಿದ್ದಾಗ ಆಕಸ್ಮಿಕವಾಗಿ ಲಾರಿ ನೀರಿಗೆ ಬಿದ್ದಿದೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ Read More »